The Kerala Story 2 Boxoffice: ಮೊದಲ ವಾರಕ್ಕೆ 'ಕೇರಳ ಸ್ಟೋರಿ' ಸುಸ್ತು; 25 ಕೋಟಿ ಗಳಿಸಲು ಹರಸಾಹಸ
ವಿಪುಲ್ ಶಾ ನಿರ್ಮಾಣದ 'ದಿ ಕೇರಳ ಸ್ಟೋರಿ' ಮೊದಲ ಭಾಗ ಸೃಷ್ಟಿಸಿದ ಸಂಚಲನ ಅಷ್ಟಿಷ್ಟಲ್ಲ. ದೇಶಾದ್ಯಂತ ಭಾರಿ ವಿವಾದ ಮತ್ತು ಚರ್ಚೆಗೆ ಈಡಾಗಿದ್ದ ಆ ಸಿನಿಮಾ, ಬಾಕ್ಸ್ ಆಫೀಸ್‌ನಲ್ಲಿ ಹಣದ ಮಳೆ ಸುರಿಸಿತ್ತು. ಈಗ ಅದರ ಮುಂದುವರಿದ ಭಾಗ 'ದಿ ಕೇರಳ ಸ್ಟೋರಿ- 2: ಗೋಸ್ ಬಿಯಾಂಡ್' ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ.
ಮೊದಲ ಭಾಗಕ್ಕೆ ಹೋಲಿಸಿದರೆ ಈ ಎರಡನೇ ಭಾಗದ ಕಲೆಕ್ಷನ್ ಸ್ವಲ್ಪ ಕಡಿಮೆಯೇ ಎನ್ನಬಹುದು. ಮೊದಲ ವಾರದ ಅಂತ್ಯಕ್ಕೆ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸಾಧಾರಣ ಪ್ರದರ್ಶನ ನೀಡಿದೆ. ಚಿತ್ರದ ಗಳಿಕೆ ಮತ್ತು ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಮಾರ್ಚ್ 5, 2026ರ ಗುರುವಾರದ ವೇಳೆಗೆ ಈ ಸಿನಿಮಾ ತನ್ನ ಮೊದಲ ವಾರವನ್ನು ಪೂರೈಸಿದೆ. ಸದ್ಯದ ಮಾಹಿತಿ ಪ್ರಕಾರ, ಸಿನಿಮಾ ಇನ್ನೂ 25 ಕೋಟಿ ರೂಪಾಯಿಗಳ ಗಡಿಯನ್ನು ದಾಟಲು ಕಷ್ಟಪಡುತ್ತಿದೆ. ಮೊದಲ ಭಾಗಕ್ಕೆ ಹೋಲಿಸಿದರೆ ಇದು ನಾಲ್ಕನೇ ಒಂದು ಭಾಗದಷ್ಟು ಮಾತ್ರ ಗಳಿಕೆ ಮಾಡಿದೆ ಎನ್ನಲಾಗುತ್ತಿದೆ.
ಮೊದಲ ವಾರದ ಗಳಿಕೆ?
'ದಿ ಕೇರಳ ಸ್ಟೋರಿ 2' ಸಿನಿಮಾ ಮೊದಲ ದಿನ ಅಂದರೆ ಶುಕ್ರವಾರ ಕೇವಲ 75 ಲಕ್ಷ ರೂಪಾಯಿ ಗಳಿಸುವ ಮೂಲಕ ಅತಿ ಕಡಿಮೆ ಆರಂಭ ಪಡೆದಿತ್ತು. ಆದರೆ ಶನಿವಾರ ಮತ್ತು ಭಾನುವಾರ ಚಿತ್ರದ ಗಳಿಕೆಯಲ್ಲಿ ಭಾರಿ ಚೇತರಿಕೆ ಕಂಡುಬಂದಿತು. ವಾರಾಂತ್ಯದ ರಜಾ ದಿನಗಳಲ್ಲಿ ಜನರು ಥಿಯೇಟರ್‌ಹೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು.
ಭಾನುವಾರ ಒಂದೇ ದಿನ ಈ ಸಿನಿಮಾ 4.75 ಕೋಟಿ ರೂಪಾಯಿ ಗಳಿಸುವ ಮೂಲಕ ಅತಿ ಹೆಚ್ಚು ಕಲೆಕ್ಷನ್ ದಾಖಲಿಸಿತ್ತು. ಆದರೆ ಸೋಮವಾರದಿಂದ ಚಿತ್ರದ ಗಳಿಕೆ ಕುಸಿಯತೊಡಗಿತು. ಗುರುವಾರ (7ನೇ ದಿನ) ಸಿನಿಮಾ ಎಲ್ಲಾ ಭಾಷೆಗಳಿಂದ 2.19 ಕೋಟಿ ರೂಪಾಯಿ ಗಳಿಸಿದೆ. ಇದರೊಂದಿಗೆ ಮೊದಲ ವಾರದ ಒಟ್ಟು ಭಾರತೀಯ ನೆಟ್ ಕಲೆಕ್ಷನ್ 22.34 ಕೋಟಿ ರೂಪಾಯಿ ತಲುಪಿದೆ.
ಹೋಳಿ ರಜೆ ತಂದ ಅದೃಷ್ಟ...
ಸೋಮವಾರ ಈ ಚಿತ್ರದ ಕಲೆಕ್ಷನ್‌ನಲ್ಲಿ ಸುಮಾರು 47% ರಷ್ಟು ಇಳಿಕೆ ಕಂಡುಬಂದಿತ್ತು. ಇದು ಚಿತ್ರತಂಡಕ್ಕೆ ತುಸು ಆತಂಕ ತಂದಿತ್ತು. ಆದರೆ ಮಂಗಳವಾರ ಹೊಳಿ ಹಬ್ಬದ ರಜೆ ಇದ್ದ ಕಾರಣ, ಸಿನಿಮಾಗೆ ಮತ್ತೆ ಜೀವ ಬಂದಂತಾಯಿತು. ಸೋಮವಾರಕ್ಕಿಂತ ಮಂಗಳವಾರದ ಗಳಿಕೆ 60% ರಷ್ಟು ಹೆಚ್ಚಾಯಿತು. ಬುಧವಾರ ಮತ್ತು ಗುರುವಾರ ಮತ್ತೆ ಕಲೆಕ್ಷನ್ ಸ್ವಲ್ಪ ಕೆಳಮುಖವಾಗಿದೆ.
ಎಲ್ಲೆಲ್ಲಿ ರೆಸ್ಪಾನ್ಸ್ ಹೇಗಿದೆ?
-ಮುಂಬೈ: ಇಲ್ಲಿ ಒಟ್ಟಾರೆ 12% ರಷ್ಟು ಆಕ್ಯುಪೆನ್ಸಿ ಕಂಡುಬಂದಿದೆ. ರಾತ್ರಿ ಶೋಗಳಿಗೆ ಹೆಚ್ಚಿನ ಜನ ಬರುತ್ತಿದ್ದಾರೆ.
-ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ 232 ಶೋಗಳು ನಡೆಯುತ್ತಿದ್ದು, ಸುಮಾರು 11.5% ರಷ್ಟು ಪ್ರೇಕ್ಷಕರು ಸಿನಿಮಾ ನೋಡುತ್ತಿದ್ದಾರೆ.
-ಚೆನ್ನೈ: ಇಲ್ಲಿ ಕೇವಲ 30 ಶೋಗಳಿದ್ದರೂ, ಸುಮಾರು 20% ರಷ್ಟು ಜನಸಂದಣಿ ದಾಖಲಾಗಿದೆ. ಇದು ಉಳಿದ ನಗರಗಳಿಗಿಂತ ಉತ್ತಮವಾಗಿದೆ.
-ಹೈದರಾಬಾದ್ ಮತ್ತು ದೆಹಲಿ: ಈ ನಗರಗಳಲ್ಲಿ ಸರಾಸರಿ 9% ರಷ್ಟು ಆಕ್ಯುಪೆನ್ಸಿ ದಾಖಲಾಗಿದೆ.
ಬಜೆಟ್ ಮತ್ತು ಲಾಭದ ಲೆಕ್ಕಾಚಾರ...
ಮೊದಲ 'ಕೇರಳ ಸ್ಟೋರಿ' ಕೇವಲ 15 ಕೋಟಿ ಬಜೆಟ್ನಲ್ಲಿ ತಯಾರಾಗಿ 200 ಕೋಟಿಗೂ ಅಧಿಕ ಗಳಿಸಿತ್ತು. ಆದರೆ ಈ ಎರಡನೇ ಭಾಗದ ಬಜೆಟ್ ಸುಮಾರು 30 ಕೋಟಿ ರೂಪಾಯಿ ಎನ್ನಲಾಗಿದೆ. ಸಿನಿಮಾ ಲಾಭದ ಹಾದಿಗೆ ಬರಬೇಕಾದರೆ ಇನ್ನೂ ಕನಿಷ್ಠ 8 ಕೋಟಿ ರೂಪಾಯಿ ಗಳಿಸಬೇಕಿದೆ.
ಈ ವಾರ ದೊಡ್ಡ ಸಿನಿಮಾಗಳ ಬಿಡುಗಡೆ ಇಲ್ಲದಿರುವುದು ಈ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಬಹುದು. ಎರಡನೇ ವಾರಾಂತ್ಯದಲ್ಲಿ ಸಿನಿಮಾ ಮತ್ತೆ ಪಿಕಪ್ ಆಗುವ ನಿರೀಕ್ಷೆ ಇದೆ. ಮಾರ್ಚ್ 19 ರಂದು ರಣವೀರ್ ಸಿಂಗ್ ಅವರ 'ಧುರಂಧರ್ 2' ಬಿಡುಗಡೆಯಾಗುವವರೆಗೂ ಈ ಚಿತ್ರಕ್ಕೆ ಮೈದಾನ ಮುಕ್ತವಾಗಿದೆ.
ವಿವಾದ ಸೃಷ್ಟಿಸಿದ್ದ ಸಿನಿಮಾ
ಈ ಚಿತ್ರವು ಕೇರಳ ಮಾತ್ರವಲ್ಲದೆ ಭಾರತದ ವಿವಿಧ ಭಾಗಗಳ ಮಹಿಳೆಯರು ಎದುರಿಸುವ ಸಮಸ್ಯೆಗಳ ಬಗ್ಗೆ ಕಥೆ ಹೊಂದಿದೆ. ಬಿಡುಗಡೆಗೆ ಮುನ್ನ ಕೇರಳ ಹೈಕೋರ್ಟ್ ಈ ಚಿತ್ರಕ್ಕೆ ತಡೆ ನೀಡಿತ್ತು. ನಂತರ ಸೆನ್ಸಾರ್ ಮಂಡಳಿಯ ಮರುಪರಿಶೀಲನೆ ಬಳಿಕ ಸಿನಿಮಾ ಪರದೆಗೆ ಬಂದಿದೆ. ಕಾಮಾಖ್ಯ ನಾರಾಯಣ್ ಸಿಂಗ್ ನಿರ್ದೇಶನದ ಈ ಚಿತ್ರದಲ್ಲಿ ಉಲ್ಕಾ ಗುಪ್ತಾ ಮತ್ತು ಅದಿತಿ ಭಾಟಿಯಾ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಯಾವ ರೀತಿ ಮ್ಯಾಜಿಕ್ ಮಾಡಲಿದೆ ಎಂದು ಕಾದು ನೋಡಬೇಕು.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











