ಹೊಸ ಹುಡುಗನ ಹಾವಳಿಗೆ ಬಾಕ್ಸಾಫೀಸ್ ಗಢಗಢ, ಆರ್‌ಆರ್‌ಆರ್, ಕಬೀರ್ ಸಿಂಗ್ ದಾಖಲೆ ಉಡೀಸ್
ಈ ವರ್ಷ ಚಿತ್ರರಂಗದಲ್ಲಿ ಹಲವಾರು ಪ್ರಯತ್ನಗಳಾಗಿವೆ. ಆದರೆ.. ಪ್ಯಾನ್ ಇಂಡಿಯಾದ ಈ ಕಾಲದಲ್ಲಿ ಈ ಪ್ರಯತ್ನಗಳಿಗೆ ಸಿಕ್ಕ ಬೆಲೆ ತುಂಬಾ ಕಡಿಮೆ. ಅಲ್ಲೊಂದು.. ಇಲ್ಲೊಂದು ಚಿತ್ರಗಳು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿವೆ. ಸದ್ದು ಮಾಡಿವೆ. ಗಮನವನ್ನು ಕೂಡ ಸೆಳೆದಿವೆ. ವಿಶೇಷ ಅಂದರೆ ಹೀಗೆ ಗೆದ್ದ ಸಿನಿಮಾದ ಮೇಲೆ ಅನೇಕರಿಗೆ ನಿರೀಕ್ಷೆಗಳೇ ಇರಲಿಲ್ಲ. ಹತ್ತರಲ್ಲಿ ಹನ್ನೊಂದನೇಯದ್ದು ಎಂದೇ ಎಲ್ಲರು ಅಂದುಕೊಂಡಿದ್ದರು.
ಆದರೆ.. ಕೆಲ ಸಿನಿಮಾಗಳೇ ಹಾಗೇ. ಯಾವ ನಿರೀಕ್ಷೆಯನ್ನೂ ಮೂಡಿಸದೇ ದಿಗ್ಗನೆ ಬಂದು ಆ ನಂತರ ಸದ್ದು ಮಾಡುತ್ತವೆ. ಹಣವನ್ನು ದೋಚುತ್ತಾವೆ. ''ಸೈಯಾರ'' ಇದಕ್ಕೆ ಸದ್ಯದ ಉದಾಹರಣೆ. ಹೌದು, ಅಹಾನ್ ಪಾಂಡೆ ಮತ್ತು ಅನೀತ್ ಪಡ್ಡಾ ಅಭಿನಯದ, ಮೊಹೀತ್ ಸೂರಿ ನಿರ್ದೇಶನದ 'ಸೈಯಾರ' ಸದ್ಯ ಬಾಲಿವುಡ್‌ನಲ್ಲಿ ದಾಖಲೆಗಳ ಮೇಲೆ ದಾಖಲೆಯನ್ನು ಬರೆಯುತ್ತಿದೆ. ಹೊಸದೊಂದು ಅಲೆಗೆ ಕಾರಣವಾಗಿದೆ.

ಸಾಮಾನ್ಯ ಲವ್ ಸ್ಟೋರಿಯಂತೆ ಮೇಲ್ನೋಟಕ್ಕೆ ಕಂಡು ಬರುವ ಸೈಯಾರ ಚಿತ್ರವನ್ನು ಜನ ಅದೆಷ್ಟರ ಮಟ್ಟಿಗೆ ಮುಗಿ ಬಿದ್ದು ನೋಡುತ್ತಿದ್ದಾರೆ ಅಂದರೆ ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಈ ಚಿತ್ರ ಕೇವಲ ನಾಲ್ಕೇ ದಿನದಲ್ಲಿ 100 ಕೋಟಿಯನ್ನು ಗಳಿಸಿದೆ.
ಸ್ಯಾಕ್ನಿಲ್ ವೆಬ್ ಸೈಟ್ ಪ್ರಕಾರ ಸೈಯಾರ ಚಿತ್ರದ 4 ದಿನದ ಗಳಿಕೆ ಈ ಕೆಳಗಿನಂತಿದೆ.
ಮೊದಲ ದಿನ[ಶುಕ್ರವಾರ] ₹21ಕೋಟಿ
ಎರಡನೇ ದಿನ[ಶನಿವಾರ] ₹25ಕೋಟಿ
ಮೂರನೇ ದಿನ[ಭಾನುವಾರ] ₹35.75ಕೋಟಿ
ನಾಲ್ಕನೇ ದಿನ [ ಸೋಮವಾರ ] ₹ 22.50 ಕೋಟಿ * ಅಂದಾಜು
ಒಟ್ಟು ಗಳಿಕೆ ₹ 105.75
ಇನ್ನು ಸಾಮಾನ್ಯವಾಗಿ ಸೋಮವಾರ ಚಿತ್ರ ಯಾವುದೇ ಆದರೂ.. ಆ ಚಿತ್ರದಲ್ಲಿ ಎಂಥಾ ಸ್ಟಾರ್ ಇದ್ದರೂ ಕೂಡ ರಜೆ ಇರದ ಕಾರಣ ಚಿತ್ರದ ಗಳಿಕೆ ಕುಸಿಯುತ್ತೆ. ಆದರೆ.. ಸೈಯಾರ ವಿಚಾರದಲ್ಲಿ ಕೂಡ ಇದೇ ಆಗಿದೆ. ಆದರೆ.. ಚಿತ್ರದ ಗಳಿಕೆ ಎರಡಂಕಿಯನ್ನು ದಾಟಿದೆ. ಸೂಪರ್ ಸ್ಟಾರ್‌ಗಳ ಸಿನಿಮಾಗಳೇ ಹಣ ಗಳಿಸುವಲ್ಲಿ ವಿಫಲವಾಗುತ್ತಿರುವಾಗ ಹೊಸ ಹೀರೋನ ಈ ಕಮಾಯಿ ಬಾಲಿವುಡ್‌ನವರ ಪಾಲಿಗೆ ವಿಶೇಷವೂ ಹೌದು. ಅಚ್ಚರಿಯೂ ಹೌದು.
ಅಂದ್ಹಾಗೇ ಅಹಾನ್ ಪಾಂಡೆ ಇಲ್ಲಿಯವರೆಗೆ ಅಕ್ಷಯ್ ಕುಮಾರ್ ಅಭಿನಯದ 'ಕೇಸರಿ-2'.. 'ಸ್ಕೈ ಫೋರ್ಸ್'.. 'ಹೌಸ್‌ಫುಲ್ 5'.. ಅಜಯ್ ದೇವಗನ್ ಅಭಿನಯದ 'ರೇಡ್ 2' ಆಮಿರ್ ಖಾನ್ ಅಭಿನಯದ 'ಸಿತಾರೆ ಜಮೀನ್ ಪರ್' ಚಿತ್ರಗಳನ್ನು ದಿನದ ಗಳಿಕೆಯ ವಿಚಾರದಲ್ಲಿ ಹಿಂದಿಕ್ಕಿದ್ದಾರೆ. ಈಗ ನಾಲ್ಕು ದಿನದಲ್ಲಿ 100 ಕೋಟಿ ಗಳಿಸುವ ಮೂಲಕ 'ಆರ್.ಆರ್.ಆರ್'.. 'ಕಬೀರ್ ಸಿಂಗ್'.. 'ಸೂರ್ಯವಂಶಿ' ಮತ್ತು 'ಏಕ್ ಥಾ ಟೈಗರ್' ದಾಖಲೆಯನ್ನು ಕೂಡ ಮುರಿದಿದ್ದಾರೆ.
ಹೌದು, ಇಂಡಿಯಾ.ಕಾಮ್ ವರದಿಯ ಪ್ರಕಾರ 'ಆರ್‌ಆರ್‌ಆರ್' ಐದು ದಿನದಲ್ಲಿ ನೂರು ಕೋಟಿಯ ಗಡಿಯನ್ನು ದಾಟಿತ್ತು. 'ಕಬೀರ್ ಸಿಂಗ್'.. 'ಸೂರ್ಯವಂಶಿ' ಮತ್ತು 'ಏಕ್ ಥಾ ಟೈಗರ್' ಚಿತ್ರಗಳಿಗೆ ಕೂಡ ಸೆಂಚುರಿ ಹೊಡೆಯಲು ಐದು ದಿನ ಬೇಕಾಗಿತ್ತು. ವಿಶೇಷ ಅಂದರೆ ಈ ಎಲ್ಲಾ ಚಿತ್ರಗಳಲ್ಲಿ ಇದ್ದಿದ್ದು ಸೂಪರ್ ಸ್ಟಾರ್‌ಗಳೇ. ಆದರೆ.. ಹೊಸ ಹೀರೋ ಅಹಾನ್ ಈ ಗಡಿಯನ್ನು ಕೇವಲ ನಾಲ್ಕೇ ದಿನದಲ್ಲಿ ತಲುಪಿದ್ದಾರೆ. ಈ ಮೂಲಕ ಬಾಲಿವುಡ್‌ನಲ್ಲಿ ಹೊಸದೊಂದು ಮೈಲಿಗಲ್ಲು ಸ್ಥಾಪಿಸಿದ್ದಾರೆ.
ಸದ್ಯ 'ಸೈಯಾರ' 105.75 ಕೋಟಿ ಹಣವನ್ನು ಗಳಿಸಿದ್ದು ಚಿತ್ರ 300 ಕೋಟಿಯನ್ನು ಅನಾಯಾಸವಾಗಿ ಗಳಿಸುತ್ತೆ ಎನ್ನುವ ಮಾತು ಬಾಲಿವುಡ್‌ನಲ್ಲಿ ಕೇಳಿ ಬರುತ್ತಿದೆ. ಈ ಗಡಿಯನ್ನು ತಲುಪುವಲ್ಲಿ 'ಸೈಯಾರ' ಯಶಸ್ವಿಯಾಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











