Kantara Chapter 1 Box Office Day 25 ; ಭಾರತದೆಲ್ಲೆಡೆ ಕಾಂತಾರ ಅಬ್ಬರ, 25 ದಿನದ ಸಡಗರ-4ನೇ ಭಾನುವಾರವೂ ಕುಬೇರ ವರ

ಈಗೀಗ ಯಾವ ಭಾಷೆಯಲ್ಲಿ ನೋಡಿದರೂ ಕೂಡ ಸಿಕ್ವೆಲ್‌ಗಳ ಟ್ರೆಂಡ್ ಶುರುವಾಗಿದೆ. ಎಲ್ಲರಲ್ಲಿಯೂ ಈಗ ತಮ್ಮದೇ ಆದ ಫ್ರಾಂಚೈಸಿಯನ್ನು ತೆರೆಯುವ ಬಯಕೆ. ತಮ್ಮದೇ ಆದ ಯೂನಿವರ್ಸ್‌ಗೆ ಪ್ರೇಕ್ಷಕರನ್ನು ಕರೆದೊಯ್ಯುವ ಆಸೆ. ಆದರೆ .. ಅದು ಸುಲಭ ಅಲ್ಲ. ಯಾಕೆಂದರೆ ಮೊದಲ ಭಾಗ ಗೆದ್ದ ಹಿನ್ನೆಲೆ ಎರಡನೇ ಭಾಗದ ಮೇಲೆ ನಿರೀಕ್ಷೆಗಳು ಹೆಚ್ಚಿರುತ್ತವೆ. ಎರಡನೇ ಭಾಗ ಗೆದ್ದರೆ ಮೂರನೇ ಭಾಗದ..

ಮೇಲಿನ ನಿರೀಕ್ಷೆ ಇನ್ನೂ ಹೆಚ್ಚಾಗುತ್ತೆ. ಅಪ್ಪಿ.. ತಪ್ಪಿ.. ಚೂರು ಯಾಮಾರಿದರೂ ಪ್ರೇಕ್ಷಕರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತೆ. ಚಿತ್ರ ಪಾತಾಳಕ್ಕೆ ಬೀಳುವ ಸಾಧ್ಯತೆ ಇರುತ್ತೆ. ಕೇವಲ ಸ್ಟಾರ್‌ ವ್ಯಾಲ್ಯೂ ಎನ್‌ ಕ್ಯಾಶ್ ಮಾಡಿಕೊಂಡು ಇಂದಿನ ಕಾಲದಲ್ಲಿ ಕ್ಯಾಶ್ ಎಣಿಸುವುದು ತುಂಬಾನೇ ಕಷ್ಟ. ಇದಕ್ಕೆ ಕೈಗನ್ನಡಿ ಎಂಬಂತೆ ಪ್ರಿಕ್ವೆಲ್‌ ಅಥವಾ ಸಿಕ್ವೆಲ್‌ ಮಾಡಿದ ಹಲವು ಚಿತ್ರಗಳು ಸೋತಿವೆ. ಪ್ರೇಕ್ಷಕರ ನಿರೀಖ್ಷೆಯ ಮಟ್ಟ ತಲುಪಲಾರದೇ ನಿರಾಸೆಯನ್ನು ಮಾಡಿವೆ.

UNSTOPPABLE ON DAY 25 Rishab Shetty s Kantara Chapter 1 Charges Towards 600 CRORE

ಆದರೆ.. ''ಕಾಂತಾರ -1'' ಇದಕ್ಕೆ ತದ್ವಿರುದ್ದ. ಬಿಡುಗಡೆಯಾದ ದಿನದಿಂದ ಅಬ್ಬರಿಸುತ್ತಲೇ ಇರುವ ರಿಷಬ್ ಶೆಟ್ಟಿಯ ''ಕಾಂತಾರ-ಚಾಪ್ಟರ್ 1'' ಚಿತ್ರದ ಅಬ್ಬರ 25ದಿನಗಳಾದರೂ ಬಾಕ್ಸಾಫೀಸ್‌ನಲ್ಲಿ ಕಡಿಮೆಯಾಗಿಯೇ ಇಲ್ಲ. ವಿಶೇಷ ಅಂದರೆ 25 ದಿನವಾದರೂ ಕೂಡ ''ಕಾಂತಾರ-1'' ಚಿತ್ರದ ಗಳಿಕೆ ಎರಡಂಕಿಯ ಮೇಲೆ ಇದೆ.

ಹೌದು, ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ''ಕಾಂತಾರ- ಅಧ್ಯಾಯ 1'' ನಿನ್ನೆ ( ಅಕ್ಟೋಬರ್ 26 ) ₹ 10.3 ಕೋಟಿಯನ್ನು ದೋಚಿದೆ. ಈ ಮೂಲಕ ಕೇವಲ ಭಾರತದಲ್ಲಿ ಮಾತ್ರ ಈ 25 ದಿನದಲ್ಲಿ ₹ 589.5 ಕೋಟಿ ಹಣವನ್ನು ದೋಚಿದೆ. ಸದ್ಯದ ವಾತಾವರಣ ಮತ್ತು ''ಕಾಂತಾರ'' ಕ್ರೇಜ್ ನೋಡುತ್ತಿದ್ದರೆ ಇನ್ನೊಂದು ಎರಡು ದಿನದಲ್ಲಿ ಭಾರತದಲ್ಲಿ ₹ 600 ಕೋಟಿಯ ಗಡಿಯನ್ನು ರಿಷಬ್ ಶೆಟ್ಟಿ ಅವರ ಈ ಮಹತ್ವಕಾಂಕ್ಷೆಯ ಚಿತ್ರ ದಾಟುತ್ತೆ ಎನ್ನುವ ಮಾತನ್ನು ಸದ್ಯ ಟ್ರೇಡ್ ವಿಶ್ಲೇಷಕರು ಹೇಳುತ್ತಿದ್ದಾರೆ.

unstoppable-on-day-25-rishab-shettys-kantara-chapter-1-charges-towards-600-crore

ಅಂದ್ಹಾಗೇ ಅಕ್ಟೋಬರ್ 2ರಿಂದ ಬಾಕ್ಸಾಫೀಸ್‌ನಲ್ಲಿ ''ಕಾಂತಾರ-ಚಾಪ್ಟರ್ 1'' ಚಿತ್ರಕ್ಕೆ ಸವಾಲು ಹಾಕುವಲ್ಲಿ ಬಾಲಿವುಡ್, ಕಾಲಿವುಡ್, ಟಾಲಿವುಡ್ ಮತ್ತು ಮಾಲಿವುಡ್‌ ಸೋತಿವೆ. ಇನ್ನೂ ದೀಪಾವಳಿ ಹಬ್ಬದ ಪ್ರಯುಕ್ತ ತೆರೆಗೆ ಬಂದ ಆಯುಷ್ಮಾನ್ ಖುರಾನ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ''ಥಮ್ಮ'', ಪ್ರದೀಪ್ ರಂಗನಾಥನ್ ಮತ್ತು ಮಮಿತಾ ಬೈಜು ಅಭಿನಯದ ''ಡ್ಯೂಡ್'' ಚಿತ್ರಗಳು ''ಕಾಂತಾರ 1'' ಓಟಕ್ಕೆ ಬ್ರೇಕ್ ಹಾಕುತ್ತವೇ ಎಂದೇ ಅಂದಾಜಿಸಲಾಗಿತ್ತು.

ಆದರೆ ಈ ಚಿತ್ರಗಳಿಂದ ಕೂಡ ''ಕಾಂತಾರ''ವನ್ನು ಬಾಕ್ಸಾಫೀಸ್‌ನಲ್ಲಿ ಕಟ್ಟಿ ಹಾಕಲು ಸಾಧ್ಯವಾಗಲಿಲ್ಲ. ಬದಲಿಗೆ ''ಕಾಂತಾರ 1'' ಚಿತ್ರದಿಂದ ಈ ಎರಡು ಚಿತ್ರಗಳ ಗಳಿಕೆಯ ಮೇಲೆ ಪರಿಣಾಮ ಬೀರುತ್ತಿದೆ. ಚಿತ್ರಪ್ರೇಕ್ಷಕರ ಮೊದಲ ಆಯ್ಕೆ ಕನ್ನಡದ ''ಕಾಂತಾರ '' ಆಗಿದೆ. ಕೇವಲ ಕರ್ನಾಟಕದಲ್ಲಿ ಮಾತ್ರ ಅಲ್ಲ ಹಿಂದಿಯಲ್ಲಿ ಕೂಡ ತಮ್ಮ ಭಾಷೆಯ ಚಿತ್ರವನ್ನು ನೋಡುವ ಬದಲು ಹಲವರು ''ಕಾಂತಾರ'' ಟಿಕೆಟ್ ಖರೀದಿ ಮಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ನಿನ್ನೆ ಭಾನುವಾರ ಕೇವಲ ಹಿಂದಿಯಲ್ಲಿಯೇ ''ಕಾಂತಾರ 1'' 4.5 ಕೋಟಿಯನ್ನು ಗಳಿಸಿದೆ ಎಂದು ''ಸ್ನಾಕ್ನಿಲ್'' ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಒಟ್ನಲ್ಲಿ ಚಿತ್ರವೊಂದು ಎರಡು ವಾರ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುವುದು ಕಷ್ಟ ಎನ್ನುವ ಸ್ಥಿತಿಯಲ್ಲಿ ಬಂದ ''ಕಾಂತಾರ-ಚಾಪ್ಟರ್ 1'' ಸದ್ಯ 25 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ. ಬಾಕ್ಸಾಫೀಸ್‌ನಲ್ಲಿ ಕೋಟಿ ಕೋಟಿ ಹಣವನ್ನು ಕೂಡ ಗಳಿಸುತ್ತಿದೆ. ಈ ಮೂಲಕ ಹೊಂಬಾಳೆ ಸಂಸ್ಥೆಗೆ ಮತ್ತೊಮ್ಮೆ ಕುಬೇರ ವರ ಸಿಕ್ಕಂತಾಗಿದೆ. ಮುಂಬರುವ ದಿನಗಳಲ್ಲಿ ''ಕಾಂತಾರ 1'' ಇನ್ನೆಷ್ಟು ಹಣ ಗಳಿಸುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Experience the box office phenomenon! Find out how Rishab Shetty's Kantara Chapter 1 delivered a powerful Day 25 collection, solidifying its run as a legendary blockbuster.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X