ಮರಾಠಿ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ; ಸೈರಾಟ್ ದಾಖಲೆ ಪುಡಿಪುಡಿ ಮಾಡಿದ ರಾಜಾ ಶಿವಾಜಿ-ರಿತೇಶ್ ಮುಕುಟಕ್ಕೆ 100ಕೋಟಿ ಕಿರೀಟ
ಮುಂಬೈ ಅಂದರೆ ಅದು ಹಿಂದಿ ಚಿತ್ರರಂಗದ ನೆಲೆ ಎಂದು ಮರಾಠಿ ಚಿತ್ರರಂಗದ ಮೇಲೆ ಕುಳಿತು ಸವಾರಿ ಮಾಡಿದ ಹಿಂದಿ ಚಿತ್ರರಂಗ, ಮಹಾರಾಷ್ಟ್ರದಲ್ಲಿಯೇ ಮರಾಠಿ ಚಿತ್ರಗಳಿಗೆ ನೆಲೆ ಇಲ್ಲದಂತೆ ಮಾಡಿತು. ಬಾಲಿವುಡ್‌ನವರ ಅಬ್ಬರ ಮತ್ತು ಲಾಬಿಯ ಮುಂದೆ ಮಹಾರಾಷ್ಟ್ರದಲ್ಲೇ ಮರಾಠಿ ಚಿತ್ರಕ್ಕೆ ಮಲ್ಟಿಪ್ಲೆಕ್ಸ್‌ನಲ್ಲಿ ಪ್ರೈಮ್ ಟೈಮ್ ಶೋಗೆ ಭಿಕ್ಷೆ ಬೇಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಉದಾಹರಣೆಗೆ ಕಳೆದ ವಾರ (ಮೇ15) ಮರಾಠಿಯಲ್ಲಿ ''ಬಾಪ್ಯಾ'' ಎಂಬ ಚಿತ್ರ ತೆರೆಗೆ ಬಂದಿದೆ. ಇಡೀ ಮುಂಬೈನಲ್ಲಿ ಈ ಚಿತ್ರಕ್ಕೆ ಸಿಕ್ಕಿರುವುದು ಕೇವಲ 15 ಚಿತ್ರಮಂದಿರಗಳು ಮಾತ್ರ. ಈ ಹದಿನೈದರಲ್ಲಿಯೂ ಕೂಡ ಕೇವಲ ಒಂದು ಪ್ರದರ್ಶನವನ್ನು ಮಾತ್ರ ನೀಡಲಾಗಿದೆ. ವಿಮರ್ಷಕರು ಈ ಚಿತ್ರಕ್ಕೆ ಮೂರರಿಂದ ನಾಲ್ಕು ಸ್ಟಾರ್ ನೀಡಿದ್ದಾರೆ. ಆದರೂ ಪ್ರೈಮ್ ಟೈಮ್ ಯಾವ ಚಿತ್ರಮಂದಿರದಲ್ಲಿಯೂ ಸಿಕ್ಕಿಲ್ಲ.

ಹೀಗೆ ಅತ್ಯುತ್ತಮ ಕಥಾವಸ್ತು ಹೊಂದಿದ್ದರು ಕೂಡ ಮರಾಠಿ ಚಿತ್ರಗಳು ಮುಂಬೈನಲ್ಲಿಯೇ ಮೂಲೆಗುಂಪು ಆಗುತ್ತಿವೆ. ಎಲ್ಲೋ ಅಲ್ಲೊಂದು ಇಲ್ಲೊಂದು ಸಿನಿಮಾ ಮಾತ್ರ ಈ ಹಿಂದಿ ಉದ್ಯಮದ ಪಾರುಪತ್ಯಕ್ಕೆ ಸವಾಲು ಹಾಕುತ್ತಾವೆ. ಇತಿಹಾಸವನ್ನು ಬರೆಯುತ್ತಾವೆ. ಉದಾಹರಣೆಗೆ ''ರಾಜಾ ಶಿವಾಜಿ''.
ಹೌದು, ''ರಾಜಾ ಶಿವಾಜಿ''.. ರಿತೇಶ್ ದೇಶಮುಖ್ ಮರಾಠಿಯಲ್ಲಿ ನಿರ್ದೇಶಿಸಿರುವ ಮೂರನೇ ಚಿತ್ರ. ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ಐತಿಹಾಸಿಕ ಚಿತ್ರ ಸದ್ಯ ಮರಾಠಿ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆದಿದೆ. 10 ವರ್ಷಗಳ ಹಿಂದಿನ ''ಸೈರಾಟ್'' ಚಿತ್ರದ ದಾಖಲೆಯನ್ನು ಮುರಿದಿದೆ. ಮರಾಠಿ ಚಿತ್ರರಂಗದಲ್ಲಿ 100 ಕೋಟಿ ಗಡಿ ತಲುಪಿದ ಎರಡನೇ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸೈರಾಟ್ VS ರಾಜಾ ಶಿವಾಜಿ
ಸರಿಯಾಗಿ ಒಂದು ದಶಕದ ಹಿಂದೆ ತೆರೆಗೆ ಬಂದಿದ್ದ ''ಸೈರಾಟ್'' ಭಾರತದಲ್ಲಿ ₹ 104 ಕೋಟಿ (Gross) ಗಳಿಸಿತ್ತು. ಈ ಮೂಲಕ ನೂರು ಕೋಟಿ ದೋಚಿದ ಮೊದಲ ಮರಾಠಿ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು. ''ಸೈರಾಟ್'' ಚಿತ್ರ 8 ವಾರಗಳಲ್ಲಿ ಮಾಡಿದ್ದ ಈ ಸಾಧನೆಯನ್ನು ''ರಾಜಾ ಶಿವಾಜಿ'' ಕೇವಲ 17 ದಿನದಲ್ಲಿ ಮಾಡಿದೆ. ₹100.07 ಕೋಟಿ ಗಳಿಸಿದೆ.
ಎರಡು ಚಿತ್ರಗಳ ನೆಟ್ ಕಲೆಕ್ಷನ್ ಎಷ್ಟು ?
ತೆರಿಗೆಯ ನಂತರ ಲೆಕ್ಕಾಚಾರ ಅಂದರೆ ನಿವ್ವಳ ಗಳಿಕೆಯ ವಿವರ ನೋಡುವುದಾದರೆ ''ಸೈರಾಟ್'' ಚಿತ್ರ ₹ 80.98 ಕೋಟಿ (Net) ಗಳಿಸಿತ್ತು. ''ರಾಜಾ ಶಿವಾಜಿ'' ₹84.55 ಕೋಟಿ ಗಳಿಸಿದೆ.
ಇನ್ನು ಮೊನ್ನೆ ಅಂದರೆ ಮೂರನೇ ಭಾನುವಾರ (ಮೇ 17 ) ₹3.45 ಕೋಟಿಯನ್ನು ಚಿತ್ರ ಗಳಿಸಿದೆ. ಚಿತ್ರಕ್ಕೆ ಇನ್ನು ಡಿಮ್ಯಾಂಡ್ ಇದೆ ಎನ್ನುವುದಕ್ಕೆ ಇದು ಸಾಕ್ಷಿ. ಹೀಗಾಗಿ ಈ ವಾರವೂ ಕೂಡ ಚಿತ್ರ ಚಿತ್ರಮಂದಿರಗಳಲ್ಲಿ ಮುಂದುವರೆಯಲಿದ್ದು ''ರಾಜಾ ಶಿವಾಜಿ''ಯ 25ನೇ ದಿನ ಗಳಿಕೆ ₹110 ರಿಂದ ₹115 ಕೋಟಿ ಆಗುವ ನಿರೀಕ್ಷೆ ಇದೆ.
ವರ್ಲ್ಡ್ ವೈಡ್ ಗಳಿಕೆ ಎಷ್ಟು ?
''ರಾಜಾ ಶಿವಾಜಿ''ಯ ಗಳಿಕೆಯ ಕುರಿತು ಚಿತ್ರತಂಡವೇ ಅಧಿಕೃತ ಮಾಹಿತಿ ಹಂಚಿಕೊಂಡಿದೆ. ಆ ಪ್ರಕಾರ ಹೊರ ದೇಶಗಳಲ್ಲಿ ಈ ಚಿತ್ರ ₹4.9 ಕೋಟಿಯನ್ನು ಗಳಿಸಿದೆ. ಒಟ್ಟಾರೆ ಗಳಿಕೆ ₹114.8 (Gross) ಕೋಟಿಯಾಗಿದೆ ಎಂದು ಹೇಳಿರುವ ನಿರ್ಮಾಣ ಸಂಸ್ಥೆ, ಭಾರತದ ನಿವ್ವಳ(Net) ಗಳಿಕೆ ₹93.1 ಕೋಟಿ ಎಂದು ಮಾಹಿತಿಯನ್ನು ಹಂಚಿಕೊಂಡಿದೆ. ''ಸ್ಯಾಕ್ನಿಲ್'' ಪ್ರಕಾರ ''ಸೈರಾಟ್'' ಹೊರ ದೇಶದಲ್ಲಿ ಹತ್ತು ವರ್ಷದ ಹಿಂದೆ ₹6 ಕೋಟಿ ಗಳಿಸಿತ್ತು.
ಸ್ಯಾಕ್ನಿಲ್ ಪ್ರಕಾರ ''ರಾಜಾ ಶಿವಾಜಿ''ಯ 17 ದಿನದ ಗಳಿಕೆ ಈ ಕೆಳಗಿನಂತೆ ಇದೆ.
| ದಿನ | ಭಾರತದ ಒಟ್ಟು ಗಳಿಕೆ (India Net) |
|---|---|
| ಮೊದಲ ದಿನ (ಶುಕ್ರವಾರ) | ₹11.35 ಕೋಟಿ |
| ಎರಡನೇ ದಿನ (ಶನಿವಾರ) | ₹10.55 ಕೋಟಿ |
| ಮೂರನೇ ದಿನ (ಭಾನುವಾರ) | ₹12.00 ಕೋಟಿ |
| ನಾಲ್ಕನೇ ದಿನ (ಸೋಮವಾರ) | ₹5.60 ಕೋಟಿ |
| ಐದನೇ ದಿನ (ಮಂಗಳವಾರ) | ₹4.90 ಕೋಟಿ |
| ಆರನೇ ದಿನ (ಬುಧವಾರ) | ₹4.25 ಕೋಟಿ |
| ಏಳನೇ ದಿನ (ಗುರುವಾರ) | ₹4.00 ಕೋಟಿ |
| ಮೊದಲ ವಾರದ ಒಟ್ಟು ಗಳಿಕೆ | ₹52.65 ಕೋಟಿ |
| ಎಂಟನೇ ದಿನ (ಶುಕ್ರವಾರ) | ₹3.20 ಕೋಟಿ |
| ಒಂಬತ್ತನೇ ದಿನ (ಶನಿವಾರ) | ₹5.60 ಕೋಟಿ |
| ಹತ್ತನೇ ದಿನ (ಭಾನುವಾರ) | ₹6.80 ಕೋಟಿ |
| ಹನ್ನೊಂದನೇ ದಿನ (ಸೋಮವಾರ) | ₹2.40 ಕೋಟಿ |
| ಹನ್ನೆರಡನೇ ದಿನ (ಮಂಗಳವಾರ) | ₹2.50 ಕೋಟಿ |
| ಹದಿಮೂರನೇ ದಿನ (ಬುಧವಾರ) | ₹1.90 ಕೋಟಿ |
| ಹದಿನಾಲ್ಕನೇ ದಿನ (ಗುರುವಾರ) | ₹1.90 ಕೋಟಿ |
| ಎರಡನೇ ವಾರದ ಒಟ್ಟು ಗಳಿಕೆ | ₹24.30 ಕೋಟಿ |
| ಹದಿನೈದನೇ ದಿನ (ಶುಕ್ರವಾರ) | ₹1.45 ಕೋಟಿ |
| ಹದಿನಾರನೇ ದಿನ (ಶನಿವಾರ) | ₹2.70 ಕೋಟಿ |
| ಹದಿನೇಳನೇ ದಿನ (ಭಾನುವಾರ) | ₹3.45 ಕೋಟಿ |
| ಒಟ್ಟಾರೆ ಭಾರತದ ಒಟ್ಟು ನೆಟ್ ಗಳಿಕೆ | ₹84.55 ಕೋಟಿ |
ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಟಾಪ್ 10 ಮರಾಠಿ ಸಿನಿಮಾಗಳು
| ಶ್ರೇಣಿ | ಚಿತ್ರದ ಹೆಸರು | ಬಿಡುಗಡೆಯಾದ ವರ್ಷ | ಒಟ್ಟು ಗಳಿಕೆ (India Net) |
|---|---|---|---|
| 1 | ರಾಜಾ ಶಿವಾಜಿ | 2026 | ₹84.55 ಕೋಟಿ |
| 2 | ಸೈರಾಟ್ | 2016 | ₹80.98 ಕೋಟಿ |
| 3 | ಬೈಪಣ್ ಭಾರಿ ದೇವಾ | 2023 | ₹76.28 ಕೋಟಿ |
| 4 | ವೇಡ್ (Ved) | 2022 | ₹61.20 ಕೋಟಿ |
| 5 | ನಟಸಾಮ್ರಾಟ್ | 2016 | ₹42.00 ಕೋಟಿ |
| 6 | ಪಾವನಖಿಂಡ್ | 2022 | ₹37.72 ಕೋಟಿ |
| 7 | ಲೈ ಭಾರಿ (Lai Bhaari) | 2014 | ₹37.00 ಕೋಟಿ |
| 8 | ಕತ್ಯಾರ್ ಕಾಳಜತ್ ಘುಸಲಿ | 2015 | ₹35.00 ಕೋಟಿ |
| 9 | ಥಾಕ್ರೆ (Thackeray) | 2019 | ₹31.60 ಕೋಟಿ |
| 10 | ಟೈಂಪಾಸ್ (Timepass) | 2014 | ₹30.00 ಕೋಟಿ |
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications