ಒಂದೇ ವಾರಕ್ಕೆ ಮುಗೀತು 'ಉಸ್ತಾದ್ ಭಗತ್ ಸಿಂಗ್' ಆಟ; ಹೀನಾಯವಾಗಿ ಸೋಲುಂಡ ಪವನ್ ಕಲ್ಯಾಣ್

ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಸಿನಿಮಾಗಳಿಂದ ದೂರ ಇರುವುದೇ ಉತ್ತಮ ಎಂದು ಅಭಿಮಾನಿಗಳು ಕಾಮೆಂಟ್ ಮಾಡುವಂತಾಗಿದೆ. ಕಳೆದ ವಾರ ಬಿಡುಗಡೆಯಾಗಿದ್ದ 'ಉಸ್ತಾದ್ ಭಗತ್ ಸಿಂಗ್' ದಯನೀಯ ಸೋಲು ಕಂಡಿರುವುದೇ ಇದಕ್ಕೆ ಕಾರಣ. ಹರೀಶ್ ಶಂಕರ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದೆ.

ಹೆಚ್ಚು ಕಮ್ಮಿ ಒಂದೇ ವಾರಕ್ಕೆ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಪ್ರದರ್ಶನ ಬಹುತೇಕ ಕಡೆಗಳಲ್ಲಿ ನಿಲ್ಲಿಸಲಾಗಿದೆ. ಕೆಲವೆಡೆ ಸಿನಿಮಾ ಪ್ರದರ್ಶನ ನಡೆಯುತ್ತಿದ್ದರೂ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ಸಿಕ್ತಿದೆ. ಪವನ್ ಕಲ್ಯಾಣ್ ಕ್ರೇಜ್ ನಂಬಿ ರೈಟ್ಸ್ ಕೊಂಡುಕೊಂಡಿದ್ದ ವಿತರಕರು ನಷ್ಟ ಅನುಭವಿಸುವಂತಾಗಿದೆ. ಆಂಧ್ರ, ತೆಲಂಗಾಣ ಸೇರಿದಂತೆ ಎಲ್ಲಾ ಕಡೆ ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ಸಿಕ್ತಿದೆ.

Ustaad Bhagat Singh Turns Disaster at Box Office Clash with Dhurandhar-2 Backfires on Pawan Kalyan

'ಧುರಂಧರ್- 2' ಎದುರು 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಬಿಡುಗಡೆ ಮಾಡಿದ್ದೇ ದೊಡ್ಡ ತಪ್ಪು ಎನ್ನುವಂತಾಗಿದೆ. ಆಂಧ್ರ, ತೆಲಂಗಾಣದಲ್ಲೇ ಪವನ್ ಚಿತ್ರಕ್ಕಿಂತ ಆದಿತ್ಯಧರ್ ನಿರ್ದೇಶನದ ಸ್ಪೈ ಥ್ರಿಲ್ಲರ್ ಜೋರಾಗಿ ಸದ್ದು ಮಾಡ್ತಿದೆ. ಈಗಾಗಲೇ ಸಿನಿಮಾ ಕಲೆಕ್ಷನ್ ಒಂದಕಿಗೆ ಇಳಿದಿದೆ. ನಿನ್ನೆ(ಮಾರ್ಚ್ 25) ಪವನ್ ಸಿನಿಮಾ ಕೇವಲ ಒಂದು ಕೋಟಿ ರೂ. ಮಾತ್ರ ಕಲೆಕ್ಷನ್ ಮಾಡಿದೆ ಎನ್ನಲಾಗ್ತಿದೆ. ಎರಡನೇ ವಾರದ ಮುಕ್ತಾಯದ ವೇಳೆ ಎಲ್ಲಾ ಕಡೆ ಸಿನಿಮಾ ಪ್ರದರ್ಶನ ನಿಲ್ಲಿಸುವ ಸಾಧ್ಯತೆ ದಟ್ಟವಾಗಿದೆ.

ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯವುದು ಅಷ್ಟು ಸುಲಭವಲ್ಲ. ನಿರೀಕ್ಷೆ ಹುಟ್ಟು ಹಾಕುವ ಸ್ಟಾರ್ ನಟರ ಸಿನಿಮಾಗಳು ಮೊದಲ ದಿನ ಚಿತ್ರಮಂದಿರಗಳನ್ನು ತುಂಬಿಸಬಹುದು. ಆದರೆ ಚಿತ್ರಕ್ಕೆ ರೆಸ್ಪಾನ್ಸ್ ಹೇಗಿರುತ್ತೆ? ಟಾಕ್ ಏನು? ಎನ್ನುವುದು ಚಿತ್ರದ ಬಾಕ್ಸಾಫೀಸ್ ಭವಿಷ್ಯ ನಿರ್ಧರಿಸುತ್ತದೆ. ಮಾರ್ಚ್ 27ಕ್ಕೆ 'ಉಸ್ತಾದ್ ಭಗತ್ ಸಿಂಗ್' ಚಿತ್ರ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿತ್ತು. ಇನ್ನು ಒಂದೆರಡು ವಾರ ತಡವಾಗಿ ಬಂದಿದ್ದರೂ ಫಲಿತಾಂಶ ಕೊಂಚ ಉತ್ತಮವಾಗಿ ಇರುತ್ತಿತ್ತು. ಆದರೆ 'ಧುರಂಧರ್- 2' ಜೊತೆಗೆ ಬಿಡುಗಡೆ ಮಾಡಿದ್ದು ಉಲ್ಟಾ ಹೊಡೆದಿದೆ.

'ಟಾಕ್ಸಿಕ್' ಸಿನಿಮಾ ರಿಲೀಸ್ ಡೇಟ್ ಬದಲಾಗುತ್ತಿದ್ದಂತೆ ಯುಗಾದಿ, ರಂಜಾನ್ ವೀಕೆಂಡ್ ಲಾಭ ಪಡೆಯಲು ಪವನ್ ಕಲ್ಯಾಣ್ ಅಂಡ್ ಟೀಮ್ ನಿರ್ಧರಿಸಿತ್ತು. ಹಾಗಾಗಿ ಒಂದು ವಾರ ಮುನ್ನ ಸಿನಿಮಾ ತೆರೆಗೆ ತಂದು ತಪ್ಪು ಮಾಡಿದ್ರು ಎನ್ನುವುದು ಕೆಲವರ ಲೆಕ್ಕಾಚಾರ. ಅಧಿಕೃತವಾಗಿ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಕಲೆಕ್ಷನ್ ಬಗ್ಗೆ ಮಾಹಿತಿ ಸಿಕ್ಕಿಲ್ಲ. sacnilk ವರದಿ ಪ್ರಕಾರ ಮೊದಲ ದಿನ 34 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದ್ದ ಸಿನಿಮಾ 2ನೇ ದಿನ 9 ಕೋಟಿ ರೂ. ಮಾತ್ರ ಗಳಿಸಿತ್ತು.

3ನೇ ದಿನ 4ನೇ ದಿನ ಕೂಡ ಕಲೆಕ್ಷನ್ ಹೆಚ್ಚಾಗಲಿಲ್ಲ. ವೀಕೆಂಡ್ ಮುಗಿದು ಮೊದಲ ಸೋಮವಾರದ ವೇಳೆಗೆ ಸಿನಿಮಾ ಫಲಿತಾಂಶ ಗೊತ್ತಾಗಿಬಿಟ್ಟಿತ್ತು. 7ನೇ ದಿನ 1.14 ಕೋಟಿ ರೂ. ಮಾತ್ರ ಕಲೆಕ್ಷನ್ ಮಾಡಿರುವುದಾಗಿ ಹೇಳಲಾಗ್ತಿದೆ. ಈ ವೀಕೆಂಡ್ ಕೂಡ ಕಲೆಕ್ಷನ್ ಹೆಚ್ಚುವ ಸುಳಿವು ಸಿಕ್ತಿಲ್ಲ. ಹಾಗಾಗಿ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಆಲ್‌ಟೈಮ್ ಡಿಸಾಸ್ಟರ್ ಎನಿಸಿಕೊಳ್ಳುತ್ತಿದೆ.

ಮೊದಲ ವಾರ 65 ಕೋಟಿ ರೂ. ಕಲೆಕ್ಷನ್ ಆಗಿರುವುದಾಗಿ ಅಂದಾಜಿಸಲಾಗ್ತಿದೆ. ಅಂತೂ ಇಂತೂ 70 ಕೋಟಿ ರೂ.ಗೆ ಸಿನಿಮಾ ಪ್ರದರ್ಶನ ಮುಗಿಸುವ ಸುಳಿವು ಸಿಕ್ತಿದೆ. 115 ಕೋಟಿ ರೂ. ಕೊಟ್ಟು ವಿತರಕರು ಸಿನಿಮಾ ರೈಟ್ಸ್ ಕೊಂಡುಕೊಂಡಿದ್ದಾರೆ ಎನ್ನಲಾಗ್ತಿದೆ. 50 ಕೋಟಿ ರೂ. ಮಾತ್ರ ಕಲೆಕ್ಷನ್ ಆಗಿರುವ ಅಂದಾಜಿದ್ದು ಅರ್ಧಕರ್ಧ ನಷ್ಟ ಎನ್ನುವಂತಾಗಿದೆ. ಭಾರತದಲ್ಲಿ ಮಾತ್ರವಲ್ಲ ಓವರ್‌ಸೀಸ್ ಮಾರ್ಕೆಟ್‌ನಲ್ಲಿ ಕೂಡ ಉಸ್ತಾದ್ ಆರ್ಭಟ ನಡೀಲಿಲ್ಲ.

More from Filmibeat

Read more about: Dhurandhar 2 pawan kalyan telugu
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X