Karuppu Box Office Day 1 ; ಮುಕ್ತಾಯವಾಯ್ತಾ 'ಸೂರ್ಯ' ಗ್ರಹಣ ? ಮೊದಲ ದಿನ ಗಳಿಸಿದ್ದೆಷ್ಟು ಕರುಪ್ಪು ?

''ಗಜಿನಿ''.. ''ಪಿತಾಮಗನ್''.. ''ಕಾಕ್ಕ-ಕಾಕ್ಕ''ದಂತಾ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟವರು ತಮಿಳು ನಟ ಸೂರ್ಯ. ''ಸಿಂಗಂ'' ಅನ್ನೋ ಸರಣಿ ಸಿನಿಮಾವಂತೂ ಸೂರ್ಯನನ್ನು ಜಗದ್ವಿಖ್ಯಾತಿ ಮಾಡಿತ್ತು. ಇಂಥಾ ಸೂರ್ಯಗೆ ಗ್ರಹಣ ಹಿಡಿದು ಹಲವು ವರ್ಷಗಳಾಗಿವೆ. ''ಸೂರರೈ ಪೊಟ್ರು''.. ''ಜೈ ಭೀಮ್''.. ಚಿತ್ರ ಹೊರತು ಪಡಿಸಿದರೆ ''24''.. ''ತಾನಾ ಸೇಂದ ಕೂಟ್ಟಂ''.. ''ಎನ್.ಜಿ.ಕೆ.''.. ''ಕಾಪ್ಪನ್''.. ''ಎದರ್ಕ್ಕುಂ ತುಣಿಂದವನ್''.. ''ಕಂಗುವ''.. ಸೇರಿದಂತೆ ಸೂರ್ಯ ಅವರ ಸಾಲು ಸಾಲು ಸಿನಿಮಾಗಳು ಫ್ಲಾಪ್ ಆಗಿವೆ.

ಈ ಹಿನ್ನೆಲೆ ''ಕರುಪ್ಪು'' ಸೂರ್ಯ ಕೆರಿಯರ್ ಗೆ ಅತ್ಯಂತ ನಿರ್ಣಾಯಕವಾದದ್ದು. ಕುಸಿದು ಬಿದ್ದಿರುವ ತನ್ನ ಮಾಸ್ ಸಾಮ್ರಾಜ್ಯವನ್ನು ಮರುಸ್ಥಾಪಿಸಲು ಸೂರ್ಯಗೆ ''ಕರುಪ್ಪು'' ಗೆಲ್ಲಲೇಬೇಕು. ಸದ್ಯ ಈ ಜವಾಬ್ಧಾರಿಯನ್ನು ''ಕರುಪ್ಪು'' ಹೆಗಲಿಗೆ ಹೊತ್ತುಕೊಂಡಂತೆ ಕಾಣ್ತಿದೆ ಎನ್ನುವುದೇ ಸಮಾಧಾನದ ವಿಷಯ.

Suriya-Trisha s Karuppu Smashes Past 15 Crore Net In India On Day 1

ಹೌದು, ಹಲವಾರು ಅಡೆ ತಡೆಯ ನಡುವೆ ನಿನ್ನೆ (ಮೇ 15) ಕೊನೆಗೂ ಬಿಡುಗಡೆಯ ಭಾಗ್ಯ ಕಂಡ ''ಕರುಪ್ಪು'' ಮೊದಲ ದಿನ ಉತ್ತಮವಾದ ಪ್ರದರ್ಶನ ಕಂಡಿದೆ. ಆರಂಭಿಕ ಹಿನ್ನೆಡೆಯ ನಡುವೆಯೂ ಚಿತ್ರ ಮೊದಲ ದಿನ ಕೇವಲ ಭಾರತದಲ್ಲಿ ₹15.50 ಕೋಟಿಯನ್ನು ದೋಚಿದೆ ಎಂದು ಟ್ರೇಡ್ ಟ್ಯ್ರಾಕರ್ ''ಸ್ಯಾಕ್ನಿಲ್'' ವರದಿಯನ್ನು ಮಾಡಿದೆ.

ಇನ್ನು ''ಕರುಪ್ಪು'' ಕೇವಲ ತಮಿಳಿನಲ್ಲಿ ಮಾತ್ರ ಬಿಡುಗಡೆಯಾಗಿಲ್ಲ. ತೆಲುಗಿನಲ್ಲಿ ಕೂಡ ಈ ಚಿತ್ರವನ್ನು ''ವೀರಭದ್ರುಡು'' ಹೆಸರಿನಲ್ಲಿ ಬಿಡುಗಡೆ ಮಾಡಲಾಗಿದೆ. ಚಿತ್ರತಂಡದ ಈ ದ್ವಿಭಾಷಾ ಲೆಕ್ಕಾಚಾರ ಸದ್ಯ ಕೈ ಹಿಡಿದಂತೆ ಕಾಣ್ತಿದ್ದು ₹15.50 ಕೋಟಿಯಲ್ಲಿ ತೆಲುಗು ನಾಡಿನ ಪಾಲು ₹2.40 ಕೋಟಿ ಇದೆ ಎಂದು ''ಸ್ಯಾಕ್ನಿಲ್'' ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ.

suriya-trisha-s-karuppu-smashes-past-15-crore-net-in-india-on-day-1

ಕರ್ನಾಟಕದಲ್ಲಿ ಗಳಿಸಿದ್ದೆಷ್ಟು ''ಕರುಪ್ಪು'' ?

''ಕರುಪ್ಪು'' ತಮಿಳು ಅವತರಣಿಕೆ ನಿನ್ನೆ ( ಮೇ 14) ಕೇವಲ ಬೆಂಗಳೂರಿನಲ್ಲಿ 367 ಪ್ರದರ್ಶನ ಕಂಡಿದೆ. ಇನ್ನು ತೆಲುಗು ಆವೃತ್ತಿ 58 ಪ್ರದರ್ಶನ ಕಂಡಿದೆ. ಇನ್ನು ''ಕರುಪ್ಪು'' ಕನ್ನಡಕ್ಕೆ ಡಬ್ ಆಗಿಲ್ಲ. ಆದರೆ ಕನ್ನಡಿಗರು ವಿಶಾಲ ಹೃದಯವರು. ಕನ್ನಡ ಚಿತ್ರವೊಂದನ್ನು ಹೊರತು ಪಡಿಸಿ ಎಲ್ಲಾ ಭಾಷೆಯ ಚಿತ್ರಗಳನ್ನು ನೋಡುವವರು. ಇದಕ್ಕೆ ಕೈಗನ್ನಡಿ ಎಂಬಂತೆ ''ಕರುಪ್ಪು'' ಮೊದಲ ದಿನ ಕರ್ನಾಟಕದಲ್ಲಿ ₹2 ಕೋಟಿ ಗಳಿಸಿದೆ ಎಂದು ''ಸ್ಯಾಕ್ನಿಲ್'' ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ. ಕೇರಳದ ಪಾಲು ₹1.50 ಕೋಟಿ ಇದೆ.

'ಕಂಗುವ' ಹಿಂದಿಕ್ಕುವಲ್ಲಿ ವಿಫಲವಾದ 'ಕರುಪ್ಪು'

ಸೂರ್ಯ ವೃತ್ತಿ ಬದುಕಿನ ಅತ್ಯಂತ ಕಳಪೆ ಚಿತ್ರ ಎನ್ನುವ ಕುಖ್ಯಾತಿ ಹೊಂದಿರುವ ''ಕಂಗುವ'' ಚಿತ್ರವನ್ನು ಮೊದಲ ದಿನ ''ಕರುಪ್ಪು'' ಹಿಂದಿಕ್ಕುವಲ್ಲಿ ವಿಫಲವಾಗಿದೆ. ಕಳೆದ ವರ್ಷ ಬಂದು ಮಕಾಡೆ ಮಲಗಿದ 350-400 ಕೋಟಿ ಬಜೆಟ್‌ನ ''ಕಂಗುವಾ'' ಮೊದಲ ದಿನ ₹24 ಕೋಟಿ ಗಳಿಸಿತ್ತು. ಆ ನಂತರ ಬಂದ ''ರೆಟ್ರೊ'' ₹19.25 ಕೋಟಿಯನ್ನು ದೋಚಿತ್ತು. ಆದರೆ ''ಕರುಪ್ಪು'' ಇವೆರಡು ಚಿತ್ರಕ್ಕಿಂತ ಹಿಂದಿದೆ. ಸೂರ್ಯ ಪಾಲಿಗೆ ಮತ್ತೊಂದು ಸಮಾಧಾನದ ವಿಷಯ ಅಂದರೆ ಹಿಂದಿನ ಈ ಎರಡು ಚಿತ್ರಗಳಿಗೆ ಸಿಗದ ಪ್ರೇಕ್ಷಕರ ಮತ್ತು ವಿಮರ್ಷಕರ ಪ್ರೀತಿ ''ಕರುಪ್ಪು'' ಚಿತ್ರಕ್ಕೆ ಸಿಕ್ಕಿದೆ. ಹೀಗಾಗಿ ಇಂದು ( ಮೇ 16) ಗಳಿಕೆ ಹೆಚ್ಚಾಗುವ ಎಲ್ಲಾ ಸಾಧ್ಯತೆಗಳಿವೆ.

ಒಟ್ನಲ್ಲಿ ಸದ್ಯ ಮೊದಲ ದಿನ ''ಕರುಪ್ಪು'' ಚಿತ್ರಕ್ಕೆ ಉತ್ತಮವಾದ ಪ್ರತಿಕ್ರಿಯೆ ಸಿಕ್ಕಿದೆ. ಧಾಂ ಧೂಂ ಅಲ್ಲದಿದ್ದರೂ ಸಾಧಾರಣ ಓಪನಿಂಗ್‌ ಚಿತ್ರ ಪಡೆದಿದೆ. ಈ ವಾರಾಂತ್ಯದ ಗಳಿಕೆಯ ಮೇಲೆ 'ಸೂರ್ಯ'ಗ್ರಹಣ ಮುಕ್ತಾಯವಾಗುತ್ತಾ..? ಇಲ್ವಾ..? ಎನ್ನುವುದು ಗೊತ್ತಾಗಲಿದೆ. ಸೋಮವಾರದ ನಂತರ ಚಿತ್ರದ ಗಳಿಕೆ ಹೇಗಿರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

English summary
Karuppu Box Office Collection Day 1: Suriya’s action entertainer nets a solid ₹15.50 CR in India, but how does it hold up against Thug Life and Retro? Read the full report.
Read more about: suriya kollywood trisha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X