The Girlfriend Box Office;ರಶ್ಮಿಕಾ ಮಂದಣ್ಣ ಮ್ಯಾಜಿಕ್‌-ಒಂದು ವಾರದಲ್ಲಿ ದಿ ಗರ್ಲ್‌ಫ್ರೆಂಡ್ ಗಳಿಸಿದ್ದೆಷ್ಟು?

ಈ ಬಣ್ಣದ ಪ್ರಪಂಚದಲ್ಲಿ ಯಾರ ಬದುಕು ಯಾವತ್ತು ಹೇಗೆ ಬದಲಾಗುತ್ತೆ ಎಂದು ಹೇಳಲು ಸಾಧ್ಯ ಇಲ್ಲ. ಕೆಲವರಿಗೆ ಎಷ್ಟೇ ಪ್ರಯತ್ನ ಮಾಡಿದರೂ ಸಿಗದ ಯಶಸ್ಸು, ಇನ್ನು ಕೆಲವರಿಗೆ ಮೊದಲ ಚಿತ್ರದಲ್ಲಿಯೇ ಸಿಕ್ಕಿ ಬಿಡುತ್ತೆ. ಇಷ್ಟೇ ಅಲ್ಲದೇ ಬೇರೆ ಬೇರೆ ಭಾಷೆಯಲ್ಲಿ ಕೂಡ ಇವರಿಗೆ ಹೆಬ್ಬಾಗಿಲು ತೆರೆಯುತ್ತೆ. ರತ್ನಗಂಬಳಿ ಹಾಕಿ ಇವರ ಸ್ವಾಗತವನ್ನು ಕೂಡ ಮಾಡಲಾಗುತ್ತೆ.

ಹೀಗೆ ಸಿಕ್ಕ ಈ ಸ್ಟಾರ್‌ಗಿರಿಯಿಂದ ಕೆಲವರು ಮಿರ ಮಿರ ಮಿಂಚಲಾರಂಭಿಸುತ್ತಾರೆ. ಒಂದಾದ ಮೇಲೊಂದರಂತೆ ಗೆಲುವನ್ನು ಕಾಣುತ್ತಾರೆ. ಸಂಭ್ರಮದ ಅಲೆಯಲ್ಲಿ ತೇಲುತ್ತಾರೆ. ಉದಾಹರಣೆಗೆ ರಶ್ಮಿಕಾ ಮಂದಣ್ಣ. ಹೌದು, ರಶ್ಮಿಕಾ ಮಂದಣ್ಣ ಚಿತ್ರರಂಗಕ್ಕೆ ಬಂದು ಹೆಚ್ಚು ಕಡಿಮೆ 09 ವರ್ಷಗಳಾಗಿವೆ. ಈ 09 ವರ್ಷದಲ್ಲಿ ರಶ್ಮಿಕಾ ಪಂಚ ಭಾಷೆಗಳಲ್ಲಿ ಮಿಂಚಿದ್ದಾರೆ.

rashmika-mandannas-the-girlfriend-races-past-10-crore-mark-in-7-days

ಆ ಪೈಕಿ ಕೆಲ ಚಿತ್ರಗಳಲ್ಲಿ ಸೋತಿದ್ದಾರೆ. ಉಳಿದಂತೆ ಬಹುತೇಕ ಇವರಿಗೆ ಸಿಕ್ಕಿದ್ದು ಗೆಲುವೇ. ಸದ್ಯ ಇವರ ''ದಿ ಗರ್ಲ್‌ಫ್ರೆಂಡ್‌'' ಯಾವ ಸಾಲಿನಲ್ಲಿ ಸೇರುತ್ತೆ ಎನ್ನುವ ಪ್ರಶ್ನೆಗೆ ಮುಂಬರುವ ದಿನಗಳಲ್ಲಿ ಉತ್ತರ ಸಿಗಲಿದೆಯಾದರೂ ಸದ್ಯ '' ದಿ ಗರ್ಲ್‌ಫ್ರೆಂಡ್'' ಬಾಕ್ಸಾಫೀಸ್‌ನಲ್ಲಿ ಒಂದು ವಾರವನ್ನು ಯಶಸ್ವಿಯಾಗಿ ಪೂರೈಸಿದೆ. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ಸ್ಯಾಕ್ನಿಲ್ ಪ್ರಕಾರ ಈ ಒಂದು ವಾರದಲ್ಲಿ ₹ 11.03 ಕೋಟಿಯನ್ನು ಗಳಿಸಿದೆ.

ಸ್ಯಾಕ್ನಿಲ್ ಪ್ರಕಾರ ''ದಿ ಗರ್ಲ್‌ಫ್ರೆಂಡ್'' ಚಿತ್ರದ ಮೊದಲ ಮೂರು ದಿನದ ಗಳಿಕೆ ಈ ಕೆಳಗಿನಂತೆ ಇದೆ

ಮೊದಲ ದಿನ - ಶುಕ್ರವಾರ : ₹ 1.3 ಕೋಟಿ
ಎರಡನೇ ದಿನ - ಶನಿವಾರ : ₹ 2.55 ಕೋಟಿ
ಮೂರನೇ ದಿನ -ಭಾನುವಾರ : ₹ 3.1 ಕೋಟಿ
ನಾಲ್ಕನೇ ದಿನ - ಸೋಮವಾರ : ₹ 1.15 ಕೋಟಿ
ಐದನೇ ದಿನ - ಮಂಗಳವಾರ : ₹1.3 ಕೋಟಿ
ಆರನೇ ದಿನ - ಬುಧವಾರ : ₹ 1.3 ಕೋಟಿ
ಏಳನೇ ದಿನ - ಗುರುವಾರ : ₹88 ಲಕ್ಷ * ಅಂದಾಜು

ಒಟ್ಟು ಗಳಿಕೆ - ₹ 11.3 ಕೋಟಿ

ಹೀಗೆ ಭಾರತದಲ್ಲಿ ಈ 7 ದಿನದಲ್ಲಿ ''ದಿ ಗರ್ಲ್‌ಫ್ರೆಂಡ್'' ₹ 11.3 ಕೋಟಿಯನ್ನು ಗಳಿಸಿದೆ. ಇನ್ನು www.financialexpress.com ವರದಿಯ ಪ್ರಕಾರ ರಶ್ಮಿಕಾ ಮಾಡಿದ ಈ ಮ್ಯಾಜಿಕ್‌ಗೆ ಹೊರದೇಶಗಳಿಂದ ಈ ಒಂದು ವಾರದಲ್ಲಿ ಹೆಚ್ಚು ಕಡಿಮೆ ₹5 ಕೋಟಿಗೂ ಅಧಿಕ ಹಣ ಹರಿದು ಬಂದಿದೆ. ಚಿತ್ರದ ಒಟ್ಟಾರೆ ಗಳಿಕೆ ಈ ಮೂಲಕ 16 ಕೋಟಿಗೂ ಅಧಿಕವಾಗಿದೆ.

rashmika-mandannas-the-girlfriend-races-past-10-crore-mark-in-7-days

ಇನ್ನೂ ಈ ವಾರ ದುಲ್ಕರ್ ಸಲ್ಮಾನ್ ಅಭಿನಯದ ತಮಿಳು ಚಿತ್ರ ''ಕಾಂತಾ'' ಬಿಡುಗಡೆಯಾಗುತ್ತಿದೆ. ಹಿಂದಿಯಲ್ಲಿ ಅಜಯ್ ದೇವಗನ್ , ಆರ್ ಮಾಧವನ್ ಅಭಿನಯದ ''ದೇ ದೇ ಪ್ಯಾರ್ ದೇ 2'' ಚಿತ್ರ ತೆರೆಗೆ ಬರುತ್ತಿದೆ. ಕನ್ನಡದಲ್ಲಿಯೂ ''ಉಡಾಳ'' ಸೇರಿ ಕೆಲ ಚಿತ್ರಗಳು ಬಿಡುಗಡೆಯಾಗುತ್ತಿವೆ. ಈ ಹಿನ್ನೆಲೆ ಈ ವಾರ ಅನೇಕ ಕಡೆ '' ದಿ ಗರ್ಲ್‌ಫ್ರೆಂಡ್‌''ಬಹುತೇಕ ಎತ್ತಂಗಡಿಯಾಗಲಿದೆ. ಪ್‌ರೇಕ್ಷಕರ ಮತ್ತು ವಿಮರ್ಷಕರ ಪ್ರೀತಿ ಸಿಕ್ಕರೂ ಕೂಡ ಈ ಚಿತ್ರ ಈ ವಾರ ಚಿತ್ರಮಂದಿರದಲ್ಲಿ ಉಳಿಯುವುದು ಬಹುತೇಕ ಅನುಮಾನ. ಉಳಿದರು ಕೂಡ ಸದ್ಯ ₹20 ಕೋಟಿ ಟಾರ್ಗೆಟ್ ಕಷ್ಟ ಎಂಬಂತೆ ಭಾಸವಾಗುತ್ತಿದೆ. ಎದುರಾಗಿರುವ ಸವಾಲುಗಳನ್ನೆದುರಿಸಿ ''ದಿ ಗರ್ಲ್‌ಫ್ರೆಂಡ್‌'' 20 ಕೋಟಿಯನ್ನು ಗಳಿಸುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
'The Girlfriend' hits a major box office milestone, crossing ₹10 Cr on Day 7. See how Rashmika Mandanna's film performed in its first week.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X