Saiyaara Box Office Day 3 ; ಬಾಲಿವುಡ್‌ನಲ್ಲಿ ಅಹಾನ್ ಅಬ್ಬರ, ಸೂಪರ್ ಸ್ಟಾರ್‌ಗಳಿಗೆ ಸೆಡ್ಡು ಹೊಡೆದ ಹೊಸ ಹೀರೋ

ಸಿನಿಮಾ ಈಗ ಕಲೆ ಮಾತ್ರ ಅಲ್ಲ. ವ್ಯಾಪಾರ ಕೂಡ ಹೌದು. ಉದ್ಯಮವಾಗಿ ಬೆಳೆದಿರುವ ಈ ಚಿತ್ರರಂಗದಲ್ಲಿ ಬಹುಕೋಟಿ ವ್ಯವಹಾರ ನಡೆಯುತ್ತೆ. ಇಂಥಾ ವಲಯದಲ್ಲಿ ಹೊಸಬರ ಮೇಲೆ ಹಣ ಹೂಡುವರ ಸಂಖ್ಯೆ ತುಂಬಾ ಕಡಿಮೆ. ಹೂಡಿದರು ಕೂಡ ಅದು ಒಂದು ಚೌಕಟ್ಟಿನಲ್ಲಿ ಇರುತ್ತೆ. ಯಾಕೆಂದರೆ.. ಗೆದ್ದೆತ್ತಿನ ಬಾಲವನ್ನೇ ಹಿಡಿಯುವ ಪ್ರಯತ್ನ ಇಲ್ಲಿ ಬಹುತೇಕರು ಮಾಡುತ್ತಾರೆ.

ಹಾಗಂಥ ಎಲ್ಲರೂ ಈ ಸಾಲಿಗೆ ಸೇರುತ್ತಾರೆ ಅಂತೇನೂ ಇಲ್ಲ. ಯಾಕೆಂದರೆ.. ಹೊಸಬರ ಆಗಮನದಿಂದ ಹೊಸತನ ಕೂಡ ಜೊತೆಯಾಗಿ ಬರುತ್ತೆ ಎನ್ನುವ ನಂಬಿಕೆ ಇನ್ನು ಕೆಲವರಲ್ಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸಿನಿಮಾ ನಿರ್ದೇಶಕರ ಮಾಧ್ಯಮ ಎನ್ನುವುದನ್ನು ಇವತ್ತು ಕೂಡ ಹಲವರು ನಂಬುತ್ತಾರೆ.

Saiyaara Shatters Records Ahaan Panday amp amp Aneet Padda s Mohit Suri Directorial Clocks Historic 83Cr

ನಿರ್ದೇಶಕನ ಮೇಲೆ.. ಆ ನಿರ್ದೇಶಕನ ತಂಡ ಹೆಣೆದ ಕಥೆಯ ಮೇಲೆ ನಂಬಿಕೆಯನ್ನಿಟ್ಟು ಹಣವನ್ನು ಹೂಡುತ್ತಾರೆ. ಮರಳಿ ಹಣ ಪಡೆಯುವುದಲ್ಲದೇ ಭರ್ಜರಿ ಲಾಭವನ್ನು ಕೂಡ ಮಾಡುತ್ತಾರೆ. ಉದಾಹರಣೆಗೆ ''ಸೈಯಾರ''.

ಹೌದು.. 'ಸೈಯಾರ' ಹೊಸಬರ ಚಿತ್ರ. ಬಾಲಿವುಡ್‌ನ ಖ್ಯಾತ ನಿರ್ದೇಶಕ ಮೋಹಿತ್ ಸೂರಿ ನಿರ್ದೇಶನದಲ್ಲಿ ಮೂಡಿ ಬಂದ ಈ ಚಿತ್ರ ಸದ್ಯ ಬಾಲಿವುಡ್‌ನ ಬೆಕ್ಕಸ ಬೆರಗಾಗಿಸಿದೆ. ಬಾಕ್ಸಾಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ನಿನ್ನೆ { ಜುಲೈ 20 } ಕೇವಲ ಒಂದೇ ದಿನ ಈ ಚಿತ್ರ ₹ 37 ಕೋಟಿ ಹಣವನ್ನು ಗಳಿಸಿದೆ. ಮೂರು ದಿನದಲ್ಲಿ ₹80 ಕೋಟಿಯ ಗಡಿಯನ್ನು ದಾಟಿದೆ. ಸೂಪರ್ ಸ್ಟಾರ್‌ಗಳ ಸಿನಿಮಾಗಳೇ ಹಣ ಗಳಿಸುವಲ್ಲಿ ವಿಫಲವಾಗುತ್ತಿರುವಾಗ ಹೊಸ ಹೀರೋನ ಈ ಕಮಾಯಿ ಬಾಲಿವುಡ್‌ನವರ ಪಾಲಿಗೆ ವಿಶೇಷವೂ ಹೌದು. ಅಚ್ಚರಿಯೂ ಹೌದು.

Saiyaara Shatters Records Ahaan Panday amp amp Aneet Padda s Mohit Suri Directorial Clocks Historic 83Cr

ಸ್ಯಾಕ್ನಿಲ್ ವೆಬ್ ಸೈಟ್ ಪ್ರಕಾರ ಸೈಯಾರ ಚಿತ್ರದ 3 ದಿನದ ಗಳಿಕೆ ಈ ಕೆಳಗಿನಂತಿದೆ.

ಮೊದಲ ದಿನ[ಶುಕ್ರವಾರ] ₹21ಕೋಟಿ

ಎರಡನೇ ದಿನ[ಶನಿವಾರ] ₹25ಕೋಟಿ

ಮೂರನೇ ದಿನ[ಭಾನುವಾರ] ₹37ಕೋಟಿ * ಅಂದಾಜು


ಒಟ್ಟು ಗಳಿಕೆ ₹83 ಕೋಟಿ

ಕಬೀರ್ ಸಿಂಗ್ ಹಿಂದಿಕ್ಕಿದ ಸೈಯಾರ

ಅಹಾನ್ ಪಾಂಡೆ ಮತ್ತು ಅನೀತ್ ಪಡ್ಡಾ ಅಭಿನಯದ 'ಸೈಯಾರ' ಬಾಕ್ಸಾಫೀಸ್‌ನ ಫಸ್ಟ್ ವೀಕೆಂಡ್ ರೇಸ್‌ನಲ್ಲಿ ಶಾಹೀದ್ ಕಪೂರ್ ಮತ್ತು ಕಿಯಾರಾ ಅಡ್ವಾನಿ ಅಭಿನಯದ 'ಕಬೀರ್ ಸಿಂಗ್' ಚಿತ್ರವನ್ನು ಹಿಂದಿಕ್ಕಿದೆ. ಮೊದಲ ಮೂರು ದಿನದಲ್ಲಿ 'ಸ್ಯಾಕ್ನಿಲ್' ಪ್ರಕಾರ 'ಕಬೀರ್ ಸಿಂಗ್' ₹70.83 ಕೋಟಿಯನ್ನು ಗಳಿಸಿತ್ತು. ಈ ಗಳಿಕೆಯನ್ನು ಈಗ 'ಸೈಯಾರ' ಹಿಂದಿಕ್ಕಿದೆ. ಕೇವಲ 'ಕಬೀರ್ ಸಿಂಗ್' ಮಾತ್ರವಲ್ಲ ಮೂರು ದಿನದ ಲೆಕ್ಕಾಚಾರದಲ್ಲಿ 'ಸೈಯಾರ' ಈಗಾಗಲೇ ಈ ವರ್ಷ ಬಂದ ಹಲವು ಚಿತ್ರಗಳನ್ನು ಹಿಂದಿಕ್ಕಿದೆ. ಆ ಪೈಕಿ ಅಕ್ಷಯ್ ಕುಮಾರ್ ಅಭಿನಯದ 'ಕೇಸರಿ-2'.. 'ಸ್ಕೈ ಫೋರ್ಸ್‌'..'ಹೌಸ್‌ಫುಲ್ 5'.. ಅಜಯ್ ದೇವಗನ್ ಅಭಿನಯದ 'ರೇಡ್ 2' ಆಮಿರ್ ಖಾನ್ ಅಭಿನಯದ 'ಸಿತಾರೆ ಜಮೀನ್ ಪರ್' ಪ್ರಮುಖವಾದವು.

ಎಲ್ಲಾ ಹೊಸಬರನ್ನು ಹಿಂದಿಕ್ಕಿದ ಹೊಸ ಹೀರೋ ಅಹಾನ್

ಇನ್ನು ಬಾಲಿವುಡ್‌ನಲ್ಲಿ ಇಲ್ಲಿಯವರೆಗೆ ಹಲವಾರು ಸ್ಟಾರ್‌ಗಳ ಮಕ್ಕಳು ಚಿತ್ರರಂಗಕ್ಕೆ ಬಂದಿದ್ದಾರೆ. ಅಹಾನ್ ಕೂಡ ಈ ಗುಂಪಿನ ಸದಸ್ಯನೇ. ವಿಶೇಷ ಅಂದರೆ ಈ ಹಿಂದೆ ಬಂದ ಎಲ್ಲರ ದಾಖಲೆಯನ್ನು ಅಹಾನ್ ಮುರಿದಿದ್ದಾರೆ. ಉದಾಹರಣೆಗೆ ಜಾಹ್ನವಿ ಕಪೂರ್ ಮತ್ತು ಇಶಾನ್ ಕಟ್ಟರ್ ಅಭಿನಯದ 'ಧಡಕ್', ಆಲಿಯಾ ಭಟ್, ವರುಣ್ ಧವನ್ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅಭಿನಯದ ಚೊಚ್ಚಲ ಚಿತ್ರ 'ಸ್ಟೂಡೆಂಟ್ ಆಫ್ ದಿ ಇಯರ್' ಚಿತ್ರಗಳ ದಾಖಲೆ ಅಹಾನ್ ಅಬ್ಬರದ ಮುಂದೆ ಧೂಳಿಪಟವಾಗಿವೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Mohit Suri's 'Saiyaara,' starring Ahaan Panday and Aneet Padda, clocks a historic ₹83 Crore in its opening weekend. Discover why this film is shattering records.
Read more about: bollywood records
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X