ಬಾಕ್ಸಾಫೀಸ್ ಅಚ್ಚರಿ ; ಹೂಡಿದ 25 ಕೋಟಿ ಹಣ ನಾಲ್ಕೇ ದಿನಕ್ಕೆ ವಾಪಸ್ - 'ಥಮ್ಮ' ಎದುರು ಗಳಿಸಿದ್ದೆಷ್ಟು 'ದೀವಾನಿಯತ್' ?

ಹಿಂದೆ ಚಿತ್ರಕ್ಕೆ ಕಥೆ ಮುಖ್ಯವಾಗಿತ್ತು. ಆದರೆ ಈಗ ಹಣ ಮುಖ್ಯ. ಕಥೆಗೆ ಅವಶ್ಯಕತೆ ಇರಲಿ, ಇಲ್ಲದಿರಲಿ.. ಅದ್ದೂರಿತನ ತಮ್ಮ ಚಿತ್ರದಲ್ಲಿರಬೇಕು ಎನ್ನುವ ಉದ್ದೇಶದಲ್ಲಿ ಹಲವರು ನೀರಿನಂತೆ ಹಣ ಖರ್ಚು ಮಾಡುತ್ತಾರೆ. ಪ್ರಚಾರಕ್ಕೆಂದೇ ಲಕ್ಷಾಂತರ ಹಣ ಸುರಿಯುತ್ತಾರೆ. ಪ್ಯಾನ್ ಇಂಡಿಯಾ ಎಂಬ ಭ್ರಮೆಯ ಬೆನ್ನೇರಿ ಒಂದು ಚೌಕಟ್ಟಿನಲ್ಲಿ ಚಿತ್ರವನ್ನು ನಿರ್ಮಾಣ ಮಾಡುವುದನ್ನು ಮರೆಯುತ್ತಾರೆ. ಆ ನಂತರ...

ಚಿತ್ರ ಮಕಾಡೆ ಮಲಗಿದ ನಂತರ ಮೈ ಪರಚಿಕೊಳ್ತಾರೆ. ಕುಣಿಯಲು ಬಾರದ ವ್ಯಕ್ತಿ ನೆಲ ಡೊಂಕು ಎಂದಂತೆ ತಮ್ಮ ಸೋಲಿಗೆ ಪ್ರೇಕ್ಷಕರನ್ನು ಹೊಣೆಯಾಗಿಸುತ್ತಾರೆ.

SURPRISE PROFIT Ek Deewane Ki Deewaniyat Recovers Budget in 4 Days Despite Thamma Targets HIT

ಆದರೆ ಇದಕ್ಕೆ ಅಪವಾದ ಎನ್ನುವಂತೆ ಅಲ್ಲೊಬ್ಬರು.. ಇಲ್ಲೊಬ್ಬರು.. ಇವತ್ತು ಕೂಡ ಚಿತ್ರಕ್ಕೆ ಕಥೆ ಮುಖ್ಯ ಎಂದು ನಂಬುವರು ಇದ್ದಾರೆ. ಸೀಮಿತ ಬಜೆಟ್‌ನಲ್ಲಿ ಚಿತ್ರವನ್ನು ನಿರ್ಮಾಣ ಮಾಡಿ ಆ ನಂತರ ಚಿನ್ನದ ಫಸಲು ಬೆಳೆಯುವವರು ಇದ್ದಾರೆ. ಉದಾಹರಣೆಗೆ ''ಏಕ್ ದಿವಾನೆ ಕಿ ದಿವಾನಿಯತ್'' ಚಿತ್ರವನ್ನೇ ತೆಗೆದುಕೊಳ್ಳಿ.

ಹೌದು, ''ಏಕ್ ದಿವಾನೆ ಕಿ ದಿವಾನಿಯತ್''.. ದೀಪಾವಳಿ ಹಬ್ಬದ ಪ್ರಯುಕ್ತ ಆಯುಷ್ಮಾನ್ ಖುರಾನ ಮತ್ತು ರಶ್ಮಿಕಾ ಮಂದಣ್ಣ ಅವರ ''ಥಮ್ಮ'' ಎದುರು ಬಿಡುಗಡೆಯಾದ ಚಿತ್ರ. ಮಿಲಾಪ್ ಜವೇರಿ ನಿರ್ದೇಶನದ ಈ ಚಿತ್ರಕ್ಕೆ ಚೊಚ್ಚಲ ಬಾರಿ ಚಿತ್ರ ನಿರ್ಮಾಣಕ್ಕಿಳಿದ ನಿರ್ಮಾಪಕ ಅಂಶುಲ್ ಗಾರ್ಗ್ ಕೇವಲ 25 ಕೋಟಿ ಹಣವನ್ನು ಮಾತ್ರ ಖರ್ಚು ಮಾಡಿದ್ದರು.

ವಿಶೇಷ ಅಂದರೆ ಇವರು ಹಾಕಿದ ಈ ಬಂಡವಾಳ ಕೇವಲ ನಾಲ್ಕೇ ದಿನಕ್ಕೆ ಮರಳಿ ಬಂದಿದೆ. ''ಥಮ್ಮ'' ಎದುರು ಬಂದರೂ ''ಏಕ್ ದಿವಾನೆ ಕಿ ದಿವಾನಿಯತ್'' ಕೇವಲ ನಾಲ್ಕೇ ದಿನದಲ್ಲಿ ₹ 28.25 ಕೋಟಿಯನ್ನು ಕೊಳ್ಳೆ ಹೊಡೆದಿದೆ ಎಂದು ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ವರದಿಯನ್ನು ಮಾಡಿದೆ.

''ಸ್ಯಾಕ್ನಿಲ್ '' ಪ್ರಕಾರ ಏಕ್ ದಿವಾನೆ ಕಿ ದೀವಾನಿಯತ್ ಚಿತ್ರದ 3 ದಿನದ ಗಳಿಕೆ ಈ ಕೆಳಗಿನಂತೆ ಇದೆ.

ಮೊದಲ ದಿನ [ಮಂಗಳವಾರ] ₹ 9 ಕೋಟಿ
ಎರಡನೇ ದಿನ [ಬುಧವಾರ ] ₹7.75 ಕೋಟಿ
ಮೂರನೇ ದಿನ [ ಗುರುವಾರ] ₹6 ಕೋಟಿ
ನಾಲ್ಕನೇ ದಿನ [ಶುಕ್ರವಾರ] ₹5.5 ಕೋಟಿ * ಅಂದಾಜು

ಒಟ್ಟು ಗಳಿಕೆ - ₹28.25 ಕೋಟಿ

SURPRISE PROFIT Ek Deewane Ki Deewaniyat Recovers Budget in 4 Days Despite Thamma Targets HIT

ಇನ್ನು www.koimoi.com ವರದಿಯ ಪ್ರಕಾರ ಭಾರತದಲ್ಲಿ ₹28.25 ಕೋಟಿ ಹಣ ಗಳಿಸಿರುವ ಏಕ್ ದಿವಾನೆ ಕಿ ದೀವಾನಿಯತ್ ಚಿತ್ರ ಹೊರದೇಶಗಳಲ್ಲಿ 1.5 ಕೋಟಿ ಹಣವನ್ನು ಗಳಿಸಿದೆ. '' ಥಮ್ಮ'' ಎದುರು ಬಂದರೂ ಕೂಡ ನಾಲ್ಕೇ ದಿನದಲ್ಲಿ ಮೆಟ್ರೋ ಇನ್ ದಿನೋ (₹ 18.65 ಕೋಟಿ), ಧಡಕ್ 2 (₹11.97 ಕೋಟಿ), ಮೇರೆ ಹಸ್ಬೆಂಡ್ ಕಿ ಬೀವಿ (₹5.28 ಕೋಟಿ), Loveyapa (₹4.75 ಕೋಟಿ), ಆಜಾದ್ (₹4.75 ಕೋಟಿ) ಚಿತ್ರಗಳನ್ನು ''ಏಕ್ ದಿವಾನೆ ಕಿ ದೀವಾನಿಯತ್'' ಚಿತ್ರ ಹಿಂದಿಕ್ಕಿದೆ.

ಸದ್ಯ ನಿರ್ಮಾಪಕರನ್ನು ಸೇಫ್ ಜೋನ್‌ಗೆ ಕರೆದುಕೊಂಡು ಬಂದಿರುವ ಈ ಚಿತ್ರ ಮುಂದಿನ ದಿನಗಳಲ್ಲಿ ಇನ್ನೆಷ್ಟು ಹಣ ಗಳಿಸುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
The underdog wins! EDKD achieves 100% budget recovery in its first 4 days, proving its mettle despite the massive Thamma box office competition. A surprise success story!
Read more about: bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X