ಓಟಿಟಿಗೆ ಬಂದರೂ ಕೂಡ ಚಿತ್ರಮಂದಿರದಲ್ಲಿ ಇನ್ನೂ ಇದೆ 'ಸು ಫ್ರಮ್ ಸೋ' ಹವಾ ; 54ನೇ ದಿನ ಗಳಿಸಿದ್ದೆಷ್ಟು ?
ಪ್ಯಾನ್ ಇಂಡಿಯಾ ಎಂಬ ಭ್ರಮೆಯಲ್ಲಿ ತೇಲುತ್ತಿರುವ ಅನೇಕ ಸ್ಟಾರ್‌ಗಳು ತ್ರೈವಾರ್ಷಿಕ.. ಪಂಚವಾರ್ಷಿಕ.. ಯೋಜನೆಯಡಿ ಚಿತ್ರವನ್ನು ಮಾಡುತ್ತಿದ್ದಾರೆ. ಆದರೆ ಹೀಗೆ ಬಂದ ಚಿತ್ರಗಳಾದರು ಗೆಲ್ಲುತ್ತಾವಾ ? ಹಣದ ಹೊಳೆ ಹರಿಯುತ್ತಾ ? ಅಂದರೆ ಅದು ಇಲ್ಲ. ಹಾಕಿದ ಬಂಡವಾಳ ವಾಪಸಾದರೆ ಸಾಕು ಎನ್ನುವಂತಹ ಸ್ಥಿತಿ ನಿರ್ಮಾಣವಾಗಿರುತ್ತೆ. ನಮ್ಮಲ್ಲಿ ಹೊಸತನ ಮತ್ತು ಪ್ರಯೋಗಶೀಲತೆಯೇ ಚಿತ್ರರಂಗದ ಜೀವಾಳ ಎನ್ನುವುದು ಬಹುತೇಕರಿಗೆ ಅರ್ಥವೇ ಆಗುವುದಿಲ್ಲ.
ಈ ಮಾತು ಅರ್ಥ ಮಾಡಿಕೊಂಡ ಅಲ್ಲೊಬ್ಬರು .. ಇಲ್ಲೊಬ್ಬರು .. ಮಾತ್ರ ಭಿನ್ನ ಪ್ರಯತ್ನಗಳನ್ನು ಮಾಡುತ್ತಾರೆ. ಇದಕ್ಕೆ ''ಸು ಫ್ರಮ್ ಸೋ'' ಒಂದು ಉದಾಹರಣೆ. ಹೌದು, ಅಸಲಿಗೆ ಚಿತ್ರವೊಂದು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಇನ್ನು ನಾಲ್ಕು ವಾರ ಕೂಡ ಆಗಿರಲ್ಲ. ಆಗಲೇ ಆ ಚಿತ್ರ ಓಟಿಟಿಗೆ ಬಂದು ಬಿಡುತ್ತೆ. ಇದರಿಂದಾಗಿ ಚಿತ್ರಮಂದಿರದಲ್ಲಿ ಚಿತ್ರವನ್ನು ನೋಡುವ ಆಸಕ್ತಿಯನ್ನು ಬಹುತೇಕ ಚಿತ್ರಪ್ರೇಮಿಗಳು ಕಳೆದುಕೊಂಡಿದ್ದಾರೆ.

ಇಂತಹ ಕಾಲದಲ್ಲಿ ''ಸು ಫ್ರಮ್ ಸೋ'' ಚಿತ್ರ 50 ದಿನಗಳನ್ನು ಚಿತ್ರಮಂದಿರಗಳಲ್ಲಿ ಪೂರೈಸಿದೆ. ವಿಶೇಷ ಅಂದರೆ ಓಟಿಟಿಯಲ್ಲಿ ಬಿಡುಗಡೆಯಾಗಿದ್ದರು ಕೂಡ ಚಿತ್ರ ಇನ್ನೂ ಚಿತ್ರಮಂದಿರಗಳಲ್ಲಿ ಯಶಸ್ವೀ ಪ್ರದರ್ಶನವನ್ನು ಕಾಣುತ್ತಿದೆ. ಬಿಡುಗಡೆಯಾದ 54ನೇ ದಿನದಲ್ಲಿ ಕೂಡ ಲಕ್ಷಗಳಲ್ಲಿ ಹಣವನ್ನು ಗಳಿಸುತ್ತಿದೆ.
ನಿಜಾ.. ಓಟಿಟಿಯಲ್ಲಿ ಚಿತ್ರವನ್ನು ನೋಡಿದವರಲ್ಲಿ ಕೆಲವರಿಗೆ ಈ ಚಿತ್ರ ಇಷ್ಟವಾಗಿಲ್ಲ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೂ ಕೂಡ ''ಸು ಫ್ರಮ್ ಸೋ'' ಚಿತ್ರಮಂದಿರಗಳಲ್ಲಿ ಇನ್ನೂ ಚಮತ್ಕಾರ ಮಾಡುತ್ತಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಬೆಂಗಳೂರಿನಲ್ಲಿಯೇ ಈ ಚಿತ್ರ 14 ಚಿತ್ರಮಂದಿರಗಳಲ್ಲಿ ಇನ್ನು ಇದೆ. ಆ ಪೈಕಿ ಯಶವಂತಪುರದ ವೈಷ್ಣವಿ ಮತ್ತು ಸಿರಸಿ ಸರ್ಕಲ್‌ನ ಗೋಪಾಲನ್ ಸಿನಿಮಾದಲ್ಲಿ ಎರಡು ಶೋಗಳಿವೆ. ಮತ್ತೊಂದು ವಿಶೇಷ ಅಂದರೆ ಚಿತ್ರ ಬಿಡುಗಡೆಯಾಗಿ 54 ದಿನವಾದರು ಕೂಡ ಮಾಗಡಿ ರಸ್ತೆಯ ಜಿಟಿ ವರ್ಲ್ಡ್ ಮಾಲ್‌ನಲ್ಲಿನ ಇಂದಿನ (ಸೆಪ್ಟೆಂಬರ್ 17) 4-15ರ ಪ್ರದರ್ಶನದ ಟಿಕೆಟ್‌ಗಳು ಬಹುತೇಕ ಸೋಲ್ಡ್ ಔಟ್ ಆಗಿವೆ.

ಕೇವಲ ಬೆಂಗಳೂರು ಮಾತ್ರವಲ್ಲ ''ಬುಕ್ ಮೈ ಶೋ'' ಪ್ರಕಾರ '' ಸು ಫ್ರಮ್ ಸೋ'' ಮೈಸೂರಿನಲ್ಲಿ ಇನ್ನು ಒಂದು ಚಿತ್ರಮಂದಿರದಲ್ಲಿದೆ. ಹುಬ್ಬಳ್ಳಿಯಲ್ಲಿ ಅಪ್ಸರಾ ಮತ್ತು ಸುಧಾ ಸೇರಿ ಚಿತ್ರ ಮತ್ತೆರಡು ಚಿತ್ರಮಂದಿರಗಳಲ್ಲಿದೆ. ಧಾರವಾಡದಲ್ಲಿ ಕೂಡ ಚಿತ್ರ ಒಂದು ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿದೆ.
ಇನ್ನೂ ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ''ಸು ಫ್ರಮ್ ಸೋ'' 54ನೇ ದಿನ 1 ಲಕ್ಷ ರೂಪಾಯಿ ಗಳಿಸಿದೆ. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ ₹ 122.59 ಕೋಟಿ ಆಗಿದೆ. ಓಟಿಟಿಯಲ್ಲಿ ಇದ್ದರೂ ಕೂಡ ಚಿತ್ರಮಂದಿರದಲ್ಲಿ 54ನೇ ದಿನ 1 ಲಕ್ಷ ಹಣವನ್ನು ''ಸು ಫ್ರಮ್ ಸೋ'' ಗಳಿಸಿದೆ ಅಂದರೆ ಅದು ಸಾಮಾನ್ಯ ಮಾತು ಅಲ್ವೇ ಅಲ್ಲ.
ಒಟ್ನಲ್ಲಿ ಸದ್ಯ ಓಟಿಟಿಯಲ್ಲಿ ಬಿಡುಗಡೆಯಾಗಿದ್ದರೂ, ಓಟಿಟಿಯಲ್ಲಿ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರು ಕೂಡ '' ಸು ಫ್ರಮ್ ಸೋ'' ಚಿತ್ರಮಂದಿರಗಳಲ್ಲಿ ಇನ್ನು ಪ್ರದರ್ಶನ ಕಾಣುತ್ತಿದೆ. ಪ್ರೇಕ್ಷಕರ ಗಮನವನ್ನು ಸೆಳೆಯುತ್ತಿದೆ. ಈ 54 ದಿನದಲ್ಲಿ ''ಕೂಲಿ''.. ''ವಾರ್ 2'' ಅಂತಹ ಚಿತ್ರಗಳು ಬಂದರೂ ಕೂಡ ''ಸು ಫ್ರಮ್ ಸೋ'' ಕದಲಲಿಲ್ಲ. ಓಟಿಟಿಯಲ್ಲಿ ಬಂದರೂ ಕೂಡ ಚಿತ್ರದ ಹವಾ ಇನ್ನೂ ಕಡಿಮೆಯಾಗಿಲ್ಲ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











