ಮಹಾವತಾರ್ ನರಸಿಂಹ ಘರ್ಜನೆಗೆ ಸಾಹೋ ದಾಖಲೆ ಚೆಲ್ಲಾಪಿಲ್ಲಿ, 24 ದಿನದಲ್ಲಿ ಆನಿಮೇಷನ್ ಚಿತ್ರ ಗಳಿಸಿದ್ದೆಷ್ಟು ?

ಬಾಕ್ಸಾಫೀಸ್ ಅಚ್ಚರಿಯ ಗೂಡು. ಇಲ್ಲಿ ಯಾವತ್ತು ಯಾವ ಸಿನಿಮಾ ಚಿನ್ನದ ಬೆಳೆ ಬೆಳೆಯುತ್ತೆ. ಯಾವ ಸಿನಿಮಾ ಹೇಳ ಹೆಸರಿಲ್ಲದಂತೆ ಕಾಣೆಯಾಗುತ್ತೆ ಎನ್ನುವುದು ಹೇಳಲು ಸಾಧ್ಯ ಇಲ್ಲ. ಕೆಲ ಒಮ್ಮೆ ವ್ಯಾಪಕವಾದ ನಿರೀಕ್ಷೆಯನ್ನು ಮೂಡಿಸಿದ ಚಿತ್ರ ಇಲ್ಲಿ ಮಕಾಡೆ ಮಲಗಿದರೆ, ಇನ್ನೂ ಕೆಲ ಒಮ್ಮೆ ಯಾವ ನಿರೀಕ್ಷೆ ಇರದ ಚಿತ್ರ ದಿಗ್ಗನೆ ಎದ್ದು ಬಂದು ಸದ್ದು ಮಾಡಲು ಶುರು ಮಾಡುತ್ತೆ.

ಎಲ್ಲರನ್ನೂ ತನ್ನತ್ತ ಆಯಸ್ಕಾಂತದಂತೆ ಸೆಳೆದು ಅಚ್ಚರಿಯನ್ನು ಮೂಡಿಸುತ್ತೆ. ಬಾಕ್ಸಾಫೀಸ್‌ನಲ್ಲಿ ಐತಿಹಾಸಿಕ ದಾಖಲೆಯನ್ನು ಕೂಡ ಬರೆಯುತ್ತೆ. ಇದಕ್ಕೆ ''ಮಹಾವತಾರ್ ನರಸಿಂಹ'' ಸದ್ಯದ ಉದಾಹರಣೆ.

The New Box Office King Mahavatar Narsimha Beats Prabhas s Saaho

ಹೌದು, ''ಮಹಾವತಾರ್ ನರಸಿಂಹ'' ಸದ್ಯದ ಸಮ್ಮೋಹಕ ಶಕ್ತಿ.ಹೊಂಬಾಳೆ ಸಂಸ್ಥೆಯ ಸಹಯೋಗ ಸಹಕಾರದ ಜೊತೆ ಈ ಚಿತ್ರ ತೆರೆಗೆ ಬಂದಾಗ, ಯಾರು ತಾನೇ ಈ ಚಿತ್ರ ಇಂತಹದ್ದೊಂದು ಪವಾಡ ಮಾಡುತ್ತೆ ಎಂದು ನಿರೀಕ್ಷೆ ಮಾಡಿದ್ದರು. ಬದಲಿಗೆ ಸೂಪರ್ ಸ್ಟಾರ್ ಗಳ ಚಿತ್ರಗಳೇ ಚಿತ್ರಮಂದಿರದಲ್ಲಿ ಓಡುವುದು ಕಷ್ಟ ಎನ್ನುವ ಈ ವಾತಾವರಣದಲ್ಲಿ ಈ ಆನಿಮೇಷನ್ ಚಿತ್ರವನ್ನು ಯಾರು ನೋಡುತ್ತಾರೆ ಎಂದೇ ಎಲ್ಲರೂ ಅಂದುಕೊಂಡಿದ್ದರು.

ಆದರೆ ಎಲ್ಲರ ಲೆಕ್ಕಾಚಾರವನ್ನು ಬುಡಮೇಲಾಗಿಸಿದ ''ಮಹಾವತಾರ್ ನರಸಿಂಹ'' ಇಲ್ಲಿಯವರೆಗೆ ಹತ್ತು ಹಲವು ದಾಖಲೆಗಳನ್ನು ಮುರಿದಿದೆ. ಸದ್ಯ ಪ್ರಭಾಸ್ ಅಭಿನಯದ ಸಾಹೋ ಚಿತ್ರದ ದಾಖಲೆ ಕೂಡ ''ಮಹಾವತಾರ್ ನರಸಿಂಹ''ನ ಘರ್ಜನೆಯ ಮುಂದೆ ಧೂಳಿಪಟವಾಗಿದೆ.

ಹೌದು, ''ಮಹಾವತಾರ್ ನರಸಿಂಹ'' ಚಿತ್ರದಂತೆಯೇ ಸಾಹೋ ಕೂಡ ಪ್ಯಾನ್ ಇಂಡಿಯಾ ಲೆವಲ್‌ನಲ್ಲಿ ಬಿಡುಗಡೆ ಆಗಿತ್ತು. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ತೆಲುಗಿನಲ್ಲಿ ₹152.68 ಕೋಟಿಯನ್ನು ಗಳಿಸಿದ್ದ ಈ ಚಿತ್ರ ಹಿಂದಿಯಲ್ಲಿ ₹145.67 ಕೋಟಿ ಹಣವನ್ನು ಗಳಿಸಿತ್ತು. ಚಿತ್ರದ ಒಟ್ಟಾರೆ ಗಳಿಕೆ ₹ 310.60 ಕೋಟಿಯಾಗಿತ್ತು.

ಈಗ ''ಮಹಾವತಾರ್ ನರಸಿಂಹ'' ಹಿಂದಿಯಲ್ಲಿ ''ಸಾಹೋ'' ಮಾಡಿದ್ದ ಗಳಿಕೆಯನ್ನು ಹಿಂದಿಕ್ಕಿದೆ. 24 ದಿನದಲ್ಲಿ ₹147.3 ಕೋಟಿಯನ್ನು ಕೇವಲ ಹಿಂದಿಯಲ್ಲಿ ಗಳಿಸಿದೆ. ಈ ಮೂಲಕ ಹಿಂದಿ ಡಬ್ ಆಗಿ ದಾಖಲೆ ಬರೆದ ದಕ್ಷಿಣ ಭಾರತೀಯ ಚಿತ್ರಗಳ ಪಟ್ಟಿಯಲ್ಲಿ ''ಮಹಾವತಾರ್ ನರಸಿಂಹ'' ಚಿತ್ರ 8ನೇ ಸ್ಥಾನಕ್ಕೇರಿದೆ.

The New Box Office King Mahavatar Narsimha Beats Prabhas s Saaho


ಹಿಂದಿಗೆ ಡಬ್ ಆಗಿ ಅಬ್ಬರಿಸಿದ ದಕ್ಷಿಣ ಭಾರತದ 8 ಚಿತ್ರಗಳ ಪಟ್ಟಿ

1. ಪುಷ್ಪ 2 : ₹830.10 ಕೋಟಿ

2. ಬಾಹುಬಲಿ 2 : ₹510.99 ಕೋಟಿ

3.ಕೆಜಿಎಫ್ 2 : ₹434.70 ಕೋಟಿ

4.ಕಲ್ಕಿ 2898 ಎಡಿ: ₹294.25 ಕೋಟಿ .

5.ಆರ್‌ಆರ್‌ಆರ್: ₹274.31 ಕೋಟಿ.

6. 2.0 : ₹189.55 ಕೋಟಿ .

7. ಸಲಾರ್ : ₹153.84 ಕೋಟಿ

8. ಮಹಾವತಾರ ನರಸಿಂಹ ₹147.3 ಕೋಟಿ

ಅಂದ್ಹಾಗೇ ''ಸ್ಯಾಕ್ನಿಲ್'' ಪ್ರಕಾರ ಈ 24 ದಿನದಲ್ಲಿ ''ಮಹಾವತಾರ್ ನರಸಿಂಹ' ₹209.93 ಕೋಟಿಯನ್ನು ಗಳಿಸಿದೆ. ಇನ್ನು ''ಹೊಂಬಾಳೆ ಸಂಸ್ಥೆ'' ಕೂಡ ಈ ಗಳಿಕೆಯ ಲೆಕ್ಕವನ್ನು ಹಂಚಿಕೊಂಡಿದ್ದು ದೇಶವಲ್ಲ ಬದಲಿಗೆ ವಿಶ್ವವ್ಯಾಪಿ ''ಮಹಾವತಾರ್ ನರಸಿಂಹ'' ಚಿತ್ರ ಆರು ದಿನದ ಹಿಂದೆಯೇ ₹210 ಕೋಟಿಯನ್ನು ಗಳಿಸಿದೆ ಎಂದು ಹೇಳಿದೆ. ''ಸ್ಯಾಕ್ನಿಲ್'' ಈ 24 ದಿನದಲ್ಲಿ ವರ್ಲ್ಡ್ ವೈಲ್ಡ್ ಕಲೆಕ್ಷನ್ ₹257 ಕೋಟಿಯಾಗಿದೆ ಎಂದು ಉಲ್ಲೇಖಿಸಿದೆ.

ಒಟ್ನಲ್ಲಿ ಸದ್ಯ ''ಮಹಾವತಾರ್ ನರಸಿಂಹ'' ಬಾಕ್ಸಾಫೀಸ್‌ನಲ್ಲಿ ಅಬ್ಬರಿಸುತ್ತಿದ್ದು ''ಕೂಲಿ'' ಮತ್ತು ''ವಾರ್ 2'' ಅಬ್ಬರದ ನಡುವೆ ಈ ಚಿತ್ರ ಇನ್ನೂ ಎಷ್ಟು ಹಣ ಗಳಿಸುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
The box office landscape is changing. An unexpected animated hit, 'Mahavatar Narsimha,' has beaten the action spectacle 'Saaho,' starring Prabhas. Discover how this film achieved a historic feat.
Read more about: bollywood filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X