Veera Chandrahasa Day 2 Boxoffice: ರವಿ ಬಸ್ರೂರು 'ವೀರಚಂದ್ರಹಾಸ' ಸಿನಿಮಾ ಕಲೆಕ್ಷನ್ ಹೇಗಿದೆ?

ಈ ವಾರ ತೆರೆಗೆ ಬಂದಿರುವ ಕನ್ನಡದ 'ಯುದ್ಧಕಾಂಡ'-2 ಹಾಗೂ 'ವೀರಚಂದ್ರಹಾಸ' ಚಿತ್ರಗಳಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ರಾಜ್ಯಾದ್ಯಂತ ಎರಡೂ ಸಿನಿಮಾಗಳು ಪ್ರೇಕ್ಷಕರ ಮನಗೆದ್ದಿವೆ. ಸಿನಿಮಾ ನೋಡಿದವರು ಮೆಚ್ಚಿ ಕೊಂಡಾಡುತ್ತಿದ್ದಾರೆ. ರವಿ ಬಸ್ರೂರು ಯಕ್ಷಗಾನವನ್ನು ತೆರೆಗೆ ತಂದಿರುವ 'ವೀರಚಂದ್ರಹಾಸ' ಪ್ರಯತ್ನಕ್ಕೆ ಯಶಸ್ಸು ಸಿಕ್ಕಿದೆ.

ಐಪಿಎಲ್ ಆರ್ಭಟದ ನಡುವೆ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಆದರೂ ಕೆಲ ಸಿನಿಮಾಗಳನ್ನು ಧೈರ್ಯ ಮಾಡಿ ಬಿಡುಗಡೆ ಮಾಡಲಾಗುತ್ತಿದೆ. ಸಂಗೀತ ನಿರ್ದೇಶಕ ರವಿಬಸ್ರೂರು ಈಗಾಗಲೇ 2 ಕನ್ನಡ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. ಇದು ನಿರ್ದೇಶಕರಾಗಿ ಅವರ ಮೂರನೇ ಕನ್ನಡ ಸಿನಿಮಾ. ದಕ್ಷಿಣ ಕನ್ನಡ ಜಿಲ್ಲೆಯ ಸಾಂಪ್ರದಾಯಿಕ ಕಲೆ ಯಕ್ಷಗಾನ ರೂಪದಲ್ಲೇ ಇಡೀ ಸಿನಿಮಾ ಮೂಡಿ ಬಂದಿದೆ.

Veera Chandrahasa Day 2 boxoffice collection Ravi Basrur directional film sees decent start

ಯಕ್ಷಗಾನದಲ್ಲಿ 'ವೀರಚಂದ್ರಹಾಸ' ಪ್ರಸಂಗ ಕಥೆ ಬಹಳ ಪ್ರಸಿದ್ಧ. ಅದೇ ಪ್ರಸಂಗವನ್ನು ಕಣ್ಣಿಗೆ ಕಟ್ಟುವಂತೆ ರವಿಬಸ್ರೂರು ಕಟ್ಟಿಕೊಟ್ಟಿದ್ದಾರೆ. ಸಾಮಾನ್ಯವಾಗಿ ವೇದಿಕೆಗಳಲ್ಲಿ ಪ್ರದರ್ಶಿಸುವ ಯಕ್ಷಗಾನಕ್ಕೆ ಇತಿಮಿತಿ ಇರುತ್ತದೆ. ಆದರೆ ಸಿನಿಮಾದಲ್ಲಿ ಅದನ್ನೆಲ್ಲಾ ಮೀರಿ ಹೊಸ ರೂಪ ಕೊಡಲಾಗಿದೆ. ಸೆಟ್‌ಗಳನ್ನು ನಿರ್ಮಿಸಿ, ಗ್ರಾಫಿಕ್ಷ್ ಬಳಸಿ ಕಥೆಯನ್ನು ಬಹಳ ಅದ್ಧೂರಿಯಾಗಿ ಕಟ್ಟಿಕೊಡಲಾಗಿದೆ. ಎಐ ಮೂಲಕ ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಅವರನ್ನು ತೆರೆಮೇಲೆ ತೋರಿಸಿರುವುದು ಪ್ರೇಕ್ಷಕರಿಗೆ ಮತ್ತಷ್ಟು ಅದ್ಭುತ ಅನುಭವ ನೀಡುತ್ತದೆ.

ಶಿಥಿಲ್ ಶೆಟ್ಟಿ, ನಾಗಶ್ರೀ ಜಿ ಎಸ್, ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ, ಉದಯ ಕಡಬಾಳ್ ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಸಿಂಗಾನಲ್ಲೂರು ಸಂಸ್ಥಾನದ ನಾಡಪ್ರಭು ಆಗಿ ಶಿವರಾಜ್‌ಕುಮಾರ್ ನಟಿಸಿರುವುದು ವಿಶೇಷ. ಅತಿಥಿ ಪಾತ್ರದಲ್ಲಿ ಶಿವಣ್ಣ ಚಿತ್ರದ ಬಲ ಹೆಚ್ಚಿಸಿದ್ದಾರೆ. ನಿರ್ದೇಶನ ಮಾತ್ರವಲ್ಲದೇ ತಮ್ಮ ಸಂಗೀತದಿಂದಲೂ ರವಿಬಸ್ರೂರು ಇಷ್ಟವಾಗುತ್ತಾರೆ.

ಕರಾವಳಿ ಭಾಗದಲ್ಲಿ 'ವೀರಚಂದ್ರಹಾಸ' ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ಸಿಗುತ್ತಿದೆ. ಮೊದಲ 2 ದಿನ ಸಿನಿಮಾ ಕೆಲವೆಡೆ ಹೌಸ್‌ಫುಲ್ ಪ್ರದರ್ಶನ ಕಂಡಿದೆ. ನೋಡಿದವರೆಲ್ಲಾ ರವಿ ಬಸ್ರೂರು ಅಂಡ್ ಟೀಮ್ ಪ್ರಯತ್ನವನ್ನು ಮೆಚ್ಚಿಕೊಂಡಿದ್ದಾರೆ. ಎಲ್ಲರೂ ಸಿನಿಮಾ ನೋಡುವಂತೆ ಮನವಿ ಮಾಡುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡಿದೆ.

Veera Chandrahasa Day 2 boxoffice collection Ravi Basrur directional film sees decent start

2 ದಿನದ ಕಲೆಕ್ಷನ್

'ವೀರಚಂದ್ರಹಾಸ' ಚಿತ್ರಕ್ಕೆ ರೆಸ್ಪಾನ್ಸ್ ಚೆನ್ನಾಗಿದೆ. ಸಿನಿಮಾ ಕಲೆಕ್ಷನ್ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ. ಸಿನಿಮಾ ಬಾಕ್ಸಾಫೀಸ್ ಕಲೆಕ್ಷನ್ ಬಗ್ಗೆ ವರದಿ ಮಾಡುವ sacnilk.com ವೆಬ್‌ ಸೈಟ್‌ ಪ್ರಕಾರ, 'ವೀರಚಂದ್ರಹಾಸ' ಚಿತ್ರ ಮೊದಲ 2 ದಿನಕ್ಕೆ 36 ಲಕ್ಷ ರೂ. ನೆಟ್ ಕಲೆಕ್ಷನ್ ಮಾಡಿದೆ. ಶುಕ್ರವಾರ 19 ಲಕ್ಷ ರೂ. ಹಾಗೂ ಶನಿವಾರ 13 ಲಕ್ಷ ರೂ. ಕನ್ನಡ ನೆಟ್ ಕಲೆಕ್ಷನ್ ಆಗಿದೆ ಎಂದು ವರದಿಯಾಗಿದೆ.

ತೆಲುಗಿನಲ್ಲಿ 'ವೀರಚಂದ್ರಹಾಸ'

ಕನ್ನಡ ಸಿನಿಮಾಗಳು ಇತ್ತೀಚೆಗೆ ಪರಭಾಷೆಗೆ ಹೆಚ್ಚು ಡಬ್ ಆಗಿ ಬಿಡುಗಡೆ ಆಗುತ್ತಿದೆ. ಅದರಲ್ಲೂ 'KGF' ಸಿನಿಮಾ ಕಲಾವಿದರು, ತಂತ್ರಜ್ಞರ ಸಿನಿಮಾ ಅಂದರೆ ಆಂಧ್ರ, ತೆಲಂಗಾಣದಲ್ಲಿ ಕ್ರೇಜ್ ಇದೆ. ರವಿಬಸ್ರೂರು ನಿರ್ದೇಶನದ 'ವೀರಚಂದ್ರಹಾಸ' ಚಿತ್ರವನ್ನು ತೆಲುಗಿಗೆ ಡಬ್ ಮಾಡಿ ರಿಲೀಸ್ ಮಾಡಲಾಗುತ್ತಿದೆ. ಎಂ. ವಿ ರಾಧಾಕೃಷ್ಣ ಎಂಬುವವರು ಈಗಾಗಲೇ ಡಬ್ಬಿಂಗ್ ರೈಟ್ಸ್ ಕೊಂಡುಕೊಂಡಿದ್ದಾರೆ. ಶೀಘ್ರದಲ್ಲೇ ಆಂಧ್ರ, ತೆಲಂಗಾಣದಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

ಯುದ್ಧಕಾಂಡ-2 ಗಳಿಕೆ

ಅಜಯ್ ರಾವ್ ನಿರ್ಮಿಸಿ ನಟಿಸಿರುವ 'ಯುದ್ಧಕಾಂಡ'-2 ಸಿನಿಮಾ ಮೊದಲ 2 ದಿನಕ್ಕೆ 57 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ sacnilk.com ವೆಬ್ ಸೈಟ್ ವರದಿ ಮಾಡಿದೆ. ಐಪಿಎಲ್ ಕ್ರೇಜ್ ಜೋರಾಗಿರುವುದರಿಂದ ಸಿನಿಮಾ ನೋಡಲು ಪ್ರೇಕ್ಷಕರು ಕೊಂಚ ಹಿಂದೇಟು ಹಾಕುತ್ತಿದ್ದಾರೆ.

More from Filmibeat

English summary
Ravi Basrur's Veera Chandrahasa film Day 2 boxoffice collection report;
Read more about: ravi basrur sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X