Sitaare Zameen Par Box Office ; ಸಿತಾರೆ ಜಮೀನ್ ಪರ ಗಳಿಕೆಯಲ್ಲಿ 16 % ಕುಸಿತ, ಆದರೂ ಗೆದ್ದ ಆಮಿರ್ ಖಾನ್...!
ಹಿಂದೊಂದು ಕಾಲ ಇತ್ತು. ಆ ಕಾಲದಲ್ಲಿ ಸಿನಿಮಾಗಳನ್ನು ನೋಡಲು ಗ್ರಾಮೀಣ ಪ್ರದೇಶದವರು ಬಂಡಿ ಹಾಗೂ ಟ್ರ್ಯಾಕ್ಟರ್‌ನಲ್ಲಿ ಚಿತ್ರಮಂದಿರಕ್ಕೆ ಬರುತ್ತಿದ್ದರು. ಆದರೆ ಈಗ ದೂರ ದೂರಕ್ಕೆ ನೋಡಿದರೂ ಪ್ರೇಕ್ಷಕರು ಕಾಣುತ್ತಿಲ್ಲ. ಎಲ್ಲೋ ಅಲ್ಲೊಂದು .. ಇಲ್ಲೊಂದು .. ಸಿನಿಮಾ ಮಾತ್ರ ಪ್ರೇಕ್ಷಕರನ್ನು ಸೆಳೆಯುತ್ತೆ. ಚಿತ್ರಮಂದಿರ ಅಪರೂಪಕ್ಕೆ ಭರ್ತಿಯಾಗುತ್ತೆ. ಬಾಕ್ಸಾಫೀಸ್‌ನಲ್ಲಿ ಹಣದ ಹೊಳೆ ಹರಿಯುತ್ತೆ. ಇದಕ್ಕೆ ಸಿತಾರೆ ಜಮೀನ್ ಪರ್ ಸದ್ಯದ ಉದಾಹರಣೆ.
ಹೌದು.. ಅಸಲಿಗೆ ಚಿತ್ರದ ಕಥಾನಾಯಕ ಆಮಿರ್ ಖಾನ್ ಎಂಬ ಕಾರಣಕ್ಕೆ ಅನೇಕರು ಸಿತಾರೆ ಜಮೀನ್ ಪರ್ ಚಿತ್ರ ಸೋಲಬೇಕೆಂದು ಬಯಸಿದ್ದರು. ಚಿತ್ರದ ಬಿಡುಗಡೆಯ ಮುನ್ನ ಕೊಂಕು ಮಾತುಗಳನ್ನಾಡಿದ್ದರು. ಇದೇ ಕೊನೆ ಇನ್ನೆಂದು ಆಮಿರ್ ಖಾನ್ ಮತ್ತೆ ಮೇಲೆ ಎದ್ದೇಳಲ್ಲ ಎನ್ನುವ ಮಾತುಗಳನ್ನು ಕೂಡ ಸೋಶಿಯಲ್ ಮೀಡಿಯಾ ಮೂಲಕ ಹೇಳಿದ್ದರು.

ಆದರೆ.. ಹೀಗೆ ಬಯಸಿದವರೆಲ್ಲರ ಆಸೆ ಕಮರಿ ಹೋಗಿದೆ. ಬಾಕ್ಸಾಫೀಸ್‌ನಲ್ಲಿ ಸಿತಾರೆ ಜಮೀನ್ ಪರ್ ಮ್ಯಾಜಿಕ್ ಮಾಡುತ್ತಿದೆ. ಪ್ರೇಕ್ಷಕರನ್ನು ಸೆಳೆಯುತ್ತಿದೆ.
ನಿಜಾ.. ಕಳೆದ ವಾರಾಂತ್ಯದ ಗಳಿಕೆಗೆ ಹೋಲಿಸಿದರೆ ಈ ವಾರದ ಗಳಿಕೆ ಕಡಿಮೆಯಾಗಿದೆ. ಗಳಿಕೆಯಲ್ಲಿ ಇಂದು { ಜೂನ್ 26 } ಶೇಕಡಾ 13 % ಕುಸಿತ ಕಂಡಿದೆ. ಹಾಗಂಥ ಚಿತ್ರ ಸೋತು ಹೋಯ್ತು ಎನ್ನುವ ತೀರ್ಮಾನಕ್ಕೆ ಬರಲು ಸಾಧ್ಯ ಇಲ್ಲ.
ಯಾಕೆಂದರೆ.. ಚಿತ್ರಕ್ಕೆ ಹಾಕಿದ ಬಂಡವಾಳವನ್ನು ಮರಳಿ ಪಡೆಯುವಲ್ಲಿ ಆಮಿರ್ ಖಾನ್ ಬಹುತೇಕ ಯಶಸ್ವಿಯಾಗಿದ್ದಾರೆ. ಈ ಹಿನ್ನೆಲೆ ಇನ್ಮುಂದೆ ಹರಿದು ಬರುವ ಹಣವೆಲ್ಲ ಆಮಿರ್ ಖಾನ್ ಪಾಲಿಗೆ ಲಾಭ ಎಂದೇ ಪರಿಗಣಿಸಲಾಗುತ್ತೆ.
ಹೌದು, 'www.koimoi.com' ವರದಿಯ ಪ್ರಕಾರ ಸಿತಾರೆ ಜಮೀನ್ ಪರ್ ಚಿತ್ರಕ್ಕೆ ಆಮಿರ್ ಖಾನ್ ಖರ್ಚು ಮಾಡಿದ್ದು ಕೇವಲ ₹90 ಕೋಟಿ ಮಾತ್ರ. ಈ ಪೈಕಿ ಚಿತ್ರ ₹ 82.4 ಕೋಟಿ ಹಣವನ್ನು ಬಾಕ್ಸಾಫೀಸ್‌ನಿಂದ ಮರಳಿ ಪಡೆದಿದೆ ಎಂದು ಚಿತ್ರದ ಅಂಕಿ-ಅಂಶಗಳನ್ನು ಹಂಚಿಕೊಳ್ಳುವ 'ಸ್ಯಾಕ್ನಿಲ್' ವೆಬ್ ಸೈಟ್ ವರದಿ ಮಾಡಿದೆ. ಈ ವಾರಾಂತ್ಯಕ್ಕೆ ಚಿತ್ರದ ಗಳಿಕೆ ₹90 ಕೋಟಿ ಗಡಿ ದಾಟುವ ನಿರೀಕ್ಷೆ ಇದ್ದು ಮುಂದಿನ ವಾರದಿಂದ ಚಿತ್ರದ ಗಳಿಕೆಯೆಲ್ಲ ಆಮಿರ್ ಖಾನ್ ಪಾಲಿಗೆ ಲಾಭವೇ.

ಇನ್ನು 'ಬಾಲಿವುಡ್ ಹಂಗಾಮಾ' ವರದಿಯ ಪ್ರಕಾರ ಹೊರದೇಶದಿಂದ ಆಮಿರ್ ಖಾನ್‌ಗೆ ₹26.84 ಕೋಟಿ ಹಣ ಸಿಕ್ಕಿದೆ. ಆ ಪ್ರಕಾರ ನೋಡುವುದಾದರೆ ಚಿತ್ರದ ಒಟ್ಟಾರೆ ಗಳಿಕೆ ₹124.35 ಕೋಟಿಯಾಗಿದೆ.
ಬಾಲಿವುಡ್ ಹಂಗಾಮಾ ಪ್ರಕಾರ ಸಿತಾರೆ ಜಮೀನ್ ಪರ್ ಚಿತ್ರದ 6 ದಿನದ ಗಳಿಕೆ ಈ ಕೆಳಗಿನಂತೆ ಇದೆ
ಬಾಕ್ಸಾಫೀಸ್ ಗಳಿಕೆ - Nett { ಭಾರತ } - ₹81.90 ಕೋಟಿ
ಬಾಕ್ಸಾಫೀಸ್ ಗಳಿಕೆ - Gross{ ಭಾರತ } - ₹ 97.51 ಕೋಟಿ
ಬಾಕ್ಸಾಫೀಸ್ ಗಳಿಕೆ { ಓವರ್ ಸೀಸ್ } - ₹ 26.84 ಕೋಟಿ
ಒಟ್ಟು ಗಳಿಕೆ - ₹124.35 ಕೋಟಿ
ಇನ್ನು ಸ್ಯಾಕ್ನಿಲ್ ವೆಬ್ ಸೈಟ್ ಪ್ರಕಾರ ಚಿತ್ರ ಈ ಆರು ದಿನದಲ್ಲಿ ಚಿತ್ರ ₹ 82.4 ಕೋಟಿ ಹಣವನ್ನು ಗಳಿಸಿದ್ದು, ಚಿತ್ರದ ಗಳಿಕೆಯ ವಿವರ ಈ ಕೆಳಗಿನಂತೆ ಇದೆ.
ದಿನ ಗಳಿಕೆ
ಮೊದಲನೇ ದಿನ { ಶುಕ್ರವಾರ } ₹ 10.7ಕೋಟಿ
ಎರಡನೇ ದಿನ { ಶನಿವಾರ } ₹ 20.2 ಕೋಟಿ
ಮೂರನೇ ದಿನ {ಭಾನುವಾರ} ₹ 27.5ಕೋಟಿ
ನಾಲ್ಕನೇ ದಿನ {ಸೋಮವಾರ} ₹8.5 ಕೋಟಿ
ಐದನೇ ದಿನ {ಮಂಗಳವಾರ} ₹8.5 ಕೋಟಿ
ಆರನೇ ದಿನ {ಬುಧವಾರ} ₹7.25 ಕೋಟಿ
ಒಟ್ಟು ಗಳಿಕೆ - ₹82.4 ಕೋಟಿ
ಒಟ್ನಲ್ಲಿ ಸದ್ಯ ಸಿತಾರೆ ಜಮೀನ್ ಪರ್ ಚಿತ್ರ ಆರು ದಿನಗಳಲ್ಲಿ ₹ 80 ಕೋಟಿಯ ಗಡಿಯನ್ನು ದಾಟಿದೆ. ಸದ್ಯ ಕುಸಿದಿರುವ ಗಳಿಕೆ ಈ ವಾರಾಂತ್ಯದಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ. ಚಿತ್ರಮಂದಿರದಿಂದ ಎತ್ತಂಗಡಿಯಾಗುವ ಮೊದಲು ಈ ಚಿತ್ರ ಎಷ್ಟು ಕೋಟಿ ಹಣವನ್ನು ಗಳಿಸುತ್ತೆ ಎನ್ನುವುದನ್ನು ಈಗ ಕಾದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











