Cocktail 2 Box Office Day 4 ; ಇಳಿಯಿತು ಕಾಕ್‌ಟೇಲ್ ನಶೆ, ಸೋಮವಾರ ಬೋರಲು ಬಿದ್ದ ಶಾಹಿದ್, ಕೃತಿ, ರಶ್ಮಿಕಾ ಪ್ರೇಮಕಥೆ!

ಸಾಮಾನ್ಯವಾಗಿ ಚಿತ್ರವೊಂದರ ಹಣೆಬರಹ ಮೊದಲ ದಿನದ ಮೊದಲ ಪ್ರದರ್ಶನದ ನಂತರವೇ ಗೊತ್ತಾಗುತ್ತೆ. ಪ್ರೇಕ್ಷಕರು ಮತ್ತು ವಿಮರ್ಶಕರು ಕೇವಲ ಮೂರು ಗಂಟೆಯಲ್ಲಿ ಚಿತ್ರದ ಭವಿಷ್ಯವನ್ನು ನಿರ್ಧಾರ ಮಾಡುತ್ತಾರೆ. ಆದರೆ.. ಚಿತ್ರದಲ್ಲಿ ಸೂಪರ್ ಸ್ಟಾರ್‌ಗಳಿದ್ದರೆ ಆ ಚಿತ್ರ ಎಷ್ಟೇ ಕಳಪೆ ಇದ್ದರೂ ಕೂಡ ಮೊದಲ ಮೂರು ದಿನ ಆ ಸ್ಟಾರ್‌ನ ಅಭಿಮಾನಿಗಳು ಚಿತ್ರಮಂದಿರಕ್ಕೆ ದಾಂಗುಡಿ ಇಡುತ್ತಾರೆ.

ಚಿತ್ರದಿಂದ ತಮ್ಮ ಅಭಿಮಾನಕ್ಕೆ ಧಕ್ಕೆಯಾದರೂ ಕೂಡ ಕ್ಯಾಮರಾ ಮತ್ತು ಎಲ್ಲರೆದುರು ಚಿತ್ರವನ್ನು ಬಾಯ್ತುಂಬ ಹೊಗಳುತ್ತಾರೆ. ಇವರ ಮಾತು ನಂಬಿಕೊಂಡು ಇನ್ನೊಂದಿಷ್ಟು ಜನ ಹೋಗುತ್ತಾರೆ. ಹೀಗಾಗಿಯೇ ಚಿತ್ರದ ನಿಜವಾದ ಗೆಲುವು ಅಥವಾ ಸೋಲು ನಿರ್ಧಾರ ಆಗುವುದು ಮೊದಲ ಮೂರು ದಿನಗಳ ನಂತರವಷ್ಟೇ ಎಂದು ಬಾಕ್ಸಾಫೀಸ್‌ನ ಲೆಕ್ಕಾಚಾರವನ್ನು ಹಾಕುವ ಪಂಡಿತರು ಹೇಳುತ್ತಲೇ ಇರುತ್ತಾರೆ. ಸೋಮವಾರದ ಅಗ್ನಿ ಪರೀಕ್ಷೆಯಲ್ಲಿ ಚಿತ್ರ ತೇರ್ಗಡೆಯಾದರೆ ಆ ಚಿತ್ರ ಆ ನಂತರ ಗೆದ್ದಂತೆಯೇ, ಇಲ್ಲವಾದಲ್ಲಿ ಸೋಲಿನತ್ತ ಚಿತ್ರ ಮುಖ ಮಾಡಿದೆ ಎಂದೇ ಅರ್ಥ ಎಂದು ಹೇಳುತ್ತಾರೆ.

Shahid Kriti amp amp Rashmika Cocktail 2 Witnesses Brutal 64 Drop On Monday


ಸದ್ಯ ಶಾಹಿದ್ ಕಪೂರ್, ರಶ್ಮಿಕಾ ಮಂದಣ್ಣ ಮತ್ತು ಕೃತಿ ಸನೋನ್ ಅಭಿನಯದ ''ಕಾಕ್‌ಟೇಲ್ 2'' ಚಿತ್ರ ಇದೇ ಮಾತು ಸಾಬೀತು ಮಾಡಲು ಅಣಿಯಾದಂತೆ ಇದೆ. ವಾರಾಂತ್ಯದ ಗಳಿಕೆ ಕಂಡು ಖುಷಿಯಾಗಿದ್ದ ''ಕಾಕ್‌ಟೇಲ್ 2'' ತಂಡಕ್ಕೆ ಸೋಮವಾರದ ಗಳಿಕೆ ಭಾರೀ ಶಾಕ್ ನೀಡಿದೆ.

ಹೌದು, ವೀಕೆಂಡ್‌ನಲ್ಲಿ ಚಿತ್ರಮಂದಿರಗಳಲ್ಲಿ ಕಾಣಿಸಿದ್ದ ಹವಾ, ಸೋಮವಾರದ ಹೊತ್ತಿಗೆ ಸಂಪೂರ್ಣ ಮಾಯವಾಗಿದೆ. ಪ್ರೇಕ್ಷಕರು ಮತ್ತು ಚಿತ್ರಪಂಡಿತರು ಬೆರಗಾಗುವಂತೆ ಚಿತ್ರದ ಗಳಿಕೆಯಲ್ಲಿ ಬರೋಬ್ಬರಿ 64% ಕುಸಿತ ಕಂಡು ಬಂದಿದೆ.

ನಿಜ. ವಾರಾಂತ್ಯದ ನಂತರ ಸೋಮವಾರದ ಗಳಿಕೆಯಲ್ಲಿ ಇಳಿಕೆ ಕಂಡು ಬರುವುದು ಸಹಜ. ಆದರೆ.. 64% ಕುಸಿತವನ್ನು ಯಾರು ನಿರೀಕ್ಷೆ ಮಾಡಿರಲಿಲ್ಲ. ಭಾನುವಾರ (ಜೂನ್ 21) ₹17.75 ಕೋಟಿಯನ್ನು ಗಳಿಸಿದ್ದ ''ಕಾಕ್‌ಟೇಲ್ 2'' ನಿನ್ನೆ (ಜೂನ್ 22) ಕೇವಲ ₹6.35 ಕೋಟಿಯನ್ನು ಮಾತ್ರ ಗಳಿಸಿದೆ. ಈ ಅಂಕಿ ಅಂಶ ಚಿತ್ರತಂಡ ಮತ್ತು ಪ್ರದರ್ಶಕರ ಆತಂಕಕ್ಕೆ ಕಾರಣವಾಗಿದೆ. ನಾಲ್ಕು ದಿನದಲ್ಲಿ ಭಾರತದಲ್ಲಿ 50 ಕೋಟಿಯ ಗಡಿ ದಾಟಿದ್ದರೂ ಕೂಡ ಸೋಮವಾರದ ದಿಢೀರ್ ಕುಸಿತ ಚಿತ್ರದ ಕ್ರೇಜ್ ಕಡಿಮೆಯಾಗುತ್ತಿದೆ ಎನ್ನುವುದಕ್ಕೆ ಕೈಗನ್ನಡಿ ಹಿಡಿದಂತೆ ಇದೆ.

ಸ್ಯಾಕ್ನಿಲ್ ಪ್ರಕಾರ ''ಕಾಕ್‌ಟೇಲ್ 2'' ಚಿತ್ರದ 4 ದಿನದ ಗಳಿಕೆ ಈ ಕೆಳಗಿನಂತೆ ಇದೆ

ದಿನ ಭಾರತದ ಒಟ್ಟು ನಿವ್ವಳ ಗಳಿಕೆ (India Net)
ಮೊದಲನೇ ದಿನ (ಶುಕ್ರವಾರ) ₹13.50 ಕೋಟಿ
ಎರಡನೇ ದಿನ (ಶನಿವಾರ) ₹16.25 ಕೋಟಿ
ಮೂರನೇ ದಿನ (ಭಾನುವಾರ) ₹17.75 ಕೋಟಿ
ನಾಲ್ಕನೇ ದಿನ (ಸೋಮವಾರ) ₹6.35 ಕೋಟಿ
ಒಟ್ಟು ಮೊತ್ತದ ಕಲೆಕ್ಷನ್ ₹53.85 ಕೋಟಿ
shahid-kriti-rashmika-cocktail-2-witnesses-brutal-64-drop-on-monday

ಭರ್ಜರಿ ಕುಸಿತಕ್ಕೆ ಕಾರಣವೇನು..?

''ಕಾಕ್‌ಟೇಲ್ 2'' ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಕೇವಲ ಪ್ರೇಕ್ಷಕರ ವಲಯ ಮಾತ್ರ ಅಲ್ಲ ವಿಮರ್ಶಕರ ವಲಯ ಕೂಡ ಈ ಚಿತ್ರದ ವಿಚಾರದಲ್ಲಿ ಇಬ್ಬಾಗವಾಗಿದೆ. ಚಿತ್ರದ ಗಳಿಕೆಯ ಮೇಲೆ ಇದರಿಂದ ಪರಿಣಾಮ ಬೀರಿದೆ.

ಇನ್ನು ಎಲ್ಲಕ್ಕಿಂತ ಮುಖ್ಯವಾಗಿ ''ಕಾಕ್‌ಟೇಲ್'' ಕೇವಲ ಮಹಾನಗರಗಳ ಪ್ರೇಕ್ಷಕರಿಗೆ ಮಾತ್ರ ಕಿಕ್ಕೇರಿಸಿದೆ. ಬಿ ಮತ್ತು ಸಿ ಸೆಂಟರ್ ನಲ್ಲಿ ಚಿತ್ರಮಂದಿರಗಳು ಬೀಕೋ ಎನ್ನುತ್ತಿವೆ. ಮುಂಬೈ, ದೆಹಲಿ, ಬೆಂಗಳೂರಿನ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಂಜೆಯ ಪ್ರದರ್ಶನಕ್ಕೆ ಜನ ಕಂಡು ಬರುತ್ತಿದ್ದಾರಾದರೂ ಸಿಂಗಲ್ ಸ್ಕ್ರೀನ್ ಚಿತ್ರಮಂದಿರ ಪ್ರೇಕ್ಷಕರಿಲ್ಲದೆ ಬಣಗುಡುತ್ತಿವೆ. ಮಾಸ್ ಪ್ರೇಕ್ಷಕರು ಈ ಚಿತ್ರದಿಂದ ಅಂತರ ಕಾಪಾಡಿಕೊಂಡಿದ್ದಾರೆ. ಇವೆಲ್ಲವೂ ಚಿತ್ರದ ಕುಸಿತಕ್ಕೆ ಕಾರಣ ಎನ್ನುವ ವಾದವನ್ನು ಸದ್ಯ ಬಾಲಿವುಡ್ ಪಂಡಿತರು ಮಾಡುತ್ತಿದ್ದಾರೆ.

ಒಟ್ನಲ್ಲಿ ''ಕಾಕ್‌ಟೇಲ್ 2'' ಚಿತ್ರದ ಮುಂದಿನ ಹಾದಿ ಕಠಿಣವಾಗಿದೆ. ನಾಲ್ಕನೇ ದಿನ 64 % ಕುಸಿತ ಕಂಡಿರುವ ಈ ಚಿತ್ರ ಈ ಇಡೀ ವಾರ ಕೊನೆ ಪಕ್ಷ ದಿನ ನಿತ್ಯ 4 ರಿಂದ 5 ಕೋಟಿಯನ್ನು ಗಳಿಸಬೇಕಿದೆ. ವಾರಾಂತ್ಯದ ಗಳಿಕೆ ಎರಡಂಕಿಯನ್ನು ದಾಟಲೇಬೇಕಿದೆ. ಒಂದು ವೇಳೆ ಗಳಿಕೆ ಇನ್ನೂ ಕುಸಿದರೆ 100 ಕೋಟಿಯ ಕ್ಲಬ್ ಈ ತಂಡಕ್ಕೆ ಕನಸಾಗಿಯೇ ಉಳಿಯಲಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

English summary
Cocktail 2 Box Office: Big Monday dip for Shahid, Kriti & Rashmika's film! India net collection stands at ₹53.85 crore after 4 days. Get the breakdown.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X