ಅನುಷ್ಕಾ ಶೆಟ್ಟಿಗೆ ಸೆಡ್ಡು ಹೊಡೆದ ಸಮಂತಾ ; 'ಬಂಗಾರಂ' ಅಬ್ಬರ, 16 ವರ್ಷದ ನಂತರ 'ಅರುಂಧತಿ' ದಾಖಲೆ ಉಡೀಸ್

ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಪುರುಷ ಪ್ರಧಾನ ಚಿತ್ರರಂಗದಲ್ಲಿ ನಾಯಕರದ್ದೇ ಕಾರುಬಾರು ಇತ್ತು. ಸಂಭಾವನೆ ವಿಚಾರದಲ್ಲಿಯೂ ನಾಯಕಿಯರಿಗೆ ಆಗ್ತಿದ್ದಿದ್ದು ಅನ್ಯಾಯವೇ. ನಾಯಕರಿಗೆ ಕೊಡಲಾಗುತ್ತಿದ್ದ ಸಂಭಾವನೆಯ ಅರ್ಧದಷ್ಟು ಹಣ ನಾಯಕಿಗೆ ಕೊಡಲು ಹಿಂದೇಟು ಹಾಕ್ತಿದ್ದ ಕಾಲ ಅದು.

ಕೇವಲ ಸಂಭಾವನೆ ಮಾತ್ರ ಅಲ್ಲ ಪುರುಷ ಪ್ರಧಾನ ಚಿತ್ರರಂಗದಲ್ಲಿ ನಾಯಕನ ನಂತರವಷ್ಟೇ ನಾಯಕಿ ಎನ್ನುವ ಧೋರಣೆ ಇತ್ತು. ಇದಕ್ಕೆ ಕೈಗನ್ನಡಿ ಎಂಬಂತೆ 100ಕ್ಕೂ ಅಧಿಕ ವರ್ಷದ ಇತಿಹಾಸವನ್ನು ಹೊಂದಿರುವ ಭಾರತೀಯ ಚಿತ್ರರಂಗದಲ್ಲಿ ಮಹಿಳಾ ಪ್ರಧಾನ ಚಿತ್ರಗಳು ಬಂದಿದ್ದು ತುಂಬಾನೇ ಕಡಿಮೆ.

Samantha Rewrites Tollywood History Maa Inti Bangaram Smashes Arundhati s 16-Year Record

ನಾಯಕಿಯರಲ್ಲಿ ಎಷ್ಟೇ ಪ್ರತಿಭೆ ಇದ್ದರೂ ಕೂಡ ಇಲ್ಲಿ ಅನಾದಿಕಾಲದಿಂದಲೂ ಹೀರೋಯಿಸಂ ವಿಜೃಂಭಿಸುತ್ತಲೇ ಬಂದಿದೆ. ಇದು ಮಾತ್ರವಲ್ಲದೇ ನಾಯಕಿಯರು ಅಂದರೆ ಕೇವಲ ಮರ ಸುತ್ತಲು, ಚಿತ್ರದ ಗ್ಲ್ಯಾಮರ್ ಹೆಚ್ಚಿಸಲು ಅಷ್ಟೇ ಲಾಯಕ್ಕು ಮನಃಸ್ಥಿತಿ ಕೂಡ ಚಿತ್ರರಂಗದಲ್ಲಿ ಹಲವರಲ್ಲಿದೆ.

ಆದರೆ .. ಈ ಧೋರಣೆಯನ್ನು ಬದಲಿಸುವ ಪ್ರಯತ್ನವನ್ನು ಆಗಾಗ ಹಲವರು ನಾಯಕಿಯರು ಮಾಡುತ್ತಾರೆ. ಪುರುಷ ಪಾರುಪಥ್ಯದ ಕುರಿತು ಕಿಡಿ ಕಾರುತ್ತಾರೆ. ಮತ್ತೂ ಕೆಲ ಒಮ್ಮೆ ಅವಕಾಶ ಸಿಕ್ಕಾಗ ಒಳ್ಳೆಯ ಕಥೆ ಮತ್ತು ತಂಡ ಇದ್ದರೆ ಮಹಿಳಾ ಪ್ರಧಾನ ಚಿತ್ರಗಳು ಕೂಡ ಬಾಕ್ಸಾಫೀಸ್‌ನಲ್ಲಿ ವಂಡರ್ ಸೃಷ್ಟಿಸಬಹುದು ಎನ್ನುವುದನ್ನು ಸಾಬೀತು ಮಾಡುತ್ತಾರೆ. ಉದಾಹರಣೆಗೆ ಸಮಂತಾ ಮತ್ತು ಅವರ ''ಮಾ ಇಂಟಿ ಬಂಗಾರಂ''.

ಹೌದು, ''ಮಾ ಇಂಟಿ ಬಂಗಾರಂ''.. ಸಮಂತಾ ಸ್ಟಾರ್ ಪವರ್ ಗೆ ಕೈಗನ್ನಡಿ ಹಿಡಿದಂತಿರುವ ಸಿನಿಮಾ. ತೆರೆಗೆ ಬಂದು ಹತ್ತು ದಿನಗಳಾದರೂ ಕೂಡ ಈ ಚಿತ್ರದ ಕ್ರೇಜ್ ಕಡಿಮೆಯಾಗ್ತಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ನಿನ್ನೆ (ಜೂನ್ 28) ಎರಡನೇ ಭಾನುವಾರದಂದು ಈ ಚಿತ್ರ ₹5.30 ಕೋಟಿಯನ್ನು ಗಳಿಸಿದೆ. ಈ ಮೂಲಕ ಕೇವಲ ಹತ್ತು ದಿನದಲ್ಲಿ ₹48.25 ಕೋಟಿಯನ್ನು ಕೇವಲ ಭಾರತದಲ್ಲಿಯೇ ಕೊಳ್ಳೆ ಹೊಡೆದಿದೆ ಎಂದು ಬಾಕ್ಸಾಫೀಸ್‌ನ ಅಂಕಿ ಅಂಶ ಹಂಚಿಕೊಳ್ಳುವ ''ಸ್ಯಾಕ್ನಿಲ್'' ವರದಿ ಮಾಡಿದೆ.

ಇನ್ನು ಸಮಂತಾ ಹವಾ ಕೇವಲ ಭಾರತದಲ್ಲಿ ಮಾತ್ರ ಇಲ್ಲ. ಸಪ್ತಸಾಗರದಾಚೆ ಕೂಡ ಸಮಂತಾ ಸಾಹಸಗಾಥೆಯನ್ನು ಕಣ್ತುಂಬಿಕೊಂಡ ಪ್ರೇಕ್ಷಕರು ಸಲಾಂ ಬಂಗಾರಂ ಎಂದು ಹೇಳುತ್ತಿದ್ಧಾರೆ. ಅದರಲ್ಲಿಯೂ ಸಿಂಗಾಪುರ್, ಅಮೆರಿಕಾ ಮತ್ತು ಯುರೋಪ್‌ನಲ್ಲಿ ಮುಗಿಬಿದ್ದು ಬೆಳ್ಳಿ ಪರದೆಯಲ್ಲಿ ''ಬಂಗಾರಂ'' ದರ್ಶನ ಪಡೆಯುತ್ತಿದ್ಧಾರೆ.

Samantha Rewrites Tollywood History Maa Inti Bangaram Smashes Arundhati s 16-Year Record

ಇದಕ್ಕೆ ಪೂರಕವಾಗಿ ಓವರ್ ಸೀಸ್ ಮಾರುಕಟ್ಟೆಯಿಂದಲೇ ₹22.85 ಕೋಟಿಯನ್ನು ಚಿತ್ರ ಗಳಿಸಿದೆ ಎಂದು ''ಸ್ಯಾಕ್ನಿಲ್'' ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ. ಒಟ್ಟಾರೆಯಾಗಿ ಈ ಹತ್ತು ದಿನದಲ್ಲಿ ₹78.71 ಕೋಟಿಯನ್ನು ''ಬಂಗಾರಂ'' ಕೊಳ್ಳೆ ಹೊಡೆದಿದ್ದಾಳೆ ಎಂದು ಕೂಡ ನಮೂದಿಸಿದೆ.

ಇನ್ನು ಆಗಲೇ ಆರಂಭದಲ್ಲಿ ಹೇಳಿದಂತೆ ಭಾರತೀಯ ಚಿತ್ರರಂಗದಲ್ಲಿ ಮಹಿಳಾ ಪ್ರಧಾನ ಸಿನಿಮಾಗಳು ಕಡಿಮೆ. ಅದರಲ್ಲಿಯೂ ದಕ್ಷಿಣ ಭಾರತದಲ್ಲಿ ವಿರಳಾತಿ ವಿರಳ. ಆದರೆ ಹೀಗೆ ಬಂದ ಕೆಲ ಚಿತ್ರಗಳು ಪವಾಡವನ್ನು ಮಾಡಿವೆ. ಆ ಪೈಕಿ 16 ವರ್ಷದ ಹಿಂದೆ ಬಂದ ಅನುಷ್ಕಾ ಶೆಟ್ಟಿ ಅಭಿನಯದ ''ಅರುಂಧತಿ'' ಕೂಡ ಒಂದು. ದಕ್ಷಿಣದಲ್ಲಿ ವಿಶೇಷವಾಗಿ ತೆಲುಗು ಚಿತ್ರರಂಗದಲ್ಲಿ ಈ ಚಿತ್ರದ ಗಳಿಕೆಯನ್ನು ಇಲ್ಲಿಯವರೆಗೆ ಯಾವ ನಾಯಕಿಯಿಂದಲೂ ಕೂಡ ಮುರಿಯಲು ಸಾಧ್ಯವಾಗಿರಲಿಲ್ಲ. ಆದರೆ ಸಮಂತಾ ಅಬ್ಬರಕ್ಕೆ ''ಅರುಂಧತಿ'' 16 ವರ್ಷದ ಸಾಮ್ರಾಜ್ಯ ಉರುಳಿ ಬಿದ್ದಿದೆ.

''ಅರುಂಧತಿ'' ದಾಖಲೆ ಮುರಿದ ''ಮಾ ಇಂಟಿ ಬಂಗಾರಂ''

ಹೌದು, 16 ವರ್ಷಗಳ ಹಿಂದೆ ತೆರೆಗೆ ಬಂದಿದ್ದ ''ಅರುಂಧತಿ'' ಜಾಗತಿಕ ಮಾರುಕಟ್ಟೆಯಲ್ಲಿ ₹70 ಕೋಟಿಯನ್ನು ಗಳಿಸಿತ್ತು. ಆ ಕಾಲಕ್ಕೆ ಮೆಗಾ ಬ್ಲಾಕ್ ಬಸ್ಟರ್ ಗಳಿಕೆ ಇದು. ತೆಲುಗು ಚಿತ್ರರಂಗದ ಇತಿಹಾಸದಲ್ಲೇ ಅತಿ ಹೆಚ್ಚು ಹಣ ಗಳಿಸಿದ ಮಹಿಳಾ ಪ್ರಧಾನ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಈ ಚಿತ್ರ ಪಾತ್ರವಾಗಿತ್ತು. ತೆಲುಗಿನ ಲೇಡಿ ಸೂಪರ್ ಸ್ಟಾರ್ ಎಂಬ ಬಿರುದು ಅನುಷ್ಕಾಗೆ ಸಿಕ್ಕಿದ್ದು ಇದೇ ಚಿತ್ರದಿಂದ.

ಆದರೆ ಈಗ 16 ವರ್ಷದ ನಂತರ ಅನುಷ್ಕಾ ಶೆಟ್ಟಿಗೆ ಸಮಂತಾ ಸೆಡ್ಡು ಹೊಡೆದಿದ್ದಾರೆ. ''ಅರುಂಧತಿ'' ದಾಖಲೆಯನ್ನು ಮುರಿದಿದ್ದಾರೆ. ಅದು ಕೇವಲ ಹತ್ತೇ ದಿನದಲ್ಲಿ ಎನ್ನುವುದು ಮತ್ತೊಂದು ವಿಶೇಷ. ಈ ಹಿನ್ನೆಲೆ ಹಲವರು ಇದೀಗ ಸಮಂತಾ ಅವರಿಗೆ ಲೇಡಿ ಸೂಪರ್ ಸ್ಟಾರ್ ಪಟ್ಟವನ್ನು ಕಟ್ಟುತ್ತಿದ್ದಾರೆ.

ಒಟ್ನಲ್ಲಿ ಬಾಕ್ಸಾಫೀಸ್‌ನಲ್ಲಿ ''ಬಂಗಾರಂ'' ಬೇಟೆ ಮುಂದುವರೆದಿದೆ. ಬಾಕ್ಸಾಫೀಸ್‌ನ ಪಂಡಿತರ ಪ್ರಕಾರ ಚಿತ್ರ 100 ಕೋಟಿಯ ಗಡಿಯನ್ನು ಅನಾಯಾಸವಾಗಿ ತಲುಪಲಿದೆ. ಹಾಗೊಂದು ವೇಳೆ ಈ ಭವಿಷ್ಯವಾಣಿ ನಿಜ ಆಗಿದ್ದೇ ಆದಲ್ಲಿ ಸಮಂತಾ ಹೊಸ ಇತಿಹಾಸ ನಿರ್ಮಾಣ ಮಾಡಿದಂತಾಗಲಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

English summary
Move over Arundhati! Samantha’s Maa Inti Bangaram shatters a 16-year-old box office record to become Tollywood's biggest female-led blockbuster ever.
Read more about: samantha anushka shetty tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X