Sitaare Zameen Par Box Office Day 10 ; ತಮ್ಮದೇ 'ಗಜಿನಿ' ಚಿತ್ರದ ದಾಖಲೆ ಮುರಿದ ಆಮಿರ್ ಖಾನ್.!
ಇದು ಪ್ಯಾನ್ ಇಂಡಿಯಾ ಕಾಲ. ಈ ಕಾಲದಲ್ಲಿ ರಿಮೇಕ್ ಚಿತ್ರಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದೇ ಅನೇಕರು ಅಂದುಕೊಂಡಿದ್ದರು. ಇನ್ನು, ಇಂದು ಎಲ್ಲರ ಅಂಗೈಯಲ್ಲಿಯೇ ಮನರಂಜನೆ ಇದೆ. ಜಗತ್ತಲ್ಲಿ ನಿರ್ಮಾಣವಾಗುವ ನಾನಾ ಭಾಷೆಯ ನಾನಾ ಚಿತ್ರವನ್ನು ಆರಾಮಾಗಿ ನೋಡುವ ಅವಕಾಶ ಇದೆ. ಹೀಗಿರುವಾಗ ಯಾವುದೋ ಭಾಷೆಯ ಚಿತ್ರದ ಕಥೆಗಳನ್ನು ಕದಿಯುವುದು ಇರಲಿ ಅಧಿಕೃತವಾಗಿ ಚಿತ್ರವನ್ನು ರಿಮೇಕ್ ಮಾಡುವುದು ಕೂಡ ಕಷ್ಟ ಎಂದೇ ಎಲ್ಲರು ಮಾತನಾಡುತ್ತಿದ್ದರು.
ಆದರೆ.. ಒಂದೊಳ್ಳೆಯ ಕೃತಿಗೆ ಎಲ್ಲಿಯೂ ಧಕ್ಕೆ ಬಾರದಂತೆ ಶ್ರದ್ಧೆಯಿಂದ ಬೆಳ್ಳಿತೆರೆಗೆ ತಂದರೆ.. ಅದು ಯಾವುದೇ ಭಾಷೆಯ ಚಿತ್ರ ಇರಲಿ, ಯಾವುದೇ ಭಾಷೆಗೆ ರಿಮೇಕ್ ಆಗಿರಲಿ .. ಆ ಚಿತ್ರವನ್ನು ಜನ ತಲೆ ಮೇಲೆ ಹೊತ್ತು ಮೆರೆಸುತ್ತಾರೆ. ಗೆಲ್ಲಿಸುತ್ತಾರೆ. ಇದಕ್ಕೆ ಸಿತಾರೆ ಜಮೀನ್ ಪರ್ ಸದ್ಯದ ಉದಾಹರಣೆ.

ಹೌದು, ಬಾಲಿವುಡ್ ಒಂದು ಸಿದ್ಧ ಮಾದರಿಯ ಹಿಂದೆ ಬಿದ್ದಾಗ ಭಿನ್ನವಾದ ಹಾದಿಯನ್ನು ತುಳಿದ ಆಮಿರ್ ಖಾನ್ ಕೇವಲ ಕಮರ್ಷಿಯಲ್ ಚಿತ್ರಗಳನ್ನಷ್ಟೇ ಮಾಡದೇ ಹತ್ತು ಹಲವು ಪ್ರಯತ್ನ ಮತ್ತು ಪ್ರಯೋಗಗಳನ್ನು ಮಾಡಿದರು. ಆ ಪೈಕಿ ಸಿತಾರೆ ಜಮೀನ್ ಪರ್ ಚಿತ್ರ ಕೂಡ ಒಂದು. ಸ್ಪ್ಯಾನಿಷ್‌ನ ಕ್ಯಾಂಪಿಯೋನ್ಸ್ ಚಿತ್ರದ ಯಥಾವತ್ತು ನಕಲು ಈ ಚಿತ್ರ ಎಂದು ಗೊತ್ತಾದಾಗ ಹಲವರು ನಕ್ಕಿದ್ದರು. ಆಮಿರ್ ಖಾನ್‌ಗೆ ಮತ್ತೊಂದು ಸೋಲು ಕಟ್ಟಿಟ್ಟ ಬುತ್ತಿ ಎಂದುಕೊಂಡಿದ್ದರು.
ಆದರೆ.. ಇವರೆಲ್ಲರ ನಿರೀಕ್ಷೆಗಳು ಈಗ ಹುಸಿಯಾಗಿವೆ. ಯಾಕೆಂದರೆ ಬಾಕ್ಸಾಫೀಸ್‌ನಲ್ಲಿ ಸಿತಾರೆ ಜಮೀನ್ ಪರ್ ಮ್ಯಾಜಿಕ್ ಮಾಡುತ್ತಿದೆ. ಪ್ರೇಕ್ಷಕರನ್ನು ಸೆಳೆಯುತ್ತಿದೆ. ₹90 ಕೋಟಿಯಲ್ಲಿ ನಿರ್ಮಾಣವಾದ ಸಿತಾರೆ ಜಮೀನ್ ಪರ್ ಚಿತ್ರ ಸದ್ಯ ನೂರು ಕೋಟಿಯ ಗಡಿಯನ್ನು ದಾಟಿದೆ.

ಹೌದು, ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ಸ್ಯಾಕ್ನಿಲ್ ವೆಬ್ ಸೈಟ್ ಪ್ರಕಾರ ಸಿತಾರೆ ಜಮೀನ್ ಪರ್ ಚಿತ್ರ ಈ ಹತ್ತು ದಿನದಲ್ಲಿ ಕೇವಲ ಭಾರತದಲ್ಲಿ ₹ 122.65 ಕೋಟಿ ಹಣವನ್ನು ಗಳಿಸಿದೆ. ಬಿಡುಗಡೆಯಾದ ಮರು ದಿನ ಬಾಕ್ಸಾಫೀಸ್‌ನಲ್ಲಿ ಚಿನ್ನದ ಬೆಳೆ ಬೆಳೆದಿದ್ದ ಸಿತಾರೆ ಜಮೀನ್ ಪರ್ ಚಿತ್ರ ಕಳೆದ ಶನಿವಾರ ಮತ್ತು ಭಾನುವಾರ ಕೋಟ್ಯಂತರ ಹಣವನ್ನು ಗಳಿಸಿದೆ. ಚಿತ್ರದ ಗಳಿಕೆ ಎರಡಂಕಿಯನ್ನು ದಾಟಿದೆ.
ಸ್ಯಾಕ್ನಿಲ್ ವೆಬ್ ಸೈಟ್ ಪ್ರಕಾರ ಸಿತಾರೆ ಜಮೀನ್ ಪರ್ ಚಿತ್ರದ 10 ದಿನದ ಗಳಿಕೆ ಈ ಕೆಳಗಿನಂತೆ ಇದೆ.
ದಿನ ಗಳಿಕೆ
ಮೊದಲನೇ ದಿನ { ಶುಕ್ರವಾರ } ₹ 10.7ಕೋಟಿ
ಎರಡನೇ ದಿನ { ಶನಿವಾರ } ₹ 20.2 ಕೋಟಿ
ಮೂರನೇ ದಿನ {ಭಾನುವಾರ} ₹ 27.25ಕೋಟಿ
ನಾಲ್ಕನೇ ದಿನ {ಸೋಮವಾರ} ₹8.5 ಕೋಟಿ
ಐದನೇ ದಿನ {ಮಂಗಳವಾರ} ₹8.5 ಕೋಟಿ
ಆರನೇ ದಿನ {ಬುಧವಾರ} ₹7.25 ಕೋಟಿ
ಏಳನೇ ದಿನ { ಗುರುವಾರ } ₹6.5 ಕೋಟಿ
ಮೊದಲ ವಾರದ ಒಟ್ಟು ಗಳಿಕೆ - ₹88.9 ಕೋಟಿ
ಎಂಟನೇ ದಿನ { ಶುಕ್ರವಾರ } ₹ 6.65 ಕೋಟಿ
ಒಂಬತ್ತನೇ ದಿನ { ಶನಿವಾರ } ₹12.6 ಕೋಟಿ
ಹತ್ತನೇ ದಿನ { ಭಾನುವಾರ } ₹14.5 ಕೋಟಿ
ಒಟ್ಟು ಗಳಿಕೆ ₹122.65 ಕೋಟಿ
ತಮ್ಮ ಗಜಿನಿ ಚಿತ್ರದ ದಾಖಲೆ ಮುರಿದ ಆಮಿರ್ ಖಾನ್
ಇನ್ನೂ ತಮ್ಮ ಸಿತಾರೆ ಜಮೀನ್ ಪರ್ ಚಿತ್ರದ ಮೂಲಕ ಆಮಿರ್ ಖಾನ್ ತಮ್ಮ ಹಳೆಯ ದಾಖಲೆಗಳನ್ನು ಮುರಿದಿದ್ದಾರೆ. ಸೀಕ್ರೇಟ್ ಸೂಪರ್ ಸ್ಟಾರ್, ತಾರೆ ಜಮೀನ್ ಪರ್, ತಲಾಶ್ ಚಿತ್ರಗಳ ಗಳಿಕೆಯನ್ನು ಕೂಡ ಹಿಂದಿಕ್ಕಿದ್ದಾರೆ. ಇದೀಗ ಈ ಸಾಲಿಗೆ ಗಜಿನಿ ಕೂಡ ಸೇರಿಕೊಂಡಿದೆ ಎಂದು ಕೊಯಿ ಮೊಯಿ. ಕಾಮ್ ವರದಿಯನ್ನು ಮಾಡಿದೆ.

ಹೌದು, ಅಸಲಿಗೆ 17 ವರ್ಷಗಳ ಹಿಂದೆ ತೆರೆಗೆ ಬಂದ ಗಜಿನಿ ಚಿತ್ರ ಬಾಕ್ಸಾಫೀಸ್‌ನಲ್ಲಿ ₹114 ಕೋಟಿಯನ್ನು ಗಳಿಸಿತ್ತು. ಈ ಗಳಿಕೆಯನ್ನು ಈಗ ಸಿತಾರೆ ಜಮೀನ್ ಪರ್ ಚಿತ್ರ ಹಿಂದಿಕ್ಕಿದ್ದು ಭಾರತದಲ್ಲಿ ಅತೀ ಹೆಚ್ಚು ಹಣ ಗಳಿಸಿದ ಆಮಿರ್ ಖಾನ್ ಅಭಿನಯದ ಆರನೇ ಚಿತ್ರ ಎನ್ನುವ ಹೆಗ್ಗಳಿಕೆಗೆ ಸದ್ಯ ಸಿತಾರೆ ಜಮಿನ್ ಪರ್ ಚಿತ್ರ ಪಾತ್ರವಾಗಿದೆ.
ಅತೀ ಹೆಚ್ಚು ಹಣ ಗಳಿಸಿದ ಆಮಿರ್ ಖಾನ್ ಅಭಿನಯದ 07 ಚಿತ್ರಗಳು
ಚಿತ್ರದ ಹೆಸರು ಗಳಿಕೆ
ದಂಗಲ್ ₹387.39 ಕೋಟಿ
ಪಿಕೆ ₹339.5 ಕೋಟಿಗಳು
ಧೂಮ್ 3 ₹280.25 ಕೋಟಿ
3 ಈಡಿಯಟ್ಸ್ - ₹202 ಕೋಟಿ
ಥಗ್ಸ್ ಆಫ್ ಹಿಂದೂಸ್ತಾನ್ ₹145.29 ಕೋಟಿ
ಸಿತಾರೆ ಜಮೀನ್ ಪರ್ ₹122.65 ಕೋಟಿ
ಗಜಿನಿ - ₹114 ಕೋಟಿ
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











