Thaai Kizhavi Collection: ಬಾಕ್ಸಾಫೀಸ್‌ನಲ್ಲಿ 'ತಾಯ್ ಕಿಳವಿ' ಆರ್ಭಟ; ಕೋಟಿ ಕೋಟಿ ಕಲೆಕ್ಷನ್

ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುವುದು ಸವಾಲಿನ ಕೆಲಸವಾಗಿಬಿಟ್ಟಿದೆ. ಮತ್ತೊಂದು ಕಡೆ ಪ್ರೇಕ್ಷಕರ ಸಿನಿಮಾ ನೋಡಲು ಬರ್ತಿಲ್ಲ ಎಂದು ಫಿಲ್ಮ್ ಮೇಕರ್ಸ್ ಆರೋಪಿಸುತ್ತಿದ್ದಾರೆ. ಒಳ್ಳೆ ಸಿನಿಮಾ ಮಾಡಿದ್ರೆ ಜನ ನೋಡ್ತಾರೆ ಎನ್ನುವುದು ಮತ್ತೊಂದು ವಾದ. ಒಳ್ಳೆ ಸಿನಿಮಾಗಳನ್ನು ಪ್ರೇಕ್ಷಕ ಪ್ರಭುಗಳು ಕೈ ಹಿಡಿಯುತ್ತಿಲ್ಲ ಎನ್ನುವುದು ಇನ್ನೊಂದು ಚರ್ಚೆ. ಅದೆಲ್ಲ ಏನೇ ಇದ್ದರೂ ಪ್ರೇಕ್ಷಕರಿಗೆ ಒಳ್ಳೆ ಸಿನಿಮಾ ಬೇಕು. ಅದೇ ರೀತಿ ಒಳ್ಳೆ ಸಿನಿಮಾಗಳು ಗೆಲ್ಲಬೇಕಿದೆ.

ಸದ್ಯ ತಮಿಳಿನ "ತಾಯ್ ಕಿಳವಿ" ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ. ಫಸ್ಟ್ ವೀಕೆಂಡ್‌ನಲ್ಲೇ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ನೂರಾರು ಕೋಟಿ ಅಲ್ಲದೇ ಇದ್ದರೂ ಮಹಿಳಾ ಪ್ರಧಾನ ಸಿನಿಮಾವೊಂದು ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯಲು ಯಶಸ್ವಿಯಾಗಿದೆ. ಹಿರಿಯ ನಟಿ ರಾಧಿಕಾ ಶರತ್‌ಕುಮಾರ್ ನಟನೆಯ ಕಾಮೆಡಿ ಎಂಟರ್‌ಟೈನರ್ ಸಿನಿಮಾ ಕಳೆದ ಶುಕ್ರವಾರ ತೆರೆಗೆ ಬಂದಿದೆ. ಬೇರೆ ಯಾವುದೇ ದೊಡ್ಡ ಸಿನಿಮಾಗಳು ಬರದೇ ಇರುವುದು ಈ ಚಿತ್ರದ ಯಶಸ್ಸಿಗೆ ಕಾರಣ ಎನ್ನಬಹುದು.

Thaai Kizhavi Boxoffice Radhika Sarathkumar s film Collects Rs 22 Crore in First Weekend

ಶಿವಕುಮಾರ್ ಮುರುಗೇಶನ್ ನಿರ್ದೇಶನದ "ತಾಯ್ ಕಿಳವಿ" ಚಿತ್ರವನ್ನು ನಟ ಶಿವಕಾರ್ತಿಕೇಯನ್ ನಿರ್ಮಾಣ ಮಾಡಿದ್ದಾರೆ. ರಾಯ್ಚಲ್ ರಬೆಕ್ಕಾ, ಸಿಂಗಂಪುಲಿ, ಅರುಲ್ ದಾಸ್, ಮುನಿಶ್ ಕಾಂತ್ ಚಿತ್ರದ ತಾರಾಗಣದಲ್ಲಿದ್ದಾರೆ. ಈಗಾಗಲೇ ನೂರಾರು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿರುವ ರಾಧಿಕಾ ಶರತ್‌ಕುಮಾರ್ ಇತ್ತೀಚೆಗೆ ಪೋಷಕ ಪಾತ್ರಗಳಲ್ಲಿ ಹೆಚ್ಚು ನಟಿಸುತ್ತಿದ್ದಾರೆ. ಆದರೆ ಈ ಚಿತ್ರದ ತಾವೇ ಪ್ರಮುಖ ಪಾತ್ರ ನಿಭಾಯಿಸಿರುವುದು ವಿಶೇಷ.

ಫಸ್ಟ್ ವೀಕೆಂಡ್‌ನಲ್ಲೇ "ತಾಯ್ ಕಿಳವಿ" ಸಿನಿಮಾ 22 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡ ಘೋಷಿಸಿದೆ. ಕಾಮಿಡಿ ಜೊತೆಗೆ ಎಮೋಷನಲ್ ಅಂಶಗಳನ್ನು ಸೇರಿಸಿ ಚಿತ್ರವನ್ನು ಕಟ್ಟಿಕೊಡಲಾಗಿದೆ. ವಯಸ್ಸಾದ ಮುದುಕಿಯ ಪಾತ್ರದಲ್ಲಿ ರಾಧಿಕಾ ನಟಿಸಿದ್ದಾರೆ. ಅದಕ್ಕಾಗಿ ಗಂಟೆಗಳ ಕಾಲ ಮೇಕಪ್ ಹಾಕಿಸಿಕೊಂಡು ಶ್ರಮಿಸಿದ್ದಾರೆ. ಇತ್ತೀಚೆಗೆ ಕಮಲ್ ಹಾಸನ್ ಜೊತೆಗೆ ಸಿನಿಮಾ ನೋಡಿ ಸಂಭ್ರಮಿಸಿದ್ದಾರೆ.

ಸಿಂಪಲ್ ಕಥೆಯನ್ನು ಬಹಳ ಸೊಗಸಾಗಿ ತೆರೆಗೆ ತರುವಲ್ಲಿ ಚಿತ್ರತಂಡ ಗೆದ್ದಿದೆ. ಕೈಯಲ್ಲಿ ಸದಾ ಚುಟ್ಟಾ ಹಿಡಿದು, ತನ್ನ ಖಡಕ್ ಮಾತುಗಳಿಂದ ಎಲ್ಲರನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿರುವ ಗಟ್ಟಿಗಿತ್ತಿ ಪವುನುತಾಯಿ(ರಾಧಿಕಾ ಶರತ್‌ಕುಮಾರ್). ಕೊನೆಗೆ ತನ್ನ ಮಕ್ಕಳನ್ನು ಕೂಡ ಹತೋಟಿಯಲ್ಲಿ ಇಟ್ಟುಕೊಂಡಿರುತ್ತಾಳೆ. ಬಡ್ಡಿ ವ್ಯವಹಾರ ಮಾಡುತ್ತಾ ಊರಿನಲ್ಲಿ ಬಹಳ ಮೆರೆಯುತ್ತಿರುತ್ತಾಳೆ. ಆದರೆ ಇದ್ದಕ್ಕಿದ್ದಂತೆ ಆಕೆ ಪಾರ್ಶ್ವವಾಯು ಪೀಡಿತಳಾಗಿ ಹಾಸಿಗೆ ಹಿಡಿಯುವಂತಾಗುತ್ತದೆ. ಆ ಬಳಿಕ ಏನೆಲ್ಲಾ ನಡೆಯುತ್ತದೆ ಎನ್ನುವುದು ಚಿತ್ರದ ಒನ್‌ಲೈನ್ ಸ್ಟೋರಿ.

ಹಾಸಿಗೆ ಹಿಡಿದ ಪವುನುತಾಯಿ ಆಗಾಗ್ಗೆ ಎಡಗೈಯಿಂದ ಏನೋ ಸನ್ನೆ ಮಾಡುತ್ತಿರುತ್ತಾಳೆ. ಅದು ಏನು ಎಂದು ತಿಳಿದುಕೊಳ್ಳಲು ಸುತ್ತ ಇರುವವರೆಲ್ಲಾ ತಲೆ ಕೆಡಿಸಿಕೊಳ್ಳುತ್ತಾರೆ. ಮುಂದೆ ಏನೆಲ್ಲಾ ಆಗುತ್ತದೆ ಎನ್ನುವುದು "ತಾಯ್ ಕಿಳವಿ" ಸಿನಿಮಾ. ತಮಿಳು ಚಿತ್ರರಂಗ ಒಳ್ಳೆ ಸಿನಿಮಾಗಳನ್ನು ನಿರ್ಮಿಸುವಲ್ಲಿ ವಿಫಲವಾಗಿದೆ. ಸ್ಟಾರ್ ನಟರ ಸಿನಿಮಾಗಳು ಕೂಡ ಪ್ರೇಕ್ಷಕರನ್ನು ರಂಜಿಸುತ್ತಿಲ್ಲ.

ಸಂಕ್ರಾಂತಿ ಸಂಭ್ರಮದಲ್ಲಿ ದಳಪತಿ ವಿಜಯ್ ನಟನೆಯ 'ಜನ ನಾಯಗನ್' ಸಿನಿಮಾ ಬಿಡುಗಡೆ ಆಗಬೇಕಿತ್ತು. ಸೆನ್ಸಾರ್ ಸಮಸ್ಯೆಯಿಂದ ಸಿನಿಮಾ ಈವರೆಗೆ ತೆರೆಗೆ ಬಂದಿಲ್ಲ. ಹೀಗೆ ಯಾವುದೇ ಉತ್ತಮ ಸಿನಿಮಾ ತೆರೆಗೆ ಬರದೇ ಜನ "ತಾಯ್ ಕಿಳವಿ" ಚಿತ್ರವನ್ನು ನೋಡಲು ಮುಂದಾಗಿದ್ದಾರೆ. ಹಾಗಾಗಿ ಫಸ್ಟ್ ವೀಕೆಂಡ್‌ನಲ್ಲೇ ಸಿನಿಮಾ ಒಳ್ಳೆ ಗಳಿಕೆ ಕಂಡಿದೆ.

ರಾಧಿಕಾ ಶರತ್‌ಕುಮಾರ್ ಅನುಭವ, ಹಳ್ಳಿ ಹಿನ್ನೆಲೆ, ಕಾಮಿಡಿ ಹಾಗೂ ಎಮೋಷನಲ್ ಅಂಶಗಳು "ತಾಯ್ ಕಿಳವಿ" ಚಿತ್ರಕ್ಕೆ ಬಲ ತುಂಬಿದೆ. ಜಿಯೋ ಹಾಟ್‌ಸ್ಟರ್ ಚಿತ್ರದ ಓಟಿಟಿ ರೈಟ್ಸ್ ಖರೀದಿಸಿದೆ. ಏಪ್ರಿಲ್ ಮೊದಲ ವಾರದಲ್ಲಿ ಸಿನಿಮಾ ಸ್ಟ್ರೀಮಿಂಗ್ ಆರಂಭಿಸುವ ನಿರೀಕ್ಷೆಯಿದೆ.

More from Filmibeat

Read more about: kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X