Su From SO Day 10 Boxoffice: 2ನೇ ಭಾನುವಾರ ಅತಿ ಹೆಚ್ಚು ಕಲೆಕ್ಷನ್; 'ಸು ಫ್ರಂ ಸೋ' ಬಾಕ್ಸಾಫೀಸ್ ಲೆಕ್ಕ

ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ದಾಖಲೆ ಬರೆಯುತ್ತಾ 'ಸು ಫ್ರಂ ಸೋ' ಸಿನಿಮಾ ಜಯಭೇರಿ ಬಾರಿಸುತ್ತಿದೆ. 2ನೇ ಭಾನುವಾರ ಅಂದರೆ ಸಿನಿಮಾ ತೆರೆಕಂಡು 10ನೇ ದಿನವೂ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಲಕ್ಷಕ್ಕೂ ಅಧಿಕ ಟಿಕೆಟ್ ಬರೀ ಬುಕ್ ಮೈ ಶೋನಲ್ಲೇ ಬುಕ್ ಆಗಿದೆ. 2ನೇ ದಿನ ಅತಿಹೆಚ್ಚು ಕಲೆಕ್ಷನ್ ಮಾಡಿ ಕಾಮಿಡಿ ಎಂಟರ್‌ಟೈನರ್ ಸಿನಿಮಾ ದಾಖಲೆ ಬರೆದಿದೆ.

'ಮುಂಗಾರು ಮಳೆ', 'ಕಿರಿಕ್ ಪಾರ್ಟಿ' ಸಿನಿಮಾಗಳ ರೀತಿ 'ಸು ಫ್ರಂ ಸೋ' ಸೆನ್ಸೇಷನಲ್ ಹಿಟ್ ಆಗಿದೆ. ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚಿಸಿಕೊಂಡು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡ್ತಿದೆ. ಜೆ. ಪಿ ತುಮ್ಮಿನಾಡ್ ಮತ್ತವರ ತಂಡದ ಶ್ರಮಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿತ್ರಮಂದಿರಗಳಲ್ಲಿ ಸಿನಿಮಾ ನೋಡುವುದಕ್ಕೆ ಹಿಂದೇಟು ಹಾಕುವವರನ್ನು ಕೂಡ 'ಸು ಫ್ರಂ ಸೋ' ಸೆಳೆಯುತ್ತಿದೆ. ಮನೆಮಂದಿ ಎಲ್ಲಾ ಚಿತ್ರಮಂದಿರಗಳಿಗೆ ಹೋಗಿ ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ನೋಡಿದವರೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಫೇಸ್ಬುಲ್, ಇನ್‌ಸ್ಟಾಗ್ರಾಮ್‌, ಎಕ್ಸ್ ವೇದಿಕೆಯಲ್ಲಿ 'ಸು ಫ್ರಂ ಸೋ' ಟ್ರೆಂಡ್ ಆಗ್ತಿದೆ. ಅದೆಲ್ಲವರೂ ಪ್ರೇಕ್ಷಕರ ಸಂಖ್ಯೆ ಹೆಚ್ಚುಸುತ್ತಲೇ ಸಾಗಿದೆ.

Su From So Creates Box Office Storm 10th Day Collections and Record-Breaking Response

ಎರಡನೇ ಭಾನುವಾರ ಎಲ್ಲೆಡೆ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಂಡಿದೆ. ಟಿಕೆಟ್ ಸಿಗುತ್ತಿಲ್ಲ, ನಮ್ಮ ಊರಲ್ಲಿ ಸಿನಿಮಾ ಬಿಡುಗಡೆ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸುವವರು ಇದ್ದಾರೆ. ಸಿಂಗಲ್‌ ಸ್ಕ್ರೀನ್‌ ಥಿಯೇಟರ್‌ಗಳಲ್ಲಿ 'ಸು ಫ್ರಂ ಸೋ' ದರ್ಬಾರ್ ಜೋರಾಗಿದೆ. ಹಾಗಾಗಿ ಸಹಜವಾಗಿಯೇ ಸಿನಿಮಾ ಕಲೆಕ್ಷನ್ ದುಪ್ಪಟ್ಟಾಗಿದೆ.

10ನೇ ದಿನದ ಕಲೆಕ್ಷನ್

ಅಧಿಕೃತವಾಗಿ ಸಿನಿಮಾ ಕಲೆಕ್ಷನ್ ಬಗ್ಗೆ ಚಿತ್ರತಂಡ ಮಾಹಿತಿ ಕೊಟ್ಟಿಲ್ಲ. ಭಾರತದಲ್ಲಿ ಸಿನಿಮಾ 10 ದಿನಕ್ಕೆ 35.60 ನೆಟ್ ಕಲೆಕ್ಷನ್ ಮಾಡಿರುವುದಾಗಿ sacnilk.com ವೆಬ್‌ಸೈಟ್ ವರದಿ ಮಾಡಿದೆ. ನಿನ್ನೆ(ಆಗಸ್ಟ್ 3) ಒಂದೇ ದಿನ 6.25 ಕೋಟಿ ರೂ. ಕೊಳ್ಳೆ ಹೊಡೆದಿದೆ. 10 ದಿನಗಳಲ್ಲಿ ಒಂದೇ ದಿನ ಸಿನಿಮಾ ಗಳಿಸಿದ ಅತಿಹೆಚ್ಚು ಕಲೆಕ್ಷನ್ ಇದು.

ಬುಕ್‌ಮೈ ಶೋ ದಾಖಲೆ

ಮೊದಲಿನಿಂದಲೂ 'ಸು ಫ್ರಂ ಸೋ' ಆನ್ಲೈನ್‌ ಬುಕ್ಕಿಂಗ್‌ಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. 9 ದಿನಕ್ಕೆ 1.1 ಮಿಲಿಯನ್ ಟಿಕೆಟ್ ಆನ್ಲೈನ್‌ನಲ್ಲಿ ಬುಕ್ ಆಗಿರುವ ಬಗ್ಗೆ ರಾಜ್ ಬಿ. ಶೆಟ್ಟಿ ಮಾಹಿತಿ ನೀಡಿದ್ದರು. ಒಂದು ಟಿಕೆಟ್‌ಗೆ ಸರಾಸರಿ 200 ರೂ. ಅಂದುಕೊಂಡರೂ 22 ಕೋಟಿ ರೂ. ಬರೀ ಬುಕ್‌ಮೈ ಶೋನಲ್ಲೇ ಬಂದಂತಾಗಿದೆ. ಇನ್ನು 2ನೇ ಭಾನುವಾರ ಅಂದರೆ 10ನೇ ದಿನ 1 ಲಕ್ಷದ 14 ಸಾವಿರ ಟಿಕೆಟ್ ಬುಕ್ ಆಗಿದೆ. ಇದು ಕೂಡ ದಾಖಲೆಯೇ ಸರಿ.

Su From So Creates Box Office Storm 10th Day Collections and Record-Breaking Response

ಮಲಯಾಳಂ ಪ್ರೇಕ್ಷಕರು ಫಿದಾ

ಈಗಾಗಲೇ ಕನ್ನಡದಲ್ಲೇ ದೇಶ ವಿದೇಶಗಳಲ್ಲಿ 'ಸು ಫ್ರಂ ಸೋ' ಸಿನಿಮಾ ಬಿಡುಗಡೆಯಾಗಿದೆ. ಇನ್ನು ಮಲಯಾಳಂ ಭಾಷೆಗೆ ಡಬ್ ಆಗಿ ಕೇರಳ ಸೇರಿದಂತೆ ಕೆಲವೆಡೆ ಸಿನಿಮಾ ಪ್ರದರ್ಶನ ಆರಂಭಿಸಿದೆ. ದೇವರ ನಾಡಲ್ಲಿ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ತಿದೆ. ಕನ್ನಡಿಗರು ರವಿಯಣ್ಣನ ಕಹಾನಿ ನೋಡಿ ಬಿದ್ದು ಬಿದ್ದು ನಗುತ್ತಿರುವಂತೆ ಮಲಯಾಳಂ ಪ್ರೇಕ್ಷಕರು ಎಂಜಾಯ್ ಮಾಡ್ತಿದ್ದಾರೆ.

ತೆಲುಗಿಗೆ ಡಬ್ ಆಗಿ ರಿಲೀಸ್

ಈಗಾಗಲೇ ತೆಲುಗು ಭಾಷೆಗೂ ಸಿನಿಮಾ ಡಬ್ ಆಗಿ ರಿಲೀಸ್ ಆಗಲು ಸಜ್ಜಾಗಿದೆ. ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ರೈಟ್ಸ್ ಕೊಂಡುಕೊಂಡಿದೆ. ಈಗಾಗಲೇ ಡಬ್ಬಿಂಗ್ ಕೆಲಸಗಳು ಆರಂಭವಾಗಿದ್ದು ಈ ಶುಕ್ರವಾರ(ಆಗಸ್ಟ್ 08)ವೇ ಸಿನಿಮಾ ತೆಲುಗಿನಲ್ಲಿ ಬಿಡುಗಡೆಯಾಗುತ್ತಿದೆ. ಈ ಹಿಂದೆ 'ಕಾಂತಾರ' ಚಿತ್ರವನ್ನು ಇದೇ ರೀತಿ ಮುಗಿಬಿದ್ದು ಪರಭಾಷಿಕರು ಡಬ್ ಮಾಡಿ ನೋಡಿದ್ದರು. ಅದೇ ಹಾದಿಯಲ್ಲಿ 'ಸು ಫ್ರಂ ಸೋ' ಸದ್ದು ಮಾಡ್ತಿದೆ.

More from Filmibeat

English summary
Kannada movie ‘Su From So’ continues its blockbuster run with houseful shows, record 10th-day collection
Read more about: raj b shetty sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X