Maa Inti Bangaaram Box Office Day 3 ; ಬೆಳ್ಳಿತೆರೆಯಲ್ಲಿ ಸಮಂತಾ ಧಗಧಗ, ಭಾನುವಾರ ಚಿನ್ನದ ಬೆಳೆ ಬೆಳೆದ ಬಂಗಾರಂ

ಪುರುಷ ಪ್ರಧಾನ ಚಿತ್ರರಂಗದಲ್ಲಿ ಮಹಿಳಾ ಪ್ರಧಾನ ಚಿತ್ರಗಳು ಬರುವುದು ತುಂಬಾನೇ ಕಡಿಮೆ. ಇಲ್ಲಿ ನಾಯಕಿಯರಲ್ಲಿ ಎಷ್ಟೇ ಪ್ರತಿಭೆ ಇದ್ದರೂ ಕೂಡ ಅನಾದಿಕಾಲದಿಂದ ಹೀರೋಯಿಸಂ ವಿಜೃಂಭಿಸುತ್ತಲೇ ಬಂದಿದೆ. ನಾಯಕನ ನಂತರವಷ್ಟೇ ನಾಯಕಿ ಎನ್ನುವ ಮನೋಭಾವ ಹಲವರಲ್ಲಿದೆ. ಇದು ಮಾತ್ರವಲ್ಲದೇ ನಾಯಕಿಯರು ಅಂದರೆ ಕೇವಲ ಮರ ಸುತ್ತಲು, ಚಿತ್ರದ ಗ್ಲ್ಯಾಮರ್ ಹೆಚ್ಚಿಸಲು ಅಷ್ಟೇ ಲಾಯಕ್ಕು ಮನಃಸ್ಥಿತಿ ಕೂಡ ಚಿತ್ರರಂಗದಲ್ಲಿ ಹಲವರಲ್ಲಿದೆ.

ಆದರೆ .. ಈ ಧೋರಣೆಯನ್ನು ಬದಲಿಸುವ ಪ್ರಯತ್ನವನ್ನು ಆಗಾಗ ಹಲವರು ನಾಯಕಿಯರು ಮಾಡುತ್ತಾರೆ. ಪುರುಷ ಪಾರುಪಥ್ಯದ ಕುರಿತು ಕಿಡಿ ಕಾರುತ್ತಾರೆ. ಮತ್ತೂ ಕೆಲ ಒಮ್ಮೆ ಅವಕಾಶ ಸಿಕ್ಕಾಗ ಒಳ್ಳೆಯ ಕಥೆ ಮತ್ತು ತಂಡ ಇದ್ದರೆ ಮಹಿಳಾ ಪ್ರಧಾನ ಚಿತ್ರಗಳು ಕೂಡ ಬಾಕ್ಸಾಫೀಸ್‌ನಲ್ಲಿ ವಂಡರ್ ಸೃಷ್ಟಿಸಬಹುದು ಎನ್ನುವುದನ್ನು ಸಾಬೀತು ಮಾಡುತ್ತಾರೆ. ಉದಾಹರಣೆಗೆ ಸಮಂತಾ ಮತ್ತು ಅವರ ''ಮಾ ಇಂಟಿ ಬಂಗಾರಂ''.

samantha-smaa-inti-bangaaram-explodes-with-32-sunday-jump-nears-25-cr-in-india

ಹೌದು, ''ಮಾ ಇಂಟಿ ಬಂಗಾರಂ''.. ಸಮಂತಾ ಸ್ಟಾರ್ ಪವರ್ ಗೆ ಕೈಗನ್ನಡಿ ಹಿಡಿದಂತಿರುವ ಸಿನಿಮಾ. ಕಳೆದ ಶುಕ್ರವಾರ (ಜೂನ್ 19) ತೆರೆಗೆ ಬಂದ ಈ ಚಿತ್ರ ಸದ್ಯ ಬಾಕ್ಸಾಫೀಸ್‌ನಲ್ಲಿ ಹಣದ ಮಳೆಯನ್ನೇ ಹರಿಸುತ್ತಿದೆ. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಕೇವಲ ಮೂರೇ ದಿನದಲ್ಲಿ ₹23.10 ಕೋಟಿಯನ್ನು ದೋಚಿದೆ.

ಇನ್ನು ಎಲ್ಲರಿಗೆ ಗೊತ್ತಿರುವಂತೆ ಸ್ಟಾರ್ ಗಳ ಸಿನಿಮಾಗಳೇ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುವಲ್ಲಿ ವಿಫಲವಾಗುತ್ತಿವೆ. ಪ್ರೇಕ್ಷಕರನ್ನು ಸೆಳೆಯುವಲ್ಲಿ ಎಡವುತ್ತಿವೆ. ಹೀಗಿರುವಾಗ ಮೊದಲ ದಿನ (ಜೂನ್ 19) ₹5.35 ಕೋಟಿಯನ್ನು ಗಳಿಸಿದ್ದ ''ಮಾ ಇಂಟಿ ಬಂಗಾರಂ'' ಮೂರನೇ ದಿನ ಎರಡರಷ್ಟು ಹೆಚ್ಚಿನ ಹಣ ದೋಚಿದೆ. ₹10.10 ಕೋಟಿಯನ್ನು ಕೊಳ್ಳೆ ಹೊಡೆದಿದೆ.

''ಸ್ಯಾಕ್ನಿಲ್'' ಪ್ರಕಾರ ''ಮಾ ಇಂಟಿ ಬಂಗಾರಂ'' ಚಿತ್ರದ 3 ದಿನದ ಗಳಿಕೆ ಈ ಕೆಳಗಿನಂತೆ ಇದೆ.

ದಿನ ಭಾರತದ ಒಟ್ಟು ನಿವ್ವಳ ಗಳಿಕೆ (India Net)
ಮೊದಲನೇ ದಿನ (ಶುಕ್ರವಾರ) ₹5.35 ಕೋಟಿ
ಎರಡನೇ ದಿನ (ಶನಿವಾರ) ₹7.65 ಕೋಟಿ
ಮೂರನೇ ದಿನ (ಭಾನುವಾರ) ₹10.10 ಕೋಟಿ
ಒಟ್ಟು ಮೊತ್ತದ ಕಲೆಕ್ಷನ್ ₹23.10 ಕೋಟಿ

ಕರ್ನಾಟಕದಲ್ಲಿ ಗಳಿಸಿದ್ದೆಷ್ಟು ?

ಹೀಗೆ ಮೂರು ದಿನದಲ್ಲಿ ₹23.10 ಕೋಟಿಯನ್ನು ಗಳಿಸಿರುವ ''ಮಾ ಇಂಟಿ ಬಂಗಾರಂ'' ನಿನ್ನೆ (ಜೂನ್ 21) ಕರ್ನಾಟಕದಲ್ಲಿ ₹1.85 ಕೋಟಿ ಕೊಳ್ಳೆ ಹೊಡೆದಿದೆ ಎಂದು ''ಸ್ಯಾಕ್ನಿಲ್'' ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ.
ಬೆಂಗಳೂರಿನಲ್ಲಿ ನಿನ್ನೆ 326 ಪ್ರದರ್ಶನಗಳನ್ನು ಚಿತ್ರ ಕಂಡಿದ್ದು ಚಿತ್ರಮಂದಿರದ ಆವರಣದಲ್ಲಿ ಸರಾಸರಿ 47.3% ಜನ ಕಂಡು ಬಂದಿದ್ದಾರೆ.

samantha-smaa-inti-bangaaram-explodes-with-32-sunday-jump-nears-25-cr-in-india

ಇನ್ನು ಆಂಧ್ರದಲ್ಲಿ ₹8.50 ಕೋಟಿಯನ್ನು ನಿನ್ನೆ (ಜೂನ್ 21) ''ಮಾ ಇಂಟಿ ಬಂಗಾರಂ'' ಗಳಿಸಿದ್ದು ತಮಿಳುನಾಡಿನಲ್ಲಿ 90 ಲಕ್ಷ ಗಳಿಸಿದೆ. ಕೇರಳದ ಕೊಡುಗೆ ಕೇವಲ 70 ಲಕ್ಷ ಮಾತ್ರ.

''ಮಾ ಇಂಟಿ ಬಂಗಾರಂ'' ಚಿತ್ರವನ್ನು ಕೇವಲ ತೆಲುಗಿನಲ್ಲಿ ಮಾತ್ರ ಬಿಡುಗಡೆ ಮಾಡಿಲ್ಲ. ಬದಲಿಗೆ ತಮಿಳಿನಲ್ಲಿ ಕೂಡ ಡಬ್ ಮಾಡಲಾಗಿದೆ. ಆದರೆ, ತೆಲುಗು ನಾಡಿನಲ್ಲಿ ಕಂಡು ಬರುತ್ತಿರುವ ನೂಕು ನುಗ್ಗಲು ತಮಿಳುನಾಡಿನಲ್ಲಿ ಇಲ್ಲ. ಇದಕ್ಕೆ ಪುರಾವೆ ಎಂಬಂತೆ ತಮಿಳು ವರ್ಷನ್ ₹1.15 ಕೋಟಿಯನ್ನು ಗಳಿಸಿದೆ ಎಂದು ''ಸ್ಯಾಕ್ನಿಲ್'' ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ.

ಒಟ್ನಲ್ಲಿ ಕಂಟೆಂಟ್ ಆಧಾರಿತ ಮತ್ತು ಅಭಿನಯಕ್ಕೆ ಪ್ರಾಮುಖ್ಯತೆ ಇರುವ ಕಥೆ ಆಯ್ಕೆ ಮಾಡಿಕೊಂಡಿದ್ದ ಸಮಂತಾಗೆ ಈ ಭಾನುವಾರ ಬ್ಲಾಕ್ ಬಸ್ಟರ್ ಪ್ರತಿಕ್ರಿಯೆ ಸಿಕ್ಕಿದೆ. ಮಹಿಳಾ ಪ್ರಧಾನ ಚಿತ್ರವೊಂದು ಇಂದಿನ ಕಾಲದಲ್ಲಿ ಮೊದಲ ವೀಕೆಂಡ್‌ನಲ್ಲೇ 25 ಕೋಟಿಯ ಗಡಿ ತಲುಪುವುದು ಸಾಮಾನ್ಯ ಸಾಧನೆ ಅಲ್ಲ. ಕಮರ್ಷಿಯಲ್ ಹೀರೋ ಚಿತ್ರಕ್ಕಿಂತ ''ಮಾ ಇಂಟಿ ಬಂಗಾರಂ'' ಚಿತ್ರದ ಈ ಗಳಿಕೆ ಕಡಿಮೆ ಏನಿಲ್ಲ. ಸದ್ಯ ಇಂದು (ಜೂನ್ 22) ಈ ಚಿತ್ರದ ಗಳಿಕೆಯ ಮೇಲೆ ಎಲ್ಲರ ಕಣ್ಣಿದ್ದು ಸೋಮವಾರದ ಅಗ್ನಿ ಪರೀಕ್ಷೆಯಲ್ಲಿ ''ಬಂಗಾರಂ''ಗೆ ಎಷ್ಟು ಅಂಕ ಸಿಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

English summary
Samantha's Maa Inti Bangaaram dominates the Indian box office! Sunday collections jump 32% as the film eyes the ₹25 Cr milestone. See Day 3 stats!
Read more about: samantha tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X