O Romeo Box Office Day 1 ; 7 ವರ್ಷಗಳ ನಂತರ ಶಾಹಿದ್ ಕಪೂರ್ ಮ್ಯಾಜಿಕ್, ಕಬೀರ್ ಸಿಂಗ್ ನಂತರ ರೋಮಿಯೋ ಅಬ್ಬರ

ಮೊದಲೆಲ್ಲಾ ತಮ್ಮ ನೆಚ್ಚಿನ ನಾಯಕನ ಚಿತ್ರ ಬರುತ್ತಿದೆ ಅಂದರೆ ಅಭಿಮಾನಿಗಳಲ್ಲಿ ಒಂದು ರೀತಿಯ ಉತ್ಸಾಹ ಕಾಣುತ್ತಿತ್ತು. ಕಾತುರದಿಂದ ಕಾಯುತ್ತಾ ಕುಳಿತುಕೊಳ್ಳುತ್ತಿದ್ದರು. ಇನ್ನು ಆಗ ಸೋಶಿಯಲ್ ಮೀಡಿಯಾ ಕೂಡ ಪ್ರವರ್ಧಮಾನಕ್ಕೆ ಬಂದಿರಲಿಲ್ಲ. ಓಟಿಟಿಯ ಅಲೆ ಕೂಡ ಎದ್ದಿರಲಿಲ್ಲ. ಹೀಗಾಗಿ ಚಿತ್ರಮಂದಿರಗಳಲ್ಲಿಯೇ ಚಿತ್ರವನ್ನು ಅಭಿಮಾನಿಗಳು ನೋಡಬೇಕಿತ್ತು.

ಆದರೆ ಈಗ ಅಂಗೈಯಲ್ಲಿಯೇ ಮನರಂಜನೆ ಇದೆ. ಚಿತ್ರದ ಮೊದಲ ಪ್ರದರ್ಶನ ಮುಕ್ತಾಯ ಆಗುತ್ತಿದ್ದಂತೆಯೇ ಚಿತ್ರದ ಹಣೆ ಬರಹ ಗೊತ್ತಾಗಿ ಬಿಡುತ್ತೆ. ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಪ್ರಮುಖವಾದ ಸನ್ನಿವೇಶಗಳು ಹರಿದಾಡುತ್ತವೆ. ಇಡೀ ಚಿತ್ರ ಕ್ಷಣಾರ್ಧದಲ್ಲಿಯೇ ಆನ್ ಲೈನ್‌ನಲ್ಲಿ ಸೋರಿಕೆಯಾಗುತ್ತೆ. ಇಂತಹ ವಾತಾವರಣದಲ್ಲಿ ತೆರೆಗೆ ಬಂದ ''ಓ ರೋಮಿಯೋ'' ಶಾಹಿದ್ ಕಪೂರ್ ಪಾಲಿಗೆ ಭರವಸೆಯ ಮುನ್ನುಡಿ ಬರೆದಿದೆ. ಸಾಧಾರಣ ಓಪನಿಂಗ್ ಪಡೆದಿದೆ.

Shahid Kapoor s O Romeo Ends Box Office Slump Beats Jersey amp amp Deva with Strongest Opening in 4 Years

ಹೌದು, ಶಾಹಿದ್ ಕಪೂರ್, ಬಾಲಿವುಡ್‌ನ ಪ್ರತಿಭಾವಂತ. ಅದರಲ್ಲಿ ಯಾವ ದೂಸ್ರಾ ಮಾತಿಲ್ಲ. ಆದರೆ, ಅದ್ಯಾಕೋ ಶಾಹಿದ್ ಕಪೂರ್ ಗೆ ಅದೃಷ್ಟದ ಬೆಂಬಲ ಸಿಕ್ತಿಲ್ಲ. ಕೊರೊನಾ ಎಂಬ ಪೀಡೆ ವಕ್ಕರಿಸಿಕೊಳ್ಳುವ ಮುನ್ನ ಬಂದ ''ಕಬೀರ್ ಸಿಂಗ್'' ಚಿತ್ರವೇ ಕೊನೆ. ಆ ನಂತರ ಬಂದ ಯಾವ ಚಿತ್ರ ಕೂಡ ಮೊದಲ ದಿನ ಹೇಳಿಕೊಳ್ಳುವಂತಹ ಹಣ ಗಳಿಸಲಿಲ್ಲ.

2019ರಲ್ಲಿ ತೆರೆಗೆ ಬಂದ ''ಕಬೀರ್ ಸಿಂಗ್'' ಮೊದಲ ದಿನ ₹20.21 ಕೋಟಿಯನ್ನು ದೋಚಿದ್ದರೆ ಆ ನಂತರ ಬಂದ ''ಜೆರ್ಸಿ'' ಮೊದಲ ದಿನ ಕೇವಲ ₹2.93 ಕೋಟಿಯನ್ನು ಗಳಿಸಿತ್ತು. ''ಜೆರ್ಸಿ'' ಬೆನ್ನಲ್ಲಿ ಬಂದ ''ದೇವಾ'' ₹5.50 ಕೋಟಿಯನ್ನು ಗಳಿಸಿದ್ದರೆ ''ತೇರಿ ಬಾತೋ ಮೇ ಉಲ್ಜಾ ಜಿಯಾ'' ಚಿತ್ರ ಮೊದಲ ದಿನ ₹6.70 - ₹7.02 ಕೋಟಿ ಹಣವನ್ನು ಗಳಿಸಿತ್ತು.

ಈ ಹಿನ್ನೆಲೆ ''ಓ ರೋಮಿಯೋ'' ಚಿತ್ರದ ಮೊದಲ ದಿನದ ಗಳಿಕೆಯ ಮೇಲೆ ಎಲ್ಲರ ಕಣ್ಣಿತ್ತು. ಇನ್ನೂ ''ಓ ರೋಮಿಯೋ'' ಕುಟುಂಬ ಸಮೇತ ನೋಡುವಂತಹ ಸಿನಿಮಾ ಅಲ್ಲ. ಸೆನ್ಸಾರ್ ಮಂಡಳಿ ಈ ಚಿತ್ರಕ್ಕೆ ಎ ಸರ್ಟಿಫಿಕೆಟ್ ನೀಡಿದೆ. ಹೀಗಾಗಿ ಮೊದಲ ದಿನ ''ಓ ರೋಮಿಯೋ'' ಶಾಹಿದ್ ಕಪೂರ್ ಅವರ ಹಿಂದಿನ ಚಿತ್ರಗಳಿಗಿಂತ ಕಡಿಮೆ ಹಣ ಗಳಿಸಬಹುದು ಎನ್ನುವ ಲೆಕ್ಕಾಚಾರವನ್ನು ಅನೇಕರು ಹಾಕಿದ್ದರು.

ಆದರೆ, ''ಓ ರೋಮಿಯೋ'' ಶಾಹಿದ್ ಕಪೂರ್ ಅವರ ಹಿಂದಿನ ಚಿತ್ರಗಳಿಗಿಂತ ಉತ್ತಮವಾದ ಓಪನಿಂಗ್ ಪಡೆದಿದೆ. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ₹8.25 ಕೋಟಿಯನ್ನು ಕೊಳ್ಳೆ ಹೊಡೆದಿದೆ. ಈ ಮೂಲಕ ಶಾಹಿದ್ ಕಪೂರ್ ವೃತ್ತಿ ಬದುಕಿನಲ್ಲಿ ''ಕಬೀರ್ ಸಿಂಗ್'' ನಂತರ ಕಳೆದ ನಾಲ್ಕು ವರ್ಷಗಳಲ್ಲಿ ಮೊದಲ ದಿನ ಅತೀ ಹೆಚ್ಚು ಹಣ ಗಳಿಸಿದ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

Shahid Kapoor s O Romeo Ends Box Office Slump Beats Jersey amp amp Deva with Strongest Opening in 4 Years

ಇನ್ನು ಆಕ್ಯುಪೆನ್ಸಿ ವಿಚಾರಕ್ಕೆ ಬಂದರೆ ಮುಂಬೈಗಿಂತ ಬೆಂಗಳೂರಿನಲ್ಲಿಯೇ ಈ ಚಿತ್ರಕ್ಕೆ ಹೆಚ್ಚಿನ ಬೇಡಿಕೆ ಇದೆ. ಮುಂಬೈನಲ್ಲಿ 19.00% ಆಕ್ಯುಪೆನ್ಸಿ ಕಂಡು ಬಂದರೆ ಬೆಂಗಳೂರಿನಲ್ಲಿ 20.25% ಆಕ್ಯುಪೆನ್ಸಿ ಕಂಡು ಬಂದಿದೆ. ಚೆನ್ನೈನಲ್ಲಿ 22.75%, ಹೈದರಾಬಾದ್‌ನಲ್ಲಿ 15.25%, ದೆಹಲಿಯಲ್ಲಿ 14.25% ಆಕ್ಯುಪೆನ್ಸಿ ಕಂಡು ಬಂದಿದೆ.

ಇಂದು (ಫೆಬ್ರವರಿ 14 ) ಪ್ರೇಮಿಗಳ ದಿನ ಮತ್ತು ವಾರಾಂತ್ಯದ ಹಿನ್ನೆಲೆ ಚಿತ್ರದ ಗಳಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಟ್ರೇಡ್ ವಿಶ್ಲೇಷಕರ ಪ್ರಕಾರ ಹತ್ತು ಕೋಟಿಗೂ ಅಧಿಕ ಹಣವನ್ನು ಇಂದು ''ಓ ರೋಮಿಯೋ'' ಗಳಿಸುವ ಸಾಧ್ಯತೆ ಇದೆ. ಈ ವಾರಾಂತ್ಯದಲ್ಲಿ ''ಓ ರೋಮಿಯೋ'' ಎಷ್ಟು ಹಣ ಗಳಿಸುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
O Romeo Day 1 Collection: Shahid Kapoor’s latest release earns ₹8 crore, beating the opening day records of Jersey and Deva. Get the full box office report, occupancy rates, and weekend predictions for the Shahid-Triptii starrer.
Read more about: shahid kapoor bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X