Karuppu Box Office Day 3 ; ಬೆಳ್ಳಿತೆರೆಯಲ್ಲಿ ಸೂರ್ಯ ಧಗಧಗ, 3ನೇ ದಿನ ಬಾಕ್ಸಾಫೀಸ್‌ನಲ್ಲಿ 'ಕರುಪ್ಪು' ಕ್ರಾಂತಿ

ಚಿತ್ರರಂಗ ಮಾತ್ರ ಅಲ್ಲ ಯಾವುದೇ ಕ್ಷೇತ್ರವಾದರು ಕೂಡ ಅಲ್ಲಿ ಗೆಲುವು ಮತ್ತು ಸೋಲು ಮಾಮೂಲು. ಆದರೆ .. ಗೆದ್ದಾಗ ಹಿರಿಹಿರಿ ಹಿಗ್ಗುವ ಅನೇಕರು ಸೋತಾಗ ಕುಗ್ಗಿ ಹೋಗುತ್ತಾರೆ. ತಮ್ಮ ಮೇಲೆ ತಾವೇ ನಂಬಿಕೆ ಕಳೆದುಕೊಳ್ಳುತ್ತಾರೆ. ಎಲ್ಲೋ ಅಲ್ಲೊಬ್ಬರು.. ಇಲ್ಲೊಬ್ಬರು.. ಮಾತ್ರ ಸೋಲೇ ಗೆಲುವಿನ ಸೋಪಾನ ಎಂದು ನಿರಂತರ ಪ್ರಯತ್ನ ಮಾಡುತ್ತಾರೆ.

ಆದರೂ ಕೂಡ ಒಮ್ಮೊಮ್ಮೆ ಅದೆಷ್ಟೇ ಪ್ರಯತ್ನವನ್ನು ಮಾಡಿದರೂ ಕೂಡ ಗೆಲುವು ಎನ್ನುವುದು ಸಿಗದೇ ಮತ್ತೆ ಸತಾಯಿಸುತ್ತೆ. ಇಂಥಹದ್ದೊಂದು ಸೋಲಿನ ಕಮರಿಗೆ ಬಿದ್ದು ಒದ್ದಾಡುತ್ತಿದ್ದ ಸೂರ್ಯ ಸದ್ಯ ಮೈಕೊಡವಿ ಎದ್ದು ನಿಂತಿದ್ದಾರೆ. ಸಾಲು ಸಾಲು ಸೋಲುಗಳ ನಂತರ ''ಕರುಪ್ಪು'' ಚಿತ್ರದ ಮೂಲಕ ಗೆಲುವಿನ ನಗೆ ಬೀರಿದ್ದಾರೆ.

suriyas-mighty-comeback-karuppu-explodes-on-sunday-nears-70-crore

ಹೌದು, ಹಲವಾರು ಅಡೆ ತಡೆಗಳ ನಡುವೆ ಬಿಡುಗಡೆಯಾದ ಚಿತ್ರ ''ಕರುಪ್ಪು''. ಆರ್ ಜೆ ಬಾಲಾಜಿ ನಿರ್ದೇಶನದ ಈ ಚಿತ್ರದಲ್ಲಿ ತ್ರಿಶಾ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಬರೋಬ್ಬರಿ 20 ವರ್ಷಗಳ ನಂತರ ಸೂರ್ಯ ಜೊತೆ ತ್ರಿಶಾ ಅಭಿನಯಿಸಿರುವ ಸಿನಿಮಾ ಇದು.

ಈ ಹಿನ್ನೆಲೆ ಸೂರ್ಯ ಅಭಿಮಾನಿಗಳಲ್ಲೊಂದು ಕುತೂಹಲ ಇತ್ತು. ಚಿತ್ರದ ಮೇಲೆ ನಿರೀಕ್ಷೆ ಇತ್ತು. ಆರ್ ಜೆ ಬಾಲಾಜಿಯ ಮೇಲೊಂದು ನಂಬಿಕೆ ಇತ್ತು. ಈ ನಂಬಿಕೆಯನ್ನು ಆರ್ ಜೆ ಬಾಲಾಜಿ ಉಳಿಸಿಕೊಂಡಿದ್ದು ನಿನ್ನೆ (ಮೇ 17) ಬೆಳ್ಳಿತೆರೆಯಲ್ಲಿ ''ಕರುಪ್ಪು'' ಅಕ್ಷರಶಃ ಧಗಧಗಿಸಿದೆ. ಕೇವಲ ಒಂದೇ ದಿನದಲ್ಲಿ ₹28.35 ಕೋಟಿಯನ್ನು ಕೊಳ್ಳೆ ಹೊಡೆದಿದೆ. ಈ ಮೂಲಕ ಕೇವಲ 3 ದಿನದಲ್ಲಿ ₹68.00 ಕೋಟಿಯನ್ನು ಕೇವಲ ಭಾರತದಲ್ಲಿ ದೋಚಿದೆ ''ಕರುಪ್ಪು''.

ಸ್ಯಾಕ್ನಿಲ್ ಪ್ರಕಾರ ''ಕರುಪ್ಪು'' ಚಿತ್ರದ ಮೂರು ದಿನದ ಗಳಿಕೆ ಈ ಕೆಳಗಿನಂತೆ ಇದೆ.

ದಿನ ನಿವ್ವಳ ಗಳಿಕೆ (India Net)

ಮೊದಲ ದಿನ (1ನೇ ಶುಕ್ರವಾರ) ₹15.50 ಕೋಟಿ
ಎರಡನೇ ದಿನ (1ನೇ ಶನಿವಾರ) ₹24.15 ಕೋಟಿ
ಮೂರನೇ ದಿನ (1ನೇ ಭಾನುವಾರ) ₹28.35 ಕೋಟಿ

ಒಟ್ಟು ಗಳಿಕೆ ₹68.00ಕೋಟಿ

ಕರ್ನಾಟಕದಲ್ಲಿ ಗಳಿಸಿದ್ದೆಷ್ಟು ''ಕರುಪ್ಪು'' ?

ಮೊದಲ ದಿನ ಬೆಂಗಳೂರಿನಲ್ಲಿ ''ಕರುಪ್ಪು'' ಚಿತ್ರ 367 ಪ್ರದರ್ಶನ ಕಂಡಿತ್ತು. ಆದರೆ ಈಗ ಈ ಸಂಖ್ಯೆ ಹೆಚ್ಚಾಗಿದೆ. ನಿನ್ನೆ (ಮೇ17) ಸ್ಕ್ರೀನ್‌ಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆ ಕೇವಲ ಬೆಂಗಳೂರಿನಲ್ಲಿ ತಮಿಳು ಅವತರಣಿಕೆ 530 ಪ್ರದರ್ಶನ ಕಂಡಿದೆ. ಇನ್ನು ತೆಲುಗು ಅವತರಣಿಕೆ 82 ಬಾರಿ ಪ್ರದರ್ಶನವಾಗಿದೆ. ''ಸ್ಯಾಕ್ನಿಲ್'' ಲೆಕ್ಕದ ಪ್ರಕಾರ ನಿನ್ನೆ (ಮೇ17) ಈ ಚಿತ್ರ ₹4.25 ಕೋಟಿಯನ್ನು ಗಳಿಸಿದೆ.

suriyas-mighty-comeback-karuppu-explodes-on-sunday-nears-70-crore

ವರ್ಲ್ಡ್ ವೈಡ್ ಲೆಕ್ಕ ಎಷ್ಟು ?

ಮೂರು ದಿನಗಳಲ್ಲಿ ಭಾರತದಲ್ಲಿ ₹68.00 ಕೋಟಿ ಗಳಿಸಿರುವ ''ಕರುಪ್ಪು'' ಹೊರ ದೇಶಗಳಲ್ಲಿ ₹42 ಕೋಟಿಯನ್ನು ದೋಚಿದೆ. ನಿನ್ನೆ (ಮೇ17) ಗಳಿಕೆ ₹13 ಕೋಟಿ. ಈ ಮೂಲಕ ಈ ಮೂರು ದಿನದಲ್ಲಿ ಒಟ್ಟಾರೆಯಾಗಿ ₹120.75 ಕೋಟಿ (Gross) ಗಳಿಸಿದೆ ''ಕರುಪ್ಪು''.

''ಕಂಗುವ''ಗೆ ಸೆಡ್ಡು ಹೊಡೆದ ''ಕರುಪ್ಪು''

ಸೂರ್ಯ ವೃತ್ತಿ ಬದುಕಿನ ಅತ್ಯಂತ ಕಳಪೆ ಚಿತ್ರ ಎನ್ನುವ ಕುಖ್ಯಾತಿ ಹೊಂದಿರುವ ''ಕಂಗುವ'' ಚಿತ್ರವನ್ನು ''ಕರುಪ್ಪು'' ಹಿಂದಿಕ್ಕಿದೆ. ಕಳೆದ ವರ್ಷ ಬಂದು ಮಕಾಡೆ ಮಲಗಿದ 350-400 ಕೋಟಿ ಬಜೆಟ್‌ನ ''ಕಂಗುವಾ'' ಮೊದಲ ಮೂರು ದಿನದಲ್ಲಿ ಕೇವಲ ಭಾರತದಲ್ಲಿ ₹43.35 ಕೋಟಿಯನ್ನು ಗಳಿಸಿತ್ತು. ಈ ಚಿತ್ರಕ್ಕೆ ಮೊದಲ ದಿನ ಜನಸಾಗರ ಹರಿದು ಬಂದಿತ್ತಾದರೂ ಚಿತ್ರ ನೋಡಿದ ಪ್ರೇಕ್ಷಕರು ಚಿತ್ರವನ್ನು ತಿರಸ್ಕರಿಸಿದರು. ಪರಿಣಾಮ ಎರಡನೇ ಮತ್ತು ಮೂರನೇ ದಿನದ ಗಳಿಕೆ ಒಂದಂಕಿಗೆ ಕುಸಿದಿತ್ತು.

ಒಟ್ನಲ್ಲಿ ಸದ್ಯ ''ಕರುಪ್ಪು'' ಚಿತ್ರ ಬಾಕ್ಸಾಫೀಸ್‌ನಲ್ಲಿ ₹68 ಕೋಟಿಯನ್ನು ಗಳಿಸಿದೆ. ಗೆಲುವಿನತ್ತ ಮುನ್ನುಗ್ಗುತ್ತಿದೆ. ಇದು ವಾರದ ದಿನವಾದ ಕಾರಣ ಗಳಿಕೆ ಕುಸಿಯುವ ಸಾಧ್ಯತೆ ಇದೆ. ಈ ವಾರಾಂತ್ಯದೊಳಗೆ ''ಕರುಪ್ಪು'' ಎಷ್ಟು ಹಣ ಗಳಿಸುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

English summary
Suriya-starrer 'Karuppu' wraps up an impressive opening weekend at ₹68 crore, inching closer to the coveted ₹70 crore mark. See Day 3 box office reports!
Read more about: suriya kollywood trisha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X