Dhurandhar BoxOffice Day22;ಧುರಂಧರ್ ಹೊಸ ದಾಖಲೆ,ಧರೆಗುರುಳಿತು ಪ್ರಭಾಸ್ ಕಲ್ಕಿ ಸಾಮ್ರಾಜ್ಯ-ಇನ್ನೂ ನಾಲ್ಕೇ ಹೆಜ್ಜೆ

ಮೊದಲೆಲ್ಲಾ ತಮ್ಮ ನೆಚ್ಚಿನ ನಾಯಕನ ಚಿತ್ರ ಬರುತ್ತಿದೆ ಅಂದರೆ ಅಭಿಮಾನಿಗಳಲ್ಲಿ ಒಂದು ರೀತಿಯ ಉತ್ಸಾಹ ಕಾಣುತ್ತಿತ್ತು. ಕಾತುರದಿಂದ ಕಾಯುತ್ತಾ ಕುಳಿತುಕೊಳ್ಳುತ್ತಿದ್ದರು. ಇನ್ನು ಆಗ ಸೋಶಿಯಲ್ ಮೀಡಿಯಾ ಕೂಡ ಪ್ರವರ್ಧಮಾನಕ್ಕೆ ಬಂದಿರಲಿಲ್ಲ. ಓಟಿಟಿಯ ಅಲೆ ಕೂಡ ಎದ್ದಿರಲಿಲ್ಲ. ಹೀಗಾಗಿ ಚಿತ್ರಮಂದಿರಗಳಲ್ಲಿಯೇ ಚಿತ್ರವನ್ನು ಅಭಿಮಾನಿಗಳು ನೋಡಬೇಕಿತ್ತು. ಆದರೆ ಈಗ ಅಂಗೈಯಲ್ಲಿಯೇ ಮನರಂಜನೆ ಇದೆ. ಚಿತ್ರದ ಮೊದಲ ಪ್ರದರ್ಶನ ಮುಕ್ತಾಯವಾಗುತ್ತಿದ್ದಂತೆಯೇ...

ಚಿತ್ರದ ಹಣೆ ಬರಹ ಗೊತ್ತಾಗಿ ಬಿಡುತ್ತೆ. ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಪ್ರಮುಖವಾದ ಸನ್ನಿವೇಶಗಳು ಹರಿದಾಡುತ್ತವೆ. ಇಡೀ ಚಿತ್ರ ಕ್ಷಣಾರ್ಧದಲ್ಲಿಯೇ ಆನ್ ಲೈನ್‌ನಲ್ಲಿ ಸೋರಿಕೆಯಾಗುತ್ತೆ. ಇಂತಹ ವಾತಾವರಣದಲ್ಲಿ ಭಾರತದೆಲ್ಲೆಡೆ ''ಧುರಂಧರ್'' ಅಕ್ಷರಶಃ ಅಬ್ಬರಿಸುತ್ತಿದೆ. ದಾಖಲೆಯ ಮೇಲೆ ದಾಖಲೆಯನ್ನು ಬರೆಯುತ್ತಿದೆ.

ranveer-singh-dethrones-kalki-2898-ad-to-become-the-5th-biggest-indian-hit-in-history

ಹೌದು, ''ಧುರಂಧರ್'' ತೆರೆಗೆ ಬಂದು 22 ದಿನಗಳಾಗಿವೆ. ಈ 22 ದಿನಗಳಲ್ಲಿ ಬೇರೆ ಬೇರೆ ಭಾಷೆಯಲ್ಲಿ ಹಲವು ಚಿತ್ರಗಳು ಬಂದಿವೆ. ಆದರೆ.. ''ಧುರಂಧರ್'' ಅಬ್ಬರ ಮಾತ್ರ ಕಡಿಮೆಯಾಗಲಿಲ್ಲ. ಹಾಲಿವುಡ್‌ನ ''ಅವತಾರ್ 3'' ಸೇರಿ ಬೇರೆ ಯಾವ ಚಿತ್ರ ಕೂಡ ''ಧುರಂಧರ್'' ಮುಂದೆ ನಿಲ್ಲಲಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಮೊದಲ ದಿನದಿಂದ ಇಲ್ಲಿಯವರೆಗೆ ಎರಡಂಕಿ ಗಳಿಕೆಯನ್ನೇ ಮಾಡುತ್ತಾ ಬಂದ ಈ ಚಿತ್ರ ಸದ್ಯ ಕೇವಲ ಭಾರತದಲ್ಲಿಯೇ ₹ 648.50 ಕೋಟಿಯನ್ನು ಗಳಿಸಿದೆ ಎಂದು ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ವರದಿಯನ್ನು ಮಾಡಿದೆ.

ಇನ್ನೂ ''ಧುರಂಧರ್'' ಅಬ್ಬರಕ್ಕೆ ಇಲ್ಲಿಯವರೆಗೆ ಹಲವಾರು ದಾಖಲೆಗಳು ಚೆಲ್ಲಾಪಿಲ್ಲಿಯಾಗಿವೆ. ಈಗಾಗಲೇ ''ದಂಗಲ್''.. ''ಬಾಹುಬಲಿ-ದಿ ಬಿಗಿನಿಂಗ್''.. ''ಗದರ್ 2'' ಚಿತ್ರಗಳನ್ನು ಬಾಕ್ಸಾಫೀಸ್‌ ರೇಸ್‌ನಲ್ಲಿ ಹಿಂದಿಕ್ಕಿರುವ ''ಧುರಂಧರ್'' ಶಾರುಖ್ ಖಾನ್ ಅಭಿನಯದ ''ಪಠಾಣ್'' ಮತ್ತು ''ಜವಾನ್'' ಚಿತ್ರದ ದಾಖಲೆಯನ್ನು ಕೂಡ ಮುರಿದಿದೆ. ರಣಬೀರ್ ಕಪೂರ್ ಅಭಿನಯದ ''ಅನಿಮಲ್'' ಚಿತ್ರದ ಗಳಿಕೆಯನ್ನು ಕೂಡ ಹಿಂದಿಕ್ಕಿದೆ. ''ಸಲಾರ್'' ಸಾಮ್ರಾಜ್ಯವನ್ನು ಕೂಡ ನೆಲಕ್ಕುರಳಿಸಿದೆ.

ಇಷ್ಟೇ ಅಲ್ಲ ಈ ವರ್ಷದ ಎರಡು ಮೆಗಾ ಬ್ಲಾಕ್ ಬಸ್ಟರ್ ಚಿತ್ರಗಳಾದ ವಿಕ್ಕಿ ಕೌಶಲ್ ಅಭಿನಯದ ''ಛಾವಾ'' ಮತ್ತು ನಮ್ಮ ಕನ್ನಡದ ''ಕಾಂತಾರ 1'' ಚಿತ್ರದ ದಾಖಲೆಯನ್ನು ಕೂಡ ಮುರಿದು ಈ ವರ್ಷ ಅತೀ ಹೆಚ್ಚು ಹಣ ಗಳಿಸಿದ ಚಿತ್ರ ಎನ್ನುವ ಹೆಗ್ಗಳಿಕೆಗೆ ''ಧುರಂಧರ್'' ಪಾತ್ರವಾಗಿದೆ.

ranveer-singh-dethrones-kalki-2898-ad-to-become-the-5th-biggest-indian-hit-in-history

ಹೀಗೆ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಾ ಮುನ್ನುಗ್ಗುತ್ತಿರುವ ''ಧುರಂಧರ್'' ಸದ್ಯ ಪ್ರಭಾಸ್ ಅಭಿನಯದ ''ಕಲ್ಕಿ 2898 AD'' ಚಿತ್ರದ ಗಳಿಕೆಯನ್ನು ಹಿಂದಿಕ್ಕಿದೆ. ಹೌದು, 2024ರಲ್ಲಿ ಪ್ಯಾನ್ ಇಂಡಿಯಾ ಲೆವಲ್‌ನಲ್ಲಿ ''ಕಲ್ಕಿ 2898 AD'' ಬಿಡುಗಡೆಯಾಗಿತ್ತು. ತಮಿಳು, ತೆಲುಗು, ಹಿಂದಿ, ಮಲಯಾಳಂ ಮತ್ತು ಕನ್ನಡದಲ್ಲಿ ಬಿಡುಗಡೆಯಾಗಿದ್ದ ''ಕಲ್ಕಿ 2898 AD'' ಹತ್ ಹತ್ರ 78 ದಿನ ಪ್ರದರ್ಶನ ಕಂಡಿತ್ತು. ಈ 78 ದಿನದಲ್ಲಿ ₹ 646.31 ಕೋಟಿಯನ್ನು ಗಳಿಸಿತ್ತು. ಈ ಗಳಿಕೆಯನ್ನು ''ಧುರಂಧರ್'' ಕೇವಲ 22 ದಿನದಲ್ಲಿ ಗಳಿಸಿದೆ. ₹ 648.50 ಕೋಟಿ ಹಣವನ್ನು ಗಳಿಸುವ ಮೂಲಕ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಭಾರತದಲ್ಲಿ ಅತೀ ಹೆಚ್ಚು ಹಣ ಗಳಿಸಿದ ಚಿತ್ರಗಳ ಪಟ್ಟಿಯಲ್ಲಿ ಐದನೇ ಸ್ಥಾನವನ್ನು ಅಲಂಕರಿಸಿದೆ.

ಭಾರತದಲ್ಲಿ ಅತೀ ಹೆಚ್ಚು ಹಣ ಗಳಿಸಿದ ಹತ್ತು ಚಿತ್ರಗಳ ಪಟ್ಟಿ ಇಲ್ಲಿದೆ.

1. ಪುಷ್ಪ 2 (2024 ) ₹1,234.1 ಕೋಟಿ
2.ಬಾಹುಬಲಿ 2 (2017) ₹1,030.4 ಕೋಟಿ
3.ಕೆಜಿಎಫ್ 2 (20220 ₹859.7 ಕೋಟಿ
4.ಆರ್‌ಆರ್‌ಆರ್ (2022) ₹782.2 ಕೋಟಿ
5. ಧುರಂಧರ್ (2025) ₹668.8 ಕೋಟಿ *
6.ಕಲ್ಕಿ 2898 AD (2024) ₹646.3 ಕೋಟಿ
7. ಜವಾನ್ (2023) ₹640.2 ಕೋಟಿ
8.ಕಾಂತಾರ 1 (2025) ₹622.4 ಕೋಟಿ
9.ಛಾವಾ (2025)₹601.5 ಕೋಟಿ
10. ಸ್ತ್ರೀ 2 (2024 ) ₹597.9 ಕೋಟಿ

ಸದ್ಯ ''ಧುರಂಧರ್'' ಕ್ರೇಜ್ ನೋಡುತ್ತಿದ್ದರೆ ಈ ಚಿತ್ರ ಭಾರತದಲ್ಲಿಯೇ 1000 ಕೋಟಿಯನ್ನು ಗಳಿಸುವ ಎಲ್ಲಾ ಸಾಧ್ಯತೆಗಳಿವೆ ಎನ್ನುವ ಅಭಿಪ್ರಾಯವನ್ನು ಬಾಲಿವುಡ್ ಪಂಡಿತರು ವ್ಯಕ್ತಪಡಿಸುತ್ತಿದ್ದಾರೆ. ಆರ್‌.ಆರ್‌.ಆರ್ ಮತ್ತು ಕೆಜಿಎಫ್ 2 ಚಿತ್ರದ ಗಳಿಕೆಯನ್ನು ''ಧುರಂಧರ್'' ಅನಾಯಾಸವಾಗಿ ಹಿಂದಿಕ್ಕುತ್ತೆ ಎನ್ನುವ ಮಾತುಗಳನ್ನಾಡುತ್ತಿದ್ದಾರೆ. ''ಧುರಂಧರ್'' ಎಷ್ಟು ಹಣ ಗಳಿಸುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
History made! Despite a Day 22 dip, Dhurandhar dethrones Prabhas’s Kalki 2898 AD. Discover how Ranveer Singh and Aditya Dhar rewrote the box office record books.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X