ದಂಗಲ್ ದಾಖಲೆ ಮುರಿಯಲು ಧುರಂಧರ್ ಮೆಗಾ ಪ್ಲಾನ್ ; ಆಮಿರ್ ಖಾನ್‌ಗೆ ಸೆಡ್ಡು ಹೊಡೆಯುತ್ತಾರಾ ರಣ್ವೀರ್ ಸಿಂಗ್ ?

ಕಲೆ ಮತ್ತು ಕಾಸು ಬೆರೆತ ಉದ್ಯಮ ಸಿನಿಮಾ. ಇಂತಹ ಪ್ರಪಂಚದಲ್ಲಿ ಹಿಂದಿ ಚಿತ್ರರಂಗದಲ್ಲಿ ಹಲವು ಚಿತ್ರಗಳು ಅಬ್ಬರಿಸಿವೆ. ಹಲವಾರು ದಾಖಲೆಗಳನ್ನು ಕೂಡ ಬರೆದಿವೆ. ಆದರೆ.. ಎಲ್ಲವನ್ನೂ ಸಾಧಿಸಿ ಭೇದಿಸಿದ ಬಾಲಿವುಡ್‌ಗೆ ಮಾತ್ರ ಇಲ್ಲಿಯವರೆಗೆ ಕೇವಲ ಭಾರತದಲ್ಲಿ ₹700 ಕೋಟಿಯನ್ನು ಕೊಳ್ಳೆ ಹೊಡೆಯಲು ಸಾಧ್ಯವಾಗಿರಲಿಲ್ಲ. ನಿಜಾ.. ''ದಂಗಲ್''.. ''ಪಠಾಣ್'' .. ಸೇರಿ ಕೆಲ ಚಿತ್ರಗಳು ಬಾಕ್ಸಾಫೀಸ್‌ನಲ್ಲಿ 1000-2000 ಕೋಟಿಯನ್ನು ಗಳಿಸಿವೆ.

ಆದರೆ.. ಆ ಗಳಿಕೆ ಕೇವಲ ಭಾರತದಲ್ಲಿ ಮಾಡಿದ್ದಲ್ಲ. ಬದಲಿಗೆ ವರ್ಲ್ಡ್ ವೈಡ್ ಪ್ರದರ್ಶನ ಕಂಡು ಚಿತ್ರ ಮಾಡಿದ್ದ ಗಳಿಕೆ ಅದು. ವಿಶೇಷ ಅಂದರೆ ಹಿಂದಿ ಉದ್ಯಮದ ಸೂಪರ್ ಸ್ಟಾರ್ ಗಳಿಂದ ಮಾಡಲಾದ ಈ ಸಾಧನೆಯನ್ನು ದೀಪಿಕಾ ಪಡುಕೋಣೆಯ ಗಂಡ ರಣ್ವೀರ್ ಸಿಂಗ್ ಮಾಡಿದ್ಧಾರೆ. ಅದು ಒಂದಲ್ಲ. ಎರಡೆರಡು ಬಾರಿ 1000 ಕೋಟಿಯ ಗಡಿಯನ್ನು ದಾಟಿದ್ದಾರೆ. ಹಲವಾರು ದಾಖಲೆಗಳನ್ನು ಮುರಿದಿದ್ದಾರೆ.

Ranveer Singh s 1 300 Cr Dhurandhar Storms Japan Can It Topple Dangal Globally

ಆದರೆ, ದಂಗಲ್ ದಾಖಲೆ ಮಾತ್ರ ಮುರಿಯಲು ರಣ್ವೀರ್ ಸಿಂಗ್‌ಗೆ ಸಾಧ್ಯ ಆಗಿಲ್ಲ. ''ಧುರಂಧರ್ 2'' ವಿಚಾರದಲ್ಲಿ ಈ ಅವಕಾಶ ಇತ್ತು. ಈಗಲೂ ಇದೆ. ಆದರೆ.. ಸದ್ಯ ದಂಗಲ್ ದಾಖಲೆ ಮುರಿಯಬೇಕೆಂಬ ಉದ್ದೇಶದಿಂದಲೇ ಸದ್ಯ ಆದಿತ್ಯ ಧರ್ ತಮ್ಮ ಧುರಂಧರ್ ಚಿತ್ರದ ಮೊದಲ ಭಾಗವನ್ನು ಜಪಾನ್‌ನಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಈ ಮೂಲಕ 2000 ಕೋಟಿ ತಲುಪುವ ಸಾಹಸ ಮಾಡುತ್ತಿದ್ದಾರೆ.

ಹೌದು, ಕಳೆದ ವರ್ಷಾಂತ್ಯಕ್ಕೆ ಬಂದು ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ್ದ ''ಧುರಂಧರ್'' ವರ್ಲ್ಡ್ ವೈಡ್ ₹1,351 ಕೋಟಿ ಹಣ ದೋಚಿತ್ತು. ಈ ಮೂಲಕ ಅತೀ ಹೆಚ್ಚು ಹಣ ಗಳಿಸಿದ ಭಾರತೀಯ ಚಿತ್ರಗಳ ಪಟ್ಟಿಯಲ್ಲಿ ಐದನೇ ಸ್ಥಾನವನ್ನು ಅಲಂಕರಿಸಿತ್ತು.

ವರ್ಲ್ಡ್ ವೈಡ್ ಬಾಕ್ಸಾಫೀಸ್‌ನಲ್ಲಿ ಅತೀ ಹೆಚ್ಚು ಹಣ ಗಳಿಸಿದ ಟಾಪ್ 5 ಚಿತ್ರಗಳು

1 ದಂಗಲ್ - ₹2,059 ಕೋಟಿ
2 ಧುರಂಧರ್: ದಿ ರಿವೆಂಜ್- ₹1,833 ಕೋಟಿ *
3 ಬಾಹುಬಲಿ 2 - ₹1,810 ಕೋಟಿ
4 ಪುಷ್ಪ 2 - ₹1,785 ಕೋಟಿ
5 ಧುರಂಧರ್ (ಭಾಗ 1) - ₹1,351 ಕೋಟಿ

ಈಗ ''ಧುರಂಧರ್'' ಚಿತ್ರವನ್ನು ಇದೇ ಜುಲೈ 10ರಂದು ಜಪಾನ್‌ನಲ್ಲಿ ಚಿತ್ರತಂಡ ಬಿಡುಗಡೆ ಮಾಡುತ್ತಿದೆ. ಇನ್ನು ಇತ್ತೀಚಿನ ವರ್ಷಗಳಲ್ಲಿ ಜಪಾನ್‌ನಲ್ಲಿ ಭಾರತೀಯ ಚಿತ್ರರಂಗಕ್ಕೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ರಾಜ್‌ ಮೌಳಿ ಸಾರಥ್ಯದ ''ಆರ್ ಆರ್ ಆರ್'' ಚಿತ್ರ ಕೇವಲ ಜಪಾನ್‌ನಲ್ಲಿಯೇ ₹143.68 ಕೋಟಿಯನ್ನು ಕೊಳ್ಳೆ ಹೊಡೆದಿದೆ.

ranveer-singh-s-1-300-cr-dhurandhar-storms-japan-can-it-topple-dangal-globally

ಇನ್ನು ತೀರಾ ಇತ್ತೀಚಿಗೆ ಬಿಡುಗಡೆಯಾದ ''ಪುಷ್ಪಾ'' ₹6.23 ಕೋಟಿಯನ್ನು ಜಪಾನ್‌ನಲ್ಲಿ ಗಳಿಸಿದೆ. ''3 ಈಡಿಯಟ್ಸ್''.. ''ಸಾಹೋ''.. ''ಬಾಹುಬಲಿ 2''.. ''ಸಾಹೋ''.. ಸೇರಿ ಹಲವು ಚಿತ್ರಗಳನ್ನು ಕಳೆದ ಕೆಲ ವರ್ಷಗಳಲ್ಲಿ ಜಪಾನ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಚಿತ್ರಗಳಿಗೆ ತಕ್ಕ ಮಟ್ಟಿಗೆ ಉತ್ತಮವಾದ ಪ್ರತಿಕ್ರಿಯೆ ಕೂಡ ಸಿಕ್ಕಿದೆ.

ಈ ಹಿನ್ನೆಲೆ ಈಗ ''ಧುರಂಧರ್'' ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ. ರಣ್ವೀರ್ ಸಿಂಗ್ ಸೇರಿ ಇಡೀ ಚಿತ್ರತಂಡ ಮುಂಬರುವ ದಿನಗಳಲ್ಲಿ ಜಪಾನ್‌ಗೆ ತೆರಳಿ ಅಲ್ಲಿ ಚಿತ್ರದ ಪ್ರಚಾರ ಮಾಡುವ ಸಾಧ್ಯತೆ ಕೂಡ ಇದೆ. ಒಂದು ವೇಳೆ ಜಪಾನ್‌ನಲ್ಲಿ ''ಧುರಂಧರ್''ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕರೆ ''ಆರ್ ಆರ್ ಆರ್'' ದಾಖಲೆಯನ್ನು ''ಧುರಂಧರ್'' ಮುರಿದರೆ ''ದಂಗಲ್'' ದಾಖಲೆ ಕೂಡ ಅಪಾಯಕ್ಕೆ ಸಿಲುಕಲಿದೆ.

''ಧುರಂಧರ್'' ಮುರಿಯದೇ ಇದ್ದರೂ ಜಪಾನ್‌ನಲ್ಲಿ ವೇದಿಕೆ ಸಿದ್ದ ಮಾಡುತ್ತಿರುವ ಚಿತ್ರತಂಡ ಮುಂಬರುವ ದಿನಗಳಲ್ಲಿ ''ಧುರಂಧರ್ 2'' ಚಿತ್ರವನ್ನು ಜಪಾನ್‌ನಲ್ಲಿ ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದೆ. ಹಾಗೊಂದು ವೇಳೆ ''ಧುರಂಧರ್ 2'' ಜಪಾನ್‌ನಲ್ಲಿ ಬಿಡುಗಡೆಯಾದರೆ ''ದಂಗಲ್'' ದಾಖಲೆ ಛಿದ್ರವಾಗುವುದು ಖಚಿತ ಎನ್ನುವ ಮಾತು ಬಾಲಿವುಡ್ ಪಂಡಿತರ ವಲಯದಲ್ಲಿ ಕೇಳಿ ಬರುತ್ತಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

English summary
With a ₹1,300 crore worldwide collection already in the bank, Ranveer Singh’s Dhurandhar eyes a massive release in Japan. Discover if the Aditya Dhar directorial has the power to shatter global box office records and redefine Indian cinema history.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X