The Kerala Story 2 Box Office Day 2 ; ವಿವಾದಾತ್ಮಕ ಕೇರಳ ಸ್ಟೋರಿ ನೋಡಲು ನೂಕುನುಗ್ಗಲು-2ನೇ ದಿನ ಕೋಟಿ ಕೋಟಿ ಲೂಟಿ

ಬೆಳ್ಳಿತೆರೆಯ ಮೂಲಕ ನಮ್ಮ ದೇಶದ ಜನರಲ್ಲಿ ದ್ವೇಷದ ಬೀಜವನ್ನು ಬಿತ್ತಲಾಗುತ್ತಿದೆ ಎನ್ನುವ ಮಾತು ಇಂದು ನಿನ್ನೆಯದಲ್ಲ. ಬದಲಿಗೆ ಕಳೆದು ಹನ್ನೆರಡು-ಹದಿನಾಲ್ಕು ವರ್ಷಗಳಿಂದ ಈ ಮಾತು ಕೇಳಿ ಬರುತ್ತಲೇ ಇದೆ. ಮೊದಲೆಲ್ಲಾ ರಾಜಕೀಯ ರಂಗದಿಂದ ದೂರ ಇದ್ದು ಕ್ರೀಯಾಶೀಲತೆಯಿಂದ ಗಮನ ಸೆಳೆಯುತ್ತಿದ್ದ ಚಿತ್ರರಂಗ ಈಗ ರಾಜಕೀಯದ ಅಡಿಯಾಳು ಆಗಿದೆ ಎಂಬ ವಾದವನ್ನು ಕೂಡ ಹಲವರು ಮಾಡುತ್ತಲೇ ಇದ್ದಾರೆ.

ಇದಕ್ಕೆ ಪೂರಕವಾಗಿ ಧ್ರುವೀಕರಣ ತಂತ್ರದಡಿ ಹಲವು ಸಿನಿಮಾಗಳು ಬಂದಿವೆ. 'ಪ್ರೊಪಗಾಂಡಾ' ಸಿನಿಮಾ (ಅಜೆಂಡಾ ಆಧಾರಿತ) ಎಂಬ ಹಣೆಪಟ್ಟಿಯನ್ನೊತ್ತು ಬಂದ ಸಿನಿಮಾಗಳಿವು. ಆ ಪೈಕಿ ಕೆಲವು ಗೆದ್ದಿವೆ. ಇನ್ನೂ ಕೆಲವು ಸೋತಿವೆ. ಮತ್ತೂ ಕೆಲವು ಐತಿಹಾಸಿಕ ದಾಖಲೆಯನ್ನು ಕೂಡ ಬರೆದಿವೆ. ಸದ್ಯ ಅಡೆ ತಡೆಗಳನ್ನು ದಾಟಿಕೊಂಡು ಬಿಡುಗಡೆಯಾದ ''ದಿ ಕೇರಳ ಸ್ಟೋರಿ 2'' ಈ ಸಾಲಿನಲ್ಲಿ ಯಾವ ಸಾಲಿಗೆ ಸೇರುತ್ತೆ ಎನ್ನುವುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆಯಾದರೂ ಸದ್ಯ ''ದಿ ಕೇರಳ ಸ್ಟೋರಿ 2'' ಚಿತ್ರತಂಡಕ್ಕೆ ಬಂಪರ್ ಲಾಟರಿ ಹೊಡೆಯುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ.

the-kerala-story-2-defies-odds-massive-520-surge-blows-past-5-crore

ಹೌದು. ಅಸಲಿಗೆ ಫೆಬ್ರವರಿ 27ರಂದು ''ದಿ ಕೇರಳ ಸ್ಟೋರಿ 2'' ಬಿಡುಗಡೆಯಾಗುವುದು ಅನುಮಾನ ಎಂಬ ವಾತಾವರಣ ಇತ್ತು. ಆದರೆ, ಕೊನೆ ಕ್ಷಣದಲ್ಲಿ ಈ ಚಿತ್ರಕ್ಕೆ ಹಸಿರು ನಿಶಾನೆ ಸಿಕ್ಕಿತ್ತು. ಅಷ್ಟರಲ್ಲಿ ಬೆಳ್ಳಗ್ಗೆ ಮತ್ತು ಮಧ್ಯಾಹ್ನದ ಹೊತ್ತು ಸರಿದು ಸೂರ್ಯಾಸ್ತದ ಸಮಯ ಆಗಿತ್ತು. ಕೇವಲ ಸಂಜೆ ಮತ್ತು ರಾತ್ರಿಯ ಸಮಯದಲ್ಲಿ ಮಾತ್ರ ಮೊದಲ ದಿನ (ಫೆಬ್ರವರಿ 27) ಅಂದರೆ ಶುಕ್ರವಾರ ಪ್ರದರ್ಶನ ಕಂಡ ''ದಿ ಕೇರಳ ಸ್ಟೋರಿ 2'' ಬಾಕ್ಸಾಫೀಸ್‌ನಲ್ಲಿ 75 ಲಕ್ಷವನ್ನು ಮಾತ್ರ ಗಳಿಸಿತು. ಆದರೆ ಅಸಲಿ ಆಟ ಕಂಡು ಬಂದಿದ್ದು ನಿನ್ನೆ.

ನಿನ್ನೆ ( ಫೆಬ್ರವರಿ 28) ಭಾರತದೆಲ್ಲೆಡೆ ಶನಿವಾರ ಈ ಚಿತ್ರ ಹೌಸ್‌ಫುಲ್ ಪ್ರದರ್ಶನ ಕಂಡಿದೆ. ಅದರಲ್ಲಿಯೂ ದೆಹಲಿ, ಮುಂಬೈ ಅತೀ ಹೆಚ್ಚಿನ ಸ್ಕ್ರೀನ್‌ಗಳಲ್ಲಿ ''ದಿ ಕೇರಳ ಸ್ಟೋರಿ 2'' ಪ್ರದರ್ಶನ ಕಾಣ್ತಿದ್ದು ಬಹುತೇಕ ಶೋಗಳು ಹೌಸ್‌ಫುಲ್ ಆಗಿವೆ. ಮಧ್ಯ ಪ್ರದೇಶದ ಭೋಪಾಲ್‌ನಲ್ಲಿ ರಾತ್ರಿಯ ಪ್ರದರ್ಶನದ ಸಮಯದಲ್ಲಿ 47 % ಆಕ್ಸುಪೆನ್ಸಿ ಕಂಡು ಬಂದ ಹಿನ್ನೆಲೆ ಹಲವರು ಅಚ್ಚರಿಗೊಂಡಿದ್ದಾರೆ. ಇದೆಲ್ಲದಕ್ಕೂ ಕೈಗನ್ನಡಿ ಎಂಬಂತೆ ಮೊದಲ ದಿನಕ್ಕೆ ಹೋಲಿಸಿದರೆ ಚಿತ್ರದ ಎರಡನೇ ದಿನದ ಗಳಿಕೆಯಲ್ಲಿ 520% ಏರಿಕೆ ಕಂಡು ಬಂದಿದ್ದು ಚಿತ್ರ ಎರಡನೇ ದಿನ ₹4.65 ಕೋಟಿಯನ್ನು ಕೊಳ್ಳೆ ಹೊಡೆದಿದೆ ಎಂದು ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ವರದಿ ಮಾಡಿದೆ.

the-kerala-story-2-defies-odds-massive-520-surge-blows-past-5-crore

ಕೇರಳ ಸ್ಟೋರಿ VS ಕೇರಳ ಸ್ಟೋರಿ 2

2023ರಲ್ಲಿ ತೆರೆಗೆ ಬಂದ ''ದಿ ಕೇರಳ ಸ್ಟೋರಿ'' ಮೊದಲ ದಿನ ₹8. 3 ಕೋಟಿ ಕೊಳ್ಳೆ ಹೊಡೆದಿತ್ತು. ಚಿತ್ರಮಂದಿರದಿಂದ ಎತ್ತಂಗಡಿಯಾಗುವ ಮೊದಲು ''ಸ್ಯಾಕ್ನಿಲ್'' ವರದಿಯಂತೆ ಕೇವಲ ಭಾರತದಲ್ಲಿಯೇ ₹ 241.74 ಕೋಟಿಯನ್ನು ದೋಚಿತ್ತು. ಈ ಮೂಲಕ ಹೊಸ ದಾಖಲೆಯನ್ನು ಈ ಚಿತ್ರ ಬರೆದಿತ್ತು. ನ್ಯಾಯಾಲಯದಲ್ಲಿ ಪ್ರಕರಣ ಇದ್ದ ಹಿನ್ನೆಲೆ ''ದಿ ಕೇರಳ ಸ್ಟೋರಿ 2'' ಚಿತ್ರಕ್ಕೆ ಮೊದಲ ದಿನ (ಫೆಬ್ರವರಿ 27) ಹಿನ್ನಡೆಯಾದರೂ ಎರಡನೇ ದಿನ (ಫೆಬ್ರವರಿ 28) ಅಚ್ಚರಿಯ ಗಳಿಕೆಯನ್ನು ಈ ಚಿತ್ರ ಗಳಿಸಿದೆ. ಈ ಹಿನ್ನೆಲೆ ಮೊದಲ ಭಾಗದಂತೆ ಈ ಚಿತ್ರ ಕೂಡ ನಿರ್ಮಾಪಕ ವಿಫುಲ್ ಶಾ ಪಾಲಿಗೆ ಲಾಭದಾಯಕ ಸಿನಿಮಾ ಆಗಲಿದೆ ಎಂಬ ಮಾತು ಸದ್ಯ ಕೇಳಿ ಬರುತ್ತಿದೆ.


ಸಂಡೇ ಟೆಸ್ಟ್ ಮತ್ತು ಮುಂದಿನ ಭವಿಷ್ಯ

ನಿನ್ನೆಯ ಏರಿಕೆ ನಂತರ ಇಂದು ಈ ಚಿತ್ರದ ಗಳಿಕೆಯ ಮೇಲೆ ಹಲವರ ಚಿತ್ತ ಇದೆ. ಬಾಲಿವುಡ್ ಪಂಡಿತರ ಪ್ರಕಾರ ಚಿತ್ರ ಇಂದು ₹6 ಕೋಟಿಗೂ ಅಧಿಕ ಹಣವನ್ನು ಗಳಿಸುವ ಸಾಧ್ಯತೆ ಇದೆ. ಆದರೆ ಇಂದು ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ ಟಿ20 ವರ್ಲ್ಡ್ ಕಪ್‌ ಪಂದ್ಯದಲ್ಲಿ ಸೆಣಸಲಿದೆ. ಈ ಹಿನ್ನೆಲೆ ಸಂಜೆ ಮತ್ತು ರಾತ್ರಿಯ ಗಳಿಕೆಯಲ್ಲಿ ಕುಸಿತ ಕಂಡು ಬರುವ ಸಾಧ್ಯತೆ ಕೂಡ ಇದೆ. ಇಂದು ನಿನ್ನೆಯ ಗಳಿಕೆಗಿಂತ ಚಿತ್ರ ಹೆಚ್ಚು ಗಳಿಸಿದರೆ ಸೋಮವಾರದ ಅಗ್ನಿ ಪರೀಕ್ಷೆಯಲ್ಲಿಯೂ ಕೂಡ ''ದಿ ಕೇರಳ ಸ್ಟೋರಿ 2'' ಪಾಸಾದರೆ ಮಾರ್ಚ್ 19ರವರೆಗೆ ''ದಿ ಕೇರಳ ಸ್ಟೋರಿ-2'' ಅಬ್ಬರ ಬಾಕ್ಸಾಫೀಸ್‌ನಲ್ಲಿ ಮುಂದುವರೆಯುವುದು ಖಚಿತ.

Disclaimer ; ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Check out The Kerala Story 2 Day 2 box office collection reports. After a slow start, the film recorded a massive 520% jump, earning ₹5.40 crore. Get the latest updates on the film's performance, occupancy rates, and how it overcame its delayed release.
Read more about: bollywood the kerala story
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X