ಕೂಲಿ, ವಾರ್ 2 ಬಂದರೂ ಕಡಿಮೆಯಾಗದ 'ಮಹಾವತಾರ್ ನರಸಿಂಹ' ಅಬ್ಬರ, 21ನೇ ದಿನ ಗಳಿಸಿದ್ದೆಷ್ಟು ಕೋಟಿ ?

ಒಂದು ಕಡೆ ''ಕೂಲಿ'' ಮೆರವಣಿಗೆ ಶುರುವಾಗಿದೆ . ಮತ್ತೊಂದು ಕಡೆ ''ವಾರ್ 2'' ಜಾತ್ರೆ ನಡೆಯುತ್ತಿದೆ . ಇವೆರಡು ದೊಡ್ಡ ಸಿನಿಮಾಗಳು. ಎರಡು ಚಿತ್ರಗಳಲ್ಲಿರುವುದು ಸೂಪರ್ ಸ್ಟಾರ್‌ಗಳೇ. ಇನ್ನು ರಜಿನಿಕಾಂತ್.. ಹೃತಿಕ್ ರೋಷನ್.. ನಾಗಾರ್ಜುನ.. ಜ್ಯೂ.ಎನ್.ಟಿ.ಆರ್ ಇವರಿಗೆ ಇವರದ್ದೇ ಆದ ಅಸಂಖ್ಯಾತ ಅಗಣಿತ ಅಭಿಮಾನಿಗಳಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ''ಕೂಲಿ'' ಪ್ಯಾನ್ ಇಂಡಿಯಾ ಲೆವಲ್‌ನಲ್ಲಿ ಬಿಡುಗಡೆಯಾಗಿದೆ.

''ವಾರ್ - 2'' ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ ಬಿಡುಗಡೆಯಾಗಿದೆ. ಈ ಹಿನ್ನೆಲೆ.. ಭಾರತದೆಲ್ಲೆಡೆ ಬಹುತೇಕ ಕಡೆ ಚಿತ್ರಮಂದಿರಗಳಲ್ಲಿ ಈ ಎರಡು ಚಿತ್ರಕ್ಕೆ ಪ್ರಾಶಸ್ತ್ಯ ನೀಡಲಾಗಿದೆ. ವಾತಾವರಣ ಹೀಗೆ ಇದ್ದರೂ ಕೂಡ ''ಮಹಾವತಾರ್ ನರಸಿಂಹ'' ಅಬ್ಬರ ಕಡಿಮೆಯಾಗಿಲ್ಲ ಎನ್ನುವುದೇ ವಿಶೇಷ ಮತ್ತು ಅಚ್ಚರಿ.

Unstoppable Mahavatar Narsimha Box Office Unaffected by Coolie amp amp War 2

ಹೌದು, ''ಮಹಾವತಾರ ನರಸಿಂಹ'' ಬಿಡುಗಡೆಯಾಗಿ 22 ದಿನಗಳಾಗಿವೆ. ಈ 22 ದಿನಗಳಲ್ಲಿ ಕೋಟಿ ಕೋಟಿ ಹಣ ದೋಚಿರುವ ಈ ಚಿತ್ರ ''ಕೂಲಿ'' ಮತ್ತು ''ವಾರ್ 2'' ಅಲೆ ಇದ್ದರೂ ಕೂಡ ನಿನ್ನೆ ₹ 2.6 ಕೋಟಿ ಹಣವನ್ನು ದೋಚಿದೆ ಎಂದು ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ವರದಿ ಮಾಡಿದೆ.

ನಿಜಾ ಬುಧವಾರದ[ ಆಗಸ್ಟ್ 13] ಗಳಿಕೆಗೆ ಹೋಲಿಸಿದರೆ ಗುರುವಾರದ [ಆಗಸ್ಟ್ 14] ಗಳಿಕೆಯಲ್ಲಿ 45.26% ಕುಸಿತ ಕಂಡು ಬಂದಿದೆ. ಆದರೆ ಈ ಗಳಿಕೆ ಈ ಶನಿವಾರ ಮತ್ತು ಭಾನುವಾರ ಹೆಚ್ಚಾಗುವ ಸಾಧ್ಯತೆ ಇದೆ. ಯಾಕೆಂದರೆ.. ಹೃತಿಕ್ ರೋಷನ್ ಮತ್ತು ಜ್ಯೂ.ಎನ್.ಟಿ.ಆರ್ ''ವಾರ್ 2'' ಹಿಂದಿ ಪ್ರೇಕ್ಷಕರಿಗೆ ರುಚಿಸಿಲ್ಲ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

Unstoppable Mahavatar Narsimha Box Office Unaffected by Coolie amp amp War 2

ಇನ್ನೂ ''ಮಹಾವತಾರ್ ನರಸಿಂಹ'' ಚಿತ್ರ ಇಲ್ಲಿಯವರೆಗೆ ಅತೀ ಹೆಚ್ಚು ಹಣ ಗಳಿಸಿದ್ದು ಹಿಂದಿಯಲ್ಲಿಯೇ. ಇದಕ್ಕೆ ಕೈಗನ್ನಡಿ ಎಂಬಂತೆ ''ಮಹಾವತಾರ್ ನರಸಿಂಹ'' ಚಿತ್ರ ಈ 21 ದಿನದಲ್ಲಿ ಕೇವಲ ಹಿಂದಿಯಲ್ಲಿಯೇ 141.15 ಕೋಟಿ ಹಣ ಗಳಿಸಿದೆ ಎಂದು ''ಸ್ಯಾಕ್ನಿಲ್'' ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಹೀಗಾಗಿ ಶನಿವಾರ ಮತ್ತು ಭಾನುವಾರದ ಗಳಿಕೆಯ ಮೇಲೀಗ ಎಲ್ಲರ ಕಣ್ಣಿದೆ. ''ಮಹಾವತಾರ್ ನರಸಿಂಹ'' ಚಿತ್ರದ ಗಳಿಕೆ ಹೆಚ್ಚಾಗುವ ನಿರೀಕ್ಷೆ ಇದೆ.

ಇನ್ನು.. ''ಮಹಾವತಾರ್ ನರಸಿಂಹ'' ಚಿತ್ರ ತೆರೆಗೆ ಬಂದು ಒಂದು ವಾರದ ನಂತರ ಹಿಂದಿಯಲ್ಲಿ ''ಸನ್‌ ಆಫ್ ಸರ್ದಾರ್ 2'' ಮತ್ತು ''ಧಡಕ್ 2'' ಚಿತ್ರಗಳು ತೆರೆಗೆ ಬಂದಿದ್ದವು. ಆದರೆ.. ''ಕೂಲಿ''.. ''ವಾರ್ 2'' ಮತ್ತು ''ಮಹಾವತಾರ್ ನರಸಿಂಹ'' ಚಿತ್ರಗಳ ಅಬ್ಬರ ನಡುವೆ ಈ ಎರಡು ಚಿತ್ರಗಳು ಕೊಚ್ಚಿಕೊಂಡು ಹೋಗಿವೆ. ಅಳಿದು ಉಳಿದ ಕೆಲ ಚಿತ್ರಮಂದಿರಗಳಲ್ಲಿ ''ಸನ್‌ ಆಫ್ ಸರ್ದಾರ್ 2'' ಇದ್ದು ಬಾಕ್ಸಾಫೀಸ್‌ನಲ್ಲಿ ತೆವಳುತ್ತಿದೆ. ನಿನ್ನೆ ಈ ಚಿತ್ರ ಕೇವಲ ಹತ್ತು ಲಕ್ಷವನ್ನು ಮಾತ್ರ ಗಳಿಸಿದೆ ಎಂದು ''ಸ್ಯಾಕ್ನಿಲ್'' ವರದಿಯಲ್ಲಿ ಉಲ್ಲೇಖಿಸಿದೆ. ಇನ್ನು ''ಧಡಕ್ 2'' ಕಥೆ ಮುಗಿದು ಹೋದ ಅಧ್ಯಾಯ.

Unstoppable Mahavatar Narsimha Box Office Unaffected by Coolie amp amp War 2

ಅಂದ್ಹಾಗೇ '' ಸ್ಯಾಕ್ನಿಲ್'' ಉಲ್ಲೇಖಿಸಿರುವಂತೆ 21 ದಿನದಲ್ಲಿ ''ಮಹಾವತಾರ್ ನರಸಿಂಹ'' ಚಿತ್ರ ₹ 188.35 ಕೋಟಿಯನ್ನು ಗಳಿಸಿದೆ. ಮುಂದಿನ ವಾರದೊಳಗೆ ₹200 ಕೋಟಿಯ ಗಡಿಯನ್ನು ದಾಟುವ ಕೂಡ ನಿರೀಕ್ಷೆ ಇದೆ. ಹಾಗೊಂದು ವೇಳೆ ಈ ಗಡಿಯನ್ನು ದಾಟಿದರೆ ಈಗಾಗಲೇ ಇತಿಹಾಸ ಸೃಷ್ಟಿಸಿರುವ ''ಮಹಾವತಾರ್ ನರಸಿಂಹ'' ಮತ್ತೊಂದು ಹೊಸ ದಾಖಲೆ ಬರೆದಂತೆ ಆಗಲಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
How did 'Mahavatar Narsimha' survive the 'Coolie' and 'War 2' showdown? Get the full story on its incredible box office performance and why its success proves content is king.
Read more about: hombale films bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X