The Kerala Story 2 Box Office Day 3 ; ಮೊದಲ ದಿನ ಬರೀ 75 ಲಕ್ಷ, 3ನೇ ದಿನ? ಬಾಕ್ಸಾಫೀಸ್‌ನಲ್ಲಿ ಕೇರಳ ಸ್ಟೋರಿ ಜಾದೂ

ಬಾಲಿವುಡ್‌ನಲ್ಲಿ ಕಳೆದ ವರ್ಷ ಅಕ್ಷರಶಃ ಬರಗಾಲದ ವಾತಾವರಣ ಇತ್ತು. ಮಾಡಿದ ಎಲ್ಲ ಚಿತ್ರಗಳು ಒಂದಾದ ಮೇಲೊಂದರಂತೆ ದೊಪ್ಪನೆ ನೆಲಕ್ಕುರಳುತ್ತಿದ್ದ ಹಿನ್ನೆಲೆ ಆತಂಕ ಹಲವರಲ್ಲಿ ಮನೆ ಮಾಡಿತ್ತು. ಸಾಲದಕ್ಕೆ ದಕ್ಷಿಣ ಚಿತ್ರರಂಗದವರ ಅಬ್ಬರ. ಹಿಂದಿ ಮಾರುಕಟ್ಟೆಯಲ್ಲಿ ಸೌತ್ ಸ್ಟಾರ್‌ಗಳ ಅಬ್ಬರ ಬಾಲಿವುಡ್‌ನ ಬೆಚ್ಚಿ ಬೀಳಿಸಿತ್ತು.

ಆದರೆ.. ವರ್ಷಾಂತ್ಯದಲ್ಲಿ ಬಂದ ''ಧುರಂಧರ್'' ಮಲಗಿದ್ದ ಬಾಲಿವುಡ್‌ನ ಬಡಿದೆಬ್ಬಿಸಿತ್ತು. ಬಾಕ್ಸಾಫೀಸ್‌ನಲ್ಲಿ ಹಣದ ಮಳೆ ಆಯ್ತು. ''ಧುರಂಧರ್'' ತೋರಿಸಿದ ಗೆಲುವಿನ ಹಾದಿಯಲ್ಲಿಯೇ ವರ್ಷದ ಆರಂಭದಲ್ಲಿ ಬಾಲಿವುಡ್‌ ಹೆಜ್ಜೆ ಹಾಕುವ ಪ್ರಯತ್ನ ಮಾಡಿತು. ಆದರೆ .. ಸಾಧ್ಯವಾಗಲಿಲ್ಲ.

The Kerala Story 2 Box Office Day 3 Smashes 10 Crore Despite T20 World Cup Fever and Legal Turmoil

''ಇಕ್ಕೀಸ್''.. ''ಮರ್ದಾನಿ 3''.. ''ರಾಹು-ಕೇತು''.. ''ಹ್ಯಾಪಿ ಪಟೇಲ್''.. ''ಮಾಯಾಸಭಾ''.. '' ವಧ್ 2''.. ''ತು ಯಾ ಮೇ''.. ''ಭಾಬಿಜೀ ಘರ್ ಪರ್ ಹೈ''..

ಹೀಗೆ ಒಂದಾದ ಮೇಲೊಂದರಂತೆ ಬಂದ ಚಿತ್ರಗಳು ಮಕಾಡೆ ಮಲಗಿದವು. ''ಧುರಂಧರ್'' ನಂತರ ಬಾಲಿವುಡ್‌ನಲ್ಲಿ ಗೆದ್ದ ಚಿತ್ರ ಅಂದರೆ ಅದು ''ಬಾರ್ಡರ್ 2'' ಮಾತ್ರ. " ಓ ರೋಮಿಯೋ'' ಮತ್ತು ''ಮರ್ದಾನಿ 3'' ಚಿತ್ರದ ಸಾಧನೆ ಕೂಡ ಅಷ್ಟಕಷ್ಟೇ.

ಹೀಗಾಗಿ ಸದ್ಯ ಹಿಂದಿ ಉದ್ಯಮ ಮತ್ತೆ ಚಿಂತೆಗೀಡಾಗಿದೆ. ಈ ಚಿಂತೆಯನ್ನು ಸದ್ಯ ''ದಿ ಕೇರಳ ಸ್ಟೋರಿ 2'' ದೂರ ಮಾಡುವ ಲಕ್ಷಣಗಳು ಕಂಡು ಬರುತ್ತಿವೆ. ಯಾಕೆಂದರೆ, ಬ್ಯಾನ್ ಭಯ, ಕಾನೂನು ಸಮರದ ನಡುವೆ ಕಳೆದ ಶುಕ್ರವಾರ (ಫೆಬ್ರವರಿ 27) ಬಿಡುಗಡೆಯಾದ ''ದಿ ಕೇರಳ ಸ್ಟೋರಿ 2'' ಸದ್ಯ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ವಿಶ್ವಕಪ್ ಜ್ವರದ ನಡುವೆ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯುತ್ತಿದೆ. ಇದಕ್ಕೆ ಚಿತ್ರದ ಗಳಿಕೆಯಲ್ಲಿ ಕಂಡು ಬರುತ್ತಿರುವ ಏರಿಕೆಯೇ ಸಾಕ್ಷಿ.

ಹೌದು, ಅಸಲಿಗೆ ಫೆಬ್ರವರಿ 27ರಂದು ''ದಿ ಕೇರಳ ಸ್ಟೋರಿ 2'' ಬಿಡುಗಡೆಯಾಗುವುದು ಅನುಮಾನ ಎಂಬ ವಾತಾವರಣ ಇತ್ತು. ಆದರೆ, ಕೊನೆ ಕ್ಷಣದಲ್ಲಿ ಈ ಚಿತ್ರಕ್ಕೆ ಹಸಿರು ನಿಶಾನೆ ಸಿಕ್ಕಿತ್ತು. ಅಷ್ಟರಲ್ಲಿ ಬೆಳ್ಳಗ್ಗೆ ಮತ್ತು ಮಧ್ಯಾಹ್ನದ ಹೊತ್ತು ಸರಿದು ಸೂರ್ಯಾಸ್ತದ ಸಮಯ ಆಗಿತ್ತು. ಕೇವಲ ಸಂಜೆ ಮತ್ತು ರಾತ್ರಿಯ ಸಮಯದಲ್ಲಿ ಮಾತ್ರ ಮೊದಲ ದಿನ (ಫೆಬ್ರವರಿ 27) ಅಂದರೆ ಶುಕ್ರವಾರ ಪ್ರದರ್ಶನ ಕಂಡ ''ದಿ ಕೇರಳ ಸ್ಟೋರಿ 2'' ಬಾಕ್ಸಾಫೀಸ್‌ನಲ್ಲಿ 75 ಲಕ್ಷವನ್ನು ಮಾತ್ರ ಗಳಿಸಿತು

The Kerala Story 2 Box Office Day 3 Smashes 10 Crore Despite T20 World Cup Fever and Legal Turmoil

ಆದರೆ ಎರಡನೇ ದಿನ (ಫೆಬ್ರವರಿ 28) ಬಾಕ್ಸಾಫೀಸ್‌ನಲ್ಲಿ ಅಕ್ಷರಶಃ ಪವಾಡ ನಡೆಯಿತು. ನೂರಲ್ಲ, ಇನ್ನೂರಲ್ಲ, ಗಳಿಕೆಯಲ್ಲಿ 550 % ಏರಿಕೆ ಕಂಡು ಬಂತು. ಬಾಕ್ಸಾಫೀಸ್‌ ಅಂಕಿ ಅಂಶ ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ₹ 4.65 ಕೋಟಿಯನ್ನು ಚಿತ್ರ ಗಳಿಸಿತ್ತು. ಈ ಹಿನ್ನೆಲೆ ಭಾನುವಾರ ಈ ಚಿತ್ರದ ಗಳಿಕೆಯ ಕುರಿತು ಹಲವರಲ್ಲಿ ಕುತೂಹಲ ಇತ್ತು.

ಇನ್ನೂ ವರ್ಲ್ಡ್‌ ಕಪ್‌ನಲ್ಲಿ ನಿನ್ನೆ (ಭಾನುವಾರ-ಮಾರ್ಚ್1) ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಮಹತ್ವದ ಪಂದ್ಯ ಕೂಡ ಇತ್ತು. ಇದರಿಂದ ಚಿತ್ರದ ಗಳಿಕೆಯ ಮೇಲೆ ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಪಂದ್ಯದಿಂದ ಪರಿಣಾಮ ಆದರೂ ಕೂಡ ಶನಿವಾರದ ಗಳಿಕೆಗೆ ಹೋಲಿಸಿದರೆ ಭಾನುವಾರದ ಗಳಿಕೆಯಲ್ಲಿ 7% ಏರಿಕೆ ಕಂಡು ಬಂದಿದೆ. ''ಸ್ಯಾಕ್ನಿಲ್'' ವರದಿಯ ಪ್ರಕಾರ ಅಂದಾಜು 5 ಕೋಟಿಯನ್ನು ''ದಿ ಕೇರಳ ಸ್ಟೋರಿ 2'' ಭಾನುವಾರ (ಮಾರ್ಚ್ 1) ಕೊಳ್ಳೆ ಹೊಡೆದಿದೆ.

ಸ್ಯಾಕ್ನಿಲ್ ಪ್ರಕಾರ ''ದಿ ಕೇರಳ ಸ್ಟೋರಿ 2'' ಚಿತ್ರದ 3 ದಿನದ ಗಳಿಕೆ ಈ ಕೆಳಗಿನಂತೆ ಇದೆ.

ಮೊದಲ ದಿನ [ ಶುಕ್ರವಾರ ] ₹75 ಲಕ್ಷ

ಎರಡನೇ ದಿನ [ ಶನಿವಾರ ] ₹4.65 ಕೋಟಿ

ಮೂರನೇ ದಿನ [ ಭಾನುವಾರ ] ₹5 ಕೋಟಿ *ಅಂದಾಜು

ಒಟ್ಟು ಗಳಿಕೆ - ₹ 10.4 ಕೋಟಿ

ಹೀಗೆ ಮೂರು ದಿನದಲ್ಲಿ 10.4 ಕೋಟಿ ಗಳಿಸಿರುವ ''ದಿ ಕೇರಳ ಸ್ಟೋರಿ 2'' ಚಿತ್ರಕ್ಕೆ ಇಂದು (ಮಾರ್ಚ್‌ 2) ಮಹತ್ವದ ದಿನ. ಸೋಮವಾರದ ಈ ಅಗ್ನಿ ಪರೀಕ್ಷೆಯಲ್ಲಿ ಈ ಚಿತ್ರ ಪಾಸಾಗುತ್ತಾ..? ಎನ್ನುವುದನ್ನು ಕಾದು ನೋಡಬೇಕಿದೆ.

Disclaimer ; ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Banned, stayed, but unstoppable! The Kerala Story 2: Goes Beyond defies legal turmoil and cricket craze to register a steady ₹10.40 Cr weekend. Discover how word-of-mouth transformed this controversial sequel into a box office powerhouse in just 72 hours.
Read more about: bollywood the kerala story
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X