MSG Day 4 Boxoffice: ಹಬ್ಬದ ದಿನ ದಾಖಲೆ ಕಲೆಕ್ಷನ್; 4 ದಿನಕ್ಕೆ ವರಪ್ರಸಾದ್ ದೋಚಿದ್ದೆಷ್ಟು?
ಸಂಕ್ರಾಂತಿ ಸಂಭ್ರಮದಲ್ಲಿ ಚಿತ್ರಮಂದಿರಗಳಲ್ಲಿ ಮೆಗಾಸ್ಟಾರ್ ದರ್ಬಾರ್ ನಡೀತಿದೆ. ಚಿರಂಜೀವಿ- ನಯನತಾರ ನಟನೆಯ 'ಮನ ಶಂಕರ ವರಪ್ರಸಾದ್‌ಗಾರು' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. 4ನೇ ದಿನವೂ ಸಿನಿಮಾ ಅದ್ಭುತ ಕಲೆಕ್ಷನ್ ಮಾಡಿದೆ. ಮೊದಲ 3 ದಿನಕ್ಕೆ 152 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡವೇ ಹೇಳಿತ್ತು. 4ನೇ ದಿನವೂ ವರಪ್ರಸಾದ್ ಆರ್ಭಟ ಜೋರಾಗಿದೆ.
ನಿರ್ದೇಶಕ ಅನಿಲ್ ರಾವಿಪುಡಿ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ಕೊಡ್ತಾ ಬರ್ತಿದ್ದಾರೆ. ಈ ಬಾರಿ 'ಮನ ಶಂಕರ ವರಪ್ರಸಾದ್‌ಗಾರು' ಮೂಲಕ ಮತ್ತೆ ಮ್ಯಾಜಿಕ್ ಮಾಡಿದ್ದಾರೆ. ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ಉಣಬಡಿಸುತ್ತಿದೆ. ಫ್ಯಾಮಿಲಿ ಸಮೇತ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ.

ಕರ್ನಾಟಕದಲ್ಲಿ ಮುಖ್ಯವಾಗಿ ಬೆಂಗಳೂರಿನಲ್ಲಿ 'ಮನ ಶಂಕರ ವರಪ್ರಸಾದ್‌ಗಾರು' ಆರ್ಭಟ ಜೋರಾಗಿದೆ. ವಿಕ್ಟರಿ ವೆಂಕಟೇಶ್ ಅತಿಥಿ ಪಾತ್ರದಲ್ಲಿ ನಟಿಸಿ ಚಿತ್ರಕ್ಕೆ ಬಲ ತುಂಬಿದ್ದಾರೆ. ಸಿಂಪಲ್ ಕಥೆಯನ್ನು ಸೊಗಸಾಗಿ ತೆರೆಗೆ ತಂದು ಚಿತ್ರತಂಡ ಗೆದ್ದಿದೆ.
100 ಕೋಟಿ ರೂ. ನೆಟ್
ಭಾರತದಲ್ಲೇ 'ಮನ ಶಂಕರ ವರಪ್ರಸಾದ್‌ಗಾರು' ಸಿನಿಮಾ ಮೊದಲ 4 ದಿನಕ್ಕೆ 101.85 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದೆ. ಮೊದಲ 3 ದಿನಕ್ಕೆ ಹೋಲಿಸಿದರೆ 4ನೇ ದಿನ ಕಲೆಕ್ಷನ್ ಹೆಚ್ಚಿದೆ. ಭಾನುವಾರ ಪ್ರೀಮಿಯರ್ ಶೋಗಳಿಂದಲೇ 9.35 ಕೋಟಿ ರೂ. ನೆಟ್ ಕಲೆಕ್ಷನ್ ಆಗಿತ್ತು. ಸೋಮವಾರ 32.25 ಕೋಟಿ ರೂ, ಮಂಗಳವಾರ 8.75 ಕೋಟಿ ರೂ, ಹಾಗೂ ಬುಧವಾರ 19.5 ಕೋಟಿ ರೂ, ಕಲೆಕ್ಷನ್ ಮಾಡಿತ್ತು. ಗುರುವಾರ 22 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿರುವುದಾಗಿ sacnilk ವರದಿ ಮಾಡಿದೆ.

200 ಕೋಟಿ ರೂ. ಗ್ರಾಸ್
ಮೊದಲ 3 ದಿನಕ್ಕೆ 152 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಅಧಿಕೃತವಾಗಿ ಚಿತ್ರತಂಡ ಘೋಷಿಸಿದೆ. 4ನೇ ದಿನವೂ 50 ಕೋಟಿ ರೂ. ಕಲೆಕ್ಷನ್ ಮಾಡಿರುವ ಸಾಧ್ಯತೆಯಿದೆ. ಆ ಮೂಲಕ 4 ದಿನಕ್ಕೆ ಸಿನಿಮಾ ಗಳಿಕೆ 200 ಕೋಟಿ ರೂ. ಗಡಿ ದಾಟಿದಂತಾಗಿದೆ. ಇತ್ತೀಚಿನ ವರ್ಷಗಳಲ್ಲಿ ಚಿರಂಜೀವಿ ಚಿತ್ರಕ್ಕೆ ಇದು ಅದ್ಭುತ ಕಲೆಕ್ಷನ್ ಎಂದೇ ಹೇಳಬೇಕು.
ಮಂಕಾದ ರಾಜಾಸಾಬ್
ಪ್ರಭಾಸ್ ನಟನೆಯ 'ದಿ ರಾಜಾಸಾಬ್' ಸಿನಿಮಾ ಕೂಡ ಸಂಕ್ರಾಂತಿ ಸಂಭ್ರಮದಲ್ಲಿ ತೆರೆಗೆ ಬಂದಿತ್ತು. ಅದ್ಭುತ ಓಪನಿಂಗ್ ಪಡೆದಿದ್ದ ಸಿನಿಮಾ ಬಳಿಕ ಮುಗ್ಗರಿಸಿದೆ. ಮಿಶ್ರಪ್ರತಿಕ್ರಿಯೆ ಸಿಕ್ಕಿ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಕುಂಟುತ್ತಿದೆ. 'ಮನ ಶಂಕರ ವರಪ್ರಸಾದ್‌ಗಾರು' ಎದುರು ರಾಜಾಸಾಬ್ ಆರ್ಭಟ ನಡೀತಿಲ್ಲ. 3 ದಿನಕ್ಕೆ ಪ್ರಭಾಸ್ ಸಿನಿಮಾ ನೆಲಕಚ್ಚಿದೆ.
ಸಂಕ್ರಾಂತಿ ವಿನ್ನರ್ ಚಿರು
'ದಿ ರಾಜಾಸಾಬ್' ಹಾಗೂ 'ಮನ ಶಂಕರ ವರಪ್ರಸಾದ್‌ಗಾರು' ಜೊತೆ ತೆಲುಗು, ತಮಿಳಿನ ಮತ್ತಷ್ಟು ಚಿತ್ರಗಳು ಸಂಕ್ರಾಂತಿ ಸಂಭ್ರಮದಲ್ಲಿ ತೆರೆಗೆ ಬಂದಿವೆ. ರವಿತೇಜಾ ನಟನೆಯ 'ಭರ್ತ ಮಹಾಶಯಲಕು ವಿಜ್ಞಪ್ತಿ', ಶರ್ವಾನಂದ್ ನಟನೆಯ 'ನಾರಿ ನಾರಿ ನಡುಮು ಮುರಾರಿ', ನಿವಿನ್ ಪೊಲಿಶೆಟ್ಟಿ ನಟನೆಯ 'ಅನಗನಗ ಒಕರೋಜು' ಹಾಗೂ ತಮಿಳಿನ 'ಪರಾಶಕ್ತಿ' ಚಿತ್ರಗಳು ಬಿಡುಗಡೆ ಆಗಿವೆ. ಎಲ್ಲಾ ಸಿನಿಮಾಗಳನ್ನು ಹಿಂದಿಕ್ಕಿ ಬಾಕ್ಸಾಫೀಸ್‌ನಲ್ಲಿ ವರಪ್ರಸಾದ್ ದರ್ಬಾರ್ ನಡೆಸುತ್ತಿದ್ದಾನೆ. ಹಾಗಾಗಿ ಈ ಬಾರಿ ಚಿರಂಜೀವಿ ಸಂಕ್ರಾಂತಿ ವಿನ್ನರ್ ಎನಿಸಿಕೊಂಡಿದ್ದಾರೆ.
350 ಕೋಟಿ ರೂ. ಟಾರ್ಗೆಟ್
ಸದ್ಯಕ್ಕೆ 'ಮನ ಶಂಕರ ವರಪ್ರಸಾದ್‌ಗಾರು' ಚಿತ್ರದ ಓಟಕ್ಕೆ ಬ್ರೇಕ್ ಹಾಕುವವರು ಇಲ್ಲ. ವೀಕೆಂಡ್ ಕೂಡ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುವ ನಿರೀಕ್ಷೆಯಿದೆ. ಹಾಗಾಗಿ ಸಿನಿಮಾ ಒಟ್ಟಾರೆ 350 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡುವ ಚರ್ಚೆ ಶುರುವಾಗಿದೆ.


Click it and Unblock the Notifications











