ಬಾಕ್ಸಾಫೀಸ್‌ನಲ್ಲಿ 'ಕಾಂತಾರ- 1' ಆರ್ಭಟ; ವೀರೇಶ್, ಸಂತೋಷ್ ಥಿಯೇಟರ್ ಮಾಲೀಕರಿಂದ ಕಲೆಕ್ಷನ್ ಲೆಕ್ಕ

ದೇಶ ವಿದೇಶಗಳಲ್ಲಿ 'ಕಾಂತಾರ- 1' ಸಿನಿಮಾ ದರ್ಬಾರ್ ಜೋರಾಗಿದೆ. ಈಗಾಗಲೇ ವಿಶ್ವದಾದ್ಯಂತ ಸಿನಿಮಾ 700 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ನಿಧಾನವಾಗಿ ಉತ್ತರ ಭಾರತದಲ್ಲಿ ಸಿನಿಮಾ ಸದ್ದು ಮಾಡ್ತಿದೆ. ಹಿಂದಿ ಬೆಲ್ಟ್‌ನಲ್ಲಿ 150 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಮುನ್ನುಗ್ಗುತ್ತಿದೆ.

ದೀಪಾವಳಿ ವೀಕೆಂಡ್‌ನಲ್ಲಿ ಸಿನಿಮಾ 1000 ಕೋಟಿ ರೂ. ಕಲೆಕ್ಷನ್ ಮಾಡುವ ಅಂದಾಜಿದೆ. ಕರ್ನಾಟಕದಲ್ಲಿ 'ಕಾಂತಾರ- 1' ಕಲೆಕ್ಷನ್ ಚೆನ್ನಾಗಿದೆ. 11 ದಿನಕ್ಕೆ 'KGF- 2' ಬಾಕ್ಸಾಫೀಸ್ ಗಳಿಕೆ ದಾಖಲೆ ಹಿಂದಿಕ್ಕಿ ರಿಷಬ್ ಶೆಟ್ಟಿ ಸಿನಿಮಾ ಹವಾ ಎಬ್ಬಿಸಿದೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ಮಾತ್ರವಲ್ಲ ಸಿಂಗಲ್ ಸ್ಕ್ರೀನ್‌ ಚಿತ್ರಮಂದಿರಗಳಲ್ಲಿ ಕೂಡ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಚಿತ್ರಮಂದಿರಗಳ ಮಾಲೀಕರು ಕೂಡ ಇದರಿಂದ ಖುಷಿಯಾಗಿದೆ.

Veeresh and Santosh Cinema Owners Laud Kantara-1 Success as Film Crosses 700 Crore Mark Globally

ಮಾಗಡಿ ರಸ್ತೆಯ ವೀರೇಶ್ ಚಿತ್ರಮಂದಿರದಲ್ಲಿ 'ಕಾಂತಾರ- 1' ಸಿನಿಮಾ ಕಿಚ್ಚು ಜೋರಾಗಿತ್ತು. ಮೊದಲ ವಾರ ಎಲ್ಲಾ ಶೋಗಳು ಹೌಸ್‌ಫುಲ್ ಪ್ರದರ್ಶನ ಕಂಡಿತ್ತು. ನಮ್ಮ ಚಿತ್ರಮಂದಿರದಲ್ಲಿ ಒಂದು ಶೋಗೆ 922 ಜನ ಸಿನಿಮಾ ವೀಕ್ಷಿಸಬಹುದು. ಪಕ್ಕದ ಚಿಕ್ಕ ಸ್ಕ್ರೀನ್‌ನಲ್ಲಿ 200 ಸೀಟ್ ಇದೆ. ಒಂದೇ ವಾರದಲ್ಲಿ ಎಲ್ಲಾ 35 ಶೋಗಳು ಹೌಸ್‌ಫುಲ್ ಆಗಿ 50 ಸಾವಿರ ಜನ ಸಿನಿಮಾ ನೋಡಿದ್ದಾರೆ ಎಂದು ಕರ್ನಾಟಕ ಚಿತ್ರಪ್ರದರ್ಶಕರ ಸಂಘದ ಅಧ್ಯಕ್ಷ ಮತ್ತು ಬೆಂಗಳೂರಿನ ವೀರೇಶ್ ಚಿತ್ರಮಂದಿರದ ಮಾಲೀಕರಾದ ಕೆ.ವಿ. ಚಂದ್ರಶೇಖರ್‌ ಮಾಹಿತಿ ನೀಡಿದ್ದಾರೆ.

ಮೊದಲ ವಾರ ವೀರೇಶ್ ಚಿತ್ರಮಂದಿರದಲ್ಲಿ 'ಕಾಂತಾರ- 1' ಸಿನಿಮಾ 1 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ. 80 ಲಕ್ಷ ನೆಟ್ ಕಲೆಕ್ಷನ್ ಆಗಿದೆ. 'ಕಾಂತಾರ' ಚಿತ್ರಕ್ಕೂ ಚಾಪ್ಟರ್‌-1 ಕಲೆಕ್ಷನ್‌ಗೂ ವ್ಯತ್ಯಾಸ ಇದೆ. ಕಾರಣ ಟಿಕೆಟ್ ದರ ಹೆಚ್ಚಿಸಿರುವುದು ಎಂದಿದ್ದಾರೆ. ಫಿಲ್ಮಿಬೀಟ್ ಕನ್ನಡಕ್ಕೆ ಪ್ರತಿಕ್ರಿಯಿಸಿ "ಮೊದಲ ವಾರಕ್ಕೆ ಹೋಲಿಸಿದರೆ 2ನೇ ವಾರಕ್ಕೆ ಕಲೆಕ್ಷನ್ ಕೊಂಚ ಕಮ್ಮಿ ಆಗಿದೆ. ಈಗ ಕೂಡ ಶೇ. 80ರಷ್ಟು ಆಕ್ಯುಪೆನ್ಸಿ ಇದೆ. ಮುಂದೆ ಶೇಕಡಾವಾರು ಲೆಕ್ಕಾಚಾರ ಶುರುವಾಗುತ್ತದೆ. ಮೊದಲ ವಾರ ಕಲೆಕ್ಷನ್ ಚೆನ್ನಾಗಿತ್ತು. 2ನೇ ವಾರವೂ ಚೆನ್ನಾಗಿದೆ. ಮುಂದೆ ಹೇಗಿರುತ್ತದೆ ಎಂದು ಕಾದು ನೋಡಬೇಕು" ಎಂದು ಕೆ. ವಿ ಚಂದ್ರಶೇಖರ್ ಹೇಳಿದ್ದಾರೆ.

Veeresh and Santosh Cinema Owners Laud Kantara-1 Success as Film Crosses 700 Crore Mark Globally

ಕೆಜಿ ರಸ್ತೆಯ ಸಂತೋಷ್ ಚಿತ್ರಮಂದಿರದಲ್ಲಿ 'ಕಾಂತಾರ- 1' ಸಿನಿಮಾ ಬಿಡುಗಡೆಯಾಗಿದೆ. ಚಿತ್ರಮಂದಿರದ ಮಾಲೀಕರಾದ ಅರುಣ್‌ಕುಮಾರ್ ಕಲೆಕ್ಷನ್ ಬಗ್ಗೆ ಫಿಲ್ಮಿಬೀಟ್ ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ. "ಮೊದಲ ವಾರ 'ಕಾಂತಾರ- 1' ಸಿನಿಮಾ 45ರಿಂದ 50 ಲಕ್ಷ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ. ಕೆಲ ಶೋಗಳು ಹೌಸ್‌ಫುಲ್ ಆಗಿದ್ದರೆ ಉಳಿದವು, 80ರಷ್ಟು ಭರ್ತಿ ಆಗಿತ್ತು. 2ನೇ ವಾರವೂ ಸಿನಿಮಾ ಉತ್ತಮ ಕಲೆಕ್ಷನ್ ಮಾಡುತ್ತಿದೆ" ಎಂದು ತಿಳಿಸಿದ್ದಾರೆ.

ಭಾರತದಲ್ಲಿ ಈಗಾಗಲೇ 'ಛಾವ' ಚಿತ್ರದ ಕಲೆಕ್ಷನ್ ದಾಖಲೆಯನ್ನು 'ಕಾಂತಾರ- 1' ಹಿಂದಿಕ್ಕಿದೆ ಎನ್ನುವ ಲೆಕ್ಕಾಚಾರ ನಡೀತಿದೆ. ಈ ವರ್ಷ ಅತಿದೊಡ್ಡ ಹಿಟ್ ಸಿನಿಮಾ ಆಗುವ ಎಲ್ಲಾ ಸಾಧ್ಯತೆಗಳಿವೆ. ಮೊದಲ 10 ದಿನಕ್ಕೆ ಕರ್ನಾಟಕದಲ್ಲಿ 160 ಕೋಟಿ ರೂ. ಉತ್ತರ ಭಾರತದಲ್ಲಿ 155 ಕೋಟಿ ರೂ. ಆಂಧ್ರ- ತೆಲಂಗಾಣ ಸೇರಿ 85 ಕೋಟಿ ರೂ. ತಮಿಳುನಾಡು 45 ಕೋಟಿ ರೂ, ಹಾಗೂ ಕೇರಳದಲ್ಲಿ 40 ಕೋಟಿ ರೂ, ಕಲೆಕ್ಷನ್ ಮಾಡಿರುವ ಅಂದಾಜಿದೆ. ಕೇರಳದಲ್ಲಿ 2ನೇ ಭಾನುವಾರ ಮಾತ್ರ 4 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ ಎಂದು ಬಾಕ್ಸಾಫೀಸ್ ಪಂಡಿತರು ಲೆಕ್ಕ ಕೊಡುತ್ತಿದ್ದಾರೆ.

ದಸರಾ ಸಂಭ್ರಮದಲ್ಲಿ ತೆಲುಗಿನ 'ಓಜಿ', ತಮಿಳಿನ 'ಇಡ್ಲಿ ಕಡೇ' ಹಾಗೂ 'ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ' ಸಿನಿಮಾಗಳ ಪೈಪೋಟಿ ನಡುವೆಯೂ 'ಕಾಂತಾರ- 1' ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದಿದೆ. ರಿಷಬ್ ಶೆಟ್ಟಿ ಸಿನಿಮಾ ಎದುರು ಬೇರೆ ಸಿನಿಮಾಗಳ ಆಟ ನಡೆಯಲಿಲ್ಲ. ದೀಪಾವಳಿಗೂ ಯಾವುದೇ ದೊಡ್ಡ ಸಿನಿಮಾ ಬರದೇ ಇರುವುದು 'ಕಾಂತಾರ- 1' ಚಿತ್ರದ ಓಟಕ್ಕೆ ವರವಾಗಲಿದೆ.

More from Filmibeat

English summary
‘Kantara-1’ Roars Past ₹700 Crore; Veeresh and Santosh Theatre Owners Call It the Biggest Crowd-Puller in Years
Read more about: kantara chapter 1 theater
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X