The Girlfriend Box Office Day 3 ; ರಶ್ಮಿಕಾ ನಂಬಿದ ನಿರ್ಮಾಪಕರಿಗೆ ಬಂಪರ್ ಬೆಳೆ,ಗರ್ಲ್‌ಫ್ರೆಂಡ್ ಗಳಿಸಿದ್ದೆಷ್ಟು?

ಕನ್ನಡ ಚಿತ್ರರಂಗದಿಂದ ಇಲ್ಲಿಯವರೆಗೆ ಅನೇಕ ನಾಯಕಿಯರು ಪರಭಾಷೆಗೆ ವಲಸೆ ಹೋಗಿದ್ದಾರೆ. ಕೆಲವರು ಅಲ್ಲಿಯೇ ಬದುಕು ಕಟ್ಟಿಕೊಂಡರೆ ಇನ್ನು ಹಲವರು ಬಂದ ದಾರಿಗೆ ಸುಂಕ ಇಲ್ಲವೆಂಬಂತೆ ಮರಳಿ ಬಂದಿದ್ದಾರೆ. ಇನ್ನೂ ಹೀಗೆ ಗುಳೆ ಹೋಗುವರಲ್ಲಿ ಕೆಲವರು ಚಿತ್ರ ಮತ್ತು ಪಾತ್ರ ಚೆನ್ನಾಗಿದೆ ಎಂದು ಹೋದರೆ, ಇನ್ನು ಕೆಲವರು ಇಲ್ಲಿ ಸಿಗುವ ಸಂಭಾವನೆಗಿಂತ ಹೆಚ್ಚು ಅಲ್ಲಿ ಸಿಗುತ್ತೆ ಎಂದು ಹೋಗುತ್ತಾರೆ.

ಎಲ್ಲವೂ ಅವರವರ ನಿರ್ಧಾರ ಮತ್ತು ಬದುಕಾದರೂ ಸದ್ಯ ಹೀಗೆ ಕನ್ನಡದಿಂದ ಪರಭಾಷೆಗೆ ತೆರಳಿ ಅತ್ಯಲ್ಪ ಅವಧಿಯಲ್ಲಿಯೇ ಖ್ಯಾತಿಯ ತುತ್ತ ತುದಿಯನ್ನು ತಲುಪಿದ ರಶ್ಮಿಕಾ ಮಂದಣ್ಣ ಅವರ ಕೈಯನ್ನು ಸದ್ಯ ತೆಲುಗು ಪ್ರೇಕ್ಷಕರು ಮತ್ತೊಮ್ಮೆ ಹಿಡಿದಿದ್ದಾರೆ. ತಮ್ಮ ಸೊಸೆಯನ್ನು ಹೊತ್ತು ಮೆರೆಸುತ್ತಿದ್ದಾರೆ.

the-girlfriend-box-office-tally-rashmika-mandanna-starrer-rakes-in-over-6-98-cr-in-opening-weekend

ಹೌದು, ಎಲ್ಲರಿಗೆ ಗೊತ್ತಿರುವಂತೆ ಕಳೆದ ಶುಕ್ರವಾರ (ನವೆಂಬರ್ 7) ರಶ್ಮಿಕಾ ಮಂದಣ್ಣ ಮತ್ತು ದೀಕ್ಷಿತ್ ಶೆಟ್ಟಿ ಅಭಿನಯದ '' ದಿ ಗರ್ಲ್‌ಫ್ರೆಂಡ್‌'' ಚಿತ್ರ ತೆರೆಗೆ ಬಂದಿದೆ. ಆದರೆ.. ಮೊದಲ ದಿನ ಈ ಚಿತ್ರಕ್ಕೆ ಅಂದುಕೊಂಡ ಆರಂಭ ಸಿಕ್ಕಿರಲಿಲ್ಲ. ಕೇವಲ ₹ 1.3 ಕೋಟಿಯನ್ನಷ್ಟೇ ಈ ಚಿತ್ರ ಗಳಿಸಿತ್ತು. ಹೀಗಾಗಿ ಹಲವರು '' ದಿ ಗರ್ಲ್‌ಫ್ರೆಂಡ್‌'' ಕಥೆ ಖತಂ ಎಂದು ಅಂದುಕೊಂಡಿದ್ದರು.

ಆದರೆ ಇದು ಸೋಶಿಯಲ್ ಮೀಡಿಯಾ ಕಾಲ. 5G ಕಾಲ. ಈ ಕಾಲದಲ್ಲಿ ಎಂತೆಂತಹುದೋ ಪವಾಡಗಳು ನಡೆಯುತ್ತವೆ. ಇನ್ನು ಚಿತ್ರದ ವಿಚಾರದಲ್ಲಿ ಚಿತ್ರ ಚೆನ್ನಾಗಿದೆ ಎಂಬ ಮೆಚ್ಚುಗೆಯ ಪತ್ರ ಸಿಕ್ಕರೆ ಮುಗೀತು. ಜನರನ್ನು ಈ ಸೋಶಿಯಲ್ ಮೀಡಿಯಾ ಚಿತ್ರಮಂದಿರದತ್ತ ಕರೆತರುತ್ತೆ. '' ದಿ ಗರ್ಲ್‌ಫ್ರೆಂಡ್'' ವಿಚಾರದಲ್ಲಿಯೂ ಸದ್ಯ ಇದೇ ಆಗಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಮೊದಲ ದಿನ ಬಾಕ್ಸಾಫೀಸ್‌ನಲ್ಲಿ ನಿರಾಸೆ ಮೂಡಿಸಿದ್ದ ಈ ಚಿತ್ರ ಸದ್ಯ ರಶ್ಮಿಕಾ ಮಂದಣ್ಣ ಅವರಲ್ಲಿ ಗೆಲ್ಲುವ ಭರವಸೆ ಹೆಚ್ಚಿಸಿದೆ. ಮೂರು ದಿನದಲ್ಲಿ ₹ 6.98 ಕೋಟಿಯನ್ನು ಗಳಿಸಿದೆ.

ಸ್ಯಾಕ್ನಿಲ್ ಪ್ರಕಾರ ''ದಿ ಗರ್ಲ್‌ಫ್ರೆಂಡ್'' ಚಿತ್ರದ ಮೊದಲ ಮೂರು ದಿನದ ಗಳಿಕೆ ಈ ಕೆಳಗಿನಂತೆ ಇದೆ

ಮೊದಲ ದಿನ - ಶುಕ್ರವಾರ : ₹ 1.3 ಕೋಟಿ
ಎರಡನೇ ದಿನ - ಶನಿವಾರ : ₹ 2.55 ಕೋಟಿ
ಮೂರನೇ ದಿನ -ಭಾನುವಾರ : ₹ 3.1 ಕೋಟಿ

ಒಟ್ಟು ಗಳಿಕೆ ₹ 6.98 ಕೋಟಿ

ಹೀಗೆ ಸದ್ಯ ಮೂರು ದಿನದಲ್ಲಿ ''ದಿ ಗರ್ಲ್‌ಫ್ರೆಂಡ್'' ₹ 6.98 ಕೋಟಿಯನ್ನು ಗಳಿಸಿದೆ. ಇನ್ನೂ ಆಗಲೇ ಹೇಳಿದಂತೆ ಈ ಚಿತ್ರಕ್ಕೆ ಪ್ರೇಕ್ಷಕರ ಪ್ರೀತಿಯೂ ಸಿಕ್ಕಿದೆ. ವಿಮರ್ಷಕರ ಪ್ರೀತಿಯೂ ಸಿಕ್ಕಿದೆ. ರಶ್ಮಿಕಾ ಮಂದಣ್ಣ ಮತ್ತು ದೀಕ್ಷಿತ್ ಶೆಟ್ಟಿ ಅಭಿನಯದ ಬಗ್ಗೆ ವ್ಯಾಪಕವಾದ ಪ್ರಶಂಸೆಯ ಮಾತುಗಳು ಕೇಳಿ ಬರುತ್ತಿವೆ.

ಹೀಗಾಗಿ ಇಂದು ಸೋಮವಾರವಾದ ಹಿನ್ನೆಲೆ ಚಿತ್ರದ ಗಳಿಕೆಯಲ್ಲಿ ಕುಸಿತ ಕಂಡು ಬರಲಿದೆಯಾದರೂ ಈ ವಾರಾಂತ್ಯಕ್ಕೆ ಮತ್ತೆ '' ದಿ ಗರ್ಲ್‌ಫ್ರೆಂಡ್‌'' ಚಿತ್ರದ ಗಳಿಕೆಯಲ್ಲಿ ಏರಿಕೆ ಕಂಡು ಬರುವ ಸಾಧ್ಯತೆ ಇದೆ. ಹತ್ತು ಕೋಟಿಯ ಗಡಿಯನ್ನು ಅನಾಯಾಸವಾಗಿ ದಾಟಲಿರುವ ''ದಿ ಗರ್ಲ್‌ಫ್ರೆಂಡ್‌'' ಒಟ್ಟಾರೆ ಬಾಕ್ಸಾಫೀಸ್‌ನಲ್ಲಿ ಎಷ್ಟು ಗಳಿಸುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Weekend Winner! Rashmika Mandanna’s emotional thriller, 'The Girlfriend,' shows a steady upward trend at the box office. Read how the Day 3 surge sets the stage for crucial weekdays.
Read more about: actress rashmika mandanna telugu
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X