Devil vs Mark Boxoffice: 25 ದಿನಕ್ಕೆ 'ಮಾರ್ಕ್' ಹಾಗೂ 'ಡೆವಿಲ್' ಚಿತ್ರಗಳ ಕಲೆಕ್ಷನ್ ಎಷ್ಟು?

ಕಿಚ್ಚ ಸುದೀಪ್ ನಟನೆಯ 'ಮಾರ್ಕ್' ಸಿನಿಮಾ 25 ದಿನ ಪೂರೈಸಿ ಮುನ್ನುಗ್ಗುತ್ತಿದೆ. ಶೀಘ್ರದಲ್ಲೇ ಓಟಿಟಿಗೆ ಬರಲಿದೆ. ಮತ್ತೊಂದು ಕಡೆ 'ಡೆವಿಲ್' ಸಿನಿಮಾ 6ನೇ ವಾರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಎರಡೂ ಸಿನಿಮಾಗಳು ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿ ಆಗಿವೆ. 'ಮಾರ್ಕ್' ಚಿತ್ರ ಬಾಕ್ಸಾಫೀಸ್‌ನಲ್ಲಿ ಹೆಚ್ಚು ಸದ್ದು ಮಾಡ್ತಿದೆ.

ಡಿಸೆಂಬರ್ 11ರಂದು ದರ್ಶನ್ ನಟನೆಯ 'ಡೆವಿಲ್' ಸಿನಿಮಾ ತೆರೆಗಪ್ಪಳಿಸಿತ್ತು. ದರ್ಶನ್ ಅನುಪಸ್ಥಿತಿಯಲ್ಲಿ ದೊಡ್ಡಮಟ್ಟದಲ್ಲಿ ಚಿತ್ರವನ್ನು ಅಭಿಮಾನಿಗಳು ಸ್ವಾಗತಿಸಿದ್ದರು. ಮಾಸ್ ಆಕ್ಷನ್ ಎಂಟರ್‌ಟೈನರ್ ಅಭಿಮಾನಿಗಳ ಮನ ಗೆದ್ದಿತ್ತು. ಇನ್ನುಳಿದಂತೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಆದರೂ ಬಾಕ್ಸಾಫೀಸ್‌ನಲ್ಲಿ ಸಿನಿಮಾ ಸದ್ದು ಮಾಡಿತ್ತು. 2 ವಾರಗಳ ಬಳಿಕ 'ಮಾರ್ಕ್' ಹಾಗೂ '45' ಚಿತ್ರಗಳು ಬಿಡುಗಡೆ ಆಗಿದ್ದು ಗೊತ್ತೇಯಿದೆ.

Sudeep s Mark Takes the Lead as Darshan s Devil Continues Strong Box Office Run

ಈ ಎರಡೂ ಸಿನಿಮಾಗಳು ತೆರೆಗೆ ಬಂದ ಬಳಿಕ 'ಡೆವಿಲ್' ಆರ್ಭಟ ಕಮ್ಮಿ ಆಗಿತ್ತು. ಆದರೂ ಸಿನಿಮಾ ಯಶಸ್ವಿ ಪ್ರದರ್ಶನ ಮುಂದುವರೆಸಿದೆ. ಇನ್ನು ಓಟಿಟಿ ರಿಲೀಸ್ ಬಗ್ಗೆ ಅಪ್‌ಡೇಟ್ ಸಿಕ್ಕಿಲ್ಲ. 25 ದಿನಕ್ಕೆ ಸಿನಿಮಾ 48 ಕೋಟಿ ರೂ. ಕಲೆಕ್ಷನ್ ಮಾಡಿ ನಿರ್ಮಾಪಕರಿಗೆ 30 ಕೋಟಿ ರೂ. ಹಣ ತಂದುಕೊಟ್ಟಿದೆ ಎಂದು ಹೇಳಲಾಗುತ್ತಿದೆ. ಮತ್ತೊಂದು ಕಡೆ ಸುದೀಪ್ ನಟನೆಯ 'ಮಾರ್ಕ್' ಸಿನಿಮಾ ಎರಡು ವಾರಕ್ಕೆ 50 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಚರ್ಚೆ ನಡೆಯುತ್ತಿದೆ. ಎರಡೂ ಸಿನಿಮಾಗಳ ಕಲೆಕ್ಷನ್ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಸಿಕ್ಕಿಲ್ಲ.

'ಮಾರ್ಕ್‌' ಸಿನಿಮಾ 14 ದಿನಗಳಲ್ಲಿ 32 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿರುವುದಾಗಿ sacnilk.com ವರದಿ ಮಾಡಿದೆ. ಅದೇ ರೀತಿ 'ಡೆವಿಲ್' ಸಿನಿಮಾ ಒಟ್ಟಾರೆ 30 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದ್ದಾಗಿ sacnilk.com ಮಾಹಿತಿ ಹಂಚಿಕೊಂಡಿದೆ. ಆ ಮೂಲಕ ಒಟ್ಟಾರೆ 'ಮಾರ್ಕ್' ಕೈ ಮೇಲಾದಂತೆ ಆಗಿದೆ. ದರ್ಶನ್ ಅನುಪಸ್ಥಿತಿಯಲ್ಲಿ ಕೂಡ 'ಡೆವಿಲ್' ಚಿತ್ರದ ಕಲೆಕ್ಷನ್ ಜೋರಾಗಿದೆ ಎನ್ನಬಹುದು.

ಜನವರಿ 23ರಂದು ಜಿಯೋ ಹಾಟ್‌ಸ್ಟರ್‌ನಲ್ಲಿ 'ಮಾರ್ಕ್' ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಅದೇ ದಿನ ಅರ್ಜುನ್ ಜನ್ಯಾ ನಿರ್ದೇಶನದ '45' ಸಿನಿಮಾ ಜೀ-5ಗೆ ಬರಲಿದೆ. ಆದರೆ 'ಡೆವಿಲ್' ಸಿನಿಮಾ ಓಟಿಟಿಗೆ ರಿಲೀಸ್ ಬಗ್ಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ. ಇನ್ನು ರೈಟ್ಸ್ ಮಾರಾಟ ಆಗಿಲ್ಲ ಎನ್ನುವ ಊಹಾಪೋಹ ಶುರುವಾಗಿದೆ.

ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ್ದಾರೆ. ಹಾಗಾಗಿ ಪತ್ನಿ ವಿಜಯಲಕ್ಷ್ಮಿ 'ಡೆವಿಲ್' ಚಿತ್ರದ ಬೆಂಬಲಕ್ಕೆ ನಿಂತಿದ್ದರು. ಸಿನಿಮಾ ಪ್ರಚಾರ ಮಾಡಿದ್ದರು. ಕೆಲ ಜಿಲ್ಲೆಗಳಿಗೆ ವಿಜಯಯಾತ್ರೆ ತೆರಳಿ ಸಿನಿಮಾ ಗೆಲ್ಲಿಸಿದ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದ್ದರು. ಇನ್ನು ಮೂರು ಚಿತ್ರಗಳಿಗೆ ಪೈರಸಿ ಸಮಸ್ಯೆ ಎದುರಾಗಿತ್ತು. ಅದನ್ನು ತಡೆಯಲು ಶತಪ್ರಯತ್ನ ನಡೆಸಲಾಗಿತ್ತು. ಸಾವಿರಾರು ಪೈರಸಿ ಲಿಂಕ್ ಡಿಲೀಟ್ ಮಾಡಿದ್ದರು.

ಬುಕ್‌ಮೈಶೋನಲ್ಲಿ ನೆಗೆಟಿವ್ ರಿವ್ಯೂ, ರೇಟಿಂಗ್ ಕೊಡಬಾರದು ಎಂದು ಅದನ್ನು ತಡೆಯಲಾಗಿತ್ತು. ಅದಕ್ಕಾಗಿ ನ್ಯಾಯಾಲಯದಿಂದ ಆದೇಶ ತಂದಿತ್ತು 'ಡೆವಿಲ್' ಚಿತ್ರತಂಡ. ಮುಂದೆ 'ಮಾರ್ಕ್' ಹಾಗೂ '45' ಚಿತ್ರತಂಡಗಳು ಇದನ್ನು ಅನುಸರಿಸಿದ್ದರು. ಅಷ್ಟೇ ಅಲ್ಲ ತೆಲುಗಿನಲ್ಲಿ ಕೂಡ ಈ ಟ್ರೆಂಡ್ ಶುರುವಾಗಿದೆ. ಚಿರಂಜೀವಿ ಹಾಗೂ ನಯನತಾರ ನಟನೆಯ 'ಮನ ಶಂಕರವರಪ್ರಸಾದ್ ಗಾರು' ಚಿತ್ರಕ್ಕೆ ಬುಕ್‌ಮೈಶೋನಲ್ಲಿ ರಿವ್ಯೂ, ರೇಟಿಂಗ್ ಕೊಡದಂತೆ ಮಾಡಲಾಗಿದೆ.

ಒಟ್ಟಾರೆ ಡಿಸೆಂಬರ್ ಬಾಕ್ಸಾಫೀಸ್ ಕದನದಲ್ಲಿ 'ಮಾರ್ಕ್' ಹಾಗೂ 'ಡೆವಿಲ್' ಚಿತ್ರಗಳು ಗೆದ್ದಿವೆ. ಆದರೆ '45' ಚಿತ್ರಕ್ಕೆ ಹಿನ್ನಡೆ ಆಗಿದೆ. ಈ ವರ್ಷ ಯಾವೆಲ್ಲಾ ಕನ್ನಡ ಸಿನಿಮಾಗಳು ಪ್ರೇಕ್ಷಕರ ಮುಂದೆ ಬಂದು ಸದ್ದು ಮಾಡುತ್ತವೆ ಕಾದು ನೋಡಬೇಕು.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

Read more about: boxoffice report
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X