Hai Jawani Toh Ishq Hona Hai Box Office Day 1 ; ವರುಣ್ ಧವನ್‌ಗೆ ಆಘಾತ, ಮೊದಲ ದಿನವೇ ಹಾಸ್ಯಾಯನಕ್ಕೆ ಪ್ರೇಕ್ಷಕರ ಕೊರತೆ

ಪಾತ್ರ ಯಾವುದೇ ಇರಲಿ ಅದಕ್ಕೆ ನ್ಯಾಯ ಸಲ್ಲಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುವ ಸ್ಟಾರ್‌ಗಳಲ್ಲಿ ವರುಣ್ ಧವನ್ ಕೂಡ ಒಬ್ಬರು. ಆದರೆ ಕಾಮಿಡಿ ಮತ್ತು ಟ್ರ್ಯಾಜಿಡಿ ಎರಡು ತರಹದ ಕಥೆಗಳಲ್ಲಿ ಈಗಾಗಲೇ ಮಿಂಚಿ ಬಾಲಿವುಡ್‌ನಲ್ಲಿ ಮನೆ ಮಾತಾಗಿರುವ ವರುಣ್ ಧವನ್‌ಗೆ ಅದೃಷ್ಟ ಕೈ ಕೊಟ್ಟು ಹಲವು ವರ್ಷಗಳಾಗಿವೆ.

ಇದಕ್ಕೆ ಕೈಗನ್ನಡಿ ಎಂಬಂತೆ 2017ರಲ್ಲಿ ಬಿಡುಗಡೆಯಾದ ''ಜುಡ್ವಾ 2'' ಚಿತ್ರವೇ ಕೊನೆ. ಆ ನಂತರ ತೆರೆಗೆ ಬಂದ ಯಾವ ಚಿತ್ರವೂ ಕೂಡ ವರುಣ್ ಧವನ್ ಕೈ ಹಿಡಿದಿಲ್ಲ. ಬದಲಿಗೆ ಸ್ಟಾರ್ ಪವರ್ ಮೇಲೆ ಸವಾಲು ಮೂಡುವಂತೆ ಮಾಡಿವೆ. ಹೀಗಾಗಿ ವರುಣ್ ಧವನ್ ಅಭಿನಯದ ''ಹೇ ಜವಾನಿ ತೋ ಇಷ್ಕ್ ಹೋನಾ ಹೈ'' ಮೇಲೆ ನಿರೀಕ್ಷೆ ಇತ್ತು. ಖುದ್ದು ವರುಣ್ ಧವನ್‌ಗೆ ಕೂಡ ಈ ಬಾರಿ ಗೆಲ್ಲುವ ವಿಶ್ವಾಸ ಇತ್ತು.

Varun Dhawan s Hai Jawani Failed to Match Baby John Magic After a Slow 7 50 Cr Opening

ಆದರೆ. ಈ ಬಾರಿ ಕೂಡ ವರುಣ್‌ಗೆ ನಿರಾಸೆಯೇ ಎದುರಾಗುವ ಎಲ್ಲ ಲಕ್ಷಣಗಳು ಸದ್ಯ ಕಂಡು ಬರುತ್ತಿವೆ. ಯಾಕೆಂದರೆ ''ಹೇ ಜವಾನಿ ತೋ ಇಷ್ಕ್ ಹೋನಾ ಹೈ'' ಚಿತ್ರದ ಗಳಿಕೆ ಅಷ್ಟು ನಿರಾಶದಾಯಕವಾಗಿದೆ.

ಹೌದು, ನಿನ್ನೆ (ಜೂನ್ 5 ) ತೆರೆಗೆ ಬಂದ ''ಹೇ ಜವಾನಿ ತೋ ಇಷ್ಕ್ ಹೋನಾ ಹೈ'' ಚಿತ್ರ ಮೊದಲ ದಿನ ಕೇವಲ ₹7.50 ಕೋಟಿಯನ್ನು ಮಾತ್ರ ಗಳಿಸಿದೆ ಎಂದು ''ಸ್ಯಾಕ್ನಿಲ್'' ವರದಿ ಮಾಡಿದೆ. ಈ ಮೂಲಕ ವರುಣ್ ಧವನ್ ವೃತ್ತಿ ಬದುಕಿನಲ್ಲಿಯೇ ಮೊದಲ ದಿನ ಅತ್ಯಂತ ಕಡಿಮೆ ಹಣ ಗಳಿಸಿದ ಚಿತ್ರ ಎನ್ನುವ ಕುಖ್ಯಾತಿಗೆ ಪಾತ್ರವಾಗಿದೆ.

ಅಂದ್ಹಾಗೇ 9 ವರ್ಷಗಳಲ್ಲಿ ವರುಣ್ ಧವನ್ ಹಲವು ಚಿತ್ರಗಳನ್ನು ಮಾಡಿದ್ದಾರೆ. ಆ ಪೈಕಿ ಇವರ ವೃತ್ತಿ ಬದುಕಿನ ಕಳಪೆ ಚಿತ್ರಗಳಲ್ಲಿ ಒಂದಾದ ''ಬೇಬಿ ಜಾನ್'' ಮೊದಲ ದಿನ ₹11 ಕೋಟಿಯನ್ನು ಕೇವಲ ಭಾರತದಲ್ಲಿ ದೋಚಿತ್ತು. ಈ ಗಳಿಕೆಯನ್ನು ''ಹೇ ಜವಾನಿ ತೋ ಇಷ್ಕ್ ಹೋನಾ ಹೈ'' ಹಿಂದಿಕ್ಕುವ ಭರವಸೆ ಬಾಲಿವುಡ್‌ನ ಟ್ರೇಡ್ ಪಂಡಿತರಲ್ಲಿತ್ತು. ಆದರೆ. ಈ ನಂಬಿಕೆ ಹುಸಿಯಾಗಿದೆ. ಮೊದಲ ದಿನ ವರುಣ್ ಧವನ್ ಮತ್ತು ಡೇವಿಡ್ ಧವನ್‌ ಅವರ ಹಾಸ್ಯಾಯನಕ್ಕೆ ಸಾಧಾರಣ ಓಪನಿಂಗ್ ಪಡೆದಿದೆ.

ನಿಜಾ. ಚಿತ್ರದ ಕುರಿತು ಪ್ರೇಕ್ಷಕರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ವಿಮರ್ಶಕರು ಕೂಡ 3 ಸ್ಟಾರ್ ಗಳನ್ನು ನೀಡಿದ್ದಾರೆ. ಇಂದು ಮತ್ತು ನಾಳೆ ಚಿತ್ರದ ಗಳಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಆದರೆ, ಇದೇ ವೇಳೆ ''ಪೆದ್ದಿ'' ಹಾವಳಿ ವರುಣ್ ಧವನ್‌ಗೆ ಉತ್ತರ ಭಾರತದಲ್ಲಿ ತಲೆ ನೋವು ಆಗಿದೆ.

varun-dhawan-s-hai-jawani-failed-to-match-baby-john-magic-after-a-slow-7-50-cr-opening

ಸಾಲದಕ್ಕೆ ಅನುರಾಗ್ ಕಶ್ಯಪ್ ನಿರ್ದೇಶನದ ''ಬಂದರ್'' ಕೂಡ ಪ್ರೇಕ್ಷಕರ ಮತ್ತು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಹಿನ್ನೆಲೆ ಈ ತೀವ್ರ ಸ್ಫರ್ಧೆಯಲ್ಲಿ ''ಹೇ ಜವಾನಿ ತೋ ಇಷ್ಕ್ ಹೋನಾ ಹೈ'' ಚಿತ್ರ ಹೇಗೆ ಚಿತ್ರಮಂದಿರದಲ್ಲಿ ನೆಲೆಯೂರುತ್ತೆ..? ಇನ್ನೆರಡು ದಿನದಲ್ಲಿ ಎಷ್ಟು ಹಣ ಗಳಿಸುತ್ತೆ ಎನ್ನುವ ಕುತೂಹಲ ಸದ್ಯ ಹಲವರಲ್ಲಿದೆ. ಈ ಎರಡು ದಿನಗಳ ಗಳಿಕೆಯ ಮೇಲೆ ಚಿತ್ರದ ಮುಂದಿನ ಭವಿಷ್ಯ ಕೂಡ ನಿರ್ಧಾರವಾಗಲಿದೆ.

ವರುಣ್ ಧವನ್ ಅವರ ಕೊನೆಯ ಹತ್ತು ಚಿತ್ರಗಳ ಬಾಕ್ಸಾಫೀಸ್‌ ಫಲಿತಾಂಶದ ವಿವರ ಕೆಳಗಿನಂತೆ ಇದೆ

ಆವರೇಜ್

ಕ್ರ.ಸಂ ಸಿನೆಮಾ ಹೆಸರು ಬಿಡುಗಡೆಯಾದ ವರ್ಷ ಭಾರತದ ಒಟ್ಟು ಗಳಿಕೆ (Nett) ಬಾಕ್ಸ್ ಆಫೀಸ್ ಫಲಿತಾಂಶ (Verdict)
1 ಹೈ ಜವಾನಿ ತೋ ಇಷ್ಕ್ ಹೋನಾ ಹೈ 2026 ₹7.50 ಕೋಟಿ (ಮೊದಲ ದಿನ) ಮಂದಗತಿಯ ಆರಂಭ (Slow Opening)
2 ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ 2025 ₹65.22 ಕೋಟಿ ಫ್ಲಾಪ್
3 ಬೇಬಿ ಜಾನ್ 2024 ₹35.98 ಕೋಟಿ ಡಿಸಾಸ್ಟರ್
4 ಭೇದಿಯಾ 2022 ₹66.65 ಕೋಟಿ ಆವರೇಜ್
5 ಜುಗ್ ಜುಗ್ ಜೀಯೋ 2022 ₹85.03 ಕೋಟಿ ಆವರೇಜ್
6 ಸ್ಟ್ರೀಟ್ ಡ್ಯಾನ್ಸರ್ 2020 ₹68.28 ಕೋಟಿ ಫ್ಲಾಪ್
7 ಕಲಂಕ್ 2019 ₹80.35 ಕೋಟಿ ಫ್ಲಾಪ್
8 ಸುಯಿ ಧಾಗಾ - ಮೇಡ್ ಇನ್ ಇಂಡಿಯಾ 2018 ₹76.10 ಕೋಟಿ ಸೆಮಿ-ಹಿಟ್
9 ಅಕ್ಟೋಬರ್ 2018 ₹37.11 ಕೋಟಿ ಫ್ಲಾಪ್
10 ಜುಡ್ವಾ 2 2017 ₹138.61 ಕೋಟಿ ಸೂಪರ್-ಹಿಟ್

ಗಮನಿಸಿ - ವರುಣ್ ಧವನ್ ನಟಿಸಿರುವ ಕೊನೆಯ 10 ಸೋಲೋ (Solo Lead) ಚಿತ್ರಗಳ ಬಾಕ್ಸ್ ಆಫೀಸ್ ರಿಪೋರ್ಟ್ ಕಾರ್ಡ್ ಇದು. ಇದರಲ್ಲಿ ಮಲ್ಟಿ-ಸ್ಟಾರರ್, ಗೆಸ್ಟ್ ಅಪಿಯರೆನ್ಸ್ ಮತ್ತು ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾದ ಚಿತ್ರಗಳನ್ನು ಹೊರತುಪಡಿಸಲಾಗಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಬೇರೆ ಮೂಲಗಳು ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

English summary
A major reality check for Varun Dhawan? Hai Jawani Toh Ishq Hona Hai registers one of his lowest openings ever with a ₹7.50 cr Day 1. Details inside!
Read more about: varun dhawan bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X