ಮರಾಠಿ ಚಿತ್ರರಂಗದ ಸಿಂಹಾಸನವೇರಲು ರಿತೇಶ್‌ಗೆ ಇನ್ನೊಂದೇ ಹೆಜ್ಜೆ ಬಾಕಿ - ರಾಜಾ ಶಿವಾಜಿ ಅಬ್ಬರಕ್ಕೆ ದಾಖಲೆಗಳೆಲ್ಲ ಧೂಳಿಪಟ

ಚಿತ್ರರಂಗದವರ ಪಾಲಿಗೆ ಶುಕ್ರವಾರ ಕೇವಲ ಒಂದು ದಿನ ಅಲ್ಲ. ಬದಲಿಗೆ ಬದುಕಿನ ಮುಂದಿನ ಪಥ ನಿರ್ಧಾರ ಮಾಡುವ ದಿನ. ಪ್ರತಿ ವಾರ ಒಬ್ಬರಲ್ಲೊಬ್ಬರು ಈ ಅಗ್ನಿ ಪರೀಕ್ಷೆಯನ್ನು ಎದುರಿಸುತ್ತಾರೆ. ಕೆಲವರ ಬದುಕು ಬೆಳಗುತ್ತೆ. ಇನ್ನು ಕೆಲವರ ಬದುಕಿನಲ್ಲಿ ಕತ್ತಲಾವರಿಸಿಕೊಳ್ಳುತ್ತೆ.

ಇನ್ನೂ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವುದು ಸುಲಭದ ಮಾತಲ್ಲ. ಎಷ್ಟೇ ದೊಡ್ಡ ಸ್ಟಾರ್ ಆದರೂ ಕೂಡ ಜಾತ್ರೆ ಮೊದಲ ಮೂರು ದಿನ ಮಾತ್ರ. ಆ ನಂತರ ಕಥೆಯಲ್ಲಿ ಧಮ್ ಇಲ್ಲದಿದ್ದರೆ ಕಥೆ ಖತಂ.

Riteish Deshmukh s Raja Shivaji Dethrones Baipan Bhari Deva with 76 Crore Storm

ಇದರ ನಡುವೆ ಓಟಿಟಿ ಅಬ್ಬರ ಮತ್ತು ಗಗನಕ್ಕೇರುತ್ತಿರುವ ಟಿಕೆಟ್ ದರ ಚಿತ್ರರಂಗವನ್ನು ಇನ್ನಷ್ಟು ಹೈರಾಣಾಗಿಸಿದೆ. ಹೀಗಿರುವಾಗ ಸದ್ಯ ಮರಾಠಿ ಚಿತ್ರರಂಗದಲ್ಲಿ ಹೊಸದೊಂದು ಅಲೆ ಎದ್ದಿದೆ. ಅದರ ಹೆಸರು ''ರಾಜಾ ಶಿವಾಜಿ''.

ಹೌದು. ರಿತೇಶ್ ದೇಶಮುಖ್ ನಿರ್ದೇಶನದ ಬಹುತಾರಾಗಣದ ''ರಾಜಾ ಶಿವಾಜಿ'' ಸದ್ಯ ಬಾಕ್ಸಾಫೀಸ್‌ನಲ್ಲಿ ಪವಾಡ ಮಾಡುತ್ತಿದೆ. ನಿನ್ನೆ (ಮೇ 14) ₹1.90 ಕೋಟಿಯನ್ನು ದೋಚಿದೆ . ಈ ಮೂಲಕ ಕೇವಲ 14 ದಿನದಲ್ಲಿ ₹76.95 ಕೋಟಿಯನ್ನು ಕೊಳ್ಳೆ ಹೊಡೆದಿದೆ ''ರಾಜಾ ಶಿವಾಜಿ''.

ಸ್ಯಾಕ್ನಿಲ್ ಪ್ರಕಾರ ''ರಾಜಾ ಶಿವಾಜಿ''ಯ 14 ದಿನದ ಗಳಿಕೆ ಈ ಕೆಳಗಿನಂತೆ ಇದೆ

ಕ್ರಮ ಸಂಖ್ಯೆ (Sl. No.) ದಿನ (Day) ಭಾರತದ ಒಟ್ಟು ಗಳಿಕೆ (Total India Net)
1 ಮೊದಲ ದಿನ (ಶುಕ್ರವಾರ) ₹11.35 ಕೋಟಿ
2 ಎರಡನೇ ದಿನ (ಶನಿವಾರ) ₹10.55 ಕೋಟಿ
3 ಮೂರನೇ ದಿನ (ಭಾನುವಾರ) ₹12.00 ಕೋಟಿ
4 ನಾಲ್ಕನೇ ದಿನ (ಸೋಮವಾರ) ₹5.60 ಕೋಟಿ
5 ಐದನೇ ದಿನ (ಮಂಗಳವಾರ) ₹4.90 ಕೋಟಿ
6 ಆರನೇ ದಿನ (ಬುಧವಾರ) ₹4.25 ಕೋಟಿ
7 ಏಳನೇ ದಿನ (ಗುರುವಾರ) ₹4.00 ಕೋಟಿ
- ಮೊದಲ ವಾರದ ಒಟ್ಟು ಗಳಿಕೆ (Week 1 Total) ₹52.65 ಕೋಟಿ
8 ಎಂಟನೇ ದಿನ (ಶುಕ್ರವಾರ) ₹3.20 ಕೋಟಿ
9 ಒಂಬತ್ತನೇ ದಿನ (ಶನಿವಾರ) ₹5.60 ಕೋಟಿ
10 ಹತ್ತನೇ ದಿನ (ಭಾನುವಾರ) ₹6.80 ಕೋಟಿ
11 ಹನ್ನೊಂದನೇ ದಿನ (ಸೋಮವಾರ) ₹2.40 ಕೋಟಿ
12 ಹನ್ನೆರಡನೇ ದಿನ (ಮಂಗಳವಾರ) ₹2.50 ಕೋಟಿ
13 ಹದಿಮೂರನೇ ದಿನ (ಬುಧವಾರ) ₹1.90 ಕೋಟಿ
14 ಹದಿನಾಲ್ಕನೇ ದಿನ (ಗುರುವಾರ) ₹1.90 ಕೋಟಿ
- ಒಟ್ಟು 14 ದಿನಗಳ ಗಳಿಕೆ (Grand Total) ₹76.95 ಕೋಟಿ

ಹೀಗೆ 14 ದಿನದಲ್ಲಿ ₹76.95 ಕೋಟಿಯನ್ನು ಗಳಿಸಿರುವ ''ರಾಜಾ ಶಿವಾಜಿ'' ಚಿತ್ರದ ಗಳಿಕೆ ಈ ವಾರಾಂತ್ಯದಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ. ಇನ್ನು ರಾಜಾ ಶಿವಾಜಿ ಕೇವಲ ಮರಾಠಿಯಲ್ಲಿ ಮಾತ್ರ ಅಲ್ಲ ಹಿಂದಿಯಲ್ಲಿ ಕೂಡ ಬಿಡುಗಡೆಯಾಗಿದೆ. ಆದರೆ ಮರಾಠಿಯಲ್ಲಿ ಸಿಕ್ತಿರುವ ಪ್ರೀತಿ ಹಿಂದಿ ಭಾಷಿಕರಿಂದ ರಿತೇಶ್‌ಗೆ ಸಿಕ್ತಿಲ್ಲ. ಸಿಕ್ಕಿದ್ದರೆ ರಿತೇಶ್ ದೇಶಮುಖ್ ಇಷ್ಟೊತ್ತಿಗೆ ಮರಾಠಿ ಚಿತ್ರರಂಗದ ಅಧಿಪತಿ ಆಗಿರುತ್ತಿದ್ದರು.

ಮರಾಠಿ ಚಿತ್ರರಂಗದ ಸುಲ್ತಾನದ ಗದ್ದುಗೆ ಏರಲು ಇನ್ನೂ ಒಂದೇ ಹೆಜ್ಜೆ ಬಾಕಿ.

ಕನ್ನಡವನ್ನೂ ಒಳಗೊಂಡು ಬೇರೆ ಎಲ್ಲಾ ಭಾಷೆಗೆ ಹೋಲಿಸಿದರೆ ಮರಾಠಿ ಚಿತ್ರರಂಗದ ವ್ಯಾಪ್ತಿ ತುಂಬಾನೇ ಚಿಕ್ಕದು. ಮಹಾರಾಷ್ಟ್ರದ ಆಚೆ ಇವರಿಗೆ ಬಹುತೇಕ ಮಾರ್ಕೆಟ್ ಇಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಇಲ್ಲಿಯವರೆಗೆ ಮರಾಠಿ ಚಿತ್ರರಂಗದಲ್ಲಿ ಕೇವಲ ಭಾರತದಲ್ಲಿ ಯಾರೊಬ್ಬರು ಸೆಂಚುರಿ ಹೊಡೆದಿಲ್ಲ.

ಬಾಕ್ಸಾಫೀಸ್‌ನಲ್ಲಿ ನೂರು ಕೋಟಿಯನ್ನು ದೋಚಿಲ್ಲ. ಈ ಸಾಧನೆಯನ್ನು ರಿತೇಶ್ ದೇಶಮುಖ್ ಮಾಡ್ತಾರಾ ಎನ್ನುವ ಭರವಸೆ ಈಗ ಎಲ್ಲರಲ್ಲಿದ್ದೂ ಸದ್ಯ ರಿತೇಶ್ ''ರಾಜಾ ಶಿವಾಜಿ'' ಮರಾಠಿ ಚಿತ್ರರಂಗದಲ್ಲಿ ಅತೀ ಹೆಚ್ಚು ಹಣ ಗಳಿಸಿದ ಎರಡನೇ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

''ಬೈಪಣ್ ಭಾರಿ ದೇವಾ'' ಹಿಂದಿಕ್ಕಿದ ''ರಾಜಾ ಶಿವಾಜಿ''

ಹೌದು, 2023ರಲ್ಲಿ ಚಿತ್ರವೊಂದು ಬಂದಿತ್ತು. ಆ ಚಿತ್ರದ ಹೆಸರು ''ಬೈಪಣ್ ಭಾರಿ ದೇವಾ''. ಮಹಿಳಾ ಪ್ರಧಾನ ಚಿತ್ರ ಇದು. ಆದರೂ ಬಾಕ್ಸಾಫೀಸ್‌ನಲ್ಲಿ ವಿಪರೀತ ಸದ್ದು ಮಾಡಿತ್ತು. ಕೇವಲ ಭಾರತದಲ್ಲಿ ₹76.28ಯನ್ನು ಗಳಿಸಿತ್ತು. ಈ ಮೂಲಕ ಅತೀ ಹೆಚ್ಚು ಹಣ ಗಳಿಸಿದ ಎರಡನೇ ಮರಾಠಿ ಚಿತ್ರವಾಗಿ ಹೊರ ಹೊಮ್ಮಿತ್ತು. ಈ ಸ್ಥಾನ ಈಗ ''ರಾಜಾ ಶಿವಾಜಿ''ಯ ಪಾಲಾಗಿದೆ.

ಸದ್ಯ ರಾಜಾ ಶಿವಾಜಿಯ ಎದುರು ''ಸೈರಾಟ್'' ಚಿತ್ರದ ದಾಖಲೆ ಮುರಿಯುವ ಸವಾಲು ಇದೆ. 2018ರಲ್ಲಿ ಬಂದಿದ್ದ ಈ ಸಿನಿಮಾ ''ಸ್ಯಾಕ್ನಿಲ್'' ವರದಿಯ ಪ್ರಕಾರ ಭಾರತದಲ್ಲಿ ₹80.98 ಕೋಟಿ ಗಳಿಸಿತ್ತು. ಈ ಸೋಮವಾರದೊಳಗೆ ''ರಾಜಾ ಶಿವಾಜಿ'' ಈ ದಾಖಲೆ ಮುರಿಯುವ ವಿಶ್ವಾಸ ಮರಾಠಿ ಚಿತ್ರಪಂಡಿತರಿಗಿದೆ.

ಮರಾಠಿ ಚಿತ್ರರಂಗದಲ್ಲಿ ಅತೀ ಹೆಚ್ಚು ಹಣ ಗಳಿಸಿದ ಚಿತ್ರಗಳ ಪಟ್ಟಿ ಈ ಕೆಳಗಿನಂತೆ ಇದೆ.

Sl. No. ಚಿತ್ರದ ಹೆಸರು (Movie Name) ಬಿಡುಗಡೆಯಾದ ವರ್ಷ (Release Year) ಒಟ್ಟು ಗಳಿಕೆ (Total India Net)
1 ಸೈರಾಟ್ 2016 ₹80.98 ಕೋಟಿ
2 ರಾಜಾ ಶಿವಾಜಿ 2026 ₹76.95 ಕೋಟಿ
3 ಬೈಪಣ್ ಭಾರಿ ದೇವಾ 2023 ₹76.28 ಕೋಟಿ
4 ವೇಡ್ 2022 ₹61.20 ಕೋಟಿ
5 ನಟಸಾಮ್ರಾಟ್ 2016 ₹42.00 ಕೋಟಿ
6 ಪಾವನಖಿಂಡ್ 2022 ₹37.72 ಕೋಟಿ
7 ಲೈ ಭಾರಿ 2014 ₹37.00 ಕೋಟಿ
8 ಕತ್ಯಾರ್ ಕಾಳಜತ್ ಘುಸಲಿ 2015 ₹35.00 ಕೋಟಿ
9 ಠಾಕ್ರೆ 2019 ₹31.60 ಕೋಟಿ
10 ಟೈಂಪಾಸ್ 2014 ₹30.00 ಕೋಟಿ

ಒಟ್ನಲ್ಲಿ ಸದ್ಯ ''ರಾಜಾ ಶಿವಾಜಿ'' ಚಿತ್ರ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿದೆ. 14 ದಿನದಲ್ಲಿ ₹76.95 ಕೋಟಿ ದೋಚಿದೆ. ನೂರು ಕೋಟಿಯ ಗಡಿಯನ್ನು ದಾಟುವ ಮೂಲಕ ರಿತೇಶ್ ದೇಶಮುಖ್ ಮರಾಠಿ ಚಿತ್ರರಂಗದ ಕಿಂಗ್ ಆಗ್ತಾರಾ..? ಹೊಸ ಇತಿಹಾಸ ಸೃಷ್ಟಿಸುತ್ತಾರಾ ..? ಎನ್ನುವುದನ್ನು ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

English summary
History is rewritten! 🚩 Raja Shivaji crosses the ₹76 crore mark in 2 weeks, officially beating Baipan Bhari Deva. Is this the biggest Marathi hit of the decade? Click for the latest box office figures!
Read more about: bollywood ritesh deshmukh genelia
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X