Dhurandhar Box Office Day 20 ; ಬಾಕ್ಸಾಫೀಸ್‌ನ ರಣಬೇಟೆಗಾರನಾದ ಧುರಂಧರ್ - ರಣ್ವೀರ್ ಅಬ್ಬರ, ಛಾವಾ ದಾಖಲೆ ಛಿದ್ರ

ಈಗೀಗ ಸುಮಾರು ಸಿನಿಮಾಗಳು ಬರುತ್ತಿವೆ, ಹೋಗುತ್ತಿವೆ. ಆದರೆ ಗೆಲುವು ಮಾತ್ರ ಬಹುತೇಕರ ಕೈಗೆ ಸಿಗುತ್ತಿಲ್ಲ. ಹೇಗಾದರೂ ಮಾಡಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಎಳೆದುತರಲು ಚಿತ್ರತಂಡಗಳು ಹರಸಾಹಸ ಮಾಡುತ್ತಿವೆ. ನಾನಾ ಕಸರತ್ತುಗಳನ್ನು ಮಾಡುತ್ತಿವೆ. ಇನ್ನೂ ಕೆಲ ಚಿತ್ರತಂಡಗಳ ಪ್ರೇಕ್ಷಕರನ್ನು ಸೆಳೆಯಲು ಮಾಡಬಾರದ ಗಿಮಿಕ್‌ಗಳನ್ನೆಲ್ಲ ಮಾಡುತ್ತಾವೆ. ಆದರೆ.. ಪ್ರೇಕ್ಷಕರು ಮಾತ್ರ ಬರುವುದಿಲ್ಲ. ಬದಲಿಗೆ ಅಲ್ಲೊಂದು.. ಇಲ್ಲೊಂದು ಸಿನಿಮಾಗಳು ಮಾತ್ರ ಗೆಲ್ಲುತ್ತಾವೆ. ಪವಾಡಗಳನ್ನು ಮಾಡುತ್ತಾವೆ. ಉದಾಹರಣೆಗೆ ''ಧುರಂಧರ್''.

ಹೌದು, ''ಧುರಂಧರ್'' .. ತೆರೆಗೆ ಬಂದು ನಿನ್ನೆಗೆ (ಡಿಸೆಂಬರ್ 24) 20 ದಿನಗಳಾಗಿವೆ. ಆದರೆ ಹವಾ ಮಾತ್ರ ಕಡಿಮೆಯಾಗಿಲ್ಲ. ಇವತ್ತು ಕೂಡ ಚಿತ್ರಮಂದಿರದ ಎದುರು ನೂಕುನುಗ್ಗಲಿನ ವಾತಾವರಣ ಇದೆ. ಇದಕ್ಕೆ ಕೈಗನ್ನಡಿ ಎಂಬಂತೆ ನಿನ್ನೆ (ಡಿಸೆಂಬರ್ 24 ) ಮೂರನೇ ಬುಧವಾರ ಅಂದಾಜು ₹ 17.75 ಕೋಟಿಯನ್ನು ಚಿತ್ರ ಗಳಿಸಿದೆ. ಈ ಮೂಲಕ ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಚಿತ್ರ 20 ದಿನದಲ್ಲಿ ₹ 607.25 ಕೋಟಿಯನ್ನು ಕೊಳ್ಳೆ ಹೊಡೆದಿದೆ.

The Unstoppable Roar Dhurandhar Crushes 600 Cr Mark Leaves Chhaava in the Dust to Hunt Pushpa 2

''ಸ್ಯಾಕ್ನಿಲ್'' ಪ್ರಕಾರ ''ಧುರಂಧರ್'' ಚಿತ್ರದ 17 ದಿನದ ಗಳಿಕೆ ಈ ಕೆಳಗಿನಂತೆ ಇದೆ

ಮೊದಲ ದಿನ [ಶುಕ್ರವಾರ] ₹ 28 ಕೋಟಿ
ಎರಡನೇ ದಿನ [ಶನಿವಾರ] ₹ 32 ಕೋಟಿ
ಮೂರನೇ ದಿನ [ಭಾನುವಾರ]₹ 43 ಕೋಟಿ
ನಾಲ್ಕನೇ ದಿನ [ಸೋಮವಾರ]₹ 23.25 ಕೋಟಿ
ಐದನೇ ದಿನ [ಮಂಗಳವಾರ]₹ 27 ಕೋಟಿ
ಆರನೇ ದಿನ [ಬುಧವಾರ]₹ 27 ಕೋಟಿ
ಏಳನೇ ದಿನ [ಗುರುವಾರ]₹ 27 ಕೋಟಿ

ಮೊದಲ ವಾರದ ಒಟ್ಟು ಗಳಿಕೆ- ₹ 207.25ಕೋಟಿ

ಎಂಟನೇ ದಿನ [ಶುಕ್ರವಾರ] - ₹ 32.5 ಕೋಟಿ
ಒಂಬತ್ತನೇ ದಿನ [ಶನಿವಾರ] - ₹ 53 ಕೋಟಿ
ಹತ್ತನೇ ದಿನ [ಭಾನುವಾರ]- ₹ 58 ಕೋಟಿ
ಹನ್ನೊಂದನೇ ದಿನ [ಸೋಮವಾರ]₹30.5 ಕೋಟಿ
ಹನ್ನೆರಡನೇ ದಿನ [ಮಂಗಳವಾರ] ₹30.5 ಕೋಟಿ
ಹದಿಮೂರನೇ ದಿನ [ಬುಧವಾರ ] ₹25.5 ಕೋಟಿ
ಹದಿನಾಲ್ಕನೇ ದಿನ [ ಗುರುವಾರ ] ₹23.25 ಕೋಟಿ


ಎರಡನೇ ವಾರದ ಒಟ್ಟು ಗಳಿಕೆ - ₹ 253.25 ಕೋಟಿ

ಹದಿನೈದನೇ ದಿನ [ಶುಕ್ರವಾರ] ₹22.5 ಕೋಟಿ
ಹದಿನಾರನೇ ದಿನ [ಶನಿವಾರ ] ₹34.25 ಕೋಟಿ
ಹದಿನೇಳನೇ ದಿನ [ಭಾನುವಾರ] ₹38.5 ಕೋಟಿ
ಹದಿನೆಂಟನೇ ದಿನ [ಸೋಮವಾರ] ₹16.5ಕೋಟಿ
ಹತ್ತೊಂಬತ್ತನೇ ದಿನ [ಮಂಗಳವಾರ]₹17.25ಕೋಟಿ
ಇಪ್ಪತ್ತನೇ ದಿನ [ಬುಧವಾರ] ₹17.75 ಕೋಟಿ * (ಅಂದಾಜು)


ಒಟ್ಟು ಗಳಿಕೆ - ₹607.25 ಕೋಟಿ

the-unstoppable-roar-dhurandhar-crushes-600-cr-mark-leaves-chhaava-in-the-dust-to-hunt-pushpa-2

ಇನ್ನು ''ಧುರಂಧರ್'' ಅಬ್ಬರಕ್ಕೆ ಒಂದೊಂದೇ ದಾಖಲೆಗಳು ಪುಡಿ ಪುಡಿಯಾಗುತ್ತಿವೆ. ಈಗಾಗಲೇ ''ದಂಗಲ್''.. ''ಬಾಹುಬಲಿ-ದಿ ಬಿಗಿನಿಂಗ್''.. ''ಗದರ್ 2'' ಚಿತ್ರಗಳನ್ನು ಬಾಕ್ಸಾಫೀಸ್‌ ರೇಸ್‌ನಲ್ಲಿ ಹಿಂದಿಕ್ಕಿರುವ ''ಧುರಂಧರ್'' ಶಾರುಖ್ ಖಾನ್ ಅಭಿನಯದ ''ಪಠಾಣ್'' ಮತ್ತು ''ಜವಾನ್'' ಚಿತ್ರದ ದಾಖಲೆಯನ್ನು ಕೂಡ ಮುರಿದಿದೆ. ರಣಬೀರ್ ಕಪೂರ್ ಅಭಿನಯದ ''ಅನಿಮಲ್'' ಚಿತ್ರದ ಗಳಿಕೆಯನ್ನು ಕೂಡ ಹಿಂದಿಕ್ಕಿದೆ. ಸದ್ಯ ''ಧುರಂಧರ್'' ಅಬ್ಬರಕ್ಕೆ ಈ ವರ್ಷದ ಮೆಗಾ ಬ್ಲಾಕ್‌ಬಸ್ಟರ್ ಚಿತ್ರವಾಗಿದ್ದ ವಿಕ್ಕಿ ಕೌಶಲ್ ಅಭಿನಯದ ''ಛಾವಾ'' ದಾಖಲೆ ಕೂಡ ಛಿದ್ರವಾಗಿದೆ.

ಹೌದು, ಈ ವರ್ಷದ ಆರಂಭದಲ್ಲಿ ತೆರೆಗೆ ಬಂದಿದ್ದ ''ಛಾವಾ'' ಹನ್ನೆರಡು ವಾರ ಪ್ರದರ್ಶನ ಕಂಡಿತ್ತು. ಹನ್ನೆರಡು ವಾರದಲ್ಲಿ ''ಸ್ಯಾಕ್ನಿಲ್'' ಪ್ರಕಾರ ಭಾರತದಲ್ಲಿ ₹ 601.54 ಕೋಟಿಯನ್ನು ದೋಚಿತ್ತು. ಈ ಗಳಿಕೆಯನ್ನು ''ಧುರಂಧರ್'' ಕೇವಲ 20 ದಿನದಲ್ಲಿ ಹಿಂದಿಕ್ಕಿದೆ. ₹ 607.25ಕೋಟಿಯನ್ನು ಕೊಳ್ಳೆ ಹೊಡೆಯುವ ಮೂಲಕ ಹೊಸದೊಂದು ಇತಿಹಾಸವನ್ನು ನಿರ್ಮಾಣ ಮಾಡಿದೆ.

ಸದ್ಯ ''ಧುರಂಧರ್'' ಎದುರು ''ಸ್ತ್ರೀ 2'' ಮತ್ತು ''ಪುಷ್ಪ 2'' ದಾಖಲೆ ಮುರಿಯುವ ಸವಾಲು ಇದೆ. ಈ ಎರಡು ಚಿತ್ರಗಳನ್ನು ಹಿಂದಿಕ್ಕಿದರೆ ಕೇವಲ ಹಿಂದಿಯಲ್ಲಿಯೇ ಅತೀ ಹೆಚ್ಚು ಹಣ ಗಳಿಸಿದ ಚಿತ್ರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ''ಧುರಂಧರ್'' ವಿರಾಜಮಾನವಾಗಲಿದೆ. ಒಂದು ಸಾವಿರ ಕೋಟಿಯನ್ನು ''ಧುರಂಧರ್'' ಕೊಳ್ಳೆ ಹೊಡೆಯುತ್ತೆ ವಿಶ್ವಾಸ ಬಾಲಿವುಡ್‌ಗೆ ಇದೆ. ಕ್ರಿಸ್ಮಸ್ ಮತ್ತು ಹೊಸ ವರ್ಷದ ಹಿನ್ನೆಲೆ ಈ ವಾರಾಂತ್ಯದಲ್ಲಿ ಚಿತ್ರದ ಗಳಿಕೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
The Dhurandhar Roar! Ranveer Singh and Akshaye Khanna’s blockbuster hits a massive ₹600 Cr milestone on Day 20. With Chhaava officially overtaken, Dhurandhar is now hunting Pushpa 2's all-time record. Get the full collection breakdown here!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X