Dhurandhar Box Office Day 23 ; 4ನೇ ಶನಿವಾರವೂ ನಿಲ್ಲದ ಧುರಂಧರ್ ಆರ್ಭಟ-ಆರ್‌ಆರ್‌ಆರ್‌ ದಾಖಲೆ ಆಗುತ್ತಾ ಧೂಳಿಪಟ ?

ಹಿಂದೊಂದು ಕಾಲ ಇತ್ತು. ಆ ಕಾಲದಲ್ಲಿ ಸಿನಿಮಾಗಳನ್ನು ನೋಡಲು ಗ್ರಾಮೀಣ ಪ್ರದೇಶದವರು ಬಂಡಿ ಹಾಗೂ ಟ್ರ್ಯಾಕ್ಟರ್‌ನಲ್ಲಿ ಚಿತ್ರಮಂದಿರಕ್ಕೆ ಬರುತ್ತಿದ್ದರು. ಆದರೆ ಈಗ ದೂರ ದೂರಕ್ಕೆ ನೋಡಿದರೂ ಪ್ರೇಕ್ಷಕರು ಕಾಣುತ್ತಿಲ್ಲ. ಎಲ್ಲೋ ಅಲ್ಲೊಂದು .. ಇಲ್ಲೊಂದು .. ಸಿನಿಮಾ ಮಾತ್ರ ಪ್ರೇಕ್ಷಕರನ್ನು ಸೆಳೆಯುತ್ತೆ. ಚಿತ್ರಮಂದಿರ ಅಪರೂಪಕ್ಕೆ ಭರ್ತಿಯಾಗುತ್ತೆ. ಬಾಕ್ಸಾಫೀಸ್‌ನಲ್ಲಿ ಹಣದ ಹೊಳೆ ಹರಿಯುತ್ತೆ. ಇದಕ್ಕೆ ''ಧುರಂಧರ್'' ಸದ್ಯದ ಉದಾಹರಣೆ.

ಹೌದು, ''ಧುರಂಧರ್''.. ವರ್ಷಾಂತ್ಯದಲ್ಲಿ ಬಾಕ್ಸಾಫೀಸ್‌ಗೆ ಅಪ್ಪಳಿಸಿರುವ ಸುನಾಮಿ. ಕಳೆದ ಡಿಸೆಂಬರ್ 5ರಂದು ಈ ಚಿತ್ರ ಬಂದಾಗ, ಚಿತ್ರ ನೋಡಿದ ಹಲವರಲ್ಲಿ ಕೆಲವರು ಈ ಚಿತ್ರದ ಕುರಿತು ರಾಗಾ ಎಳೆಯಲು ಶುರು ಮಾಡಿದ್ದರು. ಎರಡು ಗಂಟೆ ಚಿತ್ರಮಂದಿರದಲ್ಲಿ ಕುಳಿತುಕೊಳ್ಳುವುದು ಕಷ್ಟವೆನ್ನುವ ಈ ವಾತಾವರಣದಲ್ಲಿ ಮೂರುವರೆ ಗಂಟೆಯ ಚಿತ್ರವನ್ನು ಯಾರು ನೋಡುತ್ತಾರೆ ಎಂದು ಮೂಗು ಮುರಿದಿದ್ದರು. ಹೇಳಿಕೊಳ್ಳುವಂತಹ ಸಿನಿಮಾವೇನು ಅಲ್ಲ, ಅಷ್ಟಕಷ್ಟೇ ಎಂದೆಲ್ಲಾ ಚಿತ್ರದ ವಿಮರ್ಶೆಯನ್ನು ಕೂಡ ಕೆಲವರು ಮಾಡಿದ್ದರು.

ranveer-singh-s-dhurandhar-storms-past-668cr-massive-4th-saturday-surge-puts-rrr-s-record-in-danger

ಇನ್ನೂ ರಣವೀರ್ ಸಿಂಗ್ ಬೇರೆ ಎರಡು ವರ್ಷಗಳಿಂದ ನಿರುದ್ಯೋಗಿ ಆಗಿದ್ದರು. ಅದಕ್ಕೂ ಮುನ್ನ ಬಂದ ''ಸರ್ಕಸ್''.. ''ಜಯೇಶ್‌ಭಾಯಿ ಜೋರ್‌ದಾರ್''.. ''83''.. ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿದ್ದವು. ಈ ಹಿನ್ನೆಲೆ ಸಲ್ಮಾನ್ ಖಾನ್.. ಆಮಿರ್ ಖಾನ್.. ಅವರಂತಹ ಸಿನಿಮಾಗಳೇ ಬಾಕ್ಸಾಫೀಸ್‌ನಲ್ಲಿ ಗೆಲ್ತಿಲ್ಲ, ಹೀಗಿರುವಾಗ ರಣವೀರ್ ಸಿಂಗ್ ಸಿನಿಮಾ ಗೆದ್ದು ಬಿಡುತ್ತಾ ಎಂದು ಕೂಡ ಕೆಲವರು ಕುಹುಕವಾಡಿದ್ದರು.

ಆದರೆ.. ಎಲ್ಲರ ಲೆಕ್ಕಾಚಾರವನ್ನು ತಲೆ ಕೆಳಗಾಗಿಸಿದ ''ಧುರಂಧರ್'' ಸದ್ಯ ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಅಬ್ಬರಿಸುತ್ತಿದೆ. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ನಿನ್ನೆ ( ಡಿಸೆಂಬರ್ 27 ) ₹ 20.50 ಕೋಟಿಯನ್ನು ''ಧುರಂಧರ್'' ಕೊಳ್ಳೆ ಹೊಡೆದಿದೆ.

ನಿಮಗೆ ಗೊತ್ತಿರಲಿ ಇಂದಿಗೆ (ಡಿಸೆಂಬರ್ 28 ) 24ನೇ ದಿನ. ಚಿತ್ರವೊಂದು ಚಿತ್ರಮಂದಿರದಲ್ಲಿ ಎರಡು ವಾರ ಪ್ರದರ್ಶನ ಕಾಣುವುದೇ ಅಪರೂಪ ಎನ್ನುವಂತಹ ಕಾಲ ಇದು. ಇಂತಹ ಕಾಲದಲ್ಲಿ ''ಧುರಂಧರ್'' ನಾಲ್ಕನೇ ಶನಿವಾರ ₹ 20.50 ಕೋಟಿಯನ್ನು ದೋಚಿದೆ. ವಿಚಿತ್ರ ಅಂದರೆ ಕಳೆದ ಗುರುವಾರ ( ಡಿಸೆಂಬರ್ 25 ) ಕ್ರಿಸ್ಮಸ್ ಹಬ್ಬದ ಪ್ರಯುಕ್ತ ತೆರೆಗೆ ಬಂದ ಕಾರ್ತಿಕ್ ಆರ್ಯನ್ ಸಿನಿಮಾ ''ತು ಮೇರಿ ಮೇ ತೇರಾ, ಮೇ ತೇರಾ ತು ಮೇರಿ'' ಚಿತ್ರ ಮೂರು ದಿನವಾದರು ಕೂಡ ₹ 20 ಕೋಟಿಯ ಗಡಿ ತಲುಪಿಲ್ಲ.

ಆದರೆ.. ''ಧುರಂಧರ್'' ಕೇವಲ ಒಂದೇ ದಿನ ₹ 20 ಕೋಟಿ ಹಣವನ್ನು ಅದರಲ್ಲಿಯೂ ನಾಲ್ಕನೇ ಶನಿವಾರ ಗಳಿಸಿದೆ. ಬಿಡುಗಡೆಯಾದ ದಿನದಿಂದ ಸತತವಾಗಿ ಎರಡಂಕಿಯ ಗಳಿಕೆಯನ್ನು ಚಿತ್ರ ಮಾಡಿದೆ. ಈ ಮೂಲಕ ಹೊಸದೊಂದು ದಾಖಲೆಯನ್ನು ಕೂಡ ಬರೆದಿದೆ.

ranveer-singh-s-dhurandhar-storms-past-668cr-massive-4th-saturday-surge-puts-rrr-s-record-in-danger


''ಸ್ಯಾಕ್ನಿಲ್'' ಪ್ರಕಾರ ''ಧುರಂಧರ್'' ಚಿತ್ರದ 17 ದಿನದ ಗಳಿಕೆ ಈ ಕೆಳಗಿನಂತೆ ಇದೆ

ಮೊದಲ ದಿನ [ಶುಕ್ರವಾರ] ₹ 28 ಕೋಟಿ
ಎರಡನೇ ದಿನ [ಶನಿವಾರ] ₹ 32 ಕೋಟಿ
ಮೂರನೇ ದಿನ [ಭಾನುವಾರ]₹ 43 ಕೋಟಿ
ನಾಲ್ಕನೇ ದಿನ [ಸೋಮವಾರ]₹ 23.25 ಕೋಟಿ
ಐದನೇ ದಿನ [ಮಂಗಳವಾರ]₹ 27 ಕೋಟಿ
ಆರನೇ ದಿನ [ಬುಧವಾರ]₹ 27 ಕೋಟಿ
ಏಳನೇ ದಿನ [ಗುರುವಾರ]₹ 27 ಕೋಟಿ


ಮೊದಲ ವಾರದ ಒಟ್ಟು ಗಳಿಕೆ- ₹ 207.25ಕೋಟಿ


ಎಂಟನೇ ದಿನ [ಶುಕ್ರವಾರ] - ₹ 32.5 ಕೋಟಿ
ಒಂಬತ್ತನೇ ದಿನ [ಶನಿವಾರ] - ₹ 53 ಕೋಟಿ
ಹತ್ತನೇ ದಿನ [ಭಾನುವಾರ]- ₹ 58 ಕೋಟಿ
ಹನ್ನೊಂದನೇ ದಿನ [ಸೋಮವಾರ]₹30.5 ಕೋಟಿ
ಹನ್ನೆರಡನೇ ದಿನ [ಮಂಗಳವಾರ] ₹30.5 ಕೋಟಿ
ಹದಿಮೂರನೇ ದಿನ [ಬುಧವಾರ ] ₹25.5 ಕೋಟಿ
ಹದಿನಾಲ್ಕನೇ ದಿನ [ ಗುರುವಾರ ] ₹23.25 ಕೋಟಿ


ಎರಡನೇ ವಾರದ ಒಟ್ಟು ಗಳಿಕೆ - ₹ 253.25 ಕೋಟಿ

ಹದಿನೈದನೇ ದಿನ [ಶುಕ್ರವಾರ] ₹22.5 ಕೋಟಿ
ಹದಿನಾರನೇ ದಿನ [ಶನಿವಾರ ] ₹34.25 ಕೋಟಿ
ಹದಿನೇಳನೇ ದಿನ [ಭಾನುವಾರ] ₹38.5 ಕೋಟಿ
ಹದಿನೆಂಟನೇ ದಿನ [ಸೋಮವಾರ] ₹16.5ಕೋಟಿ
ಹತ್ತೊಂಬತ್ತನೇ ದಿನ [ಮಂಗಳವಾರ]₹17.25ಕೋಟಿ
ಇಪ್ಪತ್ತನೇ ದಿನ [ಬುಧವಾರ] ₹18 ಕೋಟಿ
ಇಪ್ಪತ್ತೊಂದನೇ ದಿನ [ಗುರುವಾರ] ₹25 ಕೋಟಿ

ಮೂರನೇ ವಾರದ ಒಟ್ಟು ಗಳಿಕೆ ₹ 172 ಕೋಟಿ

ಇಪ್ಪತ್ತೇರಡನೇ ದಿನ [ಶುಕ್ರವಾರ ] ₹15 ಕೋಟಿ
ಇಪ್ಪತ್ಮೂರನೇ ದಿನ [ ಶನಿವಾರ ] ₹20.50 ಕೋಟಿ * ಅಂದಾಜು

ಒಟ್ಟು ಗಳಿಕೆ - ₹ 668 ಕೋಟಿ

ಹೀಗೆ 23 ದಿನದಲ್ಲಿ ₹668 ಕೋಟಿಯನ್ನು ಕೇವಲ ಭಾರತದಲ್ಲಿ ಕೊಳ್ಳೆ ಹೊಡೆದಿರುವ ''ಧುರಂಧರ್'' ಎದುರು ಸದ್ಯ ಆರ್ ಆರ್ ಆರ್ ದಾಖಲೆ ಮುರಿಯುವ ಸವಾಲು ಇದೆ. 2022ರಲ್ಲಿ ತೆರೆಗೆ ಬಂದಿದ್ದ ರಾಜಮೌಳಿಯ ಆರ್‌ಆರ್‌ಆರ್‌ ಕೇವಲ ಭಾರತದಲ್ಲಿ ₹782.2 ಕೋಟಿಯನ್ನು ದೋಚಿತ್ತು. ಸದ್ಯ ''ಧುರಂಧರ್'' ಚಿತ್ರದ ನಾಗಾಲೋಟ ನೋಡುತ್ತಿದ್ದರೆ ಆರ್‌ಆರ್‌ಆರ್ ಗಳಿಕೆ ಹಿಂದಿಕ್ಕುವುದು ಅಸಾಧ್ಯವೇನು ಅಲ್ಲ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Dhurandhar Box Office Day 23: Ranveer Singh delivers a historic 4th Saturday! Collecting ₹20.50 Cr, the film eyes the all-time domestic crown. Is RRR’s record finally under threat?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X