Thudarum box office Day 10; ಬಾಕ್ಸಾಫೀಸ್‌ನಲ್ಲಿ 'ಥುಡರುಮ್' ಹೊಸ ದಾಖಲೆ

ಮತ್ತೆ ಬಾಕ್ಸಾಫೀಸ್‌ನಲ್ಲಿ ಮೋಹನ್ ಲಾಲ್ ಆರ್ಭಟ ಶುರುವಾಗಿದೆ. ತಿಂಗಳ ಹಿಂದೆ 'ಎಂಪುರಾನ್' ಸಿನಿಮಾ ಸದ್ದು ಮಾಡ್ತಿತ್ತು. ಇದೀಗ 'ಥುಡರುಮ್' ಸಂಚಲನ ಜೋರಾಗಿದೆ. ತರುಣ್ ಮೂರ್ತಿ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ ಸಿನಿರಸಿಕರ ಮನಗೆದ್ದಿದೆ.

ತಿಂಗಳ ಅಂತರದಲ್ಲಿ 2 ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾಗಳನ್ನು ಮೋಹನ್ ಲಾಲ್ ಕೊಟ್ಟಂತಾಗಿದೆ. ಯಾವುದೇ ನಿರೀಕ್ಷೆ ಇಲ್ಲದೇ ಬಂದ 'ಥುಡರುಮ್' ಸಿನಿಮಾ ಸಕ್ಸಸ್ ಅಚ್ಚರಿ ಮೂಡಿಸಿದೆ. 'ಲೂಸಿಫರ್' ಸೀಕ್ವೆಲ್ 'ಎಂಪುರಾನ್' ಹಾಗಾಗಿ ಸಹಜವಾಗಿಯೇ ಆ ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. ಆದರೆ 'ಥುಡರುಮ್' ಸಕ್ಸಸ್ ಸೀಕ್ರೆಟ್ ಏನು? ಎಂದು ಬಾಕ್ಸಾಫೀಸ್ ಪಂಡಿತರು ಚರ್ಚೆ ನಡೆಸುತ್ತಿದ್ದಾರೆ.

Thudarum box office collection day 10 Mohanlal s film stands strong despite new releases

ಕೇಕ್ ಕತ್ತರಿಸಿ ಮೋಹನ್ ಲಾಲ್ ಆಪ್ತರ ಜೊತೆ 'ಎಂಪುರಾನ್' ಹಾಗೂ 'ಥುಡರುಮ್' ಸಕ್ಸಸ್ ಸಂಭ್ರಮಾಚರಣೆ ಮಾಡಿದ್ದಾರೆ. ಕೇರಳ ಬಾಕ್ಸಾಫೀಸ್‌ನಲ್ಲಿ 'ಥುಡರುಮ್' ದರ್ಬಾರ್ ಜೋರಾಗಿದೆ. ಚಿತ್ರದಲ್ಲಿ ಮೋಹನ್ ಲಾಲ್ ಜೊತೆಗೆ ಶೋಭನಾ, ಪ್ರಕಾಶ್ ವರ್ಮಾ, ಬಿನು ಪಪ್ಪು ಸೇರಿ ದೊಡ್ಡ ತಾರಾಗಣವಿದೆ. ಏಪ್ರಿಲ್ 25ರಂದು ತೆರೆಗೆ ಬಂದಿದ್ದ ಸಿನಿಮಾ 10 ದಿನಗಳಿಂದ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.

ಈಗಾಗಲೇ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಹುಬ್ಬೇರಿಸಿದೆ. ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಬಂಗಾರದ ಬೆಳೆ ತೆಗೆಯುತ್ತಿದೆ. 9ನೇ ದಿನವೂ ಕೇರಳದಲ್ಲಿ ಸಿನಿಮಾ 6 ಕೋಟಿ ರೂ. ಗಳಿಕೆ ಕಂಡಿರುವುದು ವಿಶೇಷ. ಅಡ್ವಾನ್ಸ್ ಬುಕ್ಕಿಂಗ್‌ನಿಂದಲೂ ಸಿನಿಮಾ ಸದ್ದು ಮಾಡುತ್ತಿರುವುದು ಬುಕ್‌ಮೈಶೋನಲ್ಲಿ ಗೊತ್ತಾಗುತ್ತಿದೆ. ಕಳೆದ ವಾರ ತೆರೆಗೆ ಬಂದಿದ್ದ 'ಹಿಟ್-3' ಹಾಗೂ 'ರೆಟ್ರೋ' ಚಿತ್ರಗಳ ಪೈಪೋಟಿ ನಡುವೆಯೂ 'ಥುಡರುಮ್' ಗೆಲುವಿನ ಓಟ ಮುಂದುವರೆಸಿದೆ.

ಕೇರಳದಲ್ಲಿ ಸತತ 10 ದಿನಗಳ ಕಾಲ 5 ಕೋಟಿ ರೂ. ಕಲೆಕ್ಷನ್ ಮಾಡಿದ ಮೊದಲ ಮಲಯಾಳಂ ಸಿನಿಮಾ ಎಂಬ ಹೆಗ್ಗಳಿಕೆಗೆ 'ಥುಡರುಮ್' ಪಾತ್ರವಾಗಿದೆ. ಇನ್ನು ಕೇರಳದಲ್ಲಿ 50 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿ ಮತ್ತೊಂದು ದಾಖಲೆ ಬರೆದಿದೆ. ಇದಕ್ಕೂ ಮುನ್ನ 'ಪುಲಿ ಮುರುಗನ್', 'ಎಂಪುರಾನ್', 'ನೆರು' ಚಿತ್ರಗಳು ಈ ದಾಖಲೆ ಬರೆದಿತ್ತು. ಅವತ್ತಿನ ಕಾಲಕ್ಕೆ 'ದೃಶ್ಯಂ' ಗಳಿಕೆ ಕೂಡ ದಾಖಲೆಯಾಗಿತ್ತು. ಇನ್ನು 'ಥುಡರುಮ್' ಚಿತ್ರ ಭಾರತದಲ್ಲಿ 10 ದಿನಕ್ಕೆ ಒಟ್ಟು 71 ಕೋಟಿ ರೂ. ಗಳಿಕೆ ಕಂಡಿರುವ ಅಂದಾಜಿದೆ. ಈ ಹಿಂದೆ

ಕಳೆದ 10 ದಿನಗಳಲ್ಲಿ 'ಥುಡರುಮ್' ವಿಶ್ವದಾದ್ಯಂತ 159 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಅಂದಾಜಿಸಲಾಗುತ್ತಿದೆ. ಕೇರಳದಲ್ಲಿ 66 ಕೋಟಿ ರೂ. ಆಂಧ್ರ ಹಾಗೂ ತೆಲಂಗಾಣದಲ್ಲಿ 2.5 ಕೋಟಿ ರೂ. ತಮಿಳುನಾಡು ಹಾಗೂ ಇನ್ನುಳಿದ ರಾಜ್ಯಗಳಲ್ಲಿ 6 ಕೋಟಿ ರೂ. ಕರ್ನಾಟಕದಲ್ಲಿ 6 ಕೋಟಿ ರೂ. ಹಾಗೂ ಓವರ್‌ಸೀಸ್‌ನಲ್ಲಿ 78 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ ಎಂದು ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕಿದ್ದಾರೆ.

'ಥುಡರುಮ್' ಚಿತ್ರದ ಕಥೆ ಬಹಳ ಸಿಂಪಲ್. ಷಣ್ಮುಗಂ ಅಲಿಯಾಸ್ ಬೆನ್ಜ್ ಮಧ್ಯಮ ವರ್ಗದ ಕುಟುಂಬದ ಟ್ಯಾಕ್ಸಿ ಡ್ರೈವರ್. ತನ್ನ ಕಾರನ್ನು ಬಹಳ ಜೋಪಾನವಾಗಿ ನೋಡಿಕೊಳ್ಳುತ್ತಿರುತ್ತಾನೆ. ಒಮ್ಮೆ ಆತನ ಕಾರು ಅಪಘಾತಕ್ಕೀಡಾಗಿ ಗ್ಯಾರೇಜ್ ಸೇರುತ್ತದೆ. ಆದರೆ ಮೆಕಾನಿಕ್ ಅದನ್ನು ಅಕ್ರಮ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಾನೆ. ಮುಂದೆ ಆ ಕಾರನ್ನು ಪೊಲೀಸರು ಸೀಜ್ ಮಾಡುತ್ತಾರೆ. ಆ ಕಾರು ಮತ್ತೆ ಬೆನ್ಜ್‌ಗೆ ವಾಪಸ್ ಸಿಗುತ್ತಾ? ಇಲ್ವಾ? ಮುಂದೆ ಏನೆಲ್ಲಾ ಆಗುತ್ತದೆ ಎನ್ನುವುದು ಇನ್ನುಳಿದ ಕಥೆ.

More from Filmibeat

English summary
Mohanlal Starrer Thudarum box office collection day 10 report;
Read more about: mohanlal malayalam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X