ಕನ್ನಡದ ಸು ಫ್ರಮ್ ಸೋ ಮರಾಠಿಯಲ್ಲಿಯೂ ಬ್ಲಾಕ್ ಬಸ್ಟರ್ ; ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ ತುಂಬಾಡ್ಚಿ ಮಂಜುಳಾ

ಹೇಳಿ ಕೇಳಿ ಇದು ''ಪ್ಯಾನ್ ಇಂಡಿಯಾ'' ಕಾಲ. ಭಾಷೆಯ ಭೇದ ಭಾವ ಇಲ್ಲದೇ ಎಲ್ಲರು ಎಲ್ಲ ಭಾಷೆಯ ಚಿತ್ರಗಳನ್ನು ಅವರ ಅವರ ಭಾಷೆಯಲ್ಲಿಯೇ ನೋಡುತ್ತಿದ್ದಾರೆ. ಇಂತಹ ಕಾಲದಲ್ಲಿ ರಿಮೇಕ್ ಚಿತ್ರಗಳಿಗೆ ಬೆಲೆ ಇಲ್ಲ. ಒಂದು ವೇಳೆ ಮಾಡಿದರೂ ಕೂಡ ಪ್ರೇಕ್ಷಕರು ಆ ಚಿತ್ರವನ್ನು ನೋಡುವ ಮನಸು ಮಾಡುವುದಿಲ್ಲ.

ಇದಕ್ಕೆ ಕೈಗನ್ನಡಿ ಎಂಬಂತೆ ಕಳೆದೊಂದು ಎರಡು ವರ್ಷದಲ್ಲಿ ಕೆಲ ಚಿತ್ರಗಳು ರಿಮೇಕ್ ಆಗಿವೆ. ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿವೆ. ಆದರೂ ಕೂಡ ಕೆಲವರು ಇನ್ನು ಈ ವಿಚಾರವನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ರಿಮೇಕ್ ಚಿತ್ರಗಳನ್ನು ನೋಡುವ ಒಂದು ವರ್ಗ ಇವತ್ತು ಇದೆ ಎನ್ನುವ ವಾದವನ್ನು ಮಾಡುತ್ತಲೇ ರೀಲ್‌ಗಳನ್ನು ಸುತ್ತುತ್ತಿದ್ದಾರೆ. ಅಚ್ಚರಿ ಮತ್ತು ವಿಶೇಷ ಅಂದರೆ ಚಿತ್ರರಂಗದ ಖ್ಯಾತ ವಿಶ್ಲೇಷಕರೇ ಬೆರಗಾಗುವಂತೆ, ರಿಮೇಕ್ ಆದರೂ ಕೂಡ ಅಲ್ಲೊಂದು ಇಲ್ಲೊಂದು ಸಿನಿಮಾಗಳು ಪವಾಡಗಳನ್ನು ಮಾಡುತ್ತಾವೆ. ಉದಾಹರಣೆಗೆ ''ತುಂಬಾಡ್ಚಿ ಮಂಜುಳಾ''.

Su From So Remake Tumbadchi Manjula Becomes 2026 s 4th Highest Marathi Grosser

ಹೌದು,''ತುಂಬಾಡ್ಚಿ ಮಂಜುಳಾ''.. ನಮ್ಮ ಕನ್ನಡದ ಬ್ಲಾಕ್ ಬಸ್ಟರ್ ''ಸು ಫ್ರಂ ಸೋ'' ಚಿತ್ರದ ಯಥಾವತ್ತು ಮರಾಠಿ ನಕಲು. ಕಳೆದ ಜೂನ್ 4ರಂದು ಬಿಡುಗಡೆಯಾದ ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಅಕ್ಷರಶಃ ಧೂಳೆಬ್ಬಿಸುತ್ತಿದೆ. ''ಸ್ಯಾಕ್ನಿಲ್'' ವರದಿಯ ಪ್ರಕಾರ ಕೇವಲ ಹನ್ನೊಂದೇ ದಿನದಲ್ಲಿ ₹10.18 ಕೋಟಿಯನ್ನು ಕೊಳ್ಳೆ ಹೊಡೆದಿದೆ.

ವಿಶೇಷ ಅಂದರೆ ''ತುಂಬಾಡ್ಚಿ ಮಂಜುಳಾ'' ಚಿತ್ರದ ಗಳಿಕೆ ಮೊದಲ ವಾರಕ್ಕಿಂತ ಎರಡನೇ ವಾರ ಹೆಚ್ಚಾಗಿದೆ. ಮೊದಲ ವಾರ ಕೇವಲ ಒಮ್ಮೆ ಮಾತ್ರ ಒಂದು ಕೋಟಿಯ ಗಡಿ ದಾಟಿದ್ದ ಈ ಚಿತ್ರ ಎರಡನೇ ವಾರ ಅಂದರೆ ಒಂಬತ್ತು ಮತ್ತು ಹತ್ತನೇ ದಿನ 1 ಕೋಟಿಗೂ ಅಧಿಕ ಹಣ ದೋಚಿದೆ. ಪ್ರೇಕ್ಷಕರ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದಕ್ಕೆ ಕೈಗನ್ನಡಿಯೇ ಈ ಕೆಳಗಿನ ಅಂಕಿ ಅಂಶಗಳು.

ಸ್ಯಾಕ್ನಿಲ್ ಪ್ರಕಾರ ''ತುಂಬಾಡ್ಚಿ ಮಂಜುಳಾ'' ಚಿತ್ರದ 11ದಿನದ ಗಳಿಕೆ ಈ ಕೆಳಗಿನಂತೆ ಇದೆ

ದಿನ ನಿವ್ವಳ ಗಳಿಕೆ (Net Collection)
ಮೊದಲನೇ ದಿನ (ಶುಕ್ರವಾರ) ₹54 ಲಕ್ಷ
ಎರಡನೇ ದಿನ (ಶನಿವಾರ) ₹98 ಲಕ್ಷ
ಮೂರನೇ ದಿನ (ಭಾನುವಾರ) ₹1 ಕೋಟಿ 73 ಲಕ್ಷ
ನಾಲ್ಕನೇ ದಿನ (ಸೋಮವಾರ) ₹70 ಲಕ್ಷ
ಐದನೇ ದಿನ (ಮಂಗಳವಾರ) ₹75 ಲಕ್ಷ
ಆರನೇ ದಿನ (ಬುಧವಾರ) ₹60 ಲಕ್ಷ
ಏಳನೇ ದಿನ (ಗುರುವಾರ) ₹55 ಲಕ್ಷ
ಮೊದಲ ವಾರದ ಒಟ್ಟು ಗಳಿಕೆ ₹5 ಕೋಟಿ 85 ಲಕ್ಷ
ಎಂಟನೇ ದಿನ (ಶುಕ್ರವಾರ) ₹60 ಲಕ್ಷ
ಒಂಬತ್ತನೇ ದಿನ (ಶನಿವಾರ) ₹1 ಕೋಟಿ 40 ಲಕ್ಷ
ಹತ್ತನೇ ದಿನ (ಭಾನುವಾರ) ₹1 ಕೋಟಿ 73 ಲಕ್ಷ
ಹನ್ನೊಂದನೇ ದಿನ (ಸೋಮವಾರ) ₹60 ಲಕ್ಷ
ಒಟ್ಟು ಮೊತ್ತದ ಕಲೆಕ್ಷನ್ ₹10 ಕೋಟಿ 18 ಲಕ್ಷ

ಹೀಗೆ ಹನ್ನೊಂದು ದಿನದಲ್ಲಿ ₹10 ಕೋಟಿ + ಹಣ ಗಳಿಸಿರುವ ''ತುಂಬಾಡ್ಚಿ ಮಂಜುಳಾ'' ಚಿತ್ರದ ಗಳಿಕೆ ಈ ವಾರಾಂತ್ಯದಲ್ಲಿ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ. ಮರಾಠಿ ಚಿತ್ರರಂಗದ ಪಂಡಿತರ ಪ್ರಕಾರ ₹25 ಕೋಟಿಯನ್ನಂತೂ ಈ ಚಿತ್ರ ಅನಾಯಾಸವಾಗಿ ಗಳಿಸಲಿದೆ. ಚಿತ್ರದ ಈ ಯಶಸ್ಸು ಸದ್ಯ ಮರಾಠಿ ಚಿತ್ರರಂಗದ ಹುರುಪನ್ನು ಇನ್ನೂ ಹೆಚ್ಚಿಸಿದೆ.

su-from-so-remake-tumbadchi-manjula-becomes-2026-s-4th-highest-marathi-grosser

TV9 ಮರಾಠಿಯ ಪ್ರಕಾರ ಚಿತ್ರಕ್ಕೆ 6 ಕೋಟಿಯನ್ನು ಹೂಡಲಾಗಿದ್ದು, ಚಿತ್ರ ಈಗಾಗಲೇ ನಿರ್ಮಾಪಕರಿಗೆ ಲಾಭವನ್ನು ತಂದು ಕೊಟ್ಟಿದೆ. ಬಜೆಟ್ ಮತ್ತು ಲಾಭದ ಲೆಕ್ಕಾಚಾರ ಕೆಳಗಿನಂತಿದೆ.

ವಿವರಗಳು ಮೊತ್ತ / ಶೇಕಡಾವಾರು
ಚಿತ್ರದ ಬಜೆಟ್ (Budget) ₹6 ಕೋಟಿ
ಒಟ್ಟು ನಿವ್ವಳ ಗಳಿಕೆ (Net Collection) ₹10 ಕೋಟಿ 18 ಲಕ್ಷ
ಬಜೆಟ್ ರಿಕವರಿ (% Recovered) 169.6%
ನಿವ್ವಳ ಲಾಭ (+ Profit) + ₹4 ಕೋಟಿ 18 ಲಕ್ಷ

ಇನ್ನು ಈ ವರ್ಷ ಮರಾಠಿ ಚಿತ್ರರಂಗದಲ್ಲಿ ಉತ್ತಮ ಮಳೆ ಮತ್ತು ಬೆಳೆಯಾಗದಿದ್ದರೂ ಕೂಡ ಕೆಲ ಚಿತ್ರಗಳು ನಿರೀಕ್ಷೆಯನ್ನು ಮೀರಿ ಹಣವನ್ನು ದೋಚಿವೆ.ಈ ಸಾಲಿನಲ್ಲಿ ''ತುಂಬಾಡ್ಚಿ ಮಂಜುಳಾ'' ನಾಲ್ಕನೇ ಸ್ಥಾನಕ್ಕೇರಿದ್ದು ಈ ವರ್ಷ ಅತೀ ಹೆಚ್ಚು ಹಣ ಗಳಿಸಿದ ಮರಾಠಿ ಚಿತ್ರಗಳ ಟಾಪ್ 5 ಚಿತ್ರಗಳ ಪಟ್ಟಿ ಈ ಕೆಳಗಿನಂತೆ ಇದೆ.

ಸ್ಥಾನ ಸಿನಿಮಾ ಹೆಸರು ನಿವ್ವಳ ಗಳಿಕೆ
1 ರಾಜಾ ಶಿವಾಜಿ ₹105 ಕೋಟಿ 68 ಲಕ್ಷ
2 ದೇವೂಳ್ ಬಂದ್ 2 ₹68 ಕೋಟಿ 22 ಲಕ್ಷ
3 ಕ್ರಾಂತಿಜ್ಯೋತಿ ವಿದ್ಯಾಲಯ ಮರಾಠಿ ಮಾಧ್ಯಮ ₹28 ಕೋಟಿ
4 ತುಂಬಾಡ್ಚಿ ಮಂಜುಳಾ (11 ದಿನಗಳು) * ₹10 ಕೋಟಿ 18 ಲಕ್ಷ
5 ಅಗಾ ಅಗಾ ಸುನ್‌ಬಾಯಿ! ಕೇ ಮ್ಹಂತಾಯ್ ಸಾಸುಬಾಯಿ? ₹8 ಕೋಟಿ 97 ಲಕ್ಷ

ಒಟ್ನಲ್ಲಿ ಕನ್ನಡದ ''ಸು ಫ್ರಮ್ ಸೋ'' ಕಥೆ ಮರಾಠಿಯಲ್ಲಿ ಬ್ಲಾಕ್ ಬಸ್ಟರ್ ಆಗಿದೆ. ಮರಾಠಿಗರು ಸದ್ಯ ''ತುಂಬಾಡ್ಚಿ ಮಂಜುಳಾ'' ಚಿತ್ರವನ್ನು ಮುಗಿ ಬಿದ್ದು ನೋಡುತ್ತಿದ್ಧಾರೆ. ಸದ್ಯ ಈ ವರ್ಷ ಅತಿ ಹೆಚ್ಚು ಹಣ ಗಳಿಸಿದ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ''ಕ್ರಾಂತಿಜ್ಯೋತಿ ವಿದ್ಯಾಲಯ ಮರಾಠಿ ಮಾಧ್ಯಮ'' ಚಿತ್ರವನ್ನು ''ತುಂಬಾಡ್ಚಿ ಮಂಜುಳಾ'' ಹಿಂದಿಕ್ಕುತ್ತಾ..? ಎನ್ನುವುದನ್ನು ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

English summary
See how Tumbadchi Manjula (the Marathi remake of Su From So) just made history on Day 10 by entering the top 4 highest-grossing Marathi films of 2026!
Read more about: remake bollywood raj b shetty
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X