ಧುರಂಧರ್ 2 ಅಬ್ಬರ, ಕೆಜಿಎಫ್ 2 ದಾಖಲೆ ಉಡೀಸ್; ಬಾಕ್ಸಾಫೀಸ್‌ನಲ್ಲಿ ರಾಕಿಗೆ ಸೆಡ್ಡು ಹೊಡೆದ ಹಮ್ಜಾ
''ಕೆಜಿಎಫ್'' ಮತ್ತು ''ಕೆಜಿಎಫ್ 2'' ಕನ್ನಡದ ಕೀರ್ತಿ ಪತಾಕೆಯನ್ನು ಹಾರಿಸಿದ ಸಿನಿಮಾ. ಕನ್ನಡಿಗರ ಹೆಮ್ಮೆಯ ಸಿನಿಮಾ. 2018ರಲ್ಲಿ ಬಂದ ''ಕೆಜಿಎಫ್'' ಕನ್ನಡ ಚಿತ್ರರಂಗದ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದ್ದರೆ, ನಾಲ್ಕು ವರ್ಷದ ಹಿಂದೆ ತೆರೆಗೆ ಬಂದ ''ಕೆಜಿಎಫ್ 2'' ಹೊಸ ಚರಿತ್ರೆ ಬರೆದಿತ್ತು. ಭಾರತದಲ್ಲಿ ಅತೀ ಹೆಚ್ಚು ಹಣ ಗಳಿಸಿದ ಭಾರತದ ಚಿತ್ರಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ''ಕೆಜಿಎಫ್ 2'' ಪಾಲಾಗಿತ್ತು.
ಆದರೆ ಈಗ ಈ ಸ್ಥಾನ ''ಧುರಂಧರ್ 2'' ಪಾಲಾಗಿದೆ. ಬಾಕ್ಸಾಫೀಸ್‌ನ ಕದನದಲ್ಲಿ ''ಧುರಂಧರ್ 2'' ಅಬ್ಬರದ ಮುಂದೆ ''ಕೆಜಿಎಫ್ 2''ನ ಭವ್ಯವಾದ ಸಾಮ್ರಾಜ್ಯ ಪತನವಾಗಿದೆ. ಅದು ಕೇವಲ ಹನ್ನೊಂದು ಹನ್ನೆರಡು ದಿನದಲ್ಲಿ ಅನ್ನೋದು ವಿಶೇಷ.

ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ''ಕೆಜಿಎಫ್ 2'' ಭಾರತದಲ್ಲಿ ಹೆಚ್ಚು ಕಡಿಮೆ 75 ದಿನ ಪ್ರದರ್ಶನ ಕಂಡಿತ್ತು. 75 ದಿನದಲ್ಲಿ ಕೇವಲ ಭಾರತದಲ್ಲಿ ₹859.70 ಕೋಟಿಯನ್ನು ದೋಚಿತ್ತು. ಸದ್ಯ ''ಧುರಂಧರ್ 2'' ಹನ್ನೆರಡು ದಿನಗಳ ಯಶಸ್ವಿ ಪ್ರದರ್ಶನ ಕಂಡಿದ್ದು ಈ ಹನ್ನೆರಡು ದಿನದಲ್ಲಿ ₹872.17 ಕೋಟಿಯನ್ನು ಕೊಳ್ಳೆ ಹೊಡೆದಿದೆ. ಈ ಮೂಲಕ ''ಕೆಜಿಎಫ್ 2'' ಚಿತ್ರದ ಗಳಿಕೆಯನ್ನು ಹಿಂದಿಕ್ಕಿದೆ. ಭಾರತದಲ್ಲಿ ಅತೀ ಹೆಚ್ಚು ಹಣ ಗಳಿಸಿದ ಚಿತ್ರಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ''ಧುರಂಧರ್ 2'' ಈ ಮೂಲಕ ಏರಿದೆ.
ಭಾರತದಲ್ಲಿ ಅತೀ ಹೆಚ್ಚು ಹಣ ಗಳಿಸಿದ ಭಾರತದ 5 ಚಿತ್ರಗಳ ಪಟ್ಟಿ ಈ ಕೆಳಗಿನಂತೆ ಇದೆ
ಚಿತ್ರ ಗಳಿಕೆ
ಪುಷ್ಪ 2 ₹1,265.97 ಕೋಟಿ
ಬಾಹುಬಲಿ 2 ₹1,031ಕೋಟಿ
ಧುರಂಧರ್ 2 ₹872.17 ಕೋಟಿ
ಕೆಜಿಎಫ್ 2 ₹859.70 ಕೋಟಿ
ಧುರಂಧರ್ 1 ₹840.20 ಕೋಟಿ
ಇನ್ನೂ ವರ್ಲ್ಡ್ ವೈಡ್ ಕಲೆಕ್ಷನ್ ವಿಚಾರಕ್ಕೆ ಬಂದರೆ ದಂಗಲ್ ಸ್ಥಾನ ಅಬಾಧಿತ. ತೆರೆಗೆ ಬಂದು 10 ವರ್ಷವಾದರು ಕೂಡ ₹2,070 ಕೋಟಿ ಗಳಿಸಿರುವ ದಂಗಲ್ ಮೊದಲ ಸ್ಥಾನದಲ್ಲಿದೆ. ಇಲ್ಲಿಯೂ ಕೂಡ ಕೆಜಿಎಫ್ 2 ಚಿತ್ರವನ್ನು ''ಧುರಂಧರ್ 2'' ಹಿಂದಿಕ್ಕಿದ್ದು ವಿಶ್ವದೆಲ್ಲೆಡೆ ಅತೀ ಹೆಚ್ಚು ಹಣ ಗಳಿಸಿದ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ.

ವಿಶ್ವದೆಲ್ಲೆಡೆ ಅತೀ ಹೆಚ್ಚು ಹಣ ಗಳಿಸಿದ ಭಾರತದ 7 ಚಿತ್ರಗಳ ಪಟ್ಟಿ ಈ ಕೆಳಗಿನಂತೆ ಇದೆ
ಚಿತ್ರ ಗಳಿಕೆ
ದಂಗಲ್ ₹2,070.30 ಕೋಟಿ
ಬಾಹುಬಲಿ 2 ₹1788 ಕೋಟಿ
ಪುಷ್ಪ 2 ₹1,742 ಕೋಟಿ
ಧುರಂಧರ್ 2 ₹1392 ಕೋಟಿ
ಧುರಂಧರ್ ₹1307 ಕೋಟಿ
ಆರ್ ಆರ್ ಆರ್ ₹1,230 ಕೋಟಿ
ಕೆಜಿಎಫ್ 2 ₹1,215 ಕೋಟಿ
ಹೀಗೆ ಸದ್ಯ ''ಧುರಂಧರ್ 2'' ಅಬ್ಬರ ಮುಂದುವರೆದಿದ್ದು ವರ್ಲ್ಡ್ ವೈಡ್ ಗಳಿಕೆಯಲ್ಲಿ ''ದಂಗಲ್'' ದಾಖಲೆಯನ್ನು ''ಧುರಂಧರ್ 2'' ಮುರಿಯುತ್ತೆ ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ. ಭಾರತದ ಮಾರುಕಟ್ಟೆಯಲ್ಲಿ ''ಪುಷ್ಪಾ 2''ಗೆ ''ಧುರಂಧರ್ 2'' ಸೆಡ್ಡು ಹೊಡೆಯುತ್ತೆ ಎನ್ನುವ ವಿಶ್ವಾಸ ಕೂಡ ಬಾಲಿವುಡ್‌ನ ಪಂಡಿತರಿಗಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











