Sikandar Box Office Day 19 ; ಸೋತರೂ ಕೂಡ ಅಕ್ಷಯ್ ಕುಮಾರ್ ದಾಖಲೆ ಮುರಿದ ಸಲ್ಮಾನ್ ಖಾನ್..!

ಹೆಚ್ಚೇನು ಇಲ್ಲ. 07-08 ವರ್ಷದ ಹಿಂದೆ ಸಲ್ಮಾನ್ ಖಾನ್ ಅಭಿನಯದ ಚಿತ್ರ ಬಿಡುಗಡೆಯಾಗುತ್ತಿದೆ ಎಂದರೆ ಬಾಲಿವುಡ್‌ನಲ್ಲಿ ಕಂಪನವಾಗುತ್ತಿತ್ತು.ಉತ್ತರ ಭಾರತದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುತ್ತಿತ್ತು. ಬೇರೆಯವರೆಲ್ಲ ತಮ್ಮ ಚಿತ್ರದ ಬಿಡುಗಡೆಯ ದಿನಾಂಕವನ್ನು ಮುಂದೂಡುತ್ತಿದ್ದರು. ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟುತ್ತಿತ್ತು. ಹದಿಹರೆಯದ ಯುವಕ ಯುವತಿಯರಿಂದ ಹಿಡಿದು ಬಡ ಮತ್ತು ಮಧ್ಯಮ ವರ್ಗದ ಜನರ ದಂಡು ಚಿತ್ರಮಂದಿರದ ಎದುರು ಕಂಡು ಬರುತ್ತಿತ್ತು.

ಅದರಲ್ಲಿಯೂ ಈದ್ ಹಬ್ಬಕ್ಕೆ ಚಿತ್ರ ಬಂದರಂತೂ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟುತ್ತಿತ್ತು. ಬಾಕ್ಸಾಫೀಸ್‌ನಲ್ಲಿ ಕೂಡ ಹಣದ ಹೊಳೆ ಹರಿಯುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಸಲ್ಮಾನ್ ಖಾನ್‌ಗೆ ಕ್ಯಾರೇ ಎನ್ನುವವರು ಯಾರು ಇಲ್ಲ. ಇದ್ದಿದ್ದರೆ ಸಿಕಂದರ್ ಚಿತ್ರ ಖಂಡಿತ ಸೋಲುತ್ತಿರಲಿಲ್ಲ.

Sikandar Box Office Day 19 Despite Its Poor Run Sikandar Beats Akshay Kumar s Superhit Film

ಹೀಗಾಗಿಯೇ ಬಾಲಿವುಡ್‌ನ ಭಾಯಿಜಾನ್ ವಿಚಲಿತರಾಗಿದ್ದಾರೆ. ಮುಂದೇನು ಮಾಡಬೇಕೆಂದು ಅಳಿದು ಉಳಿದ ತಮ್ಮ ಅಭಿಮಾನಿಗಳನ್ನು ಕರೆದು ಕೇಳಿದ್ದಾರೆ. ಇನ್ನು, ಅಭಿಮಾನಿಗಳು ಕೂಡ ಸೊರಗುತ್ತಿರುವ ಸಲ್ಮಾನ್ ಖಾನ್ ಅವರ ಜನಪ್ರಿಯತೆ ಕಂಡು ಆತಂಕಕ್ಕೀಡಾಗಿದ್ದಾರೆ. ಮತ್ತೂ ಕೆಲವರು ಸಲ್ಮಾನ್ ಖಾನ್ ಮುಂದಿನ ಚಿತ್ರದಲ್ಲಿ ಫೀನಿಕ್ಸ್‌ನಂತೆ ಎದ್ದು ಬರುತ್ತಾರೆ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸುತ್ತಿದ್ದಾರೆ.

ಸಂದರ್ಭ, ಸನ್ನಿವೇಶ ಹೀಗಿರುವಾಗ ಸಲ್ಮಾನ್ ಖಾನ್ ಅಭಿನಯದ ಸಿಕಂದರ್ ಅಕ್ಷಯ್ ಕುಮಾರ್ ಅಭಿನಯದ ಸೂಪರ್ ಹಿಟ್ ಚಿತ್ರದ ದಾಖಲೆಯನ್ನು ಮುರಿದಿದೆ. ಸಲ್ಮಾನ್ ಖಾನ್ ಮತ್ತು ಅವರ ಅಭಿಮಾನಿಗಳಿಗೆ ಈ ಮೂಲಕ ಚೂರು ಪಾರು ಸಮಾಧಾನವನ್ನು ನೀಡಿದೆ.

ಹೌದು, ಬಾಕ್ಸಾಫೀಸ್‌ನಲ್ಲಿ ಸಿಕಂದರ್ ಚಿತ್ರ ಅಕ್ಷಯ್ ಕುಮಾರ್ ಅಭಿನಯದ ಸೂಪರ್ ಹಿಟ್ ಚಿತ್ರ ಏರ್‌ಲಿಫ್ಟ್‌ನ ಹಿಂದಿಕ್ಕಿದೆ. ಕೊಯಿ ಮೊಯಿ ವೆಬ್ ಸೈಟ್ ಪ್ರಕಾರ 2016ರಲ್ಲಿ ತೆರೆಗೆ ಬಂದ ಏರ್‌ಲಿಫ್ಟ್ ಚಿತ್ರ, ಚಿತ್ರಮಂದಿರದಿಂದ ಎತ್ತಂಗಡಿಯಾಗುವ ಮುನ್ನ 129 ಕೋಟಿಯನ್ನು ಗಳಿಸಿತ್ತು. ಇನ್ನು ಆ ಕಾಲಕ್ಕೆ ಈ ಚಿತ್ರಕ್ಕೆ ಖರ್ಚಾಗಿದ್ದು ಕೇವಲ 40 ಕೋಟಿ. ಹೀಗಾಗಿ ಈ ಚಿತ್ರವನ್ನು ಅಕ್ಷಯ್ ಕುಮಾರ್ ವೃತ್ತಿ ಬದುಕಿನ ಸೂಪರ್ ಹಿಟ್ ಚಿತ್ರಗಳಲ್ಲೊಂದಾಗಿ ಪರಿಗಣಿಸಲಾಗಿದೆ. ಈ ದಾಖಲೆಯನ್ನು ಈಗ ಸಿಕಂದರ್ ಚಿತ್ರ ಮುರಿದಿದೆ. ಕೊಯಿ ಮೊಯಿ ವರದಿ ಮಾಡಿರುವಂತೆ 17 ದಿನಗಳಲ್ಲಿ ಚಿತ್ರ 129.08 ಕೋಟಿಯನ್ನು ಗಳಿಸಿದೆ.

ಇನ್ನು ಬಾಕ್ಸಾಫೀಸ್‌ ಮೇಲೆ ಹದ್ದಿನ ಕಣ್ಣು ಇಡುವಸ್ಯಾಕ್ನಿಲ್ಕ್ ವೆಬ್ ಸೈಟ್ ಪ್ರಕಾರ ಸಿಕಂದರ್ ಚಿತ್ರದ ಹತ್ತೊಂಬತ್ತು ದಿನದ ಗಳಿಕೆ ಈ ಕೆಳಗಿನಂತೆ ಇದೆ.

ಮೊದಲ ದಿನ - { ಭಾನುವಾರ } ₹ 22 ಕೋಟಿ

ಎರಡನೇ ದಿನ - { ಸೋಮವಾರ } ₹ 29 ಕೋಟಿ

ಮೂರನೇ ದಿನ -{ ಮಂಗಳವಾರ } ₹19.5 ಕೋಟಿ

ನಾಲ್ಕನೇ ದಿನ - { ಬುಧವಾರ } ₹ 9.75 ಕೋಟಿ

ಐದನೇ ದಿನ - { ಗುರುವಾರ } ₹ 6 ಕೋಟಿ

ಮೊದಲ ವಾರದ ಒಟ್ಟು ಗಳಿಕೆ - ₹ 90.25 ಕೋಟಿ

ಆರನೇ ದಿನ - { ಶುಕ್ರವಾರ } ₹ 3.5 ಕೋಟಿ

ಏಳನೇ ದಿನ - { ಶನಿವಾರ } ₹ 4 ಕೋಟಿ

ಎಂಟನೆ ದಿನ - { ಭಾನುವಾರ } ₹ 4.75 ಕೋಟಿ

ಒಂಬತ್ತನೇ ದಿನ - { ಸೋಮವಾರ } ₹ 1.75 ಕೋಟಿ

ಹತ್ತನೇ ದಿನ - { ಮಂಗಳವಾರ } ₹ 1.5 ಕೋಟಿ

ಹನ್ನೊಂದನೇ ದಿನ - { ಬುಧವಾರ } ₹1.35 ಕೋಟಿ

ಹನ್ನೆರಡನೇ ದಿನ - { ಗುರುವಾರ } ₹ 70 ಲಕ್ಷ

ಎರಡನೇ ವಾರದ ಒಟ್ಟು ಗಳಿಕೆ - ₹ 17.55 ಕೋಟಿ

ಹದಿಮೂರನೇ ದಿನ - { ಶುಕ್ರವಾರ } ₹ 30 ಲಕ್ಷ

ಹದಿನಾಲ್ಕನೇ ದಿನ - { ಶನಿವಾರ } ₹ 40 ಲಕ್ಷ

ಹದಿನೈದನೇ ದಿನ - { ಭಾನುವಾರ } ₹60 ಲಕ್ಷ

ಹದಿನಾರನೇ ದಿನ - { ಸೋಮವಾರ } ₹ 25 ಲಕ್ಷ

ಹದಿನೇಳನೇ ದಿನ - { ಮಂಗಳವಾರ } ₹ 25 ಲಕ್ಷ

ಹದಿನೆಂಟನೇ ದಿನ - { ಬುಧವಾರ } ₹ 18 ಲಕ್ಷ

ಹತ್ತೊಂಬತ್ತನೇ ದಿನ - { ಗುರುವಾರ } ₹ 15 ಲಕ್ಷ { ಅಂದಾಜು }


ಒಟ್ಟು ಗಳಿಕೆ - ₹ 109.9 ಕೋಟಿ

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/,https://www.koimoi.com/ https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ

More from Filmibeat

Read more about: salman khan bollywood boxofffice
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X