Sitaare Zameen Par Box Office Day 8 ; ಅಜಯ್ ದೇವಗನ್ ದಾಖಲೆ ಹಿಂದಿಕ್ಕುವಲ್ಲಿ ವಿಫಲವಾದ ಆಮಿರ್ ಖಾನ್..!
ಯಾವುದೇ ಚಿತ್ರವಾದರು ಕೂಡ ಬಿಡುಗಡೆಯಾದ ನಂತರ ಚಿತ್ರಮಂದಿರ ತುಂಬಬೇಕು, ಚಿತ್ರ ಗೆಲ್ಲಬೇಕೆಂದರೆ ಯುವ ಸಮೂಹ ಚಿತ್ರಮಂದಿರಕ್ಕೆ ಬರಬೇಕು. ಮನೆ ಮಂದಿಯೆಲ್ಲ ಜೊತೆಯಾಗಿ ಬಂದು ಚಿತ್ರವನ್ನು ನೋಡಬೇಕು. ಆಗಲೇ ಆ ಚಿತ್ರ ಗೆಲ್ಲಲು ಸಾಧ್ಯ. ಬಾಕ್ಸಾಫೀಸ್‌ನಲ್ಲಿ ಹಣದ ಹೊಳೆ ಹರಿಯಲು ಸಾಧ್ಯ. ಆದರೆ ಈಗೀಗ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗುತ್ತಿದೆ. ಅಂಗೈಯಲ್ಲಿಯೇ ಮನರಂಜನೆ ಇರುವಾಗ ಚಿತ್ರಮಂದಿರಕ್ಕೆ ಯಾಕೆ ಹೋಗಬೇಕೆನ್ನುವುದು ಅನೇಕರ ವಾದ.
ಹಾಗಂಥ.. ಎಲ್ಲ ಚಿತ್ರವನ್ನು ಎಲ್ಲರೂ ಓಟಿಟಿಯಲ್ಲಿ ನೋಡುವುದಿಲ್ಲ. ಅಲ್ಲೊಂದು.. ಇಲ್ಲೊಂದು.. ಚಿತ್ರಗಳು ಪ್ರೇಕ್ಷಕರನ್ನು ಸೆಳೆಯುತ್ತವೆ. ಬಾಕ್ಸಾಫೀಸ್‌ನಲ್ಲಿ ಹಣವನ್ನು ಕೂಡ ಗಳಿಸುತ್ತವೆ. ಇದಕ್ಕೆ ಸಿತಾರೆ ಜಮೀನ್ ಪರ್ ಸದ್ಯದ ಉದಾಹರಣೆ.

ಹೌದು, ಮೊದಲ ದಿನ ಸಾಧಾರಣ ಓಪನಿಂಗ್ ಪಡೆದ ಸಿತಾರೆ ಜಮೀನ್ ಪರ್ ಚಿತ್ರದ ಗಳಿಕೆಯಲ್ಲಿ ಶನಿವಾರ ಮತ್ತು ಭಾನುವಾರ ಏರಿಕೆ ಕಂಡು ಬಂದಿತ್ತು. ಪ್ರೇಕ್ಷಕರಿಂದ ಮತ್ತು ವಿಮರ್ಷಕರಿಂದ ಮೊದಲ ದಿನ ಒಳ್ಳೆಯ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆ ಎರಡು ಮತ್ತು ಮೂರನೇ ದಿನ ಬಾಕ್ಸಾಫೀಸ್‌ನಲ್ಲಿ ಸಿತಾರೆ ಜಮೀನ್ ಪರ್ ಚಿತ್ರ ಅಬ್ಬರಿಸಿತ್ತು.
ಇನ್ನು ಸಾಮಾನ್ಯವಾಗಿ ಸೋಮವಾರ ಚಿತ್ರ ಯಾವುದೇ ಇರಲಿ.. ಎಷ್ಟೇ ಉತ್ತಮ ವಿಮರ್ಶೆಗಳು ಆ ಚಿತ್ರಕ್ಕೆ ಸಿಕ್ಕಿರಲಿ.. ಚಿತ್ರದ ಗಳಿಕೆಯಲ್ಲಿ ಕುಸಿತ ಕಂಡು ಬರುವುದು ಸಾಮಾನ್ಯ. ಸಿತಾರೆ ಜಮೀನ್ ಪರ್ ಚಿತ್ರದ ವಿಚಾರದಲ್ಲಿ ಕೂಡ ಇದೇ ಆಯ್ತು. ಆದರೂ ಕೂಡ ಸ್ಯಾಕ್ನಿಲ್ ವೆಬ್ ಸೈಟ್ ಪ್ರಕಾರ ಚಿತ್ರ ಮೊದಲ ವಾರ ₹ 88.9 ಕೋಟಿಯನ್ನು ಗಳಿಸಿದೆ. ಇಂದು 8ನೇ ದಿನ ಬಾಕ್ಸಾಫೀಸ್‌ನಲ್ಲಿ ಚಿತ್ರ ₹3.85 ಕೋಟಿಯನ್ನು ಗಳಿಸಿದೆ.
ಸ್ಯಾಕ್ನಿಲ್ ವೆಬ್ ಸೈಟ್ ಪ್ರಕಾರ ಸಿತಾರೆ ಜಮೀನ್ ಪರ್ ಚಿತ್ರದ 8 ದಿನದ ಗಳಿಕೆ ಈ ಕೆಳಗಿನಂತೆ ಇದೆ.
ದಿನ ಗಳಿಕೆ
ಮೊದಲನೇ ದಿನ { ಶುಕ್ರವಾರ } ₹ 10.7ಕೋಟಿ
ಎರಡನೇ ದಿನ {ಶನಿವಾರ } ₹20.2 ಕೋಟಿ
ಮೂರನೇ ದಿನ {ಭಾನುವಾರ} ₹ 27.25ಕೋಟಿ
ನಾಲ್ಕನೇ ದಿನ {ಸೋಮವಾರ} ₹8.5 ಕೋಟಿ
ಐದನೇ ದಿನ {ಮಂಗಳವಾರ} ₹8. 5 ಕೋಟಿ
ಆರನೇ ದಿನ { ಬುಧವಾರ } ₹ 7.25 ಕೋಟಿ
ಏಳನೇ ದಿನ { ಗುರುವಾರ } ₹ 6.5 ಕೋಟಿ
ಮೊದಲ ವಾರದ ಒಟ್ಟು ಗಳಿಕೆ ₹ 88.9 ಕೋಟಿ
ಎಂಟನೇ ದಿನ { ಶುಕ್ರವಾರ } ₹ 3.85* ಕೋಟಿ
ಅಜಯ್ ದೇವಗನ್ ಹಿಂದಿಕ್ಕುವಲ್ಲಿ ವಿಫಲವಾದ ಆಮಿರ್ ಖಾನ್
ಇನ್ನು ಸ್ಯಾಕ್ನಿಲ್ ವೆಬ್ ಸೈಟ್ ಪ್ರಕಾರ 8 ದಿನದಲ್ಲಿ ₹92.75 ಕೋಟಿಯನ್ನು ಆಮಿರ್ ಖಾನ್ ಗಳಿಸಿದರು ಕೂಡ ಬಾಕ್ಸಾಫೀಸ್ ರೇಸ್‌ನಲ್ಲಿ ಅಜಯ್ ದೇವಗನ್ ಅವರನ್ನು ಹಿಂದಿಕ್ಕುವಲ್ಲಿ ಆಮಿರ್ ಖಾನ್ ವಿಫಲರಾಗಿದ್ದಾರೆ.
ಹೌದು .. ಸದ್ಯ ಓಟಿಟಿಯಲ್ಲಿ ಪ್ರಸಾರವಾಗುತ್ತಿರುವ ಅಜಯ್ ದೇವಗನ್ ಅಭಿನಯದ ರೇಡ್ 2 ಚಿತ್ರ ಸ್ಯಾಕ್ಬಿಲ್ ವೆಬ್ ಸೈಟ್ ಉಲ್ಲೇಖಿಸಿರುವಂತೆ ಮೊದಲ 8 ದಿನದಲ್ಲಿ ₹ 95.75 ಕೋಟಿಯನ್ನು ಗಳಿಸುವಲ್ಲಿ ಯಶಸ್ವಿಯಾಗಿತ್ತು.

ಈ ಗಡಿಯನ್ನು ದಾಟುವಲ್ಲಿ ಆಮಿರ್ ಖಾನ್ ಎಡವಿದ್ದು ಅಜಯ್ ದೇವಗನ್ ಅವರಿಂದ ₹ 3 ಕೋಟಿ ಹಿಂದೆ ಇದ್ದಾರೆ. ಆದರೆ ಸನ್ನಿ ಡಿಯೋಲ್ ಅಭಿನಯದ ಜಾಟ್ ಚಿತ್ರದ ಒಟ್ಟಾರೆ ಗಳಿಕೆ {₹88.26 } ಯನ್ನು ಹಿಂದಿಕ್ಕುವಲ್ಲಿ ಆಮಿರ್ ಖಾನ್ ಯಶಸ್ವಿಯಾಗಿದ್ದಾರೆ. ಈ ಮೂಲಕ ಈ ವರ್ಷ ಮೊದಲ ವಾರದಲ್ಲಿ ಅತೀ ಹೆಚ್ಚು ಹಣ ಗಳಿಸಿದ ಸ್ಟಾರ್‌ಗಳ ಲಿಸ್ಟ್‌ನಲ್ಲಿ ಆರನೇ ಸ್ಥಾನಕ್ಕೇರಿದ್ದಾರೆ.
ಒಟ್ನಲ್ಲಿ ಸದ್ಯ ಸಿತಾರೆ ಜಮೀನ್ ಪರ್ ಚಿತ್ರ ನೂರು ಕೋಟಿಯ ಗಡಿಯತ್ತ ಬಂದು ತಲುಪಿದೆ. ಸದ್ಯ ಕುಸಿದಿರುವ ಗಳಿಕೆ ಈ ವಾರಾಂತ್ಯದಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ. ಚಿತ್ರಮಂದಿರದಿಂದ ಎತ್ತಂಗಡಿಯಾಗುವ ಮೊದಲು ಈ ಚಿತ್ರ ಎಷ್ಟು ಕೋಟಿ ಹಣವನ್ನು ಗಳಿಸುತ್ತೆ ಎನ್ನುವುದನ್ನು ಈಗ ಕಾದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











