ಉತ್ತರದ ಮೇಲಿನ ಆಸೆಗೆ ದಕ್ಷಿಣವನ್ನು ಎಡಗಾಲಿನಲ್ಲಿ ಒದ್ದು ಹೋದ ತಾಪ್ಸಿಗೆ ಮುಖಭಂಗ ; 30 ಕೋಟಿ ಕಳೆದುಕೊಂಡ ನಿರ್ಮಾಪಕ
ಸಿನಿಮಾ ಅನ್ನುವುದು ಗ್ಯಾಂಬ್ಲಿಂಗ್ ಇದ್ದಂತೆ ಎಂದು ಕಾಲ ಕಾಲಕ್ಕೆ ಬರುವ ಕಾರಣ ಚಕ್ರವರ್ತಿಗಳು ಹೇಳ್ತಾನೇ ಬಂದಿದ್ದಾರೆ. ಆದರೂ.. ಇಲ್ಲಿ ಹೂಡಿಕೆ ಮಾಡಿದರೆ ಒಳ್ಳೇ ಲಾಭ ಮಾಡಬಹುದು ಎಂಬ ಲೆಕ್ಕಾಚಾರದಲ್ಲಿ ಅನೇಕರು ಬರುತ್ತಾರೆ. ಕೆಲವರು ಗೆಲ್ತಾರೆ. ನಿರೀಕ್ಷೆಯನ್ನೂ ಮೀರಿ ಲಾಭ ಮಾಡುತ್ತಾರೆ. ಇನ್ನು ಕೆಲವರು ಹಣದಾಸೆಯಲ್ಲಿ ತಮ್ಮ ಕೈಯಲ್ಲಿದ್ದ ದುಡ್ಡೆಲ್ಲ ಚಿತ್ರಕ್ಕೆ ಹೂಡಿ ನಷ್ಟಕ್ಕೀಡಾಗುತ್ತಾರೆ. ಇದಕ್ಕೆ ತಾಪ್ಸಿ ಪನ್ನು ಅಭಿನಯದ ''ಅಸ್ಸಿ'' ಸದ್ಯದ ಉದಾಹರಣೆ.
ಹೌದು. ''ಅಸ್ಸಿ''.. ತಾಪ್ಸಿ ಪನ್ನು ಅಭಿನಯದ ಸಿನಿಮಾ. "ಮುಲ್ಕ್".. " ಥಪ್ಪಡ್".. "ಆರ್ಟಿಕಲ್ 15" ಹೀಗೆ ತಮ್ಮ ಚಿತ್ರಗಳ ಮೂಲಕ ಸಮಾಜದ ವ್ಯವಸ್ಥೆ ಮತ್ತು ಅವ್ಯವಸ್ಥೆಗೆ ಕೈಗನ್ನಡಿ ಹಿಡಿಯುವಂತಹ ಪ್ರಯತ್ನ ಮಾಡುತ್ತಾ ಬಂದ ಅನುಭವ್ ಸಿನ್ಹಾ ನಿರ್ದೇಶನದ ಚಿತ್ರ ಇದು.

ಎಲ್ಲಕ್ಕಿಂತ ಮುಖ್ಯವಾಗಿ ಈ ಚಿತ್ರದ ಮೂಲಕ ಅನುಭವ್ ಸಿನ್ಹಾ ನೈಜ ಘಟನೆಗಳನ್ನೇ ಹೆಕ್ಕಿ ಸಿನಿಮಾವನ್ನಾಗಿಸಿದ್ದರು. ಪ್ರತಿ 20 ನಿಮಿಷಕ್ಕೊಂದು ಅತ್ಯಾಚಾರ ಪ್ರಕರಣ ಭಾರತದಲ್ಲಿ ದಾಖಲಾಗುತ್ತೆ ಎಂಬ ಕಹಿ ಸತ್ಯವನ್ನು ಹೇಳುವ ಪ್ರಯತ್ನ ಮಾಡಿದ್ದರು.
ಆದರೆ, ಹೊಡಿ ಬಡಿ ಕಡಿ ಸಿನಿಮಾಗಳನ್ನೇ ನೋಡುವುದನ್ನು ರೂಢಿ ಮಾಡಿಕೊಂಡ ಪ್ರೇಕ್ಷಕರಿಗೆ ಅನುಭವ್ ಸಿನ್ಹಾ ಮತ್ತು ತಾಪ್ಸಿಯ ಈ ಕೋರ್ಟ್ ರೂಮ್ ಡ್ರಾಮ್ ಹಿಡಿಸಲಿಲ್ಲ. ಕಮರ್ಷಿಯಲ್ ಮತ್ತು ಪ್ಯಾನ್ ಇಂಡಿಯಾದ ಈ ಕಾಲದಲ್ಲಿ ಬಾಕ್ಸಾ ಫೀಸ್ ನಲ್ಲಿ ಚಿತ್ರ ಗೆಲ್ಲಲಿಲ್ಲ.
ಇದಕ್ಕೆ ಕೈಗನ್ನಡಿ ಎಂಬಂತೆ "ಕೊಯಿಮೊಯಿ", "ಅಸ್ಸಿ" ಚಿತ್ರದ ಬ್ಯಾಲೆನ್ಸ್ ಶೀಟ್ ಹಂಚಿಕೊಂಡಿದ್ದು ಚಿತ್ರವನ್ನು ಫ್ಲಾಪ್ ಎಂದು ಘೋಷಿಸಿದೆ. ನಿರ್ಮಾಪಕರಿಗೆ ಹತ್ ಹತ್ರ ₹30 ಕೋಟಿ ನಷ್ಟ ಆಗಿದೆ ಎಂದು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
"ಕೊಯಿಮೊಯಿ" ಪ್ರಕಾರ "ಅಸ್ಸಿ" ಚಿತ್ರಕ್ಕೆ ಸುಮಾರು ₹40 ಕೋಟಿ ಖರ್ಚಾಗಿದ್ದು 14 ದಿನದಲ್ಲಿ "ಅಸ್ಸಿ" ಭಾರತದಲ್ಲಿ ₹9.58 ಕೋಟಿಯನ್ನು ಗಳಿಸಿದೆ. ಈ ಮೂಲಕ ಹಾಕಿದ ಬಂಡವಾಳದಲ್ಲಿ ಕೇವಲ 24% ಹಣ ಮಾತ್ರ ನಿರ್ಮಾಪಕರ ಜೇಬು ಸೇರಿದೆ. ಮಿಕ್ಕಿದ್ದೆಲ್ಲ ನಷ್ಟ. ಯಾಕೆಂದರೆ "ಅಸ್ಸಿ" ಚಿತ್ರವನ್ನು ಬಹುತೇಕ ಕಡೆ ಎತ್ತಂಗಡಿ ಮಾಡಲಾಗಿದೆ.

ಇನ್ನೂ ಬಾಕ್ಸಾಫೀಸ್ ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ "ಸ್ಯಾಕ್ನಿಲ್" ಪ್ರಕಾರ "ಅಸ್ಸಿ" ಹದಿನಾರು ದಿನಗಳಲ್ಲಿ ₹ 10.10 ಕೋಟಿಯನ್ನು ದೋಚಿದೆ. ಇಂದು (ಮಾರ್ಚ್ 7) ಚಿತ್ರ ₹30 ಲಕ್ಷವನ್ನು ಗಳಿಸಿದೆ. ಆದರೆ ಸೋಮವಾರದ (ಮಾರ್ಚ್ 9) ನಂತರ ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುವುದು ಕಷ್ಟ. ಯಾಕೆಂದರೆ ಆಗಲೇ ಹೇಳಿದಂತೆ ಬಹುತೇಕ ಕಡೆ ''ಅಸ್ಸಿ'' ಪ್ರದರ್ಶನ ಮುಕ್ತಾಯವಾಗಿದೆ. ಮಾರ್ಚ್ 19ರಂದು ''ಧುರಂಧರ್ 2'' ಬೇರೆ ಬರುತ್ತಿದೆ. ಹೀಗಾಗಿ ಕೆಲ ಚಿತ್ರಮಂದಿರಗಳಲ್ಲಿ ಅಳಿದು ಉಳಿದರು ಕೂಡ ನಿರ್ಮಾಪಕರಿಗೆ ಲಾಭವಂತೂ ಆಗಲ್ಲ ಎನ್ನುವುದೇ ಸದ್ಯ ಮುಂಬೈ ಮಾಧ್ಯಮಗಳು ವರದಿ ಮಾಡಿರುವ ಒಟ್ಟಾರೆ ಸಾರಾಂಶ.
koimoi ಪ್ರಕಾರ ಚಿತ್ರದ ಲಾಭ-ನಷ್ಟದ ಲೆಕ್ಕ ಕೆಳಗಿನಂತೆ ಇದೆ.
* ಹಾಕಿದ ಬಂಡವಾಳ (Budget): 40 ಕೋಟಿ
* ಭಾರತದ ಒಟ್ಟು ಕಲೆಕ್ಷನ್ (India Net): 9.58 ಕೋಟಿ
* ಮರಳಿ ಪಡೆದ ಹಣ(Budget Recovery): 24%
* ಭಾರತದ ಒಟ್ಟು ಗಳಿಕೆ (India Gross): 11.30 ಕೋಟಿ
* ವಿದೇಶಿ ಗಳಿಕೆ (Overseas Gross): 1.3 ಕೋಟಿ
* ವಿಶ್ವದಾದ್ಯಂತ ಒಟ್ಟು ಗಳಿಕೆ (Worldwide Gross): 12.6 ಕೋಟಿ
* ಅಂತಿಮ ತೀರ್ಪು (Verdict): ಫ್ಲಾಪ್ (Flop)
ಇನ್ನು ಸ್ಯಾಕ್ನಿಲ್ ವರದಿಯ ಪ್ರಕಾರ ''ಅಸ್ಸಿ'' ಚಿತ್ರದ 16 ದಿನದ ಗಳಿಕೆ ಈ ಕೆಳಗಿನಂತೆ ಇದೆ.
ದಿನ ಗಳಿಕೆ
ಮೊದಲ ದಿನ [ಶುಕ್ರವಾರ] ₹ 1 ಕೋಟಿ
ಎರಡನೇ ದಿನ [ಶನಿವಾರ] ₹ 1.6 ಕೋಟಿ
ಮೂರನೇ ದಿನ [ಭಾನುವಾರ] ₹ 1.6 ಕೋಟಿ
ನಾಲ್ಕನೇ ದಿನ [ಸೋಮವಾರ] ₹ 70 ಲಕ್ಷ
ಐದನೇ ದಿನ [ಮಂಗಳವಾರ] ₹ 85 ಲಕ್ಷ
ಆರನೇ ದಿನ [ಬುಧವಾರ] ₹ 60 ಲಕ್ಷ
ಏಳನೇ ದಿನ [ಗುರುವಾರ] ₹ 60 ಲಕ್ಷ
ಮೊದಲ ವಾರದ ಒಟ್ಟು ಗಳಿಕೆ ₹ 6.95 ಕೋಟಿ
ಎಂಟನೇ ದಿನ [ಶುಕ್ರವಾರ] ₹ 45 ಲಕ್ಷ
ಒಂಬತ್ತನೇ ದಿನ [ಶನಿವಾರ] ₹ 60 ಲಕ್ಷ
ಹತ್ತನೇ ದಿನ [ಭಾನುವಾರ] ₹ 50 ಲಕ್ಷ
ಹನ್ನೊಂದನೇ ದಿನ [ಸೋಮವಾರ] ₹ 23 ಲಕ್ಷ
ಹನ್ನೆರಡನೇ ದಿನ [ಮಂಗಳವಾರ] ₹ 35 ಲಕ್ಷ
ಹದಿಮೂರನೇ ದಿನ [ಬುಧವಾರ] ₹ 30 ಲಕ್ಷ
ಹದಿನಾಲ್ಕನೇ ದಿನ [ಗುರುವಾರ] ₹ 20 ಲಕ್ಷ
ಎರಡನೇ ವಾರದ ಒಟ್ಟು ಗಳಿಕೆ ₹ 2.63 ಕೋಟಿ
ಹದಿನೈದನೇ ದಿನ [ಶುಕ್ರವಾರ] ₹ 22 ಲಕ್ಷ
ಹದಿನಾರನೇ ದಿನ [ಶನಿವಾರ] ₹ 30 ಲಕ್ಷ * (ಅಂದಾಜು)
ಒಟ್ಟು ಮೊತ್ತ (Total) ₹ 10.10 ಕೋಟಿ
Disclaimer ; ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











