Kantara 1 Box Office Day 29; ದೈವದ ಅಬ್ಬರ, ಹೊಸ ಮೈಲಿಗಲ್ಲು - ಓಟಿಟಿಗೆ ಬಂದ ಕಾಂತಾರ 29ನೇ ದಿನ ಗಳಿಸಿದ್ದೆಷ್ಟು??
ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಅಂಗೈಯಲ್ಲಿಯೇ ಮನರಂಜನೆ ಇದೆ. ಜಗತ್ತಿನ ಹಲವು ಭಾಷೆಯ ಚಿತ್ರಗಳನ್ನು ಎಲ್ಲಿ ಬೇಕೋ ಅಲ್ಲಿ .. ಯಾವಾಗ ಅಂದ್ರೆ ಅವಾಗ ನೋಡುವ ಸೌಲಭ್ಯ ಇದೆ. ಚಿತ್ರಮಂದಿರಕ್ಕೆ ಈ ಓಟಿಟಿ ತೀವೃ ಸ್ಪರ್ಧೆಯನ್ನೊಡ್ಡುತ್ತಿದೆ. ಇನ್ನು ಮೊದಲಾದರೆ ಕೇವಲ ಒಂದು ಪೋಸ್ಟರ್ ಸಾಕಿತ್ತು. ಚಿತ್ರಮಂದಿರ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿತ್ತು. ಆದರೆ ಈಗ..ಎಷ್ಟೇ ಪ್ರಚಾರ ಮಾಡಿದರು...
ಕೂಡ ಚಿತ್ರಮಂದಿರಕ್ಕೆ ಚಿತ್ರವೊಂದು ಬಂದಿದ್ದು ಹೋಗಿದ್ದು ಕೂಡ ಈಗೀಗ ಹಲವರಿಗೆ ಗೊತ್ತೇ ಆಗುವುದಿಲ್ಲ. ಎಷ್ಟೇ ಭಿನ್ನವಾದ ಆಲೋಚನೆ ಮಾಡಿದರು ಕೂಡ ಪ್ರೇಕ್ಷಕರನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಎಳೆದು ತರಲು ಕೂಡ ಸಾಧ್ಯವಾಗುತ್ತಿಲ್ಲ. ಗೆಲುವು ಮಾತ್ರ ಬಹುತೇಕರ ಕೈಗೆ ಸಿಗುತ್ತಿಲ್ಲ.

ಹೀಗಾಗಿ ಹೇಗಾದರೂ ಮಾಡಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಎಳೆದುತರಲು ಚಿತ್ರತಂಡಗಳು ಹರಸಾಹಸ ಮಾಡುತ್ತಿವೆ. ನಾನಾ ಕಸರತ್ತುಗಳನ್ನು ಮಾಡುತ್ತಿವೆ. ಆದರೆ.. ಅಲ್ಲೊಂದು.. ಇಲ್ಲೊಂದು ಸಿನಿಮಾಗಳು ಮಾತ್ರ ಗೆಲ್ಲುತ್ತಾವೆ. ಪವಾಡಗಳನ್ನು ಮಾಡುತ್ತಾವೆ. ಉದಾಹರಣೆಗೆ ''ಕಾಂತಾರ-ಚಾಪ್ಟರ್ 1''
ಹೌದು.. ''ಕಾಂರಾರ-1'' ಬಿಡುಗಡೆಯಾಗಿ 29 ದಿನಗಳಾಗಿವೆ. ಈ 29 ದಿನಗಳಲ್ಲಿ ಹತ್ತು ಹಲವು ದಾಖಲೆಗಳು ದೈವದ ಅಬ್ಬರದಿಂದ ಧೂಳಿಪಟವಾಗಿವೆ. ಇನ್ನು ಕನ್ನಡದಲ್ಲಿ ''ಕೆಜಿಎಫ್'' ಹೊರತು ಪಡಿಸಿದರೆ ಬೇರೆ ಯಾವ ಕನ್ನಡ ಚಿತ್ರ ಕೂಡ ಸಾವಿರ ಕೋಟಿಯ ಗಡಿಯನ್ನು ತಲುಪಿಲ್ಲ. ಈ ಹಿನ್ನೆಲೆ.. ''ಕಾಂತಾರ-1'' ಈ ಗಡಿಯನ್ನು ತಲುಪುತ್ತೆ ಎಂದೇ ಎಲ್ಲ ಅಂದುಕೊಂಡಿದ್ದರು. ಆ ಅವಕಾಶ ಕೂಡ ಇತ್ತು.
ಆದರೆ.. ಚಿತ್ರರಂಗ ಕಲೆ ಮತ್ತು ಕಾಸು ಬೆರೆತ ಉದ್ಯಮ. ಇದಕ್ಕೆ ಕೈಗನ್ನಡಿ ಎಂಬಂತೆ ''ಕಾಂತಾರ 1'' ಈಗ ಅಮೆಜಾನ್ ಪ್ರೈಮ್‌ನಲ್ಲಿ ಲಭ್ಯ ಇದೆ. ಹಿಂದಿ ಹೊರತು ಪಡಿಸಿದರೆ ನಾಲ್ಕು ಭಾಷೆಯಲ್ಲಿ ಪ್ರಸಾರವಾಗುತ್ತಿದೆ. ಚಿತ್ರತಂಡದ ಈ ನಡೆಯಿಂದ ಚಿತ್ರದ ಗಳಿಕೆಯ ಮೇಲೆ ಪರಿಣಾಮ ಬೀರಿದೆ ಆದರೂ ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ನ್ಯಾಕ್ನಿಲ್'' ವರದಿಯ ಪ್ರಕಾರ ''ಕಾಂತಾರ-1'' ಭಾರತದ ಮಾರುಕಟ್ಟೆಯಲ್ಲಿ ಕೊನೆಗೂ 600 ಕೋಟಿಯ ಗಡಿಯನ್ನು ದಾಟಿದೆ. ಈ ಮೂಲಕ ಹೊಸದೊಂದು ಮೈಲಿಗಲ್ಲನ್ನು ಚಿತ್ರ ಸ್ಥಾಪಿಸಿದೆ.

ಸ್ನ್ಯಾಕಿಲ್ ಪ್ರಕಾರ ''ಕಾಂತಾರ-1'' ಚಿತ್ರದ 29 ದಿನದ ಗಳಿಕೆ ಈ ಕೆಳಗಿನಂತೆ ಇದೆ.
ಮೊದಲ ವಾರ - ₹ 337.4 ಕೋಟಿ
ಎರಡನೇ ವಾರ- ₹ 147.85 ಕೋಟಿ
ಮೂರನೇ ವಾರ -₹ 78.85 ಕೋಟಿ
23ನೇ ದಿನ -[4ನೇ ಶುಕ್ರವಾರ] ₹ 6.1 ಕೋಟಿ
24ನೇ ದಿನ [4ನೇ ಶನಿವಾರ] ₹ 9 ಕೋಟಿ
25ನೇ ದಿನ [4ನೇ ಭಾನುವಾರ] ₹ 10.4ಕೋಟಿ
26ನೇ ದಿನ [4ನೇ ಸೋಮವಾರ]₹ 3.25 ಕೋಟಿ
27ನೇ ದಿನ [4ನೇ ಮಂಗಳವಾರ]₹ 3.8 ಕೋಟಿ
28ನೇ ದಿನ [4ನೇ ಬುಧವಾರ] ₹ 2.65 ಕೋಟಿ
29ನೇ ದಿನ [4ನೇ ಗುರುವಾರ] ₹ 2.25 ಕೋಟಿ
ಒಟ್ಟು ಗಳಿಕೆ ₹ 601.55 ಕೋಟಿ
ಇನ್ನು www.koimoi.com ವರದಿಯ ಪ್ರಕಾರ ವಿಶ್ವದಾದ್ಯಂತ ''ಕಾಂತಾರ 1'' ಚಿತ್ರದ ಗಳಿಕೆ ₹814.19 ಕೋಟಿಯಾಗಿದೆ. ಒಂದು ಸಾವಿರ ಕೋಟಿಯ ಗಡಿಯನ್ನು ತಲುಪಲು ಇನ್ನು ₹185.81 ಕೋಟಿಯ ಅವಶ್ಯಕತೆ ಇದೆ. ಇಂಗ್ಲೀಷ್ ಮತ್ತು ಸ್ಪ್ಯಾನಿಶ್‌ನಲ್ಲಿ ಕೂಡ ಚಿತ್ರ ಬಿಡುಗಡೆಯಾಗುತ್ತಿರುವ ಹಿನ್ನೆಲೆ ''ಕಾಂತಾರ-1'' ಬಾಕ್ಸಾಫೀಸ್‌ನಲ್ಲಿ ₹1000 ಕೋಟಿಯ ಬಾವುಟ ಹಾರಿಸುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











