ಧುರಂಧರ್ 2 Vs ಟಾಕ್ಸಿಕ್ ; ಬಾಕ್ಸಾಫೀಸ್ ಮಹಾಸಮರ - ಚಿತ್ರಮಂದಿರಕ್ಕೆ ನುಗ್ಗಲಿದ್ದಾರೆ 10 ಕೋಟಿ ಜನ ; ಹೊಸ ಇತಿಹಾಸ ಸೃಷ್ಟಿ?

ಕಲೆ ಮತ್ತು ಕಾಸು ಬೆರೆತ ಉದ್ಯಮ ಸಿನಿಮಾ. ಇಂತಹ ಉದ್ಯಮದಲ್ಲಿ ಸಾಮಾನ್ಯವಾಗಿ ಎರಡು ದೊಡ್ಡ ಚಿತ್ರಗಳು ಒಂದೇ ದಿನ ತೆರೆಗೆ ಬಂದರೆ ವ್ಯಾಪಾರ ಹಂಚಿಹೋಗುವ ಭಯ ಹಲವರಲ್ಲಿ ಇರುತ್ತೆ. ಚಿತ್ರದ ಕಥೆ-ನಿರೂಪಣೆಯಲ್ಲಿ ಚೂರು ಯಾಮಾರಿದರೂ ಕೂಡ ಇನ್ನೊಂದು ಚಿತ್ರದ ಮುಂದೆ ಮತ್ತೊಂದು ಚಿತ್ರ ಸೋಲುವ ಹೆದರಿಕೆ ಇರುತ್ತೆ. ಯಾವ ಚಿತ್ರ ನೋಡಬೇಕು, ಯಾವ ಚಿತ್ರ ನೋಡಬಾರದು ಎನ್ನುವ ಗೊಂದಲ ಕೂಡ ಪ್ರೇಕ್ಷಕರಿಗೆ ಕಾಡುತ್ತೆ.

ಈ ಕಾರಣಕ್ಕೆ ಒಂದೇ ದಿನ ದೊಡ್ಡ ದೊಡ್ಡ ಚಿತ್ರಗಳನ್ನು ಒಟ್ಟೊಟ್ಟಿಗೆ ಬಿಡುಗಡೆ ಮಾಡಬೇಡಿ ಎಂದು ಎಲ್ಲ ಭಾಷೆಯಲ್ಲಿ ಚಿತ್ರಪ್ರೇಮಿಗಳು ಮನವಿಯನ್ನು ಮಾಡಿಕೊಳ್ಳುತ್ತಾರೆ. ಆಯಾ ಚಿತ್ರರಂಗದ ದೊಡ್ಡವರು ಕೂಡ ಈ ಸಲಹೆಯನ್ನೇ ನೀಡುತ್ತಾರೆ. ಆದರೆ. ಪ್ರೇಕ್ಷಕರ ಅಭಿಲಾಷೆ ಮತ್ತು ಚಿತ್ರರಂಗದವರ ಸಲಹೆಯನ್ನು ಕಡೆಗಣಿಸಿ ಅನೇಕರು ತಮ್ಮ ಚಿತ್ರವನ್ನು ಮತ್ತೊಂದು ಚಿತ್ರದ ಎದುರು ಬಿಡುಗಡೆ ಮಾಡುತ್ತಾರೆ.

The 10-Crore Tsunami Dhurandhar 2 vs Toxic Set to Ignite India s Biggest Cinema Moment Ever

''ಕೆಜಿಎಫ್'' VS ''ಝೀರೋ''.. ''ಡಂಕಿ'' VS ''ಸಲಾರ್''.. ''ಲಗಾನ್ VS ಗದರ್''.. ''ಡಾನ್'' VS ''ಜಾನೆಮನ್''.. ಹೀಗೆ ಚಿತ್ರರಂಗದ ಇತಿಹಾಸದಲ್ಲಿ ಹತ್ತು ಹಲವು ಉದಾಹರಣೆಗಳಿವೆ. ಈ ಸಾಲಿನಲ್ಲಿ ಈ ವರ್ಷ ''ಟಾಕ್ಸಿಕ್'' ಮತ್ತು ''ಧುರಂಧರ್ 2'' ಕೂಡ ಸೇರಲಿದ್ದು ಹಿಂದೆಂದೂ ಕಂಡು ಕೇಳರಿಯದ ಸಿನಿ ಸಮರಕ್ಕೆ ಬಾಕ್ಸಾಫೀಸ್ ಸಜ್ಜಾಗುತ್ತಿದೆ ಎಂದೇ ಈ ಮುಖಾಮುಖಿಯನ್ನು ವಿಶ್ಲೇಷಿಸಲಾಗುತ್ತಿದೆ.

ಈ ಯುಗಾದಿಯಂದು ಈ ಇಬ್ಬರಲ್ಲಿ ಯಾರಿಗೆ ಬೇವು ಯಾರಿಗೆ ಬೆಲ್ಲ ಸಿಗುತ್ತೆ ಎನ್ನುವುದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆಯಾದರೂ ಈ ಬಾಕ್ಸಾಫೀಸ್ ಕದನ ಹತ್ತು ಕೋಟಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರಲಿದೆ ಎಂಬ ಮಾತು ಸದ್ಯ ಬಣ್ಣದ ಪ್ರಪಂಚದಲ್ಲಿ ಕೇಳಿ ಬರುತ್ತಿದ್ದು ಪ್ರದರ್ಶಕರು ಮತ್ತು ವಿತರಕರು ಈ ಮಾತುಗಳಿಗೆ ಸದ್ಯ ತಲೆಯಾಡಿಸಿದ್ದಾರೆ. 21ನೇ ಶತಮಾನದ ಅತೀ ದೊಡ್ಡ ಬಾಕ್ಸಾಫೀಸ್‌ ಸಮರಕ್ಕೆ ಮಾರ್ಚ್ 19 ಸಾಕ್ಷಿಯಾಗಲಿದೆ ಎಂದು ಹೇಳಿದ್ದಾರೆ.

ಈ ಕುರಿತು ''ಹಿಂದೂಸ್ತಾನ್ ಟೈಮ್ಸ್'' ಜೊತೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿರುವ ವ್ಯಾಪಾರ ವಿಶ್ಲೇಷಕ ಶ್ರೀಧರ್ ಪಿಳ್ಳೈ ಇಬ್ಬರಲ್ಲಿ ಯಾರಾದರೂ ಒಬ್ಬರು ತಮ್ಮ ನಿರ್ಧಾರ ಬದಲಿಸಿದ್ದರೆ, ವಾತಾವರಣ ಇನ್ನೂ ಕಳೆಗಟ್ಟುತ್ತಿತ್ತು ಎಂದು ಹೇಳಿದ್ದಾರೆ. ಆದರೂ ಭಾರತದಲ್ಲಿ ಉತ್ತಮವಾದ ವ್ಯಾಪಾರ ಮಾಡಲು ಅವಕಾಶ ಇರುವ ಹಿನ್ನೆಲೆ ಎರಡು ಚಿತ್ರಗಳು ಅತ್ಯದ್ಭುತವಾದ ಆರಂಭ ಪಡೆಯಲಿವೆ ಅದರಲ್ಲಿ ಅನುಮಾನವೇ ಬೇಡ ಎಂದಿದ್ಧಾರೆ. ಮೊದಲ ಮೂರು ದಿನದ ಭರ್ಜರಿ ಓಪನಿಂಗ್ ನಂತರ ಎರಡು ಚಿತ್ರಗಳ ಹಣೆಬರಹವನ್ನು ಆ ಚಿತ್ರದ ಗುಣಮಟ್ಟ ಮತ್ತು ಕಥಾವಸ್ತು ನಿರ್ಧಾರ ಮಾಡುತ್ತೆ ಎಂದು ಕೂಡ ಇದೇ ಶ್ರೀಧರ್ ಪಿಳ್ಳೈ ಹೇಳಿದ್ದಾರೆ.

ಇನ್ನೂ UFO ಸಂಸ್ಥೆಯ ಡೇಟಾ ವಿಶ್ಲೇಷಣೆ PROCAT (Data Analysis Platform) ಪ್ರಕಾರ ''ಧುರಂಧರ್'' ಮತ್ತು ''ಕೆಜಿಎಫ್ ಚಾಪ್ಟರ್ 2'' ಚಿತ್ರವನ್ನು ಭಾರತದಲ್ಲಿ ತಲಾ 4 ಕೋಟಿ ಜನ ಕಣ್ತುಂಬಿಕೊಂಡಿದ್ದರು. ಈ ಹಿನ್ನೆಲೆ ಈ ಬಾರಿ ಹತ್ತು ಕೋಟಿಯ ಗುರಿ ಸಾಧ್ಯವಾಗಬಹುದು ಎನ್ನುವ ಅಭಿಪ್ರಾಯವನ್ನು ಟ್ರೇಡ್ ವಿಶ್ಲೇಷಕರು ವ್ಯಕ್ತ ಪಡಿಸುತ್ತಿದ್ದು, ದೇಶದಲ್ಲಿ ಅಂದಾಜು 10,000 ಸ್ಕ್ರೀನ್‌ಗಳಿದ್ದು, ಎರಡು ಚಿತ್ರಗಳ ಪೈಕಿ ಒಂದು ಚಿತ್ರಕ್ಕೆ 4500 ಮತ್ತೊಂದು ಚಿತ್ರಕ್ಕೆ 5500 ಸ್ಕ್ರೀನ್‌ಗಳು ಸಿಗಬಹುದು ಎಂದು ಭವಿಷ್ಯವನ್ನು ಕೂಡ ಹೇಳುತ್ತಿದ್ದಾರೆ.

The 10-Crore Tsunami Dhurandhar 2 vs Toxic Set to Ignite India s Biggest Cinema Moment Ever

ಅಂದ್ಹಾಗೇ ''ಧುರಂಧರ್ 2'' ಮತ್ತು ''ಟಾಕ್ಸಿಕ್''ನ ಈ ಸಿನಿಯುದ್ದದಿಂದ ಹಣ ಗಳಿಸಲು ಈಗಾಗಲೇ ಹಲವರು ರಣತಂತ್ರಗಳನ್ನು ಹೆಣೆಯಲು ಶುರು ಮಾಡಿದ್ದಾರೆ. ಇದಕ್ಕೆ ಒಂದು ಉದಾಹರಣೆ ಎನ್ನುವಂತೆ UFO ಸಿನೆ ಮೀಡಿಯಾ ನೆಟ್‌ವರ್ಕ್, ಈ ಎರಡು ಚಿತ್ರಗಳ ಬಿಡುಗಡೆಯನ್ನೇ ಟ್ರಂಪ್ ಕಾರ್ಡ್ ಮಾಡಿಕೊಂಡು ತಮ್ಮ ಜಾಹೀರಾತುದಾರರಿಗಾಗಿ "ಇಂಡಿಯಾಸ್ ಬಿಗ್ಗೆಸ್ಟ್ ಸಿನಿಮಾ ಮೊಮೆಂಟ್ ಎವರ್" ಎಂಬ ಅಭಿಯಾನವನ್ನು ಶುರುಮಾಡಿದೆ. ವಿಶೇಷ ಅಂದರೆ ಇವರ ಈ ಜಾಹೀರಾತು ನೆಟವರ್ಕ್ ಭಾರತದ 1500 ನಗರಗಳಲ್ಲಿರುವ 4100ಕ್ಕೂ ಹೆಚ್ಚು ಚಿತ್ರಮಂದಿರಗಳನ್ನು ಒಳಗೊಂಡಿದೆ, ಇದರಲ್ಲಿ 2500+ ಮಲ್ಟಿಪ್ಲೆಕ್ಸ್ ಸ್ಕ್ರೀನ್‌ಗಳಿವೆ.

ಒಟ್ನಲ್ಲಿ ಸದ್ಯ ''ಧುರಂಧರ್ 2'' ಮತ್ತು ''ಟಾಕ್ಸಿಕ್'' ಚಿತ್ರ ಹತ್ತು ಕೋಟಿ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಕರೆತರಲಿವೆ ಎನ್ನುವ ಮಾತು ಸದ್ಯ ಬಲವಾಗಿ ಕೇಳಿ ಬರುತ್ತಿದೆ. ಈ ಬಾಕ್ಸಾಫೀಸ್ ಸಮರ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಹೊಸ ಇತಿಹಾಸ ಸೃಷ್ಟಿಸುವ ವಿಶ್ವಾಸ ಕೂಡ ಚಿತ್ರಪಂಡಿತರಿಗಿದೆ. ಜಿದ್ದಾಜಿದ್ದಿನ ಈ ಕಣದಲ್ಲಿ ಯಾರು ಸೋಲ್ತಾರೆ..? ಯಾರು ಗೆಲ್ತಾರೆ..? ಎನ್ನುವುದಕ್ಕೆ ಉತ್ತರ ಮಾರ್ಚ್ 19ರಂದು ಸಿಗಲಿದೆ. ಈ ಎರಡು ಚಿತ್ರಗಳಲ್ಲಿ ನಿಮ್ಮ ಬೆಂಬಲ ಯಾರಿಗೆ ? ಕಾಮೆಂಟ್ ಮೂಲಕ ನಮಗೆ ತಿಳಿಸಿ.

More from Filmibeat

English summary
"Trade experts forecast a 100-million-seat surge as Dhurandhar 2 and Toxic go head-to-head. Dive into the box office projections, screen counts, and why analysts call this the ultimate turning point for Indian cinema."
Read more about: ranveer singh yash filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X