Karuppu Box Office Day 9 ; ಬಾಕ್ಸಾಫೀಸ್‌ನಲ್ಲಿ ಕರುಪ್ಪು ಅಬ್ಬರ , ಐತಿಹಾಸಿಕ ದಾಖಲೆಯತ್ತ ಸೂರ್ಯ ದಾಪುಗಾಲು
ಯಾವುದೇ ಚಿತ್ರವಾದರು ಕೂಡ ಬಿಡುಗಡೆಯಾದ ನಂತರ ಚಿತ್ರಮಂದಿರ ತುಂಬಬೇಕು, ಚಿತ್ರ ಗೆಲ್ಲಬೇಕೆಂದರೆ ಯುವ ಸಮೂಹ ಚಿತ್ರಮಂದಿರಕ್ಕೆ ಬರಬೇಕು. ಮನೆ ಮಂದಿಯೆಲ್ಲ ಜೊತೆಯಾಗಿ ಬಂದು ಚಿತ್ರವನ್ನು ನೋಡಬೇಕು. ಆಗಲೇ ಆ ಚಿತ್ರ ಗೆಲ್ಲಲು ಸಾಧ್ಯ. ಬಾಕ್ಸಾಫೀಸ್‌ನಲ್ಲಿ ಹಣದ ಹೊಳೆ ಹರಿಯಲು ಸಾಧ್ಯ. ಆದರೆ ಈಗೀಗ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗುತ್ತಿದೆ.
ಅಂಗೈಯಲ್ಲಿಯೇ ಮನರಂಜನೆ ಇರುವಾಗ ಚಿತ್ರಮಂದಿರಕ್ಕೆ ಯಾಕೆ ಹೋಗಬೇಕೆನ್ನುವುದು ಅನೇಕರ ವಾದ. ಹಾಗಂಥ.. ಎಲ್ಲ ಚಿತ್ರವನ್ನು ಎಲ್ಲರೂ ಓಟಿಟಿಯಲ್ಲಿ ನೋಡುವುದಿಲ್ಲ. ಅಲ್ಲೊಂದು.. ಇಲ್ಲೊಂದು.. ಚಿತ್ರಗಳು ಪ್ರೇಕ್ಷಕರನ್ನು ಸೆಳೆಯುತ್ತವೆ. ಬಾಕ್ಸಾಫೀಸ್‌ನಲ್ಲಿ ಹಣವನ್ನು ಕೂಡ ಗಳಿಸುತ್ತವೆ. ಇದಕ್ಕೆ ಸದ್ಯ ಸೂರ್ಯ ಅಭಿನಯದ ''ಕರುಪ್ಪು'' ಅತ್ಯುತ್ತಮ ಉದಾಹರಣೆ.

ಹೌದು, ''ಕರುಪ್ಪು''.. ಕಳೆದ ಮೇ 15ರಂದು ಬಿಡುಗಡೆಯಾದ ಸಿನಿಮಾ. ಹಲವಾರು ಅಡೆ ತಡೆಯ ನಡುವೆ ಬಿಡುಗಡೆಯಾದ ''ಕರುಪ್ಪು'' ಸದ್ಯ ಬಾಕ್ಸಾಫೀಸ್‌ನಲ್ಲಿ ಕಮಾಲ್ ಮಾಡುತ್ತಿದೆ. ಬಿಡುಗಡೆಯಾಗಿ 9 ದಿನವಾದರೂ ಕೂಡ ಈ ಚಿತ್ರದ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ.
ಇದಕ್ಕೆ ಕೈಗನ್ನಡಿ ಎಂಬಂತೆ ಚಿತ್ರದ ಗಳಿಕೆಯಲ್ಲಿ ನಿನ್ನೆ (ಮೇ 23) 54 % ಏರಿಕೆ ಕಂಡು ಬಂದಿದೆ. ಕೇವಲ ಭಾರತದಲ್ಲಿ ₹12.20 ಕೋಟಿಯನ್ನು ದೋಚಿದೆ. ಈ ಮೂಲಕ 9 ದಿನದಲ್ಲಿ ₹133.85 ಕೋಟಿಯನ್ನು ಕೊಳ್ಳೆ ಹೊಡೆದಿದೆ ಎಂದು ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ಸ್ಯಾಕ್ನಿಲ್ ವರದಿ ಮಾಡಿದೆ.
ಸ್ಯಾಕ್ನಿಲ್ ಪ್ರಕಾರ ''ಕರುಪ್ಪು'' ಚಿತ್ರದ 9 ದಿನದ ಗಳಿಕೆ ಈ ಕೆಳಗಿನಂತೆ ಇದೆ
| ದಿನ | ಭಾರತದ ಒಟ್ಟು ನೆಟ್ ಗಳಿಕೆ (India Net) |
|---|---|
| ಮೊದಲನೇ ದಿನ (ಶುಕ್ರವಾರ) | ₹15.50 ಕೋಟಿ |
| ಎರಡನೇ ದಿನ (ಶನಿವಾರ) | ₹24.15 ಕೋಟಿ |
| ಮೂರನೇ ದಿನ (ಭಾನುವಾರ) | ₹28.35 ಕೋಟಿ |
| ನಾಲ್ಕನೇ ದಿನ (ಸೋಮವಾರ) | ₹14.30 ಕೋಟಿ |
| ಐದನೇ ದಿನ (ಮಂಗಳವಾರ) | ₹12.75 ಕೋಟಿ |
| ಆರನೇ ದಿನ (ಬುಧವಾರ) | ₹10.70 ಕೋಟಿ |
| ಏಳನೇ ದಿನ (ಗುರುವಾರ) | ₹8.10 ಕೋಟಿ |
| ಮೊದಲ ವಾರದ ಒಟ್ಟು ಗಳಿಕೆ (Week 1) | ₹113.85 ಕೋಟಿ |
| ಎಂಟನೇ ದಿನ (ಶುಕ್ರವಾರ) | ₹7.80 ಕೋಟಿ |
| ಒಂಬತ್ತನೇ ದಿನ (ಶನಿವಾರ) | ₹12.20 ಕೋಟಿ |
| ಒಟ್ಟಾರೆ ಒಟ್ಟು ಭಾರತದ ನೆಟ್ ಗಳಿಕೆ | ₹133.85 ಕೋಟಿ |
ಕರ್ನಾಟಕದಲ್ಲಿ ಗಳಿಸಿದ್ದೆಷ್ಟು ''ಕರುಪ್ಪು'' ?
''ಕರುಪ್ಪು'' ಚಿತ್ರಕ್ಕೆ ಕರುನಾಡಿನಲ್ಲಿ ಕೂಡ ಉತ್ತಮವಾದ ಪ್ರತಿಕ್ರಿಯೆ ಸಿಕ್ಕಿದೆ. ಬಿಡುಗಡೆಯಾದ ದಿನದಿಂದ ಪ್ರೇಕ್ಷಕರನ್ನು ಸೆಳೆಯುತ್ತ ಬಂದಿರುವ ಕರುಪ್ಪು ಮೊನ್ನೆ ಅಂದರೆ ಶುಕ್ರವಾರ ( ಮೇ 22) ಕರ್ನಾಟಕದಲ್ಲಿ 75 ಲಕ್ಷ ಗಳಿಸಿತ್ತು. ನಿನ್ನೆ ( ಮೇ 23) ಈ ಗಳಿಕೆ ಬಹುತೇಕ ದುಪ್ಪಟ್ಟಾಗಿದ್ದು ₹1.60 ಕೋಟಿಯನ್ನು ಕೇವಲ ಕರ್ನಾಟಕದಲ್ಲಿ ''ಕರುಪ್ಪು'' ಗಳಿಸಿದೆ ಎಂದು ಬಾಕ್ಸಾಫೀಸ್‌ನ ಅಂಕಿ ಅಂಶ ಹಂಚಿಕೊಳ್ಳುವ ''ಸ್ಯಾಕ್ನಿಲ್'' ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ. ಕೇರಳದಲ್ಲಿ ₹41 ಲಕ್ಷವನ್ನು ಈ ಚಿತ್ರ ನಿನ್ನೆ (ಮೇ 23) ಗಳಿಸಿದೆ.

ವರ್ಲ್ಡ್ ವೈಡ್ ಗಳಿಕೆ ಎಷ್ಟು ?
ಇನ್ನೂ ವರ್ಲ್ಡ್‌ವೈಡ್ ಗಳಿಕೆಯ ಲೆಕ್ಕ ಹಾಕಿದರೆ ''ಸ್ಯಾಕ್ನಿಲ್'' ಪ್ರಕಾರ ಹೊರ ದೇಶದಲ್ಲಿ ''ಕರುಪ್ಪು'' ಇಲ್ಲಿಯವರೆಗೆ ₹62.75 ಕೋಟಿಯನ್ನು ಗಳಿಸಿದೆ. ಈ ಮೂಲಕ ಈ 9 ದಿನಗಳಲ್ಲಿ ಒಟ್ಟಾರೆಯಾಗಿ ಚಿತ್ರ ₹217.74 ಕೋಟಿ (Gross) ಗಳಿಸಿದೆ. ಇನ್ನು ಚಿತ್ರದ ಗಳಿಕೆಯ ವಿವರವನ್ನು ಚಿತ್ರದ ನಿರ್ಮಾಣ ಸಂಸ್ಥೆ ಕೂಡ ಅಧಿಕೃತವಾಗಿ ಹಂಚಿಕೊಂಡಿದ್ದು, 7 ದಿನದಲ್ಲಿಯೇ ವಿಶ್ವದಾದ್ಯಂತ ''ಕರುಪ್ಪು'' ₹207 ಕೋಟಿಯನ್ನು ದೋಚಿದೆ.
ಐತಿಹಾಸಿಕ ದಾಖಲೆಯತ್ತ ಸೂರ್ಯ ದಾಪುಗಾಲು
ಸೂರ್ಯ ಚಿತ್ರರಂಗಕ್ಕೆ ಬಂದು ಹತ್ ಹತ್ರ 30 ವರ್ಷಗಳಾಗುತ್ತಾ ಬಂದಿವೆ. ವಿಶೇಷ ಅಂದರೆ ಇಲ್ಲಿಯವರೆಗೆ ಸೂರ್ಯ ಅಭಿನಯದ ಯಾವ ಚಿತ್ರ ಕೂಡ ಕೇವಲ ಭಾರತದಲ್ಲಿ ₹200 ಕೋಟಿಯನ್ನು ಕೊಳ್ಳೆ ಹೊಡೆದಿಲ್ಲ. ''ಕರುಪ್ಪು'' ಚಿತ್ರಕ್ಕೆ ಸದ್ಯ ಈ ಅವಕಾಶ ಇದೆ.
ಇನ್ನು ಸದ್ಯ ತಮಿಳುನಾಡಿನಲ್ಲಿ ಬೇರೆ ಯಾವ ದೊಡ್ಡ ಚಿತ್ರಗಳು ಬಿಡುಗಡೆಯಾಗುತ್ತಿಲ್ಲ. ಇನ್ನೇನಿದ್ದರು ''ಪೆದ್ದಿ'' ಅಖಾಡಕ್ಕಿಳಿಯಬೇಕಷ್ಟೇ. ಆದರೆ ಅದಕ್ಕಿನ್ನೂ ಹತ್ತು ದಿನ ಇದೆ. ಹೀಗಾಗಿ ನಿಸ್ಸಂಶಯವಾಗಿ ''ಕರುಪ್ಪು'' ಭಾರತದಲ್ಲಿಯೇ ₹200 ಕೋಟಿಯನ್ನು ದೋಚುತ್ತೆ ಎನ್ನುವ ಮಾತು ಟ್ರೇಡ್ ವಲಯದಲ್ಲಿ ಸದ್ಯ ಕೇಳಿ ಬರುತ್ತಿವೆ.
ಹಾಗೊಂದು ವೇಳೆ ಈ ಭವಿಷ್ಯವಾಣಿ ನಿಜವಾದರೆ ಭಾರತದಲ್ಲಿಯೇ 200 ಕೋಟಿ ದೋಚಿದ ಸ್ಟಾರ್ ಗಳ ಸಾಲಿನಲ್ಲಿ ಸೂರ್ಯ ಕೂಡ ಸೇರಿಕೊಳ್ಳಲಿದ್ದಾರೆ. ಈ ಮೂಲಕ ಹೊಸದೊಂದು ದಾಖಲೆಯನ್ನು ಬರೆಯಲಿದ್ದಾರೆ. ಇದು ಸಾಧ್ಯವಾಗುತ್ತಾ..? ಲೆಟ್ಸ್ ಸೀ ...!
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications