O Romeo Box Office Day 2; ಪ್ರೇಮಿಗಳ ದಿನದಂದು ಅಬ್ಬರಿಸಿದ ರೋಮಿಯೋ-ಖುಲಾಯಿಸುತ್ತಾ ಶಾಹಿದ್ ಕಪೂರ್ ಅದೃಷ್ಟ ?

ಬಾಲಿವುಡ್‌ನಲ್ಲಿ ಕಳೆದ ವರ್ಷ ಅಕ್ಷರಶಃ ಬರಗಾಲದ ವಾತಾವರಣ ಇತ್ತು. ಮಾಡಿದ ಎಲ್ಲ ಚಿತ್ರಗಳು ಒಂದಾದ ಮೇಲೊಂದರಂತೆ ದೊಪ್ಪನೆ ನೆಲಕ್ಕುರಳುತ್ತಿದ್ದ ಹಿನ್ನೆಲೆ ಆತಂಕ ಹಲವರಲ್ಲಿ ಮನೆ ಮಾಡಿತ್ತು. ಸಾಲದಕ್ಕೆ ದಕ್ಷಿಣ ಚಿತ್ರರಂಗದವರ ಅಬ್ಬರ. ಹಿಂದಿ ಮಾರುಕಟ್ಟೆಯಲ್ಲಿ ಸೌತ್ ಸ್ಟಾರ್‌ಗಳ ಅಬ್ಬರ ಬಾಲಿವುಡ್‌ನ ಬೆಚ್ಚಿ ಬೀಳಿಸಿತ್ತು. ಆದರೆ.. ವರ್ಷಾಂತ್ಯದಲ್ಲಿ ಬಂದ ''ಧುರಂಧರ್'' ಮಲಗಿದ್ದ ಬಾಲಿವುಡ್‌ನ ಬಡಿದೆಬ್ಬಿಸಿತ್ತು. ಬಾಕ್ಸಾಫೀಸ್‌ನಲ್ಲಿ ಹಣದ ಮಳೆ ಆಯ್ತು.

''ಧುರಂಧರ್'' ತೋರಿಸಿದ ಗೆಲುವಿನ ಹಾದಿಯಲ್ಲಿಯೇ ವರ್ಷದ ಆರಂಭದಲ್ಲಿ ಬಾಲಿವುಡ್‌ ಹೆಜ್ಜೆ ಹಾಕುವ ಪ್ರಯತ್ನ ಮಾಡಿತು. ಆದರೆ .. ಸಾಧ್ಯವಾಗಲಿಲ್ಲ. ''ಇಕ್ಕೀಸ್''.. ''ಮರ್ದಾನಿ 3''.. ''ರಾಹು-ಕೇತು''.. ''ಹ್ಯಾಪಿ ಪಟೇಲ್''.. ''ಮಾಯಾಸಭಾ''.. '' ವಧ್ 2''.. ''ತು ಯಾ ಮೇ''.. ''ಭಾಬಿಜೀ ಘರ್ ಪರ್ ಹೈ''.. ಹೀಗೆ ಒಂದಾದ ಮೇಲೊಂದರಂತೆ ಬಂದ ಚಿತ್ರಗಳು ಮಕಾಡೆ ಮಲಗಿದವು. ''ಧುರಂಧರ್'' ನಂತರ ಬಾಲಿವುಡ್‌ನಲ್ಲಿ ಗೆದ್ದ ಚಿತ್ರ ಅಂದರೆ ಅದು ''ಬಾರ್ಡರ್ 2'' ಮಾತ್ರ. ಹೀಗಾಗಿ ಸದ್ಯ ಹಿಂದಿ ಉದ್ಯಮ ಮತ್ತೆ ಚಿಂತೆಗೀಡಾಗಿದೆ. ಹೀಗಿರುವಾಗ ಬಂದ ''ಓ ರೋಮಿಯೋ'' ಸದ್ಯ ಹಿಂದಿ ಉದ್ಯಮದವರಲ್ಲಿ ಭರವಸೆಯನ್ನು ಮೂಡಿಸಿದೆ.

shahid-kapoor-s-o-romeo-conquers-valentine-s-weekend-massive-45-spike-drives-total-past-20-cror

ಹೌದು, ಓ ರೋಮಿಯೋ.. ಪ್ರೇಮಿಗಳ ದಿನದ ಪ್ರಯುಕ್ತ ಕಳೆದ ಶುಕ್ರವಾರ ( ಫೆಬ್ರವರಿ 13 ) ಬಿಡುಗಡೆಯಾದ ಚಿತ್ರ. ವಿಶಾಲ್ ಭಾರದ್ವಾಜ್ ಮತ್ತು ಶಾಹಿದ್ ಕಪೂರ್ ಕಾಂಬಿನೇಷನ್‌ನ ನಾಲ್ಕನೇ ಚಿತ್ರ ಇದು. ಹೀಗಾಗಿ ಈ ಚಿತ್ರದ ಮೇಲೆ ಅಪಾರವಾದ ನಿರೀಕ್ಷೆ ಇತ್ತು.

ಈ ನಿರೀಕ್ಷೆ ಎಂಬ ಪರೀಕ್ಷೆಯ ಅಂತಿಮ ಫಲಿತಾಂಶ ಹೊರ ಬರಲು ಇನ್ನೂ ಸಮಯ ಇದೆಯಾದರೂ ಸದ್ಯ ಮೊದಲ ದಿನಕ್ಕಿಂತ ಎರಡನೇ ದಿನ ಓ ರೋಮಿಯೋ ಹೆಚ್ಚು ಹಣ ಗಳಿಸುವಲ್ಲಿ ಯಶಸ್ವಿಯಾಗಿದೆ. ''ಸ್ಯಾಕ್ನಿಲ್'' ವರದಿಯ ಪ್ರಕಾರ ಎರಡನೇ ದಿನದ ಗಳಿಕೆಯಲ್ಲಿ 48.82 % ಏರಿಕೆ ಕಂಡು ಬಂದಿದ್ದು ಎರಡು ದಿನದಲ್ಲಿ ''ಓ ರೋಮಿಯೋ'' ₹ 21.15 ಕೋಟಿಯನ್ನು ಗಳಿಸಿದೆ.

ಸ್ಯಾಕ್ನಿಲ್ ಪ್ರಕಾರ ಓ ರೋಮಿಯೋ ಚಿತ್ರದ ಮೊದಲ ಎರಡು ದಿನದ ಗಳಿಕೆ ಈ ಕೆಳಗಿನಂತೆ ಇದೆ.

ಮೊದಲ ದಿನ [ ಶುಕ್ರವಾರ ] ₹8.5 ಕೋಟಿ
ಎರಡನೇ ದಿನ [ ಶನಿವಾರ ] ₹12.65 ಕೋಟಿ

ಒಟ್ಟು ಗಳಿಕೆ - ₹21.15 ಕೋಟಿ

ಇನ್ನು ಚಿತ್ರತಂಡ ಕೂಡ ಚಿತ್ರದ ಗಳಿಕೆ ವಿವರಗಳನ್ನು ಹಂಚಿಕೊಂಡಿದೆ. ಆ ಪ್ರಕಾರ ''ಸ್ಯಾಕ್ನಿಲ್'' ಉಲ್ಲೇಖ ಮಾಡಿರುವದಕ್ಕಿಂತ ಹೆಚ್ಚಿನ ಹಣವನ್ನು ''ಓ ರೋಮಿಯೋ'' ಚಿತ್ರ ಎರಡು ದಿನದಲ್ಲಿ ಗಳಿಸಿದೆ. ಎರಡು ದಿನದಲ್ಲಿ ₹23.51 ಕೋಟಿ ಹಣವನ್ನು ಗಳಿಸಿದೆ.

shahid-kapoor-s-o-romeo-conquers-valentine-s-weekend-massive-45-spike-drives-total-past-20-cror

ಸಾಜಿದ್ ನಾಡಿಯಾಡ್ವಾಲಾ ನಿರ್ಮಾಣ ಸಂಸ್ಥೆ ಹಂಚಿಕೊಂಡ ಎರಡು ದಿನದ ಗಳಿಕೆ ಈ ಕೆಳಗಿನಂತೆ ಇದೆ.

ಮೊದಲ ದಿನ [ ಶುಕ್ರವಾರ ] ₹8.5 ಕೋಟಿ
ಎರಡನೇ ದಿನ [ ಶನಿವಾರ ] ₹12.65 ಕೋಟಿ

ಒಟ್ಟು ಗಳಿಕೆ - ₹23.51 ಕೋಟಿ

ಇಂದು [ಫೆಬ್ರವರಿ 15 ] ಭಾನುವಾರವಾದ ಹಿನ್ನೆಲೆ ಚಿತ್ರದ ಗಳಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಆದರೆ, ಇಂದೇ ಭಾರತ ಮತ್ತು ಪಾಕಿಸ್ತಾನದ ನಡುವೆ ಹೈವೋಲ್ಟೇಜ್ ಕ್ರಿಕೆಟ್ ಪಂದ್ಯ ಕೂಡ ಇದೆ. ಚಿತ್ರದ ಗಳಿಕೆಯ ಮೇಲೆ ವರ್ಲ್ಡ್ ಕಪ್‌ನ ಈ ಸಮರ ಪ್ರಭಾವ ಬೀರುವ ಸಾಧ್ಯತೆ ಇದೆ. ಸಂಜೆ ಮತ್ತು ರಾತ್ರಿಯ ಪ್ರದರ್ಶನದಲ್ಲಿ ಪ್ರೇಕ್ಷಕರ ಕೊರತೆ ಕಂಡು ಬರುವ ಸಾಧ್ಯತೆ ಕೂಡ ಇದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
O Romeo is the ultimate Valentine’s hit! Shahid Kapoor’s latest romance sees a spectacular surge, earning ₹12 crore on Day 2. Is this Shahid’s next blockbuster? Check out the latest collection reports and audience reaction.
Read more about: shahid kapoor bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X