Maa Inti Bangaaram Box Office Day 7 ; ಅನ್‌ಸ್ಟಾಪಬಲ್ ಸಮಂತಾ, 7 ದಿನದಲ್ಲಿ ಕರ್ನಾಟಕದಲ್ಲಿ ಗಳಿಸಿದ್ದೆಷ್ಟು 'ಬಂಗಾರಂ' ?

ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಜನರನ್ನು ಸೆಳೆಯಲು ಕೇವಲ ಒಂದು ಪೋಸ್ಟರ್ ಸಾಕಿತ್ತು. ಚಿತ್ರಮಂದಿರ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಎಷ್ಟೇ ಪ್ರಚಾರ ಮಾಡಿದರು ಕೂಡ ಚಿತ್ರಮಂದಿರಕ್ಕೆ ಚಿತ್ರವೊಂದು ಬಂದಿದ್ದು ಹೋಗಿದ್ದು ಕೂಡ ಈಗೀಗ ಹಲವರಿಗೆ ಗೊತ್ತೇ ಆಗುವುದಿಲ್ಲ. ಹೊಸಬರು ಎಷ್ಟೇ ಭಿನ್ನವಾದ ಆಲೋಚನೆ ಮಾಡಿದರು ಕೂಡ ಪ್ರೇಕ್ಷಕರನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಎಳೆದು ತರಲು ಕೂಡ ಸಾಧ್ಯವಾಗುತ್ತಿಲ್ಲ.

ಇದು ಕೇವಲ ಹೊಸಬರ ಕಥೆ ಮಾತ್ರ ಅಲ್ಲ. ವರ್ಷಾನುವರ್ಷಗಳಿಂದ ನಾನೇ ಸೂಪರ್ ಸ್ಟಾರ್ ಎಂದುಕೊಂಡು ಓಡಾಡುತ್ತಿರುವ ಹಳೆಯ ಹುಲಿಗಳ ಘರ್ಜನೆಗೆ ಕೂಡ ಪ್ರೇಕ್ಷಕರು ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಬೇರೆ ಬೇರೆ ಭಾಷೆಯಲ್ಲಿ ದೊಡ್ಡ ದೊಡ್ಡ ಸ್ಟಾರ್‌ಗಳ ಚಿತ್ರಗಳು ಕೂಡ ಇತ್ತೀಚೆನ ದಿನಗಳಲ್ಲಿ ಮಕಾಡೆ ಮಲಗಿವೆ. ಹೀಗಿರುವಾಗ ಮಹಿಳಾ ಪ್ರಧಾನ ಚಿತ್ರ ''ಮಾ ಇಂಟಿ ಬಂಗಾರಂ'' ಬಾಕ್ಸಾಫೀಸ್‌ನಲ್ಲಿ ಬಂಗಾರದಂತಹ ಬೆಳೆ ಬೆಳೆಯುತ್ತಿದೆ.

Samantha s Maa Inti Bangaaram Spikes 6 on Day 7 Crushes Week 1 with 35 Crore

ಹೌದು, ''ಮಾ ಇಂಟಿ ಬಂಗಾರಂ''.. ಮಹಿಳಾ ಪ್ರಧಾನ ಚಿತ್ರಗಳನ್ನು ಪ್ರೇಕ್ಷಕರು ಕಣ್ಣೆತ್ತಿಯೂ ನೋಡುವುದಿಲ್ಲ ಎನ್ನುವ ವಾದವನ್ನು ಬುಡಮೇಲಾಗಿಸಿದ ಸಿನಿಮಾ. ಸಮಂತಾ ಸ್ಟಾರ್ ಪವರ್ ಗೆ ಕೈಗನ್ನಡಿ ಹಿಡಿದಂತೆ ಇರುವ ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಅಕ್ಷರಶಃ ಬಿರುಗಾಳಿಯನ್ನೇ ಎಬ್ಬಿಸಿದೆ.

ಇದಕ್ಕೆ ಪುರಾವೆ ಎಂಬಂತೆ 7ನೇ ದಿನದ ಗಳಿಕೆಯಲ್ಲಿ 6% ಏರಿಕೆ ಕಂಡು ಬಂದಿದ್ದು, ₹2.65 ಕೋಟಿಯನ್ನು ನಿನ್ನೆ ಅಂದರೆ 7ನೇ ದಿನ (ಜೂನ್ 25) ಚಿತ್ರ ಗಳಿಸಿದೆ ಎಂದು ಬಾಕ್ಸಾಫೀಸ್‌ ಅಂಕಿ ಅಂಶ ಹಂಚಿಕೊಳ್ಳುವ ''ಸ್ಯಾಕ್ನಿಲ್'' ವರದಿ ಮಾಡಿದೆ. ಈ ಮೂಲಕ ಒಂದು ವಾರದಲ್ಲಿ ₹35.85 ಕೋಟಿಯನ್ನು ''ಮಾ ಇಂಟಿ ಬಂಗಾರಂ'' ಕೇವಲ ಭಾರತದಲ್ಲಿ ಕೊಳ್ಳೆ ಹೊಡೆದಿದೆ.

''ಸ್ಯಾಕ್ನಿಲ್'' ಪ್ರಕಾರ ''ಮಾ ಇಂಟಿ ಬಂಗಾರಂ'' ಚಿತ್ರದ 7 ದಿನದ ಗಳಿಕೆ ಈ ಕೆಳಗಿನಂತೆ ಇದೆ.

ದಿನ ಭಾರತದ ಒಟ್ಟು ನಿವ್ವಳ ಗಳಿಕೆ (India Net)
ಮೊದಲನೇ ದಿನ (ಶುಕ್ರವಾರ) ₹5.35 ಕೋಟಿ
ಎರಡನೇ ದಿನ (ಶನಿವಾರ) ₹7.65 ಕೋಟಿ
ಮೂರನೇ ದಿನ (ಭಾನುವಾರ) ₹10.10 ಕೋಟಿ
ನಾಲ್ಕನೇ ದಿನ (ಸೋಮವಾರ) ₹4.10 ಕೋಟಿ
ಐದನೇ ದಿನ (ಮಂಗಳವಾರ) ₹3.50 ಕೋಟಿ
ಆರನೇ ದಿನ (ಬುಧವಾರ) ₹2.50 ಕೋಟಿ
ಏಳನೇ ದಿನ (ಗುರುವಾರ) ₹2.65 ಕೋಟಿ
ಮೊದಲ ವಾರದ ಒಟ್ಟು ಕಲೆಕ್ಷನ್ ₹35.85 ಕೋಟಿ

ಕರ್ನಾಟಕದಲ್ಲಿ ಒಂದು ವಾರದಲ್ಲಿ ಗಳಿಸಿದ್ದೆಷ್ಟು ''ಮಾ ಇಂಟಿ ಬಂಗಾರಂ '' ..?

ಇನ್ನು ''ಮಾ ಇಂಟಿ ಬಂಗಾರಂ'' ಚಿತ್ರಕ್ಕೆ ಕರ್ನಾಟಕದಲ್ಲಿಯೂ ಉತ್ತಮವಾದ ಪ್ರತಿಕ್ರಿಯೆ ಸಿಕ್ಕಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಚಿತ್ರದ ಗಳಿಕೆ ನಿನ್ನೆ ಮತ್ತು ಮೊನ್ನೆ ತಟಸ್ಥವಾಗಿದೆ. ಮೊದಲ ದಿನ (ಜೂನ್ 19) 90 ಲಕ್ಷ ಗಳಿಸಿದ್ದ ಈ ಚಿತ್ರ ನಿನ್ನೆ ಮತ್ತು ಮೊನ್ನೆ 42 ಲಕ್ಷವನ್ನು ಕರುನಾಡಿನಲ್ಲಿ ದೋಚಿದೆ. ಇನ್ನು ಬೆಂಗಳೂರಿನಲ್ಲಿ 306 ಪ್ರದರ್ಶನಗಳನ್ನು ನಿನ್ನೆ (ಜೂನ್ 25) ''ಮಾ ಇಂಟಿ ಬಂಗಾರಂ'' ಕಂಡಿದ್ದು ಚಿತ್ರಮಂದಿರದ ಆವರಣದಲ್ಲಿ ಸರಾಸರಿ 16.8% ಜನ ಕಂಡುಬಂದಿದ್ದಾರೆ.

Samantha s Maa Inti Bangaaram Spikes 6 on Day 7 Crushes Week 1 with 35 Crore

ಕರ್ನಾಟಕದಲ್ಲಿ ''ಮಾ ಇಂಟಿ ಬಂಗಾರಂ'' 7 ದಿನದ ಗಳಿಕೆ ಈ ಕೆಳಗಿನಂತೆ ಇದೆ

ದಿನ ಕರ್ನಾಟಕದ ಒಟ್ಟು ನಿವ್ವಳ ಗಳಿಕೆ (K'taka Net)
ಮೊದಲನೇ ದಿನ (ಶುಕ್ರವಾರ) ₹90 ಲಕ್ಷ
ಎರಡನೇ ದಿನ (ಶನಿವಾರ) ₹1.50 ಕೋಟಿ
ಮೂರನೇ ದಿನ (ಭಾನುವಾರ) ₹1.85 ಕೋಟಿ
ನಾಲ್ಕನೇ ದಿನ (ಸೋಮವಾರ) ₹60 ಲಕ್ಷ
ಐದನೇ ದಿನ (ಮಂಗಳವಾರ) ₹60 ಲಕ್ಷ
ಆರನೇ ದಿನ (ಬುಧವಾರ) ₹42 ಲಕ್ಷ
ಏಳನೇ ದಿನ (ಗುರುವಾರ) ₹42 ಲಕ್ಷ
ಒಟ್ಟು ಮೊತ್ತದ ಕಲೆಕ್ಷನ್ ₹6.29 ಕೋಟಿ

ಒಟ್ನಲ್ಲಿ ಸದ್ಯ ''ಮಾ ಇಂಟಿ ಬಂಗಾರಂ'' ಒಂದು ವಾರ ಯಶಸ್ವಿಯಾಗಿ ಪೂರೈಸಿದ್ದು, ಎರಡನೇ ವಾರಕ್ಕೆ ಕಾಲಿಟ್ಟಿದೆ. ಈ ವಾರ ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ಚಿತ್ರಗಳು ಬಿಡುಗಡೆಯಾದ ಹಿನ್ನೆಲೆ ಬಾಕ್ಸಾಫೀಸ್‌ನಲ್ಲಿ ''ಬಂಗಾರಂ''ಗೆ ಹಿನ್ನೆಡೆಯಾಗುವ ಸಾಧ್ಯತೆ ಇದೆ ಎಂಬ ಅಭಿಪ್ರಾಯ ಟ್ರೇಡ್ ವಲಯದಲ್ಲಿ ವ್ಯಕ್ತವಾಗುತ್ತಿದೆ. ಈ ಲೆಕ್ಕಾಚಾರ ತಲೆ ಕೆಳಗಾಗಿ ಈ ವಾರಾಂತ್ಯದ ಗಳಿಕೆಯಲ್ಲಿ ಮತ್ತೆ ಏರಿಕೆ ಕಂಡರೂ ಅಚ್ಚರಿ ಇಲ್ಲ. ಯಾಕೆಂದರೆ ''ಬಂಗಾರಂ'' ಬೇಟೆ ಇನ್ನೂ ಮುಗಿದಿಲ್ಲ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

English summary
Maa Inti Bangaaram strikes box office gold! Samantha’s film defies weekday trends with a 6% jump on Day 7, crossing ₹35 crores. Full details inside!
Read more about: samantha tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X