ನನ್ನ ಕಥೆ-ನನ್ನ ವ್ಯಥೆ ; ಕೈ ಹಿಡಿಯದ ರಶ್ಮಿಕಾ ಮಂದಣ್ಣ ಪ್ರಚಾರ ತಂತ್ರ-''ದಿ ಗರ್ಲ್‌ಫ್ರೆಂಡ್‌'' ನಿರ್ಮಾಪಕ ಕಳೆದುಕೊಂಡಿದ್ದೆಷ್ಟು?

09 ವರ್ಷದ ಹಿಂದೆ ಅವಕಾಶಕ್ಕೆ ಕಂಡ ಕಂಡಲೆಲ್ಲ ಆಡಿಷನ್ ಕೊಡುತ್ತಿದ್ದ ರಶ್ಮಿಕಾ ಮಂದಣ್ಣ ಆ ನಂತರ ಹೇಗೆಲ್ಲ ಬೆಳೆದರು ಎನ್ನುವುದನ್ನು ಒಮ್ಮೆ ತಿರುಗಿ ನೋಡಿದರೆ ನಿಜಕ್ಕೂ ಆಶ್ಚರ್ಯವಾಗುತ್ತೆ. ''ಕಿರಿಕ್ ಪಾರ್ಟಿ'' ಎಂಬ ಒಂದೇ ಒಂದು ಚಿತ್ರದ ಅತ್ಯದ್ಭುತವಾದ ಗೆಲುವು ರಶ್ಮಿಕಾ ಮಂದಣ್ಣ ಅವರನ್ನು ಎಲ್ಲಿಂದ ಎಲ್ಲಿಗೋ ಕರೆದೊಯ್ದು ನಿಲ್ಲಿಸಿತು. ಇವತ್ತು ರಶ್ಮಿಕಾ ಮಂದಣ್ಣ ಕೇವಲ..

ಕನ್ನಡದ ನಾಯಕಿ ಅಲ್ಲ. ತೆಲುಗು ಚೆಲುವೆ ಅಲ್ಲ. ಬದಲಿಗೆ ರಶ್ಮಿಕಾ ಮಂದಣ್ಣ ಇವತ್ತು ಪ್ಯಾನ್ ಇಂಡಿಯಾ ಸ್ಟಾರ್. ಕನ್ನಡದಿಂದ ತೆಲುಗುಗೆ ವಲಸೆ ಹೋಗಿ ಅಲ್ಲಿಂದ ಹಿಂದಿ ಚಿತ್ರರಂಗಕ್ಕೆ ಹೋದ ರಶ್ಮಿಕಾ ಈಗ ಬಾಲಿವುಡ್‌ನಲ್ಲಿ ಬಿಡಾರ ಹೂಡಿದ್ದಾರೆ. ''ಅನಿಮಲ್''.. ''ಛಾವಾ''.. ''ಸಿಕಂದರ್''.. ಹೀಗೆ ಒಂದಾದ ಮೇಲೊಂದು ಚಿತ್ರಗಳನ್ನು ಮಾಡಿದ್ದಾರೆ. ಬ್ಲಾಕ್ ಬಸ್ಟರ್ ಮಹಾರಾಣಿ ಎಂದು ಕರೆಯಲ್ಪಡುತ್ತಿದ್ದಾರೆ.

rashmikas-big-setback-the-girlfriend-confirms-flop-verdict-with-20-net-loss-on-42-cr-budget

ಆದರೆ, ಇಂಥಾ ರಶ್ಮಿಕಾ ಮಂದಣ್ಣಗೆ ಈಗ ಅದೃಷ್ಟ ಕೈ ಕೊಟ್ಟಿದೆಯಾ ಗೊತ್ತಿಲ್ಲ. ಆದರೆ ಸದ್ಯ ಇಂತಹದ್ದೊಂದು ಅನುಮಾನ ಹಲವರನ್ನು ಕಾಡುತ್ತಿದೆ. ಇದಕ್ಕೆ ಕಾರಣವಾಗಿದ್ದು ''ದಿ ಗರ್ಲ್‌ಫ್ರೆಂಡ್‌'' ಎಂಬ ಚಿತ್ರ.

ಹೌದು, '' ದಿ ಗರ್ಲ್‌ಫ್ರೆಂಡ್‌'' ರಶ್ಮಿಕಾ ಮಂದಣ್ಣ ಅವರ ಮಹೋನ್ನತ ಚಿತ್ರ. ಬಿಡುಗಡೆಯ ಮೊದಲು ತಮ್ಮದೇ ಜೀವನಾಧಾರಿತ ಚಿತ್ರ ಎಂಬಂತೆ ರಶ್ಮಿಕಾ ಮಂದಣ್ಣ ಈ ಚಿತ್ರದ ಕುರಿತು ಮಾತನಾಡಿದ್ದರು. ತಮ್ಮ ಮಾಜಿ ಪ್ರಿಯಕರ ರಕ್ಷಿತ್ ಶೆಟ್ಟಿ ವಿರುದ್ಧ ಪರೋಕ್ಷವಾಗಿ ಹಲವು ಆರೋಪಗಳನ್ನು ಮಾಡಿದ್ದರು. ನನ್ನ ಬದುಕಿನಲ್ಲಿ ವಿಜಯ್ ದೇವರಕೊಂಡ ಬಂದಿದ್ದು ನನ್ನ ಸೌಭಾಗ್ಯ ಎಂದು ಹೇಳಿದ್ದರು. ಎಲ್ಲ ಹುಡುಗಿಯರ ಬದುಕಿನಲ್ಲಿಯೂ ವಿಜಯ್ ದೇವರಕೊಂಡ ಅಂತಹ ಒಬ್ಬ ಹುಡುಗ ಇರಬೇಕು ಎಂದೆಲ್ಲಾ ಮಾತನಾಡಿದ್ದರು. ರಶ್ಮಿಕಾ ಆಡಿದ ಈ ಮಾತುಗಳನ್ನೆಲ್ಲಾ ಕೇಳಿ ಅನೇಕರು ''ದಿ ಗರ್ಲ್‌ಫ್ರೆಂಡ್‌'' ನಿಜಕ್ಕೂ ರಶ್ಮಿಕಾ ಮಂದಣ್ಣ ಅವರ ವ್ಯೆಯಕ್ತಿಕ ಬದುಕನ ಕಥೆ-ವ್ಯಥೆ ಎಂದು ಅಂದುಕೊಂಡಿದ್ದರು.

ಆದರೆ. ದುರಂತ.. ಕಾಲಿಗೆ ಚಕ್ರ ಕಟ್ಟಿಕೊಂಡು ಚಿತ್ರದ ಪ್ರಚಾರ ಮಾಡಿದರೂ .. ರಕ್ಷಿತ್ ಬಗ್ಗೆ ಪರೋಕ್ಷವಾಗಿ ವಾಗ್ದಾಳಿ ಮಾಡಿದರೂ ಕೂಡ .. ''ದಿ ಗರ್ಲ್‌ಫ್ರೆಂಡ್‌'' ಚಿತ್ರವನ್ನು ರಶ್ಮಿಕಾ ಮಂದಣ್ಣ ಅವರ ಕೈಯಿಂದ ಸೋಲಿನ ದವಡೆಯಿಂದ ಪಾರು ಮಾಡಲು ಸಾಧ್ಯವಾಗಲೇ ಇಲ್ಲ.

ಹೌದು, '' ದಿ ಗರ್ಲ್‌ಫ್ರೆಂಡ್'' ತೆರೆಗೆ ಬಂದು 20 ದಿನಗಳಾಗಿವೆ. ಈ 20 ದಿನದಲ್ಲಿ ಬಾಕ್ಸಾಫೀಸ್‌ನ ಅಂಕಿ-ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ '' ದಿ ಗರ್ಲ್‌ಫ್ರೆಂಡ್'' ಭಾರತದಲ್ಲಿ ದೋಚಿದ್ದು ಕೇವಲ ₹ 18.32 ಕೋಟಿ ಮಾತ್ರ. ಇನ್ನೂ ಹೊರ ದೇಶದಿಂದ ಬಂದ ಹಣವನ್ನು ಕೂಡ ಇಲ್ಲಿ ಕೂಡಿಸಿದರೆ ಚಿತ್ರದ ಗಳಿಕೆ ₹25 ರಿಂದ ₹26 ಕೋಟಿಯಾಗುತ್ತಷ್ಟೇ.

rashmikas-big-setback-the-girlfriend-confirms-flop-verdict-with-20-net-loss-on-42-cr-budget

ಬಹುಶಃ ಅಳೆದು ತೂಗಿ ಈ ಚಿತ್ರಕ್ಕೆ ನಿರ್ಮಾಪಕರು ಹಣ ಹೂಡಿದ್ದರೆ ಲಾಭದಲ್ಲಿ ಇರುತ್ತಿದ್ದರೇನೋ..? ಆದರೆ.. ''ಕೊಯಿಮೊಯಿ'' ವರದಿಯ ಪ್ರಕಾರ ಚಿತ್ರದ ನಿರ್ಮಾಪಕರು ರಶ್ಮಿಕಾ ಮಂದಣ್ಣ ಅವರ ಸ್ಟಾರ್ ಪವರ್ ಮತ್ತು ಚಿತ್ರದ ಕಥೆಯ ಮೇಲಿನ ನಂಬಿಕೆಯಿಂದ ಈ ಚಿತ್ರಕ್ಕೆ ₹42 ಕೋಟಿ ಹಣ ಹೂಡಿದ್ದಾರೆ. ಆ ಪೈಕಿ ಸದ್ಯ ₹25 ರಿಂದ ₹26 ಕೋಟಿ ಹಣ ಮರಳಿ ಬಂದಿದೆಯಷ್ಟೇ.

ಇನ್ನೂ ಪಕ್ಕದ ಹೈದರಾಬಾದ್‌ನಲ್ಲಿ ಕೇಳಿ ಬರುತ್ತಿರುವ ಮಾತುಗಳ ಪ್ರಕಾರ ಮತ್ತು ''123 ತೆಲುಗು'' ಮಾಡಿರುವ ವರದಿಯ ಪ್ರಕಾರ ''ದಿ ಗರ್ಲ್‌ಫ್ರೆಂಡ್‌'' ಚಿತ್ರದ ಓಟಿಟಿ ಹಕ್ಕನ್ನು ನೆಟ್‌ಪ್ಲಿಕ್ಸ್‌ ಸಂಸ್ಥೆ ₹14 ಕೋಟಿಗೆ ಚಿತ್ರದ ಹಕ್ಕುಗಳನ್ನು ಖರೀದಿ ಮಾಡಿದೆ. ಇನ್ನೂ ಆಡಿಯೋ ಮತ್ತು ಇನ್ನುಳಿದ ಹಕ್ಕುಗಳು 7 ಕೋಟಿಗೆ ಬಿಕರಿಯಾಗಿವೆ. ಅಲ್ಲಿಗೆ ಹಾಕಿದ ಬಂಡವಾಳಕ್ಕಿಂತ ಹೆಚ್ಚಿನ ಹಣ ಬಂದಂತಾಗಿದೆ.

ಆದರೆ ಹಾಗಂಥ ''ದಿ ಗರ್ಲ್‌ಫ್ರೆಂಡ್‌'' ನಿರ್ಮಾಪಕರ ಕೈ ಹಿಡಿದಿದೆ ಎಂದು ಹೇಳಲು ಸಾಧ್ಯ ಇಲ್ಲ. ಯಾಕೆಂದರೆ.. ಇಲ್ಲಿ ವಿತರಕರ ಪಾಲು ಕೂಡ ಇದೆ. ಟ್ಯಾಕ್ಸ್‌ ಸೇರಿ ಇನ್ನುಳಿದ ಲೆಕ್ಕಗಳಿವೆ. ಈ ಲೆಕ್ಕಾಚಾರವನ್ನೆಲ್ಲಾ ಕೂಡಿ ಕಳೆದು ಲೆಕ್ಕ ಹಾಕಿದರೆ '' ದಿ ಗರ್ಲ್‌ಫ್ರೆಂಡ್‌'' ಚಿತ್ರವನ್ನು ನಿರ್ಮಾಣ ಮಾಡಿ ನಿರ್ಮಾಪಕ ಹತ್ ಹತ್ರ ₹8.50 -₹9 ಕೋಟಿ ಹಣ ಕಳೆದುಕೊಂಡಿದ್ದಾರೆ ಎನ್ನುವ ಮಾತು ಸದ್ಯ ಚಿತ್ರ ನಗರಿಯಲ್ಲಿ ಕೇಳಿ ಬರುತ್ತಿದೆ.

ಇನ್ನು '' ದಿ ಗರ್ಲ್‌ಫ್ರೆಂಡ್'' ಸದ್ಯ ಹೈದರಾಬಾದ್‌ನ ಕೆಲ ಕಡೆ ಇನ್ನೂ ಇದೆ. ಆದರೆ.. ಈ ವಾರ ಬಹುತೇಕ ಕಡೆ ಚಿತ್ರ ಎತ್ತಂಗಡಿಯಾಗಲಿದೆ. ಈ ಹಿನ್ನೆಲೆ ನಿರ್ಮಾಪಕರಿಗಾದ ನಷ್ಟದ ಲೆಕ್ಕ ಕಡಿಮೆಯಾಗುವ ಸಾಧ್ಯತೆ ಕಡಿಮೆ ಇದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Get the final verdict on The Girlfriend. Discover how huge pre-release digital rights failed to prevent a significant budget loss for Rashmika Mandanna's film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X