Aakhri Sawal Box Office Day 3: ಸಂಜಯ್ ದತ್‌ಗೆ ಭಾರೀ ಮುಖಭಂಗ, ಮೂರೇ ದಿನಕ್ಕೆ RSS ಸಿನಿಮಾ 'ಆಖ್ರಿ ಸವಾಲ್' ಢಮಾರ್

ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿ, ಕಡೆಗೆ ಜೈಲಿನ ರುಚಿಯನ್ನು ಕಂಡು ಬಂದ ಸಂಜಯ್ ದತ್, ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿಯೂ ಕೂಡ ಗೆದ್ದು ಬಂದವರು. ಇಂಥಾ ಸಂಜಯ್ ದತ್ ಸದ್ಯಕ್ಕೆ ಉತ್ತರ-ದಕ್ಷಿಣ ಎನ್ನದೇ ಎಲ್ಲ ಭಾಷೆಯಲ್ಲಿಯೂ ಮಿಂಚುತ್ತಿದ್ದಾರೆ. ಭಾಷೆಯ ಭೇದ ಭಾವ ಇಲ್ಲದೇ ಭಾರತದೆಲ್ಲೆಡೆ ಅಪಾರವಾದ ಅಭಿಮಾನಿಗಳನ್ನೂ ಕೂಡ ಬಾಲಿವುಡ್‌ನ ಈ ಬಾಬಾ ಸಂಪಾದಿಸಿದ್ದಾರೆ.

ಆದರೆ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಸಂಜಯ್ ದತ್ ಪೋಷಕ ವರ್ಗಕ್ಕೆ ಬಡ್ತಿ ಪಡೆದು ಹಲವು ವರ್ಷಗಳಾಗಿವೆ. ಇವತ್ತು ಸಂಜಯ್ ದತ್ ಇಡೀ ಚಿತ್ರದ ಪ್ರಮುಖ ಕೇಂದ್ರ ಬಿಂದು ಎಂದರೆ ಚಿತ್ರಮಂದಿರಕ್ಕೆ ಬಂದು ಬಾಬಾ ದರ್ಶನವನ್ನು ಪಡೆಯುವರ ಸಂಖ್ಯೆ ಕಡಿಮೆ. ಆದರೆ ಅದೇ ಖಳನಾಯಕನ ಪಾತ್ರ ನಿರ್ವಹಿಸಿದರೆ ಅದರ ಖದರ್ ಬೇರೆ. ಇದಕ್ಕೆ ''ಆಖ್ರಿ ಸವಾಲ್'' ಚಿತ್ರದ ದಯನೀಯ ಸ್ಥಿತಿ ಸದ್ಯದ ಉದಾಹರಣೆ.

sanjay-dutt-s-aakhri-sawal-crashes-on-day-3-fails-to-cross-even-2-crore-in-opening-weekend

ಹೌದು, ''ಆಖ್ರಿ ಸವಾಲ್''.. ಸಂಜಯ್ ದತ್ ಅಭಿನಯದ ಚಿತ್ರ. ವಿಶೇಷ ಅಂದರೆ ಈ ಚಿತ್ರಕ್ಕೆ ಇವರು ಕೇವಲ ನಾಯಕರಲ್ಲ, ನಿರ್ಮಾಪಕರಲ್ಲಿಯೂ ಒಬ್ಬರು. ಆರಂಭದಿಂದಲೂ ವಿವಾದಕ್ಕೀಡಾಗುತ್ತಲೇ ಬಂದ ಚಿತ್ರ ಇದು. ಯಾಕೆಂದರೆ ರಾಷ್ಟ್ರೀಯ ಸ್ವಯಂಸೇವಕ ಸಂಘದ 100 ವರ್ಷಗಳ ಪಯಣ ಮತ್ತು ಅದರ ಸಿದ್ದಾಂತಗಳ ಸುತ್ತ ಸುತ್ತುವ ಚಿತ್ರ ಇದು.

ಎಲ್ಲಕ್ಕಿಂತ ಮುಖ್ಯವಾಗಿ ಮಹಾತ್ಮಾ ಗಾಂಧಿ ಹತ್ಯೆ, ಆರ್‌ಎಸ್‌ಎಸ್‌ ಮೇಲಿನ ಆರೋಪ, ಬಾಬ್ರಿ ಮಸೀದಿ ಧ್ವಂಸ ಪ್ರಕರಣ, ದೇಶದಲ್ಲಿ ಜಾರಿಯಾಗಿದ್ದ ತುರ್ತು ಪರಿಸ್ಥಿತಿ, ಹೀಗೆ ಇಂತಹ ಸೂಕ್ಷ್ಮಾತಿ ಸೂಕ್ಷ್ಮ ವಿಚಾರಗಳು ಈ ಚಿತ್ರದಲ್ಲಿವೆ. ಈ ಹಿನ್ನೆಲೆ ಎಡಪಂಥೀಯರು ಈ ಚಿತ್ರವನ್ನು ಪ್ರೊಪಗಂಡಾ ಎಂದು ಕರೆದರೆ ಬಲಪಂಥೀಯರು ಚಿತ್ರದಲ್ಲಿ ಸತ್ಯ ಮತ್ತು ಇತಿಹಾಸದ ಕುರಿತು ಚರ್ಚೆ ಮಾಡಲಾಗಿದೆ ಎಂದು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಇದರ ನಡುವೆ ಯುಎಇಯಲ್ಲಿ ಚಿತ್ರವನ್ನು ಬ್ಯಾನ್ ಮಾಡಲಾಗಿದೆ.

ವಿಪರ್ಯಾಸ ಅಂದರೆ ಇಷ್ಟೆಲ್ಲಾ ವಾದ-ವಿವಾದ ಮತ್ತು ಚರ್ಚೆಗಳಾದರೂ ಕೂಡ ಈ ಚಿತ್ರಕ್ಕೆ ನಯಾ ಪೈಸೆ ಲಾಭ ಆಗಲಿಲ್ಲ. ಇದಕ್ಕೆ ಕೈಗನ್ನಡಿಯೇ ಚಿತ್ರದ ಗಳಿಕೆ. ಹೌದು, ನಿನ್ನೆಗೆ (ಮೇ17) ''ಆಖ್ರಿ ಸವಾಲ್'' ಚಿತ್ರ ತೆರೆಗೆ ಬಂದು ಮೂರು ದಿನಗಳಾಗಿವೆ. ಆದರೆ ''ಸ್ಯಾಕ್ನಿಲ್'' ಲೆಕ್ಕಾಚಾರ ಪ್ರಕಾರ ಎರಡು ಕೋಟಿಯ ಗಡಿಯನ್ನು ಕೂಡ ಮೂರು ದಿನದಲ್ಲಿ ಈ ಚಿತ್ರ ಪಾರು ಮಾಡಿಲ್ಲ. ಕೇವಲ ₹1.95 ಕೋಟಿಯನ್ನಷ್ಟೇ ಈ ಚಿತ್ರ ಗಳಿಸಿದೆ.

ಸ್ಯಾಕ್ನಿಲ್ ಪ್ರಕಾರ ''ಆಖ್ರಿ ಸವಾಲ್'' ಚಿತ್ರದ ಮೊದಲ ಮೂರು ದಿನದ ಗಳಿಕೆ ಈ ಕೆಳಗಿನಂತೆ ಇದೆ.

ದಿನ ಭಾರತದ ನಿವ್ವಳ ಗಳಿಕೆ (India Net Collection)

ಮೊದಲ ದಿನ (ಶುಕ್ರವಾರ) ₹0.40 ಕೋಟಿ
ಎರಡನೇ ದಿನ (ಶನಿವಾರ) ₹0.75 ಕೋಟಿ
ಮೂರನೇ ದಿನ (ಭಾನುವಾರ) ₹0.80 ಕೋಟಿ

ಒಟ್ಟು ಭಾರತದ ನಿವ್ವಳ ಗಳಿಕೆ (Overall Total) ₹1.95 ಕೋಟಿ

sanjay-dutt-aakhri-sawal-day-3-box-office

ಹೀಗೆ ಸದ್ಯ ಮೂರು ದಿನದಲ್ಲಿ ₹1.95 ಕೋಟಿಯನ್ನು ಮಾತ್ರ ಚಿತ್ರ ಗಳಿಸಿದ್ದು, ವಾರದ ದಿನಗಳಲ್ಲಿ ಈ ಗಳಿಕೆ ಇನ್ನು ಕುಸಿಯುವ ಸಾಧ್ಯತೆ ಇದೆ. ಬಾಲಿವುಡ್‌ ಟ್ರೇಡ್ ಪಂಡಿತರ ಪ್ರಕಾರ ಈ ಚಿತ್ರ ಈ ವರ್ಷದ ಬಾಕ್ಸಾಫೀಸ್‌ ಡಿಸಾಸ್ಟರ್ ಚಿತ್ರಗಳಲ್ಲಿ ಸೇರಿಕೊಳ್ಳುವುದು ಖಚಿತ ಇದ್ದು ಚಿತ್ರ ₹5 ಕೋಟಿಯನ್ನು ಗಳಿಸುವುದು ಕಷ್ಟ ಇದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

English summary
Can Sanjay Dutt’s star power save Aakhri Sawal? The film slumped to a dismal ₹80 lakh on Sunday, bringing its total opening weekend to a worrying low. See details.
Read more about: sanjay dutt bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X