ಸೂರ್ಯ ಅಬ್ಬರಕ್ಕೆ ತಲೈವಾ ದಾಖಲೆ ಉಡೀಸ್ ; 'ಕಬಾಲಿ'ಗೆ ಸೆಡ್ಡು ಹೊಡೆದ 'ಕರುಪ್ಪು'

ಯಾವುದೇ ಚಿತ್ರವಾದರು ಕೂಡ ಬಿಡುಗಡೆಯಾದ ನಂತರ ಚಿತ್ರಮಂದಿರ ತುಂಬಬೇಕು, ಚಿತ್ರ ಗೆಲ್ಲಬೇಕೆಂದರೆ ಯುವ ಸಮೂಹ ಚಿತ್ರಮಂದಿರಕ್ಕೆ ಬರಬೇಕು. ಮನೆ ಮಂದಿಯೆಲ್ಲ ಜೊತೆಯಾಗಿ ಬಂದು ಚಿತ್ರವನ್ನು ನೋಡಬೇಕು. ಆಗಲೇ ಆ ಚಿತ್ರ ಗೆಲ್ಲಲು ಸಾಧ್ಯ. ಬಾಕ್ಸಾಫೀಸ್‌ನಲ್ಲಿ ಹಣದ ಹೊಳೆ ಹರಿಯಲು ಸಾಧ್ಯ. ಆದರೆ ಈಗೀಗ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗುತ್ತಿದೆ.

ಅಂಗೈಯಲ್ಲಿಯೇ ಮನರಂಜನೆ ಇರುವಾಗ ಚಿತ್ರಮಂದಿರಕ್ಕೆ ಯಾಕೆ ಹೋಗಬೇಕೆನ್ನುವುದು ಅನೇಕರ ವಾದ. ಹಾಗಂಥ.. ಎಲ್ಲ ಚಿತ್ರವನ್ನು ಎಲ್ಲರೂ ಓಟಿಟಿಯಲ್ಲಿ ನೋಡುವುದಿಲ್ಲ. ಅಲ್ಲೊಂದು.. ಇಲ್ಲೊಂದು.. ಚಿತ್ರಗಳು ಪ್ರೇಕ್ಷಕರನ್ನು ಸೆಳೆಯುತ್ತವೆ. ಬಾಕ್ಸಾಫೀಸ್‌ನಲ್ಲಿ ಹಣವನ್ನು ಕೂಡ ಗಳಿಸುತ್ತವೆ. ಇದಕ್ಕೆ ಸದ್ಯ ಸೂರ್ಯ ಅಭಿನಯದ ''ಕರುಪ್ಪು'' ಸದ್ಯದ ಉದಾಹರಣೆ.

Suriya s Karuppu Dethrones Rajinikanth s Kabali in India Sets Sights on Enthiran

ಹೌದು, ''ಕರುಪ್ಪು''.. ಸತತ ಸೋಲುಗಳಿಂದ ಹೈರಾಣಾಗಿದ್ದ ಸೂರ್ಯಗೆ ಹೊಸ ಚೈತನ್ಯ ತುಂಬಿದ ಸಿನಿಮಾ. ಬರೋಬ್ಬರಿ ಒಂದು ದಶಕದ ನಂತರ ಈ ಚಿತ್ರದ ಮೂಲಕ ಸೂರ್ಯ ಗೆದ್ದಿದ್ದಾರೆ. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ''ಕರುಪ್ಪು'' ಈ ಹನ್ನೆರಡು ದಿನದಲ್ಲಿ ಕೇವಲ ಭಾರತದಲ್ಲಿ ₹159.20 ಕೋಟಿಯನ್ನು ಕೊಳ್ಳೆ ಹೊಡೆದಿದೆ. ಇನ್ನು ಹೊರ ದೇಶದ ಗಳಿಕೆಯನ್ನು ಕೂಡ ಇಲ್ಲಿ ಕೂಡಿಸಿದರೆ ಹನ್ನೆರಡು ದಿನದ ಚಿತ್ರದ ಗಳಿಕೆ ₹253.26 ಕೋಟಿ.

ಸ್ಯಾಕ್ನಿಲ್ ಪ್ರಕಾರ ''ಕರುಪ್ಪು'' ಚಿತ್ರದ ಹನ್ನೆರಡು ದಿನದ ಗಳಿಕೆ ಈ ಕೆಳಗಿನಂತೆ ಇದೆ.

ದಿನ ಭಾರತದ ಒಟ್ಟು ಕಲೆಕ್ಷನ್ (India Net)
ಮೊದಲನೇ ದಿನ (ಶುಕ್ರವಾರ) ₹15.50 ಕೋಟಿ
ಎರಡನೇ ದಿನ (ಶನಿವಾರ) ₹24.15 ಕೋಟಿ
ಮೂರನೇ ದಿನ (ಭಾನುವಾರ) ₹28.35 ಕೋಟಿ
ನಾಲ್ಕನೇ ದಿನ (ಸೋಮವಾರ) ₹14.30 ಕೋಟಿ
ಐದನೇ ದಿನ (ಮಂಗಳವಾರ) ₹12.75 ಕೋಟಿ
ಆರನೇ ದಿನ (ಬುಧವಾರ) ₹10.70 ಕೋಟಿ
ಏಳನೇ ದಿನ (ಗುರುವಾರ) ₹8.10 ಕೋಟಿ
ಮೊದಲ ವಾರದ ಒಟ್ಟು ಕಲೆಕ್ಷನ್ (Week 1) ₹113.85 ಕೋಟಿ
ಎಂಟನೇ ದಿನ (ಶುಕ್ರವಾರ) ₹7.80 ಕೋಟಿ
ಒಂಬತ್ತನೇ ದಿನ (ಶನಿವಾರ) ₹12.45 ಕೋಟಿ
ಹತ್ತನೇ ದಿನ (ಭಾನುವಾರ) ₹14.75 ಕೋಟಿ
ಹನ್ನೊಂದನೇ ದಿನ (ಸೋಮವಾರ) ₹5.90 ಕೋಟಿ
ಹನ್ನೆರಡನೇ ದಿನ (ಮಂಗಳವಾರ) ₹4.45 ಕೋಟಿ
ಒಟ್ಟು ಭಾರತದ ನಿವ್ವಳ ಕಲೆಕ್ಷನ್ (Overall Total) ₹159.20 ಕೋಟಿ

ಕಬಾಲಿ ಹಿಂದಿಕ್ಕಿದ ಕರುಪ್ಪು

ಹೀಗೆ ಭಾರತದಲ್ಲಿ ಕೇವಲ ಹನ್ನೆರಡು ದಿನದಲ್ಲಿ ₹159.20 ಕೋಟಿಯನ್ನು ದೋಚಿದ ಕರುಪ್ಪು ಸದ್ಯ ರಜನಿಕಾಂತ್ ಅಭಿನಯದ ''ಕಬಾಲಿ''ಯನ್ನು ಬಾಕ್ಸಾಫೀಸ್‌ನಲ್ಲಿ ಹಿಂದಿಕ್ಕಿದೆ. ಸರಿಯಾಗಿ ಒಂದು ದಶಕದ ಹಿಂದೆ ಅಂದರೆ 2016ರಲ್ಲಿ ತೆರೆಗೆ ಬಂದಿದ್ದ ಕಬಾಲಿ ಭಾರತದ ಬಾಕ್ಸಾಫೀಸ್‌ನಲ್ಲಿ ₹150.12 ಕೋಟಿ ಗಳಿಸಿತ್ತು. ಈ ಗಳಿಕೆಯನ್ನು ಕರುಪ್ಪು ಹಿಂದಿಕ್ಕಿದ್ದು ಈ ವಾರಾಂತ್ಯದಲ್ಲಿ ರಜನಿಕಾಂತ್ ಅಭಿನಯದ ಮತ್ತೊಂದು ಚಿತ್ರ 'ಎಂಧಿರನ್' (₹165 ಕೋಟಿ) ಗಳಿಕೆಯನ್ನೂ ಕರುಪ್ಪು ಹಿಂದಿಕ್ಕುವ ನಿರೀಕ್ಷೆ ಇದೆ.

200 ಕೋಟಿಯ ಸರದಾರನಾಗ್ತಾರಾ ಸೂರ್ಯ ?

ಸೂರ್ಯ ಚಿತ್ರರಂಗಕ್ಕೆ ಬಂದು ಹತ್ ಹತ್ರ 30 ವರ್ಷಗಳಾಗುತ್ತಾ ಬಂದಿವೆ. ವಿಶೇಷ ಅಂದರೆ ಇಲ್ಲಿಯವರೆಗೆ ಸೂರ್ಯ ಅಭಿನಯದ ಯಾವ ಚಿತ್ರ ಕೂಡ ಕೇವಲ ಭಾರತದಲ್ಲಿ ₹200 ಕೋಟಿಯನ್ನು ಕೊಳ್ಳೆ ಹೊಡೆದಿಲ್ಲ. ''ಕರುಪ್ಪು'' ಚಿತ್ರಕ್ಕೆ ಸದ್ಯ ಈ ಅವಕಾಶ ಇದೆ. ಯಾಕೆಂದರೆ ಈ ಚಿತ್ರಕ್ಕೆ ಪ್ರೇಕ್ಷಕರು ಮನ ಸೋತಿದ್ದಾರೆ. ವಿಮರ್ಷಕರು ಕೂಡ ಚಿತ್ರವನ್ನು ಮೆಚ್ಚಿದ್ದಾರೆ. ಈ ವಾರಾಂತ್ಯದಲ್ಲಿ ಚಿತ್ರದ ಗಳಿಕೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದ್ದು, ಭಾರತದಲ್ಲಿ ಅತೀ ಹೆಚ್ಚು ಹಣ ಗಳಿಸಿದ ಹತ್ತು ತಮಿಳು ಚಿತ್ರಗಳ ಪಟ್ಟಿಯಲ್ಲಿ ''ಕರುಪ್ಪು'' ಚಿತ್ರಕ್ಕೆ ಸ್ಥಾನ ಸಿಗುವ ಎಲ್ಲ ಲಕ್ಷಣಗಳಿವೆ.

ಭಾರತದಲ್ಲಿ ಅತಿ ಹೆಚ್ಚು ಹಣ ಗಳಿಸಿದ ತಮಿಳಿನ ಟಾಪ್ 10 ಚಿತ್ರಗಳ ಪಟ್ಟಿ ಈ ಕೆಳಗಿನಂತಿದೆ.

ಸ್ಥಾನ (Rank) ಚಿತ್ರದ ಹೆಸರು (Movie Name) ಭಾರತದ ಒಟ್ಟು ನಿವ್ವಳ ಗಳಿಕೆ (India Net)
1 2.0 ₹407.05 ಕೋಟಿ
2 ಜೈಲರ್‌ ₹348.55 ಕೋಟಿ
3 ಲಿಯೋ ₹341.04 ಕೋಟಿ
4 ಕೂಲಿ ₹285.01 ಕೋಟಿ
5 ಪೊನ್ನಿಯನ್ ಸೆಲ್ವನ್ 1 ₹266.54 ಕೋಟಿ
6 ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ ₹252.71 ಕೋಟಿ
7 ವಿಕ್ರಮ್ ₹247.32 ಕೋಟಿ
8 ಅಮರನ್ ₹220.05 ಕೋಟಿ
9 ಪೊನ್ನಿಯನ್ ಸೆಲ್ವನ್ 2 ₹181.96 ಕೋಟಿ
10 ವಾರಿಸು ₹178.14 ಕೋಟಿ

ಸದ್ಯ ''ಕರುಪ್ಪು'' ಚಿತ್ರ ತಮಿಳುನಾಡಿನಲ್ಲಿ ಅಬ್ಬರಿಸುತ್ತಿದ್ದು, ಮುಂದಿನ ವಾರ ''ಪೆದ್ದಿ'' ಬಿಡುಗಡೆಯಾಗಲಿರುವ ಹಿನ್ನೆಲೆ ಆಂಧ್ರದಲ್ಲಿ ''ಕರುಪ್ಪು'' ಚಿತ್ರಕ್ಕೆ ಹಿನ್ನೆಡೆಯಾಗುವ ಸಾಧ್ಯತೆ ಇದೆ. 200 ಕೋಟಿಯ ಗಡಿಯನ್ನು ''ಕರುಪ್ಪು' ದಾಟುತ್ತಾ..? ಎನ್ನುವುದನ್ನು ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

English summary
Karuppu Box Office Day 12: Suriya’s mass entertainer surpasses Rajinikanth's Kabali in India. Find out how close the film is to beating the Enthiran record.
Read more about: suriya kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X