ಬಾಕ್ಸಾಫೀಸ್‌ 'ಲೋಕ'ದಲ್ಲಿ ಕಡಿಮೆಯಾಗದ ಸುಪುರ್ ವುಮೆನ್ ಹವಾ, ಕಲ್ಯಾಣಿ ಅಬ್ಬರಕ್ಕೆ ದಾಖಲೆಗಳು ಉಡೀಸ್

ಪುರುಷ ಪ್ರಧಾನ ಚಿತ್ರರಂಗದಲ್ಲಿ ಮಹಿಳಾ ಪ್ರಧಾನ ಚಿತ್ರಗಳು ಬರುವುದು ತುಂಬಾನೇ ಕಡಿಮೆ. ಇಲ್ಲಿ ನಾಯಕಿಯರಲ್ಲಿ ಎಷ್ಟೇ ಪ್ರತಿಭೆ ಇದ್ದರೂ ಕೂಡ ಅನಾದಿಕಾಲದಿಂದ ಹೀರೋಯಿಂಸ ವಿಜೃಂಭಿಸುತ್ತಲೇ ಬಂದಿದೆ. ನಾಯಕನ ನಂತರವಷ್ಟೇ ನಾಯಕಿ ಎನ್ನುವ ಮನೋಭಾವ ಹಲವರಲ್ಲಿದೆ. ಇದು ಮಾತ್ರವಲ್ಲದೇ ನಾಯಕಿಯರು ಅಂದರೆ ಕೇವಲ ಮರ ಸುತ್ತಲು, ಚಿತ್ರದ ಗ್ಲ್ಯಾಮರ್ ಹೆಚ್ಚಿಸಲು ಅಷ್ಟೇ ಲಾಯಕ್ಕು ಮನಃಸ್ಥಿತಿ ಕೂಡ ಚಿತ್ರರಂಗದಲ್ಲಿ ಹಲವರಲ್ಲಿದೆ.

ಆದರೆ .. ಈ ಧೋರಣೆಯನ್ನು ಬದಲಿಸುವ ಪ್ರಯತ್ನವನ್ನು ಆಗಾಗ ಹಲವರು ನಾಯಕಿಯರು ಮಾಡುತ್ತಾರೆ. ಪುರುಷ ಪಾರುಪಥ್ಯದ ಕುರಿತು ಕಿಡಿ ಕಾರುತ್ತಾರೆ. ಮತ್ತೂ ಕೆಲ ಒಮ್ಮೆ ಅವಕಾಶ ಸಿಕ್ಕಾಗ ಒಳ್ಳೆಯ ಕಥೆ ಮತ್ತು ತಂಡ ಇದ್ದರೆ ಮಹಿಳಾ ಪ್ರಧಾನ ಚಿತ್ರಗಳು ಕೂಡ ಬಾಕ್ಸಾಫೀಸ್‌ನಲ್ಲಿ ವಂಡರ್ ಸೃಷ್ಟಿಸಬಹುದು ಎನ್ನುವುದನ್ನು ಸಾಬೀತು ಮಾಡುತ್ತಾರೆ. ಉದಾಹರಣೆಗೆ ಕಲ್ಯಾಣಿ ಪ್ರಿಯದರ್ಶನ್ ಮತ್ತು ಅವರ ''ಲೋಕಾ-ಚಾಪ್ಟರ್ 1 : ಚಂದ್ರ''.

Unstoppable Kalyani Priyadarshan s Lokah Continues Box Office Domination Races to 119 Crore

ಹೌದು, ''ಲೋಕಾ-ಚಾಪ್ಟರ್ 1-ಚಂದ್ರ''.. ಮಲಯಾಳಂ ಚಿತ್ರರಂಗದ ಬತ್ತಳಿಕೆಯಿಂದ ಹೊರ ಬಂದ ಮತ್ತೊಂದು ಅಸ್ತ್ರ. ಬಿಡುಗಡೆಯಾಗಿ 18 ದಿನಗಳಾದರು ಕೂಡ ಈ ಚಿತ್ರದ ಕ್ರೇಜ್ ಕಡಿಮೆಯಾಗಿಲ್ಲ. ಇದಕ್ಕೆ ಕೈಗನ್ನಡಿ ಎನ್ನುವಂತೆ ನಿನ್ನೆ ಭಾನುವಾರ ಈ ಚಿತ್ರ ₹ 7.18 ಕೋಟಿಯನ್ನು ದೋಚಿದೆ ಎಂದು ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ವರದಿಯನ್ನು ಮಾಡಿದೆ. ಈ 18 ದಿನಗಳಲ್ಲಿ ಚಿತ್ರ ಒಟ್ಟು ₹119.6 ಕೋಟಿಯನ್ನು ಗಳಿಸಿದೆ ಎಂದು ಉಲ್ಲೇಖಿಸಿದೆ.

ಸ್ಯಾಕ್ನಿಲ್ ಪ್ರಕಾರ ಲೋಕಾ ಚಿತ್ರದ 18 ದಿನದ ಗಳಿಕೆ ಈ ಕೆಳಗಿನಂತೆ ಇದೆ.

ಮೊದಲ ವಾರ - ₹54.7 ಕೋಟಿ [ಮಲಯಾಳಂ: ₹42.45 ಕೋಟಿ ; ತಮಿಳು: ₹5.05 ಕೋಟಿ; ತೆಲುಗು: 7.05 ಕೋಟಿ ಹಿಂದಿ: ₹0.15ಲಕ್ಷ ]

ಎರಡನೇ ವಾರ - ₹ 47 ಕೋಟಿ [ಮಲಯಾಳಂ: ₹35.9ಕೋಟಿ ;ತಮಿಳು: ₹4ಕೋಟಿ ತೆಲುಗು: ₹5.1 ಕೋಟಿ; ಹಿಂದಿ: 2ಲಕ್ಷ]

16ನೇ ದಿನ ₹ 4.05ಕೋಟಿ
17ನೇ ದಿನ ₹ 6.65ಕೋಟಿ
18ನೇ ದಿನ ₹ 7.18ಕೋಟಿ


ಒಟ್ಟು ಗಳಿಕೆ ₹ 119.6 ಕೋಟಿ

unstoppable-kalyani-priyadarshans-lokah-continues-box-office-reign-races-to-119-crore

ಮೋಹನ್ ಲಾಲ್-ಪೃಥ್ವಿರಾಜ್ ಚಿತ್ರವನ್ನು ಹಿಂದಿಕ್ಕಿದ ಕಲ್ಯಾಣಿ

ಇನ್ನು ಈ ವರ್ಷದ ಆರಂಭದಲ್ಲಿ ಬಂದಿದ್ದ ಮೋಹನ್ ಲಾಲ್ ಮತ್ತು ಪೃಥ್ವಿರಾಜ್ ಸುಕುಮಾರನ್ ಅಭಿನಯದ ''L2: ಎಂಪುರಾನ್'' ಚಿತ್ರದ ದಾಖಲೆಯನ್ನು ಕೂಡ ಕಲ್ಯಾಣಿ ಪ್ರಿಯದರ್ಶನ್ ಅಭಿನಯದ ''ಲೋಕಾ-ಚಾಪ್ಟರ್ 1 ಚಂದ್ರ'' ಮುರಿದಿದೆ. ''koimoi'' ವರದಿಯ ಪ್ರಕಾರ ''L2: ಎಂಪುರಾನ್'' ₹106.64 ಕೋಟಿ ಗಳಿಸಿತ್ತು. ಈ ದಾಖಲೆ ಸದ್ಯ ಉಡೀಸ್ ಆಗಿದ್ದು ಮೋಹನ್ ಲಾಲ್ ಮತ್ತು ಶೋಭನಾ ಅಭಿನಯದ ''ಥುಡರುಮ್'' ಚಿತ್ರದ ಗಳಿಕೆಯನ್ನು ಕೂಡ ''ಲೋಕಾ'' ಇನ್ನೆರಡು ದಿನದಲ್ಲಿ ಹಿಂದಿಕ್ಕುವ ಸಾಧ್ಯತೆ ಇದೆ.

ಅತಿ ಹೆಚ್ಚು ಹಣ ಗಳಿಸಿರುವ ಮಲಯಾಳಂನ ಚಿತ್ರಗಳು

1. ಮಂಜುಮ್ಮೆಲ್ ಬಾಯ್ಸ್ - ₹ 153.9 ಕೋಟಿ

2.ಥುಡರುಮ್ -₹ 140.7 ಕೋಟಿ

3. ಲೋಕಾ-ಚಾಪ್ಟರ್ 1 ಚಂದ್ರ - ₹119.6 ಕೋಟಿ

4. L2: ಎಂಪುರಾನ್ - ₹106.64

ಹೀಗೆ ಸದ್ಯ ಬಾಕ್ಸಾಫೀಸ್‌ನಲ್ಲಿ ಸದ್ಯ ಅಬ್ಬರಿಸುತ್ತಾ ಮಲಯಾಳಂ ಚಿತ್ರರಂಗದಲ್ಲಿ ಅತೀ ಹೆಚ್ಚು ಹಣ ಗಳಿಸಿದ ಚಿತ್ರಗಳ ಸಾಲಿನಲ್ಲಿ ಮೂರನೇ ಸ್ಥಾನವನ್ನು ಪಡೆದಿರುವ ''ಲೋಕ'' ಮುಂಬರುವ ದಿನಗಳಲ್ಲಿ ಇನ್ನೆಷ್ಟು ಹಣ ಗಳಿಸುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Kalyani Priyadarshan's "Lokah: Chapter 1 - Chandra" continues its winning streak at the box office, surpassing ₹119 crores in just 18 days. Read about the film's monumental success.
Read more about: mollywood actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X