ಮೊನ್ನೆ ರಿಷಬ್ ಶೆಟ್ಟಿ,ಇಂದು ಧನುಷ್ ;ತೇರೆ ಇಷ್ಕ್ ಮೇ ಅಲೆ,ಸೌತ್ ಸ್ಟಾರ್‌ಗಳ ಅಬ್ಬರ-ಕರಣ್ ಜೋಹರ್ ಕಕ್ಕಾಬಿಕ್ಕಿ
ಪ್ಯಾನ್ ಇಂಡಿಯಾ ಅಲೆಯಿಂದಾಗಿ ''ಬಾಲಿವುಡ್'' ಬೆಚ್ಚಿ ಬಿದ್ದು ವರ್ಷಗಳೇ ಆಗಿವೆ. ಮೊದಲೆಲ್ಲ ದಕ್ಷಿಣ ಭಾರತೀಯ ಚಿತ್ರರಂಗವನ್ನು ಲೇವಡಿ ಮಾಡುತ್ತಿದ್ದ ಹಿಂದಿ ಉದ್ಯಮ ಈ ಪ್ಯಾನ್ ಇಂಡಿಯಾ ಗಾಳಿಯಿಂದ ಚಡಪಡಿಸುತ್ತಿದೆ. ಯಾಕೆಂದರೆ ಬದಲಾದ ಈ ಕಾಲದಲ್ಲಿ ಯಶ್.. ಅಲ್ಲು ಅರ್ಜುನ್.. ಪ್ರಭಾಸ್.. ಜ್ಯೂ.ಎನ್.ಟಿ.ಆರ್.. ಹೀಗೆ ಸೌತ್ ಇಂಡಿಯಾದ ಅನೇಕ ಸ್ಟಾರ್‌ಗಳು ಹಿಂದಿ ಮಾರುಕಟ್ಟೆಯನ್ನು ಕಬ್ಜಾ ಮಾಡಿಕೊಳ್ಳುತ್ತಿದ್ದಾರೆ. ತಮ್ಮದೇ ಆದ ಅಭಿಮಾನಿ ಬಳಗವನ್ನು ಉತ್ತರ ಭಾರತದಲ್ಲಿ ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಕ್ಷಿಣದ ಈ ಸ್ಟಾರ್‌ಗಳ ಹಾವಳಿಯನ್ನು ಕಂಡು ಅಲ್ಲಿನವರ ಬುಡಕ್ಕೆ ಬೆಂಕಿ ಬಿದ್ದಿದೆ. ಹೀಗಾಗಿ ಕಂಗಾಲಾಗಿ ಕುಂತ ಬಾಲಿವುಡ್‌ಗೆ ಕಳೆದ ಕೆಲ ದಿನಗಳ ಹಿಂದೆಯಷ್ಟೇ ನಮ್ಮ ಕನ್ನಡದ ರಿಷಬ್ ಶೆಟ್ಟಿ ಶಾಕ್ ನೀಡಿದ್ದರು. ಈಗ ಧನುಷ್ ಸರದಿ.

ಹೌದು, ಎಲ್ಲರಿಗೆ ಗೊತ್ತಿರುವಂತೆ ''ಕಾಂತಾರ-ಚಾಪ್ಟರ್ 1'' ಚಿತ್ರದ ಮೂಲಕ ಹಿಂದಿ ನೆಲದಲ್ಲಿ ರಿಷಬ್ ಕೋಟ್ಯಂತರ ಹಣ ದೋಚಿದ್ದರು. ಅದರಲ್ಲಿಯೂ ''ಕಾಂತಾರ-ಚಾಪ್ಟರ್ 1'' ಸದ್ದು ಹಿಂದಿಯ ಪ್ರಖ್ಯಾತ ನಿರ್ಮಾಪಕ ಕರಣ್ ಜೋಹರ್ ನಿದ್ದೆಗೆಡಿಸಿತ್ತು. ''ಕಾಂತಾರ-1'' ಎದುರು ಬಂದಿದ್ದ ಕರಣ್ ಜೋಹರ್ ನಿರ್ಮಾಣದ ''ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ'' ಚಿತ್ರ ಮಕಾಡೆ ಮಲಗಿತ್ತು.
ಹೀಗಾಗಿ ನಿರಾಸೆಗೊಂಡಿದ್ದ ಕರಣ್ ಜೋಹರ್‌ಗೆ ಈಗ ಮತ್ತೊಂದು ಆಘಾತವಾಗಿದೆ. ಧನುಷ್ ಅಭಿನಯದ ''ತೇರೆ ಇಷ್ಕ್ ಮೇ'' ಚಿತ್ರ ಇದೇ ''ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ'' ಚಿತ್ರದ ಗಳಿಕೆಯನ್ನು ಹಿಂದಿಕ್ಕಿದೆ. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಧನುಷ್ ಅಭಿನಯದ ''ತೇರೆ ಇಷ್ಕ್ ಮೇ'' ₹ 66.91 ಕೋಟಿಯನ್ನು ಕೇವಲ ಐದು ದಿನದಲ್ಲಿ ಗಳಿಸಿದೆ.
ವಿಪರ್ಯಾಸ ಅಂದರೆ ವರುಣ್ ಧವನ್ ಅಂತಹ ಯಂಗ್ ಹೀರೋ ಇದ್ದರೂ.. ಕರಣ್ ಜೋಹರ್ ಅಂತಹ ದೈತ್ಯ ಮಾರ್ಕೆಟಿಂಗ್ ತಜ್ಞ ಇದ್ದರೂ ಕೂಡ ''ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ'' ಚಿತ್ರಕ್ಕೆ ಬಾಕ್ಸಾಫೀಸ್‌ನಲ್ಲಿ ₹ 60 ಕೋಟಿಯ ಗಡಿ ದಾಟಲು 44 ದಿನಗಳು ಬೇಕಾಗಿದ್ದವು. ''ಸ್ಯಾಕ್ನಿಲ್'' ಉಲ್ಲೇಖ ಮಾಡಿರುವಂತೆ ಅಂತಿಮವಾಗಿ ಈ ಚಿತ್ರ ₹ 61.85 ಕೋಟಿಯನ್ನಷ್ಟೇ ಗಳಿಸಿತ್ತು. ಈ ಗಳಿಕೆಯನ್ನು ಕೇವಲ ಐದೇ ದಿನದಲ್ಲಿ ಧನುಷ್ ಅಭಿನಯದ ''ತೇರೆ ಇಷ್ಕ್ ಮೇ'' ಚಿತ್ರ ಹಿಂದಿಕ್ಕಿದೆ. ಈ ಮೂಲಕ ಈ ವರ್ಷ ಭಾರತದಲ್ಲಿ ಅತೀ ಹೆಚ್ಚು ಹಣ ಗಳಿಸಿದ ಲವ್ ಸ್ಟೋರಿ ಚಿತ್ರಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ.

koimoi.com ಪ್ರಕಾರ ಈ ವರ್ಷ ಭಾರತದಲ್ಲಿ ಅತೀ ಹೆಚ್ಚು ಹಣ ಗಳಿಸಿದ ಲವ್ ಸ್ಟೋರಿ ಚಿತ್ರಗಳ ಪಟ್ಟಿ ಈ ಕೆಳಗಿನಂತೆ ಇದೆ.
1.ಸೈಯಾರ - ₹337.69 ಕೋಟಿ
2. ಏಕ್ ದಿವಾನೆ ಕಿ ದೀವಾನಿಯತ್ - ₹ 79 ಕೋಟಿ
3.ಭೂಲ್ ಚುಕ್ ಮಾಫ್ - ₹ 72.42 ಕೋಟಿ
4. ತೇರೆ ಇಷ್ಕ್ ಮೇ * - ₹66.91 ಕೋಟಿ *
5. ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ - ₹61.85 ಕೋಟಿ
6.ಮೆಟ್ರೋ ಇನ್ ದಿನೋ - ₹56.3 ಕೋಟಿ
7.ಪರಮ ಸುಂದರಿ - ₹54.85 ಕೋಟಿ
8.ಧಡಕ್ 2 - ₹24.24 ಕೋಟಿ
9.ಮೇರೆ ಹಸ್ಬೆಂಡ್ ಕಿ ಬೀವಿ - ₹12.25 ಕೋಟಿ
10.ಲವ್‌ಯಪ್ಪಾ - ₹7.69 ಕೋಟಿ
ಸದ್ಯ ''ತೇರೆ ಇಷ್ಕ್ ಮೇ'' ಚಿತ್ರದ ಎದುರು ರಾಜ್ ಕುಮಾರ್ ರಾವ್ ಅಭಿನಯದ ''ಭೂಲ್ ಚೂಕ್ ಮಾಫ್'' ಮತ್ತು ಹರ್ಷವರ್ಧನ್ ರಾಣೆ ಅಭಿನಯದ ''ಏಕ್ ದಿವಾನೆ ಕಿ ದೀವಾನಿಯತ್'' ಚಿತ್ರಗಳಿವೆ. ಬಾಕ್ಸಾಫೀಸ್ ಪಂಡಿತರ ಪ್ರಕಾರ ಇವೆರಡು ಚಿತ್ರಗಳ ದಾಖಲೆಯನ್ನು ''ತೇರೆ ಇಷ್ಕ್ ಮೇ'' ಅನಾಯಾಸವಾಗಿ ಮುರಿಯಲಿದೆ. ''ಸೈಯಾರ'' ಚಿತ್ರದ ಗಳಿಕೆಯನ್ನು ಈ ಚಿತ್ರ ಹಿಂದಿಕ್ಕುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











